• Tag results for Mandya

ಸಂಸದೆ ಸುಮಲತಾ ಅವರಿಗೂ ಕೊರೋನಾ ಪಾಸಿಟಿವ್ ದೃಢ!

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರಿಗೂ ಕೊರೋನಾ ವೈರಸ್ ವಕ್ಕರಿಸಿದೆ. 

published on : 6th July 2020

ಮೀನು ಸ್ವಚ್ಛ ಮಾಡಲು ಹೋದ ಯುವಕ ನೀರುಪಾಲು

ಮೀನು ಸ್ವಚ್ಛ ಮಾಡಲು ಹೋದ ಯುವಕನೋರ್ವ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಮದ್ದೂರು ತಾಲೂಕಿನ ಕೊತ್ತನಹಳ್ಳಿ ಗ್ರಾಮದ ಗುಳ್ಳೆಬೋರನ ಕೆರೆ ಬಳಿ ನಡೆದಿದೆ.

published on : 5th July 2020

ಮಂಡ್ಯ: ಮತ್ತೆ 35 ಮಂದಿಗೆ ಪಾಸಿಟಿವ್; 508 ರ ಗಡಿದಾಟಿದ ಸೋಂಕಿರ ಸಂಖ್ಯೆ, ರಾಜಕಾರಣಿ ಕುಟುಂಬಕ್ಕೂ ಅಂಟಿದ ಕೊರೋನಾ!

ಜಿಲ್ಲೆಯಲ್ಲಿ ರಾಜಕಾರಣಿಯೊಬ್ಬರ ಕುಟುಂಬದ 6 ಮಂದಿಯೂ ಸೇರಿದಂತೆ 35 ಮಂದಿಗೆ ಕೊರೋನಾ ಸೋಂಕು ದೃಢ ಪಟ್ಟಿದ್ದು, ಇದರೊಂದಿಗೆ ಮಂಡ್ಯ ಜಿಲ್ಲೆಯಲ್ಲಿ  ಸೋಂಕಿತರ ಸಂಖ್ಯೆ 508 ರ ಗಡಿದಾಟಿದೆ.ಇದುವರೆಗೂ ಒಟ್ಟಾರೆ 508 ಸೋಂಕಿತರ ಪೈಕಿ 355 ಮಂದಿ ಗುಣಮುಖರಾಗಿದ್ದಾರೆ 154 ಸಕ್ರಿಯ ಪ್ರಕರಣಗಳಿವೆ.

published on : 5th July 2020

ಕೊರೋನಾ ಸೋಂಕಿತ ಗರ್ಭಿಣಿಗೆ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆ

ಕೊರೋನಾ ಸೋಂಕಿತ ಗರ್ಭಿಣಿಗೆ ಮಂಡ್ಯದ ಜಿಲ್ಲಾಸ್ಪತ್ರೆಯಲ್ಲಿ  ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಗಿದೆ. ಡಾ. ಯೋಗೇಂದ್ರ ಕುಮಾರ್ ನೇತೃತ್ವದ ವೈದ್ಯರ ತಂಡ ಕೊರೋನಾ ವೈರಸ್ ಸೋಂಕಿತ ಮಳವಳ್ಳಿಮೂಲದ ಗರ್ಭಿಣಿ ಮಹಿಳೆಗೆ ಶಸ್ತ್ರಚಿಕಿತ್ಸೆಯನ್ನು ನಡೆಸಿ ಯಶಸ್ವಿಯಾಗಿ ಮಗುವನ್ನು ಹೊರತೆಗೆಯಲಾಗಿದೆ. 

published on : 2nd July 2020

ನನಗೆ ಒಂದು ಉಚಿತ ಬಸ್ ಪಾಸ್ ಕೊಡಿ ಸಾಕು: ಆಧುನಿಕ ಭಗೀರಥ, 'ಕೆರೆಗಳ ಮನುಷ್ಯ' ಕಾಮೇಗೌಡರ ಬಯಕೆ!

ಸಕ್ಕರೆ ನಾಡು ಮಂಡ್ಯದ ಈ ಇಳಿವಯಸ್ಸಿನ ಅಜ್ಜ ಈಗ ಸುದ್ದಿಯ ಕೇಂದ್ರಬಿಂದು. ಅದಕ್ಕೆ ಕಾರಣ ಮೊನ್ನೆ ಭಾನುವಾರ ಆಕಾಶವಾಣಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಇವರ ಹೆಸರು ಮತ್ತು ಸಾಧನೆಗಳನ್ನು ಪ್ರಸ್ತಾಪಿಸಿದ್ದರು.

published on : 2nd July 2020

ಮಂಡ್ಯದ 'ಆಧುನಿಕ ಭಗೀರಥ' ಕಾಮೇಗೌಡರನ್ನು ಕೊಂಡಾಡಿದ ಪ್ರಧಾನಿ ಮೋದಿ.!

