• Tag results for New delhi

ಕೊರೋನಾ ಮರಣ ಮೃದಂಗಕ್ಕೆ ದೇಶದಲ್ಲಿ ಮತ್ತೆ 7 ಸಾವು, ಸಾವಿನ ಸಂಖ್ಯೆ 20ಕ್ಕೆ ಏರಿಕೆ, ಸೋಂಕಿತರ ಸಂಖ್ಯೆ 749

ದೇಶದಲ್ಲಿ ಕೊರೋನಾ ವೈರಸ್ ಸಾವಿನ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಅಂತೆಯೇ ಭಾರತದಲ್ಲಿ ಸೋಂಕಿತರ ಸಂಖ್ಯೆ 749ಕ್ಕೆ ಏರಿಕೆಯಾಗಿದೆ ಎಂದು ಹೇಳಲಾಗಿದೆ.

published on : 27th March 2020

ಕೊರೋನಾ ವಿರುದ್ಧದ ಭಾರತದ ಹೋರಾಟಕ್ಕೆ ಜಿ20 ರಾಷ್ಟ್ರಗಳ ಮೆಚ್ಚುಗೆ, ಜಾಗತಿಕ ಆರ್ಥಿಕ ಪುನಶ್ಚೇತನಕ್ಕೆ 5 ಟ್ರಿಲಿಯನ್ ಡಾಲರ್ ಹೂಡಿಕೆ

ವಿಶ್ವದ 190 ರಾಷ್ಟ್ರಗಳಲ್ಲಿ ಅಟ್ಟಹಾಸ ಮೆರೆಯುತ್ತಿರುವ ಕೊರೋನಾ ವೈರಸ್ ವಿರುದ್ಧ ಸಮರ ಸಾರಿರುವ ಭಾರತದ ಕಾರ್ಯವೈಖರಿಗೆ ಜಿ20 ಸದಸ್ಯ ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸಿವೆ. ಅಲ್ಲದೆ ಜಾಗತಿಕ ಆರ್ಥಿಕ ಪುನಶ್ಚೇತನಕ್ಕೆ 5 ಟ್ರಿಲಿಯನ್ ಡಾಲರ್ ಹೂಡಿಕೆ ಮಾಡಲು  ನಿರ್ಧರಿಸಿವೆ.

published on : 27th March 2020

ಮೊದಲು ಮಾನವೀಯತೆ, ಬಳಿಕ ಆರ್ಥಿಕತೆ: ಪ್ರಧಾನಿ ಮೋದಿ ಮಾತಿಗೆ ತಲೆದೂಗಿದ ಜಿ20 ನಾಯಕರು

ಇಡೀ ವಿಶ್ವವೇ ಮಾರಕ ವೈರಸ್ ನಿಂದ ತತ್ತರಿಸುತ್ತಿದ್ದು, ಮೊದಲು ಮಾನವೀಯತೆಯ ಕುರಿತು ಚರ್ಚೆ ಮಾಡೋಣ ಬಳಿಕ ಆರ್ಥಿಕತೆ ಕುರಿತು ಚರ್ಚೆ ಮಾಡೋಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

published on : 27th March 2020

ಕೊರೋನಾಗೆ ಮತ್ತೊಂದು ಬಲಿ, ಒಂದೇ ದಿನ 88 ಹೊಸ ಸೋಂಕು ಪ್ರಕರಣ; 700ಗಡಿಯತ್ತ ಸೋಂಕಿತರ ಸಂಖ್ಯೆ, 18 ಸಾವು

ಲಾಕ್ ಡೌನ್ ಹೊರತಾಗಿಯೂ ಭಾರತದಲ್ಲಿ ಮಾರಕ ಕೊರೋನಾ ವೈರಸ್ ಗೆ ತುತ್ತಾಗುತ್ತಿರುವ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು, ನಿನ್ನೆ ಒಂದೇ ದಿನ 88 ಹೊಸ ಸೋಂಕು ಪ್ರಕರಣಗಳು ದಾಖಲಾಗಿದೆ. ಆ ಮೂಲಕ ಭಾರತದಲ್ಲಿ ವೈರಸ್  ಸೋಂಕಿತರ ಸಂಖ್ಯೆ 700 ಗಡಿಯತ್ತ ಸಾಗಿದೆ.

