• Tag results for Mahinda Rajapaksa

ಲಂಕೆಗೆ ಬೆಂಕಿ: 'ಸೇಡಿನ ಕೃತ್ಯಗಳನ್ನು' ನಿಲ್ಲಿಸುವಂತೆ ಜನರನ್ನು ಒತ್ತಾಯಿಸಿದ ಶ್ರೀಲಂಕಾ ಅಧ್ಯಕ್ಷ, 8 ಸಾವು!

ಭೀಕರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಲಂಕೆಯಲ್ಲಿ ಹಿಂಸಾಚಾರ ಇದೀಗ ತೀವ್ರ ಸ್ವರೂಪಕ್ಕೆ ತಿರುಗಿದ್ದು ಸತ್ತವರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಇನ್ನು ದೇಶದಲ್ಲಿ ಹಿಂಸಾಚಾರ ಮತ್ತು ಸೇಡಿನ ಕೃತ್ಯಗಳನ್ನು ನಿಲ್ಲಿಸುವಂತೆ ಜನರನ್ನು ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಒತ್ತಾಯಿಸಿದ್ದಾರೆ. 

published on : 10th May 2022

ರಾಜಪಕ್ಸೆ ಆಪ್ತರು ಲಂಕೆ ತೊರೆಯದಂತೆ ತಡೆಯಲು ಏರ್ ಪೋರ್ಟ್ ರಸ್ತೆಯಲ್ಲಿ ಪ್ರತಿಭಟನಾಕಾರರಿಂದ ಚೆಕ್‌ಪೋಸ್ಟ್ ನಿರ್ಮಾಣ

ಲಂಕಾದ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಹಿಂಸಾಚಾರ ಮತ್ತು ವ್ಯಾಪಕ ಪ್ರತಿಭಟನೆ ಮುಂದುವರೆದಿದ್ದು ರಾಜಪಕ್ಸೆ ಕುಟುಂಬದ ನಿಷ್ಠಾವಂತರು ದೇಶದಿಂದ ಪಲಾಯನವಾಗದಂತೆ ತಡೆಯಲು ಕೊಲಂಬೋದ ಬಂಡಾರನಾಯಕೆ ಅಂತಾರಾಷ್ಟ್ರೀಯ ವಿಮಾನ...

published on : 10th May 2022

ಶ್ರೀಲಂಕಾ ಉದ್ವಿಗ್ನ: ಮಾಜಿ ಪಿಎಂ ಮಹಿಂದಾ ರಾಜಪಕ್ಸ ಅಡಗಿಕೊಂಡಿರುವ ನೌಕ ನೆಲೆ ಮುಂಭಾಗ ಪ್ರತಿಭಟನೆ

ಶ್ರೀಲಂಕಾದ ಮಾಜಿ ಪ್ರದಾನಿ ಮಹಿಂದಾ ರಾಜಪಕ್ಸ ಮತ್ತು ಅವರ  ಕುಟುಂಬದ ಕೆಲ ಸದಸ್ಯರು ಕೊಲೊಂಬೊದಲ್ಲಿನ ಅಧಿಕೃತ ನಿವಾಸವನ್ನು ತೊರೆದು ನೌಕಾನೆಲೆಯಲ್ಲಿ ಅಡಗಿಕೊಂಡಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ  ಟ್ರಿಂಕೋಮಲೀ ನೌಕಾನೆಲೆ ಮುಂಭಾಗ ಮಂಗಳವಾರ ಪ್ರತಿಭಟನೆ ಆರಂಭವಾಗಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. 

published on : 10th May 2022

ಮಹಿಂದ ರಾಜಪಕ್ಸೆ ಅಜ್ಞಾತ ಸ್ಥಳಕ್ಕೆ ಸ್ಥಳಾಂತರ, ಕೊಲೊಂಬೊದಲ್ಲಿ ಹಿಂಸಾಚಾರಕ್ಕೆ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆ!

ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಶ್ರೀಲಂಕಾ ರಾಜಧಾನಿ ಕೊಲೊಂಬೊ ನಗರದಲ್ಲಿ ಪ್ರತಿಭಟನೆ ಹಿಂಸಾಚಾರ ರೂಪಕ್ಕೆ ತಾಳಿ ಭಾರೀ ಶಸ್ತ್ರಸಜ್ಜಿತ ಪಡೆಗಳು ಮಹಿಂದ ರಾಜಪಕ್ಸೆ ಅವರನ್ನು ಕೊಲಂಬೊದಲ್ಲಿನ ಅವರ ಅಧಿಕೃತ ನಿವಾಸದಿಂದ ಸ್ಥಳಾಂತರಿಸಿವೆ.

published on : 10th May 2022

ಶ್ರೀಲಂಕಾ ರಾಜಧಾನಿ ಕೊಲೊಂಬೊದಲ್ಲಿ ತೀವ್ರ ಹಿಂಸಾಚಾರಕ್ಕೆ ಐವರು ಬಲಿ: ಮಹಿಂದ ರಾಜಪಕ್ಸ ಬಂಧನಕ್ಕೆ ಆಗ್ರಹ

ಪ್ರಧಾನಿ ಹುದ್ದೆಗೆ ಮಹಿಂದಾ ರಾಜಪಕ್ಸೆ ರಾಜೀನಾಮೆ ನೀಡಿದ ನಂತರ ಶ್ರೀಲಂಕಾ ರಾಜಧಾನಿ ಕೊಲೊಂಬೊದಲ್ಲಿ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಕನಿಷ್ಠ ಐವರು ಇದುವರೆಗೆ ಪ್ರಾಣ ಕಳೆದುಕೊಂಡಿದ್ದಾರೆ. 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 

published on : 10th May 2022

ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆ ಬೆನ್ನಲ್ಲೇ ನಿವಾಸಕ್ಕೆ ಬೆಂಕಿ; ರಾಷ್ಟ್ರವ್ಯಾಪಿ ಕರ್ಫ್ಯೂ ಜಾರಿ, ಶ್ರೀಲಂಕಾದಲ್ಲಿ ಮತ್ತೊಂದು ಅಂತರ್ಯುದ್ಧ?

ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ವಾರಗಟ್ಟಲೆ ಅಧಿಕಾರಕ್ಕೆ ಅಂಟಿಕೊಂಡ ನಂತರ ಸೋಮವಾರ ರಾಜೀನಾಮೆ ನೀಡಿದ್ದಾರೆ.

published on : 10th May 2022

ರಾಜಿನಾಮೆ ಬೆನ್ನಲ್ಲೇ ಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸ ಅವರ ಕುರುನೇಗಾಲದ ನಿವಾಸಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು!

ದೇಶದಲ್ಲಿ ತೀವ್ರಗೊಂಡಿರುವ ಆಂತರಿಕ ಕಲಹದ ನಡುವೆಯೇ ಅಧ್ಯಕ್ಷ ಗೋಟಾಬಯ ರಾಜಪಕ್ಸೆಗೆ ಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜಿನಾಮೆ ನೀಡಿದ ಬೆನ್ನಲ್ಲೇ ಅವರ ಕುರುನೇಗಾಲದ ನಿವಾಸಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದಾರೆ.

published on : 10th May 2022

ಲಂಕಾ ಪ್ರಧಾನಿ ರಾಜಿನಾಮೆ ಬೆನ್ನಲ್ಲೇ ಪ್ರತಿಭಟನಾಕಾರನಿಗೆ ಗುಂಡಿಟ್ಟು ಸ್ವತಃ ಗುಂಡು ಹಾರಿಸಿಕೊಂಡು ಸಂಸದ ಸಾವು!