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಆಧುನಿಕ ಭಗೀರಥನೆಂದೇ ಖ್ಯಾತಿ ಪಡೆದಿರುವ ಮಳವಳ್ಳಿ ತಾಲ್ಲೂಕು ದಾಸನದೊಡ್ಡಿ ಕಾಮೇಗೌಡರನ್ನು ಕೊಂಡಾಡಿದ್ದಾರೆ.

published on : 28th June 2020

ಮೇಲುಕೋಟೆಗೆ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ದಂಪತಿ ಭೇಟಿ, ದೇವರ ದರ್ಶನ

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ದಂಪತಿ ಸಮೇತರಾಗಿ ಶುಕ್ರವಾರ ಮೇಲುಕೋಟೆಗೆ ಆಗಮಿಸಿ ಶ್ರೀಚೆಲುವನಾರಾಯಣಸ್ವಾಮಿಯ ದರ್ಶನ ಪಡೆದು ಹರಕೆ ತೀರಿಸಿದರು. 

published on : 26th June 2020

ನಾಗಮಂಗಲ: ಇಬ್ಬರು ಬಾಲಕರು ಸೇರಿ ಮೂವರು ನೀರು ಪಾಲು

ಇಬ್ಬರು ಬಾಲಕರು ಮತ್ತು ಓರ್ವ ಯುವಕ ಸೇರಿದಂತೆ ಒಟ್ಟು ಮೂವರು ನೀರುಪಾಲಾಗಿರುವ ಘಟನೆ ನಾಗಮಂಗಲ ತಾಲ್ಲೂಕಿನ ದಡಗ ಮತ್ತು ಉಪ್ಪಾರಹಳ್ಳಿಯಲ್ಲಿಂದು ನಡೆದಿದೆ. ದಡಗ ಗ್ರಾಮದ ಮನು (೧೨) ಹಾಗೂ ಪುನೀತ್ (೧೦) ಎಂಬ ಬಾಲಕರು ಮತ್ತು ಉಪ್ಪಾರಹಳ್ಳಿಯ ವಿಜಯ್ ಕುಮಾರ್ (೨೫) ಮೃತ ದುರ್ದೈವಿಗಳು.

published on : 26th June 2020

ಕೊರೋನಾ ವಿರುದ್ಧದ ಹೋರಾಟದಲ್ಲಿ ಮಂಡ್ಯಕ್ಕೆ ನೆರವಾದ ಹೈಡ್ರಾಕ್ಸಿಕ್ಲೋರೋಕ್ವಿನ್: ಅಧಿಕಾರಿಗಳು

ಕಳೆದ ತಿಂಗಳವರೆಗೆ ಮಂಡ್ಯ ಜಿಲ್ಲೆಯಲ್ಲಿ ದಾಖಲೆಯ ಸಂಖ್ಯೆಯ ಕೋವಿಡ್ -19 ಪ್ರಕರಣಗಳು ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಗಿತ್ತು.ಆದರೆ, ಇದೀಗ ಹಾಟ್ ಸ್ಪಾಟ್ ಗಳಿಂದ ನಿರಂತರವಾಗಿ ಜನರು ಬರುತ್ತಿದ್ದರೂ ಕೊರೋನಾ ಪ್ರಕರಣಗಳ ಸಂಖ್ಯೆ ತಗ್ಗಿದೆ. ಇದು ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.

published on : 25th June 2020

ಜಿಪಂ ಗದ್ದುಗೆ ಗುದ್ದಾಟ; ನಾಲ್ಕನೇ ಸಭೆಯೂ ರದ್ದು: ಮುಂದುವರೆದ ಸ್ವಪಕ್ಷೀಯ ಅಧ್ಯಕ್ಷೆ-ಸದಸ್ಯರ ನಡುವಿನ ಕಿತ್ತಾಟ  

