- Tag results for Madhya Pradesh
![]() | ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ 150 ಸ್ಥಾನ ಪಡೆಯಲಿದೆ: ರಾಹುಲ್ ಗಾಂಧಿಮುಂಬರುವ ಮಧ್ಯ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 150 ಸ್ಥಾನಗಳನ್ನು ಗೆಲ್ಲಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ. |
![]() | ಕರ್ನಾಟಕದ ಬಳಿಕ ಮಧ್ಯ ಪ್ರದೇಶದತ್ತ ಕಾಂಗ್ರೆಸ್ ಚಿತ್ತ; ಮೇ 29ರಂದು ಸಭೆ ಕರೆದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದ್ದು, ಮುಂಬರುವ ವಿಧಾನಸಭೆ ಚುನಾವಣೆಗಳ ಮೇಲೆ ಕಣ್ಣಿಟ್ಟಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೇ 29ರಂದು ಮಧ್ಯಪ್ರದೇಶದ ಪಕ್ಷದ ಪ್ರಮುಖರ ಸಭೆಯನ್ನು ಕರೆದಿದ್ದು, ವಿಧಾನಸಭಾ ಚುನಾವಣೆಗೆ ಸಿದ್ಧತೆ ಕುರಿತು ಚರ್ಚಿಸಲಿದ್ದಾರೆ. |
![]() | ಕುನೋ ರಾಷ್ಟ್ರೀಯ ಉದ್ಯಾನ: ಚಿರತೆ ಮರಿ ಸಾವು, ಮೂರು ತಿಂಗಳಲ್ಲಿ 3 ವಯಸ್ಕ ಚಿರತೆಗಳು ಮರಣಕುನೋ ರಾಷ್ಟ್ರೀಯ ಉದ್ಯಾನವನದಿಂದ ಮತ್ತೊಂದು ದುರಂತ ಸುದ್ದಿ ಹೊರಬಿದ್ದಿದೆ. ನಮೀಬಿಯಾದಿಂದ ತರಲಾದ ಚಿರತೆಯ ಮರಿಯೊಂದು ಸಾವನ್ನಪ್ಪಿದೆ ಎಂದು ವರದಿಯಾಗಿದೆ. ಸಾವಿನ ಪ್ರಕರಣವನ್ನು ಖಚಿತಪಡಿಸಿಕೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. |
![]() | ರೀಲ್ಸ್ ಗಾಗಿ ಗರಿಗಳನ್ನು ಒಂದೊಂದಾಗಿ ಕಿತ್ತ ಯುವಕ; ನರಳಿ ನರಳಿ ನವಿಲು ಸಾವು: ವಿಡಿಯೋ ವೈರಲ್ ಬಳಿಕ ಆರೋಪಿ ಪರಾರಿಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ರಾಷ್ಟ್ರೀಯ ಪಕ್ಷಿ ನವಿಲಿನ ಗರಿಯನ್ನು ಒಂದೊಂದಾಗಿ ಕಿತ್ತಿದ್ದು ಇದೀಗ ನವಿಲು ಮೃತಪಟ್ಟಿದೆ. ನವಿಲಿಗೆ ಚಿತ್ರಹಿಂಸೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. |
![]() | ಮುಖ್ಯಮಂತ್ರಿ ತೀರ್ಥ ದರ್ಶನ ಯೋಜನೆ: ಮಧ್ಯ ಪ್ರದೇಶ ಸರ್ಕಾರದಿಂದ ಹಿರಿಯ ಯಾತ್ರಾರ್ಥಿಗಳಿಗೆ ಉಚಿತ ವಿಮಾನ ಸೇವೆಮಧ್ಯ ಪ್ರದೇಶ ಸರ್ಕಾರ ಮುಖ್ಯಮಂತ್ರಿ ತೀರ್ಥ ದರ್ಶನ ಯೋಜನೆ ಅಡಿ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದ ಹಿರಿಯ ಯಾತ್ರಾರ್ಥಿಗಳಿಗೆ ಉಚಿತ ವಿಮಾನ ಸೇವೆ ಪ್ರಾರಂಭಿಸಿದ ದೇಶದ ಮೊದಲ ರಾಜ್ಯವಾಗಿ ಭಾನುವಾರ ಹೊರಹೊಮ್ಮಿದೆ. |
