• Tag results for New Zealand

81 ರನ್ ಕಳಪೆ ಎಂದು ಭಾವಿಸಲ್ಲ, ಟೆಸ್ಟ್‌ ಸರಣಿಯಲ್ಲೂ ಇದೇ ರೀತಿ ಆಡುತ್ತೇನೆ: ಮಯಾಂಕ್‌ ಅಗರ್ವಾಲ್

ನ್ಯೂಜಿಲೆಂಡ್‌ ಇಲೆವೆನ್‌ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯದ ಕೊನೆಯ ದಿನವಾದ ಇಂದು ಕರ್ನಾಟಕದ ಮಯಾಂಕ್‌ ಅಗರ್ವಾಲ್‌ 99 ಎಸೆತಗಳಲ್ಲಿ 81 ರನ್‌ ಗಳಿಸಿ ಮಿಂಚಿದರು. ಇಂದಿನ ಅವರ ಜನುಮ ದಿನದಂದೆ ಅರ್ಧಶತಕ ಸಿಡಿಸಿದ್ದು ವಿಶೇಷವಾಗಿತ್ತು. ಇದರ ನಡುವೆ ಪಂದ್ಯ ಅಂತಿಮವಾಗಿ ಡ್ರಾನಲ್ಲಿ ಅಂತ್ಯ ಕಂಡಿತ್ತು.

published on : 16th February 2020

ಇಶಾಂತ್ ಶರ್ಮಾ ಫಿಟ್ ನೆಸ್ ಪರೀಕ್ಷೆ ಪಾಸ್: ಕಿವೀಸ್ ವಿರುದ್ಧ ಟೆಸ್ಟ್ ಸರಣಿಗೆ ಟೀಂ ಇಂಡಿಯಾಗೆ ಆನೆಬಲ!

ಟೀಂ ಇಂಡಿಯಾದ ಭರವಸೆಯ ವೇಗದ ಬೌಲರ್ ಇಶಾಂತ್ ಶರ್ಮಾ ದೈಹಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ನ್ಯೂಜಿಲೆಂಡ್ ನಲ್ಲಿ ನಡೆಯಲಿರುವ ಎರಡು ಟೆಸ್ಟ್ ಪಂದ್ಯಗಳಲ್ಲಿ ಭಾಗವಹಿಸಲಿದ್ದಾರೆ.

published on : 16th February 2020

ಓಪನಿಂಗ್‌ ರೇಸ್‌ನಲ್ಲಿರುವ ಪೃಥ್ವಿ-ಗಿಲ್ ಶೂನ್ಯಕ್ಕೆ ಔಟ್: ಹನುಮನ ಬ್ಯಾಟ್‌ನಿಂದ ಮೂಡಿಬಂದ ಅಮೋಘ ಶತಕ

ಕಿವೀಸ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿಯಲ್ಲಿ ಮಯಾಂಕ್ ಅಗರ್ವಾಲ್ ಜತೆಗೆ ಆರಂಭಿಕ ಸ್ಥಾನಕ್ಕೆ ಪೈಪೋಟಿಯಲ್ಲಿರುವ ಪೃಥ್ವಿ ಶಾ ಹಾಗೂ ಶುಭಮನ್ ಗಿಲ್ ಇಬ್ಬರೂ ನ್ಯೂಜಿಲೆಂಡ್ ಎಲೆವೆನ್ ವಿರುದ್ಧ ಮೂರು ದಿನಗಳ ಅಭ್ಯಾಸ ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.

published on : 14th February 2020

ಕೆಎಲ್ ರಾಹುಲ್‌ರಿಂದಾಗಿ ನ್ಯೂಜಿಲೆಂಡ್ ಪ್ರವಾಸದಲ್ಲಿ ಪ್ರೇಕ್ಷಕರಾಗಿ ಉಳಿದ ರಿಷಭ್ ಪಂತ್!

ವಿಶ್ವಕಪ್ ನಂತರ ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ತಂಡದಿಂದ ದೂರ ಸರಿದ ಬಳಿಕ ರಿಷಭ್ ಪಂತ್ ಅವರನ್ನು ಮೊದಲ ಆಯ್ಕೆಯ ವಿಕೆಟ್ ಕೀಪರ್ ಎಂದು ಪರಿಗಣಿಸಲಾಗಿತ್ತು, ಆದರೆ ನ್ಯೂಜಿಲೆಂಡ್ ಪ್ರವಾಸದಲ್ಲಿ...

published on : 12th February 2020

ಪೃಥ್ವಿ ಶಾ ಅಲಕ್ಷ್ಯದ ರನೌಟ್, ಯುವ ಬ್ಯಾಟ್ಸ್‌ಮನ್‌ ಫಿಟ್ನೆಸ್ ಬಗ್ಗೆ ಪ್ರಶ್ನಿಸಿದ ಚೋಪ್ರಾ, ವಿಡಿಯೋ!

