• Tag results for NewDelhi

ನವದೆಹಲಿ: ಸಂಸತ್ ಭವನದ ಬಳಿ ಬೆಂಕಿ, ಅದೃಷ್ಟವಶಾತ್ ಕಾರ್ಮಿಕರು ಪಾರು!

ಸೆಂಟ್ರಲ್ ದೆಹಲಿಯ ಸಂಸತ್ ಭವನದ ಬಳಿ ಸೆಂಟ್ರಲ್ ವಿಸ್ತಾ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ಕಾರ್ಮಿಕರಿಗಾಗಿ ನಿರ್ಮಿಸಲಾಗಿರುವ ಮೂರು ತಾತ್ಕಾಲಿಕ ವಸತಿ ಕೇಂದ್ರಗಳಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

published on : 16th May 2022

ಗಂಗಾನದಿಯಲ್ಲಿ ತೇಲಲ್ಪಟ್ಟ ಕೋವಿಡ್ ಮೃತದೇಹಗಳೆಷ್ಟು? ಯುಪಿ, ಬಿಹಾರ ಸರ್ಕಾರಕ್ಕೆ ಎನ್ ಜಿಟಿ ನಿರ್ದೇಶನ

ಕೋವಿಡ್ ಪೂರ್ವ ಹಾಗೂ ನಂತರದಿಂದ ಇದೇ ವರ್ಷದ ಮಾರ್ಚ್ 31ರವರೆಗೂ ಗಂಗಾ ನದಿ ತಟದಲ್ಲಿ ಹೂಳಲಾದ ಕೋವಿಡ್ ಮೃತದೇಹಗಳು ಅಲ್ಲದೇ, ನದಿಯಲ್ಲಿ ತೇಲಲ್ಪಟ್ಟ ಮೃತದೇಹಗಳ ಸಂಖ್ಯೆಗಳ ಬಗ್ಗೆ ಮಾಹಿತಿ ನೀಡುವಂತೆ ಉತ್ತರ ಪ್ರದೇಶ ಮತ್ತು ಬಿಹಾರ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ನಿರ್ದೇಶನ ನೀಡಿದೆ.

published on : 16th May 2022

ಚರ್ಚೆಗೆ ಗ್ರಾಸವಾದ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟ್ವೀಟ್!

ಆಗಾಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಚಾಟಿ ಬೀಸುವ ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಭಾನುವಾರ ಮಾಡಿರುವ ಟ್ವೀಟ್ ವೊಂದು ನೆಟ್ಟಿಗರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. 

published on : 15th May 2022

ದೇಶದ 25ನೇ ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ಅಧಿಕಾರ ಸ್ವೀಕಾರ

ದೇಶದ 25ನೇ ಮುಖ್ಯ ಚುನಾವಣಾ ಆಯುಕ್ತರಾಗಿ ರಾಜೀವ್ ಕುಮಾರ್ ದೆಹಲಿಯ ನಿರ್ವಾಚನ ಸದನದಲ್ಲಿಂದು ಅಧಿಕಾರ ವಹಿಸಿಕೊಂಡರು.

published on : 15th May 2022

ನವದೆಹಲಿ: ಪ್ರೇಮ್ ನಗರ ಸೇರಿದಂತೆ ವಿವಿಧೆಡೆ ಒತ್ತುವರಿ ತೆರವು ಕಾರ್ಯಚರಣೆ, ಸ್ಥಳೀಯರಿಂದ ವಿರೋಧ

ನವದೆಹಲಿಯ ಪಟೇಲ್ ನಗರದ ಪ್ರೇಮ್ ನಗರ ಸೇರಿದಂತೆ ರಾಷ್ಟ್ರರಾಜಧಾನಿಯ ವಿವಿಧೆಡೆ ಇಂದು ಕೂಡಾ ಒತ್ತುವರಿ ತೆರವು ಕಾರ್ಯಚರಣೆ ಮುಂದುವರೆದಿದೆ.

published on : 12th May 2022

ಹನಿಟ್ರ್ಯಾಪ್ ಜಾಲಕ್ಕೆ ಸಿಲುಕಿ ಪಾಕ್ ಏಜೆಂಟ್ ಗೆ ಸೂಕ್ಷ್ಮ ಮಾಹಿತಿ ಸೋರಿಕೆ, ಐಎಎಫ್ ಅಧಿಕಾರಿ ಬಂಧನ