published on : 27th March 2020

ಕೊರೋನಾ ವೈರಸ್ ಲಾಕ್ ಡೌನ್: ಬಡವರಿಗಾಗಿ ಕೇಂದ್ರ ಸರ್ಕಾರ 1.7 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ

ಮಾರಕ ಕೊರೋನಾ ವೈರಸ್ ಪ್ರಸರಣ ತಡೆಗೆ ದೇಶದಲ್ಲಿ ಹೇರಲಾಗಿರುವ ಲಾಕ್ ಡೌನ್ ಹಿನ್ನಲೆಯಲ್ಲಿ ದೇಶದ ನಾಗರಿಕರಿಗೆ ಕೇಂದ್ರ ಸರ್ಕಾರ 1.7 ಲಕ್ಷ ಕೋಟಿ ರೂ ಮೌಲ್ಯದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

published on : 26th March 2020

ಲಾಕ್ ಡೌನ್ ಗೆ ಸೋನಿಯಾ ಬೆಂಬಲ: ವೈದ್ಯರ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳಲು ಮೋದಿಗೆ ಪತ್ರ

ಕೊರೋನಾವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿರುವ 21 ದಿನಗಳ ಲಾಕ್ ಡೌನ್ ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬೆಂಬಲ ವ್ಯಕ್ತಪಡಿಸಿದ್ದಾರೆ. 

published on : 26th March 2020

ಕೊರೋನಾ ತಡೆಗೆ 2 ಕೋಟಿ ರೂ ದೇಣಿಗೆ ನೀಡಿದ ಎಂಜಿ ಮೋಟಾರ್ ಇಂಡಿಯಾ

ಕೊರೊನಾ ಸೋಂಕು ಹರಡದಂತೆ ಸರ್ಕಾರದ ಜೊತೆ ಕೈಜೋಡಿಸಿ ಸಹಾಯ ಮಾಡುವ ಉದ್ದೇಶದಿಂದ ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯು 2 ಕೋಟಿ ರೂಪಾಯಿಯನ್ನು ಸರ್ಕಾರಿ ಆಸ್ಪತ್ರೆಗಳು ಮತ್ತು ಆರೋಗ್ಯ ಸಂಸ್ಥೆಗಳಿಗೆ ಒದಗಿಸಿದೆ.

published on : 26th March 2020

ಕೊರೋನಾ ವೈರಸ್: ದೇಶಾದ್ಯಂತ ಲಾಕ್ ಡೌನ್ ಹಿನ್ನಲೆ, ರಾಷ್ಟ್ರೀಯ ಹೆದ್ದಾರಿ ಟೋಲ್‌ ಸಂಗ್ರಹ ತಾತ್ಕಾಲಿಕ ರದ್ದುಗೊಳಿಸಿದ ಕೇಂದ್ರ ಸರ್ಕಾರ 

ಕೊರೋನಾ ವೈರಸ್ ಪ್ರಸರಣ ತಪ್ಪಿಸುವ ಉದ್ದೇಶದಿಂದ ದೇಶಾದ್ಯಂತ ಹೇರಲಾಗಿರುವ ಲಾಕ್ ಡೌನ್ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿ ಟೋಲ್‌ ಸಂಗ್ರಹ ರದ್ದು ಮಾಡಿದೆ.

published on : 26th March 2020

ಕೊರೋನಾ ವೈರಸ್: ಗುಜರಾತ್ ನಲ್ಲಿ ಸೌದಿಯಿಂದ ವಾಪಸ್ ಆಗಿದ್ದ ಮಹಿಳೆ ಸಾವು, ಭಾರತದಲ್ಲಿ 15ಕ್ಕೇರಿದ ಸಾವಿನ ಸಂಖ್ಯೆ

ಭಾರತದಲ್ಲಿ ಮಾರಕ ಕೊರೋನಾ ಮರಣ ಮೃದಂಗ ಮುಂದುವರೆದಿದ್ದು, ಇತ್ತೀಚೆಗೆ ಸೌದಿ ಅರೇಬಿಯಾದಿಂದ ಗುಜರಾತ್ ಗೆ ಆಗಮಿಸಿದ್ದ ಮಹಿಳೆಯೊಬ್ಬರು ವೈರಸ್ ಸೋಂಕಿನಿಂದಾಗಿ ಸಾವನ್ನಪ್ಪುವ ಮೂಲಕ ಭಾರತದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ  15ಕ್ಕೆ ಏರಿಕೆಯಾಗಿದೆ.