ನ್ಯೂಜಿಲ್ಯಾಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾ ಕ್ಲೀನ್ ಸ್ವೀಪ್ ಮುಖಭಂಗವನ್ನು ಅನುಭವಿಸಿದ್ದು ಇದರ ನಡುವೆ ಯುವ ಪ್ರತಿಭನೆ ಪೃಥ್ವಿ ಶಾ ಅಲಕ್ಷ್ಯದ ರನೌಟ್ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

published on : 11th February 2020

ಹಿಂದೆಂದೂ ಆಡದಷ್ಟು ಕಳಪೆ ಆಟದಿಂದಲೇ ಸರಣಿ ಸೋತೆವು: ವಿರಾಟ್ ಕೊಹ್ಲಿ

ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಐದು ವಿಕೆಟ್‌ಗಳ ಸೋಲಿನಿಂದ ಸರಣಿಯನ್ನು 0-3ರಿಂದ ಕಳೆದುಕೊಂಡಿರುವ ಭಾರತದ ನಾಯಕ ವಿರಾಟ್ ಕೊಹ್ಲಿ, ತಂಡ ಹಿಂದೆಂದೂ ಆಡದಷ್ಟು ಕಳಪೆ ಆಟವಾಡಿದೆ ಎಂದು ಹೇಳಿದ್ದಾರೆ.

published on : 11th February 2020

ಮೂರನೇ ಏಕದಿನ ಪಂದ್ಯ: 4ನೇ ವಿಕೆಟ್ ಜೊತೆಯಾಟದಲ್ಲಿ ರಾಹುಲ್ , ಶ್ರೇಯಸ್ ಅಯ್ಯರ್ ಸ್ಥಿರ ಪ್ರದರ್ಶನ

ಇಲ್ಲಿನ ಬೇ ಓವಲ್‌ ಕ್ರೀಡಾಂಗಣದಲ್ಲಿ ಭಾರತ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ-20 ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡದ ನಾಯಕ ಕೇನ್‌ ವಿಲಿಯಮ್ಸನ್ ಪೀಲ್ಡಿಂಗ್ ಆಯ್ದುಕೊಂಡಿದ್ದಾರೆ.

published on : 11th February 2020

ನಾಳೆ ಮೂರನೇ ಏಕದಿನ: ಸರಣಿ ಸೋತ ಟೀಂ ಇಂಡಿಯಾಗೆ ಗೆಲುವಿನ ತವಕ

ಸತತ ಎರಡು ಪಂದ್ಯಗಳಲ್ಲಿ ಸೋತು ಸರಣಿ ಬಿಟ್ಟುಕೊಟ್ಟಿರುವ ಭಾರತ ತಂಡ, ನ್ಯೂಜಿಲೆಂಡ್‌ ವಿರುದ್ಧ ನಾಳೆ ಇಲ್ಲಿನ ಬೇ ಓವಲ್‌ ಅಂಗಳದಲ್ಲಿ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಗೆದ್ದು ಗೌರವ ಉಳಿಸಿಕೊಳ್ಳುವತ್ತ ಚಿತ್ತ ಹರಿಸಲಿದೆ.

published on : 10th February 2020

ವಿರಾಟ್ ಕೊಹ್ಲಿ ಕ್ಲಾಸ್ ಪ್ಲೇಯರ್, ಹೆಚ್ಚಿನ ದೌರ್ಬಲ್ಯಗಳನ್ನು ಹೊಂದಿಲ್ಲ- ಟಿಮ್ ಸೌಥಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅತ್ಯುತ್ತಮ ಆಟಗಾರರಾಗಿದ್ದಾರೆ. ಅವರು ಅನೇಕ ದೌರ್ಬಲ್ಯಗಳನ್ನು ಹೊಂದಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಲ ಅವರ ವಿಕೆಟ್ ಪಡೆದಿರುವ ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಹೇಳಿದ್ದಾರೆ

published on : 10th February 2020

ನಾನು ಔಟ್ ಆಗದೇ ಉಳಿದಿದ್ದರೇ ಫಲಿತಾಂಶ ಬೇರೆದಾಗಿರುತಿತ್ತು: ನವದೀಪ್ ಸೈನಿ

“ನಾನು ಔಟ್ ಆಗದೇ ಉಳಿದಿದ್ದರೇ ಪಂದ್ಯದ ಫಲಿತಾಂಶವು ವಿಭಿನ್ನವಾಗಿರುತಿತ್ತು” ಎಂದು ನವದೀಪ್ ಸೈನಿ ಹೇಳಿದ್ದಾರೆ.