ಜಿಪಂ.ಅಧ್ಯಕ್ಷಗಾದಿಗಾಗಿ ಹಾಲಿ ಅಧ್ಯಕ್ಷೆ ಹಾಗೂ ಆಡಳಿತಾರೂಢ ಜೆಡಿಎಸ್ ಸದಸ್ಯರ ನಡುವಿನ ರಾಜಕೀಯ ಕಿತ್ತಾಟ ಮುಂದುವರಿದಿದ್ದು, ಬುಧವಾರದ ಬಜೆಟ್ ಅಧಿವೇಶನ ಸೇರಿದಂತೆ ಸತತ ನಾಲ್ಕನೇ ಬಾರಿಯಸಭೆಯೂ ಸಹ ಕೋರಂ ಕೊರತೆ ಕಾರಣದಿಂದ ರದ್ದಾಗಿದೆ.

published on : 24th June 2020

ಮನೆಗೆ ನುಗ್ಗಿ ವೃದ್ಧೆ ಕೊಲೆ: ಚಿನ್ನಾಭರಣ ದೋಚಿ ಪರಾರಿ  

ದುಷ್ಕರ್ಮಿಗಳ ತಂಡವೊಂದು ಮನೆಗೆ ನುಗ್ಗಿ ವೃದ್ಧೆಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿರುವ ಪ್ರಕರಣ ನಾಗಮಂಗಲ ತಾಲೂಕಿನ ಹೊಣಕೆರೆ ಹೋಬಳಿ ಕರಿಕ್ಯಾತನಹಳ್ಳಿಯಲ್ಲಿ ನಡೆದಿದೆ.

published on : 23rd June 2020

ಮೈಷುಗರ್ ಕಾರ್ಖಾನೆ ಖಾಸಗೀಕರಣ ಮಾಡುವ ಬಗ್ಗೆ ಸರ್ಕಾರ ನಿರ್ಧಾರ ಕೈಗೊಂಡಿಲ್ಲ- ಮುರುಗೇಶ್ ನಿರಾಣಿ ಸ್ಪಷ್ಟನೆ

ಮೈಷುಗರ್ ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡವುದಕ್ಕಾಗಲೀ ಅಥವಾ ಓ&ಎಂ (ಕಾರ್ಯಾಚರಣೆ ಮತ್ತು ನಿರ್ವಹಣಾ ವ್ಯವಸ್ಥೆಗೆ) ನೀಡುವುದಕ್ಕಾಗಲೀ ರಾಜ್ಯ ಸರ್ಕಾರ ಈ ಕ್ಷಣದವರೆಗೆ ನಿರ್ಧಾರಕೈಗೊಂಡಿಲ್ಲ.ಹೀಗಾಗಿ ಮೈಷುಗರ್ ರ್ಕಾರ್ಖಾನೆಯನ್ನು ಗುತ್ತಿಗೆಗೆ ಪಡೆಯಲು ಟೆಂಡರ್ ಸಲ್ಲಿಸುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ನಿರಾಣಿ ಶುಗರ್ ಲಿಮಿಟೆಡ್ ಅಧ್ಯಕ್ಷ ಮುರುಗೇಶ್ ನಿರಾಣಿ ಸ್

published on : 22nd June 2020

ಮೈಷುಗರ್ ಕಾರ್ಖಾನೆ ವಾರ್ಷಿಕ ಸಾಮಾನ್ಯ ಸಭೆ ವಿಫಲ!

ಮೈಷುಗರ್ ಕಾರ್ಖಾನೆಯಪುನರಾರಂಭ ಕುರಿತಂತೆ ಇಂದು ಮಂಡ್ಯದ ರೈತರು ಹಾಗೂ ಷೇರುದಾರರು 80ನೇ ವಾರ್ಷಿಕಸಾಮಾನ್ಯ ಸಭೆಯ ಆನ್‌ಲೈನ್ ವಿಡಿಯೋ ಸಂವಾದ ಅರ್ಧಕ್ಕೆ ಮೊಟಕುಗೊಳ್ಳುವ ಮೂಲಕ ವಿಫಲವಾಯಿತು.

published on : 22nd June 2020

ನಿಮ್ಮದು ಹೋರಾಟವಲ್ಲ ಸ್ವಾರ್ಥ ರಾಜಕಾರಣ: ಸಿಡಿದೆದ್ದ ಸುಮಲತಾ ಅಂಬರೀಷ್!

ಮೈಷುಗರ್ ಸಕ್ಕರೆ ಕಾರ್ಖಾನೆ ಆರಂಭಿಸಲು ಆಗ್ರಹಿಸಿ ರೈತರು ಹಾಗೂ ವಿವಿಧ ಪಕ್ಷದ ಮುಖಂಡರ ಪ್ರತಿಭಟನೆ ಹಿನ್ನೆಲೆ ಸಂಸದೆ ಸುಮಲತಾ ಅಂಬರೀಶ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

published on : 19th June 2020
1 2 3 4 5 6 >