![]() | ಮಧ್ಯಪ್ರದೇಶದ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಲು ಪಕ್ಷ 'ಮೋದಿ'ಯನ್ನು ಅವಲಂಬಿಸಿದೆ: ಶಿವರಾಜ್ ಸಿಂಗ್ ಚೌಹಾಣ್ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯು ಯಾರ ನೇತೃತ್ವದಲ್ಲಿ ಚುನಾವಣೆಯನ್ನು ಎದುರಿಸುತ್ತದೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿರುವ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಮುಂಬರುವ ಚುನಾವಣೆಯಲ್ಲಿ ಪಕ್ಷವು ಸಂಪೂರ್ಣವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಅವಲಂಬಿತವಾಗಿದೆ ಎಂದು ಹೇಳಿದ್ದಾರೆ. |
![]() | ಮಧ್ಯ ಪ್ರದೇಶ: ಮಾಜಿ ಪ್ರಿಯಕರನ ಪತ್ನಿ ಮೇಲೆ ಆ್ಯಸಿಡ್ ಎರಚಿದ ಮಹಿಳೆ ವಿರದ್ಧ ಕೇಸ್ ದಾಖಲುಮಧ್ಯ ಪ್ರದೇಶದ ಗ್ವಾಲಿಯರ್‌ನಲ್ಲಿ 34 ವರ್ಷದ ಮಹಿಳೆಯೊಬ್ಬರ ವಿರುದ್ಧ ಅವರ ಮಾಜಿ ಲಿವ್-ಇನ್ ಪಾರ್ಟನರ್ ಪತ್ನಿಯ ಮೇಲೆ ಆಸಿಡ್ ಎರಚಿದ ಆರೋಪದ ಮೇಲೆ ಕೇಸ್ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ... |
![]() | ಭಾಗವತ ಕಥೆ ಪ್ರವಚನ ಕೇಳಿದ ಕೆಲವೇ ಗಂಟೆಗಳ ನಂತರ ಶವವಾಗಿ ಪತ್ತೆಯಾದ ದಂಪತಿ!ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಹಳ್ಳಿಯೊಂದರಲ್ಲಿ ದಂಪತಿ ಶ್ರೀಮದ್ ಭಾಗವತ್ ಕಥಾ ಪ್ರವಚನದಲ್ಲಿ ಭಾಗವಹಿಸಿದ ಕೆಲವೇ ಗಂಟೆಗಳ ನಂತರ ಕೃಷಿ ಭೂಮಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ. |
![]() | ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬಸ್-ಟ್ರಕ್ ಮುಖಾಮುಖಿ ಡಿಕ್ಕಿ, ನಾಲ್ವರು ಸಾವುಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯ ಮಕ್ಸಿ ಪಟ್ಟಣದ ಬಳಿ ವೇಗವಾಗಿ ಬಂದ ಖಾಸಗಿ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸಾವನ್ನಪ್ಪಿ, 14 ಮಂದಿ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ. |
![]() | 3ನೇ ಹೆಂಡತಿಗಾಗಿ ತನ್ನ ಸ್ವಂತ ಮಗನನ್ನೇ ಕೊಂದ ಪಾಪಿ ತಂದೆ!3ನೇ ಹೆಂಡತಿಗೆ ಮಗನನ್ನು ಕಂಡರೆ ಇಷ್ಟವಿಲ್ಲ ಎಂಬ ಒಂದೇ ಕಾರಣಕ್ಕೆ ಸ್ವಂತ ತಂದೆಯೇ ತನ್ನ 7 ವರ್ಷದ ಮಗಗನ್ನು ಹತ್ಯೆ ಮಾಡಿರುವ ಘಟನೆ ಇಂದೋರ್ ನಲ್ಲಿ ನಡೆದಿದೆ. |