ಪಾಕ್ ಮೂಲದ ಮಹಿಳಾ ಏಜೆಂಟ್ ಮಾಡಿದ  ಹನಿಟ್ರ್ಯಾಪ್  ಜಾಲಕ್ಕೆ ಸಿಲುಕಿ ಸೇನೆಗೆ ಸಂಬಂಧಿಸಿದ ಸೂಕ್ಷ್ಮವಾದ ಮಾಹಿತಿಯನ್ನು ಸೋರಿಕೆ ಮಾಡಿದ ಆರೋಪದ ಮೇರೆಗೆ ಭಾರತೀಯ ವಾಯುಪಡೆಯ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. 

published on : 12th May 2022

ಸಂಸದರ ನಿಧಿ ಮೇಲಿನ ಬಡ್ಡಿ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸುವಂತಿಲ್ಲ: ಕೇಂದ್ರದ ಪರಿಷ್ಕೃತ ನಿಯಮ

ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಡಿ ಹಣದ ಬಳಕೆಗಾಗಿ ಕೇಂದ್ರವು ನಿಯಮಗಳನ್ನು ಪರಿಷ್ಕರಿಸುವ ಮೂಲಕ ಸಂಸದರ  ನಿಧಿಯ ಮೇಲೆ ಸಂಗ್ರಹವಾದ ಬಡ್ಡಿಯನ್ನು ಅಭಿವೃದ್ಧಿ ಕಾರ್ಯಗಳಿಗೆ ಸಂಸದರು ಬಳಸದಂತಾಗಿದೆ.

published on : 10th May 2022

ಒತ್ತುವರಿ ವಿರುದ್ಧ ಕಾರ್ಯಚರಣೆ: ಬುಲ್ಡೋಜರ್ ಜೊತೆ ಶಾಹೀನ್ ಭಾಗ್ ಗೆ ತೆರಳಿದ ಪೊಲೀಸರಿಗೆ ಪ್ರತಿಭಟನೆ ಬಿಸಿ

ಶಾಹೀನ್ ಭಾಗ್ ನಲ್ಲಿ ಸೋಮವಾರ ಒತ್ತುವರಿ ತೆರವು ಕಾರ್ಯಚರಣೆ ವಿರುದ್ಧ ಪ್ರತಿಭಟನೆ ಭುಗಿಲೆದಿತ್ತು. ಬುಲ್ಡೋಜರ್ ನೊಂದಿಗೆ ಎಸ್ ಡಿಎಂಸಿ ಅಧಿಕಾರಿಗಳು ಸ್ಥಳಕ್ಕೆ ತೆರಳುತ್ತಿದ್ದಂತೆಯೇ ಮಹಿಳೆಯರು ಸೇರಿದಂತೆ ನೂರಾರು ಮಂದಿ ಧರಣಿ ಆರಂಭಿಸಿದರು.

published on : 9th May 2022

ವಿಶೇಷ ಚೇತನ ಮಗು ವಿಮಾನ ಹತ್ತದಂತೆ ನಿರ್ಬಂಧ: ಇಂಡಿಗೋ ವಿರುದ್ಧ ಕ್ರಮ- ಎನ್ ಸಿಪಿಸಿಆರ್

ರಾಂಚಿ ವಿಮಾನ ನಿಲ್ದಾಣದಲ್ಲಿ ಗಾಬರಿಯ ಸ್ಥಿತಿಯಲ್ಲಿದ್ದ ವಿಶೇಷ ಚೇತನ ಮಗುವನ್ನು ವಿಮಾನ ಹತ್ತುವುದನ್ನು ಇಂಡಿಗೋ ನಿರ್ಬಂಧಿಸಿದೆ. ಈ ಘಟನೆ ಕುರಿತು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. 