published on : 9th February 2020

ಟೀಂ ಇಂಡಿಯಾವನ್ನು ಕ್ಲೀನ್ ಸ್ವೀಪ್ ಮಾಡೆ ಮಾಡ್ತೀವಿ: ನ್ಯೂಜಿಲ್ಯಾಂಡ್ ನಾಯಕ ಲಾಥಮ್

ಎರಡನೇ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ 22 ರನ್‌ಗಳ ಗೆಲುವು ಸಾಧಿಸಿದ ನಂತರ ನ್ಯೂಜಿಲೆಂಡ್ ನಾಯಕ ಟಾಮ್ ಲಾಥಮ್ ಸಂತಸ ವ್ಯಕ್ತ ಪಡಿಸಿದ್ದು, ಈ ಗೆಲುವು ಅದ್ಭುತವಾಗಿದೆ ಎಂದು ಹೇಳಿದರು.

published on : 9th February 2020

'ಸರಣಿ ಸೋಲಿಗೆ ಸಮಜಾಯಿಷಿ' ಆರಂಭಿಕ ಆಘಾತದ ಹೊರತಾಗಿಯೂ ಉತ್ತಮ ಬ್ಯಾಟಿಂಗ್ ನಡೆಸಿದ ಸಮಾಧಾನವಿದೆ: ಕೊಹ್ಲಿ

ನ್ಯೂಜಿಲೆಂಡ್‌ನ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 22 ರನ್‌ಗಳಿಂದ ಸೋತ, ಭಾರತದ ನಾಯಕ ವಿರಾಟ್ ಕೊಹ್ಲಿ ಶನಿವಾರ ಬ್ಯಾಟ್ಸ್‌ಮನ್‌ಗಳನ್ನು ಹೊಗಳಿದ್ದಾರೆ. ಕಳಪೆ ಆರಂಭದ ಹೊರತಾಗಿಯೂ ಉತ್ತಮ ಬ್ಯಾಟಿಂಗ್ ನಡೆಸಿದ್ದೇವೆ ಎಂದಿದ್ದಾರೆ.

published on : 8th February 2020

ಸೋಲಿನಲ್ಲೂ ಎಂಎಸ್ ಧೋನಿ, ಕಪಿಲ್ ದೇವ್ ದಾಖಲೆ ಮುರಿದ ಜಡೇಜಾ!

ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯನ್ನು ಟೀಂ ಇಂಡಿಯಾ ಸೋತಿದೆ. ಆದರೆ ಎರಡನೇ ಪಂದ್ಯದಲ್ಲಿ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ಎಂಎಸ್ ಧೋನಿ ಮತ್ತು ಕಪಿಲ್ ದೇವ್ ದಾಖಲೆಯನ್ನು ಮುರಿದಿದ್ದಾರೆ.

published on : 8th February 2020

ನ್ಯೂಜಿಲೆಂಡ್‌ ವಿರುದ್ಧ ಎರಡನೇ ಏಕದಿನ ಪಂದ್ಯ ನಾಳೆ: ಮಾಡು ಇಲ್ಲವೆ ಮಡಿ ಸ್ಥಿತಿಯಲ್ಲಿ ಭಾರತ

ನ್ಯೂಜಿಲೆಂಡ್‌ ವಿರುದ್ಧದ ಮೊದಲನೇ ಹಣಾಹಣಿಯಲ್ಲಿ ಸೋತಿರುವ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ನಾಳೆ ಇಲ್ಲಿನ ಈಡನ್ ಪಾರ್ಕ್‌ನಲ್ಲಿ ನಡೆಯುವ ಎರಡನೇ ಪಂದ್ಯವನ್ನು ಗೆದ್ದು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಜೀವಂತವಾಗಿರಿಸಿಕೊಳ್ಳುವ ಒತ್ತಡಕ್ಕೆ ಸಿಲುಕಿದೆ. 

published on : 7th February 2020

'ಪ್ರಯೋಗ ಪರೀಕ್ಷೆ ಬೇಡ', ಎರಡನೇ ಪಂದ್ಯಕ್ಕೆ ಚಾಹಲ್, ಕುಲ್ದೀಪ್ ಇಬ್ಬರನ್ನೂ ಆಡಿಸಿ: ಹರಭಜನ್ ಸಿಂಗ್

ನಾಳೆ ನಡೆಯುವ ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಹಾಗೂ ಯಜ್ವೇಂದ್ರ ಚಾಹಲ್ ಇಬ್ಬರನ್ನುಕಣಕ್ಕೆ ಇಳಿಸುವಂತೆ ಹಿರಿಯ ಆಫ್‌ ಸ್ಪಿನ್ನರ್‌ ಹರಭಜನ್ ಸಿಂಗ್ ಸಲಹೆ ನೀಡಿದ್ದಾರೆ.

published on : 7th February 2020
1 2 3 4 5 6 >