![]() | ಕರ್ನಾಟಕ ಚುನಾವಣೆಯಲ್ಲಿ ಸೋಲು: ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಕಾರ್ಯತಂತ್ರ ಬದಲಿಸಲು ಬಿಜೆಪಿ ಮುಂದು?ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಬಿಜೆಪಿ, ಮುಂಬರುವ ರಾಜಸ್ಥಾನ, ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರವನ್ನು ಬದಲಾವಣೆ ಮಾಡಲು ನಿರ್ಧರಿಸಿದೆ. |
![]() | ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಚಿರತೆ ಸಾವು!ಮಧ್ಯ ಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಮತ್ತೊಂದು ಚಿರತೆ ಸಾವನ್ನಪ್ಪಿದೆ. ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ದಕ್ಷಾ ಹೆಣ್ಣು ಚಿರತೆ ಮೃತಪಟ್ಟಿರುವುದಾಗಿ ಮಧ್ಯ ಪ್ರದೇಶ ಮುಖ್ಯ ಅರಣ್ಯಾ ಸಂರಕ್ಷಣಾಧಿಕಾರಿ ಜೆ ಎಸ್ ಚೌಹ್ಹಾಣ್ ತಿಳಿಸಿದ್ದಾರೆ. |
![]() | ಮಧ್ಯ ಪ್ರದೇಶ: ಸೇತುವೆಯಿಂದ ಕೆಳಗೆ ಬಿದ್ದ ಬಸ್, 15 ಮಂದಿ ದುರ್ಮರಣ, ಮೃತರ ಕುಟುಂಬಕ್ಕೆ ರೂ.4 ಲಕ್ಷ ರೂ. ಪರಿಹಾರಪ್ರಯಾಣಿಕರ ಹೊತ್ತೊಯ್ಯುತ್ತಿದ್ದ ಬಸ್ ವೊಂದು ಸೇತುವೆಯಿಂದ ಕೆಳಗೆ ಬಿದ್ದ ಪರಿಣಾಮ ಕನಿಷ್ಟ 15 ಮಂದಿ ಸಾವನ್ನಪ್ಪಿ, 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ಮಂಗಳವಾರ ನಡೆದಿದೆ. |
![]() | ಮಧ್ಯ ಪ್ರದೇಶ: ರೂ. 50,000ಕ್ಕೆ ಅಪ್ರಾಪ್ತ ಬಾಲಕಿ ಮಾರಾಟ: ನಾಲ್ವರ ಬಂಧನವ್ಯಕ್ತಿಯೊಬ್ಬರಿಗೆ 17 ವರ್ಷದ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು 50,000 ರೂ.ಗೆ ಮಾರಾಟ ಮಾಡಿದ ಆರೋಪದ ಮೇಲೆ ಮೂವರು ಪುರುಷರು ಮತ್ತು ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. |
![]() | ಮಧ್ಯ ಪ್ರದೇಶ ಮಾಜಿ ಸಿಎಂ ಕೈಲಾಶ್ ಚಂದ್ರ ಜೋಶಿ ಪುತ್ರ ದೀಪಕ್ ಕಾಂಗ್ರೆಸ್ ಸೇರ್ಪಡೆಇತ್ತೀಚಿಗಷ್ಟೇ ಬಿಜೆಪಿ ತೊರೆದಿದ್ದ ಮಧ್ಯ ಪ್ರದೇಶ ಮಾಜಿ ಮುಖ್ಯಮಂತ್ರಿ ಕೈಲಾಶ್ ಚಂದ್ರ ಜೋಶಿ ಅವರ ಪುತ್ರ, ಮಾಜಿ ಸಚಿವ ದೀಪಕ್ ಜೋಶಿ ಅವರು ಶನಿವಾರ ಭೋಪಾಲ್‌ನಲ್ಲಿ ಪ್ರತಿಪಕ್ಷ ಕಾಂಗ್ರೆಸ್‌ಗೆ ಸೇರಿದ್ದಾರೆ. |