published on : 9th May 2022

ನಿಗದಿಯಂತೆ ಮೇ 21ಕ್ಕೆ ನೀಟ್ ಪಿಜಿ ಪರೀಕ್ಷೆ; ಮುಂದೂಡಿಕೆ ಸುದ್ದಿಗಳನ್ನು ನಂಬಬೇಡಿ: ಪಿಐಬಿ

ಈ ಬಾರಿಯ ನೀಟ್ ಪಿಜಿ ಪರೀಕ್ಷೆ ನಿಗದಿಯಂತೆ ಮೇ 21ಕ್ಕೆ ನಡೆಯಲಿದೆ. ರಾಷ್ಟ್ರೀಯ ಪರೀಕ್ಷಾ ಮಂಡಳಿ ಹೆಸರಿನಲ್ಲಿ ಜುಲೈ 9 ರಂದು ಪರೀಕ್ಷೆ ನಡೆಯಲಿದೆ ಎಂಬುದಾಗಿ ಹೊರಡಿಸಿರುವ ನೋಟಿಸ್ ನಕಲಿ ಎಂದು ಪಿಐಬಿ ಶನಿವಾರ ತಿಳಿಸಿದೆ.

published on : 7th May 2022

ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಪತ್ನಿ ವಿರುದ್ಧ ಜಾಮೀನು ಸಹಿತ ವಾರೆಂಟ್

ಪಶ್ಚಿಮ ಬಂಗಾಳದಲ್ಲಿ ಕಲ್ಲಿದ್ದಲು ಹಗರಣ ಆರೋಪದಲ್ಲಿ ಹಣ ವರ್ಗಾವಣೆ ಕೇಸ್ ಗೆ ಸಂಬಂಧಿಸಿದಂತೆ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ದೂರಿನಂತೆ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಪತ್ನಿ ರುಜಿರಾ ಬ್ಯಾನರ್ಜಿಗೆ ದೆಹಲಿಯ ನ್ಯಾಯಾಲಯವೊಂದು ಶನಿವಾರ ಜಾಮೀನು ಸಹಿತ ವಾರೆಂಟ್ ಹೊರಡಿಸಿದೆ. 

published on : 7th May 2022

ಕೋವಿಡ್ ಸಾವು ಕುರಿತು ವಿಶ್ವ ಆರೋಗ್ಯ ಸಂಸ್ಥೆ ವರದಿ: ಪ್ರಧಾನಿ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

ದೇಶದಲ್ಲಿ ಕೋವಿಡ್-19 ಸಾಂಕ್ರಾಮಿಕದಿಂದ 4.7 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ ಎಂಬ ವಿಶ್ವ ಆರೋಗ್ಯ ಸಂಸ್ಥೆ ವರದಿ ಹಿನ್ನೆಲೆಯಲ್ಲಿ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.

published on : 6th May 2022

ಅಜಯ್ ದೇವಗನ್ ನಟನೆಯ 'ರನ್ ವೇ 34' ವಿರುದ್ಧ ಭಾರತೀಯ ಪೈಲಟ್ ಗಳ ಒಕ್ಕೂಟ ಪ್ರತಿಭಟನೆ

ಹಿಂದಿ ರಾಷ್ಟ್ರ ಭಾಷೆ ವಿವಾದ ಹಿನ್ನೆಲೆಯಲ್ಲಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿರುವ ಬಾಲಿವುಡ್ ನಟ ಅಜಯ್ ದೇವಗನ್ ಅಭಿನಯದ 'ರನ್ ವೇ 34' ವಿರುದ್ಧ ಭಾರತೀಯ ಪೈಲಟ್ ಗಳ ಒಕ್ಕೂಟ ಪ್ರತಿಭಟನೆಗೆ ಇಳಿದಿದೆ.

published on : 4th May 2022

ಪ್ರಧಾನಿ ಮೋದಿಯದ್ದು ಕಳಪೆ ಆಡಳಿತ- ರಾಹುಲ್ ಗಾಂಧಿ ಟೀಕೆ

ಪ್ರಧಾನಿ ನರೇಂದ್ರ ಮೋದಿ ಅವರದ್ದು ಕಳಪೆ ಆಡಳಿತವಾಗಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.

published on : 2nd May 2022

ದೇಶದಲ್ಲಿ ಮತ್ತೆ ಕೊರೋನಾ ಹೆಚ್ಚಳ: ಒಂದೇ ದಿನ 26 ಸಾವು, 3,157 ಹೊಸ ಪ್ರಕರಣ ಪತ್ತೆ!

ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ 3,157 ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4,30,82,345ಕ್ಕೆ ಏರಿಕೆಯಾಗಿದೆ. 26 ಸೋಂಕಿತರು ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

published on : 2nd May 2022
1 2 3 4 5 6 > 

ರಾಶಿ ಭವಿಷ್ಯ