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡ್ತಿರೋ ಶ್ರೀಲಂಕಾ ಪ್ರತಿಭಟನೆಯ ಕಿಚ್ಚಲ್ಲಿ ಬೇಯುತ್ತಿದೆ. ಮಹಿಂದಾ ರಾಜಪಕ್ಸೆ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ  ಮತ್ತೆ ಪ್ರತಿಭಟನೆಗಳು ಜೋರಾಗಿವೆ.

published on : 9th May 2022

ಲಂಕಾ ಆರ್ಥಿಕ ಬಿಕ್ಕಟ್ಟು: ಭಾರೀ ಪ್ರತಿಭಟನೆಗೆ ಮಣಿದು ಪ್ರಧಾನಿ ಮಹಿಂದಾ ರಾಜಪಕ್ಸೆ ರಾಜೀನಾಮೆ

ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಸರ್ಕಾರದ ರಾಷ್ಟ್ರವ್ಯಾಪಿ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರು ಸೋಮವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

published on : 9th May 2022

ಶ್ರೀಲಂಕಾ ಪ್ರಧಾನಿ ಸ್ಥಾನದಿಂದ ಸಹೋದರನನ್ನು ತೆಗೆದುಹಾಕಲು ಅಧ್ಯಕ್ಷ ಗೋಟಬಯ ರಾಜಪಕ್ಸ ಒಪ್ಪಿಗೆ

ನೆರೆಯ ದ್ವೀಪ ರಾಷ್ಟ್ರ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದ ನಲುಗುತ್ತಿರುವಂತೆಯೇ, ತಮ್ಮ ಸಹೋದರ ರಾಜಪಕ್ಸ ಅವರನ್ನು ಪ್ರಧಾನಿ ಹುದ್ದೆಯಿಂದ ತೆಗೆದುಹಾಕಲು ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸ ಒಪ್ಪಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.

published on : 29th April 2022

ದಿವಾಳಿತನ ಅಂಚಿನಲ್ಲಿ ದ್ವೀಪರಾಷ್ಟ್ರ; ಅಧ್ಯಕ್ಷರ ಅಧಿಕಾರ ಮೊಟಕು: ಶ್ರೀಲಂಕಾ ಪ್ರಧಾನಿ ಹೇಳಿಕೆ

ದೇಶದ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಸುಸ್ಥಿತಿಗೆ ತರಲು ವಿಫಲರಾದ ಹಿನ್ನೆಲೆಯಲ್ಲಿ ಅಧ್ಯಕ್ಷ ಮತ್ತು ಅವರ ಪ್ರಬಲ ಕುಟುಂಬವನ್ನು ತೊರೆಯುವಂತೆ ಪ್ರತಿಭಟನಾಕಾರರು ಕರೆ ನೀಡುವುದನ್ನು ಮುಂದುವರೆಸಿದ್ದರಿಂದ ಸಂವಿಧಾನವನ್ನು ಅಧ್ಯಕ್ಷೀಯ ಅಧಿಕಾರದಿಂದ ಕ್ಷಿಪ್ರವಾಗಿ ತೊರೆದು ಸಂಸತ್ತಿಗೆ ಅಧಿಕಾರ ನೀಡಲಾಗುವುದು ಎಂದು ಶ್ರೀಲಂಕಾ ಪ್ರಧಾನ ಮಂತ್ರಿ ತಿಳಿಸಿದ್ದಾರೆ.

published on : 19th April 2022

ಶ್ರೀಲಂಕಾ ಬಿಕ್ಕಟ್ಟು: ಬಹುಮತ ಕಳೆದುಕೊಂಡ ರಾಜಪಕ್ಸೆ ಸರ್ಕಾರ!

ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆಗೆ ಭಾರೀ ಹಿನ್ನಡೆಯಾಗಿದೆ. ದೇಶದಲ್ಲಿ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟಿನ ನಡುವೆ ಅವರ ಪಕ್ಷ ಸಂಸತ್ತಿನಲ್ಲಿ ಬಹುಮತವನ್ನು ಕಳೆದುಕೊಂಡಿದ್ದು ರಾಜಿನಾಮೆ ನೀಡುವಂತೆ ಗೋಟಬಯ ರಾಜಪಕ್ಸೆಯನ್ನು ಒತ್ತಾಯಿಸುತ್ತಿದ್ದಾರೆ.

published on : 5th April 2022

ರಾಶಿ ಭವಿಷ್ಯ