published on : 26th March 2020

ಕೊರೋನಾ ವೈರಸ್ ಎಫೆಕ್ಟ್: ಎನ್ ಪಿಆರ್-ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪರಿಷ್ಕರಣೆ ಮುಂದೂಡಿದ ಕೇಂದ್ರ ಸರ್ಕಾರ

ಕೊರೋನಾ ವೈರಸ್ ಸೋಂಕು (ಕೋವಿಡ್–19) ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಪರಿಷ್ಕರಣೆಯನ್ನು ಕೇಂದ್ರ ಸರ್ಕಾರ ಮುಂದೂಡಿದೆ ಎಂದು ತಿಳಿದುಬಂದಿದೆ.

published on : 25th March 2020

ಕೊರೋನಾ ವೈರಸ್: 21 ದಿನಗಳ ಲಾಕ್ ಡೌನ್ ನಿಂದಾಗಿ ಭಾರತಕ್ಕೆ 9 ಲಕ್ಷ ಕೋಟಿ ರೂ ನಷ್ಟ: ತಜ್ಞರ ಅಂದಾಜು

ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಗೆ ಬ್ರೇಕ್ ಹಾಕಲು ಭಾರತ ಸರ್ಕಾರ 21 ದಿನಗಳ ಲಾಕ್ ಡೌನ್ ಘೋಷಣೆ ಮಾಡಿದ್ದು, ಇದರಿಂದ ದೇಶಕ್ಕೆ ಬರೊಬ್ಬರಿ 9 ಲಕ್ಷ ಕೋಟಿ ರೂ ನಷ್ಟವಾಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

published on : 25th March 2020

ಕೋವಿಡ್ -19: ಮುದ್ರಣ ಮಾಧ್ಯಮದ ಪತ್ರಕರ್ತರು ಹಾಗೂ ಪ್ರಮುಖರೊಂದಿಗೆ ಮೋದಿ ಸಂವಾದ

ಕೊರೋನಾ ವೈರಸ್ ಸವಾಲನ್ನು ನಿಭಾಯಿಸುವಲ್ಲಿ ಮಾಧ್ಯಮಗಳ ಕೊಡುಗೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದು,ವೈರಸ್ ಹರಡುವುದನ್ನು ನಿಭಾಯಿಸುವಲ್ಲಿ ಮಾಧ್ಯಮಗಳು ನಿರಂತರವಾಗಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ಮಾಡಿದ್ದಾರೆ

published on : 24th March 2020

ಕೊರೋನಾ ವೈರಸ್ ಭೀತಿ: ರಾಜ್ಯಸಭೆ ಚುನಾವಣೆ ಮುಂದೂಡಿದ ಚುನಾವಣಾ ಆಯೋಗ

ಕೊರೋನಾ ವೈರೆಸ್ ಭೀತಿಯ ಹಿನ್ನೆಲೆಯಲ್ಲಿ ರಾಜ್ಯಸಭೆಗೆ ನಡೆಯಬೇಕಿದ್ದ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ಮುಂದೂಡಿಕೆ ಮಾಡಿದೆ. 

published on : 24th March 2020

ಕೊರೋನಾ ವೈರಸ್ ಭೀತಿ: ಜೆಸಿಬಿ ಮೂಲಕ ಶಹೀನ್ ಭಾಗ್ ಪ್ರತಿಭಟನಾ ಸ್ಥಳ ತೆರವು

ಮಾರಕ ಕೊರೋನಾ ವೈರಸ್ ಭೀತಿಯಿಂದಾಗಿ ದೇಶಾದ್ಯಂತ ಹೇರಲಾಗಿರುವ ಲಾಕ್ ಡೌನ್ ಹಿನ್ನಲೆಯಲ್ಲಿ ದೆಹಲಿಯ ಶಹೀನ್ ಭಾಗ್ ನ ಸಿಎಎ ವಿರೋಧಿ ಪ್ರತಿಭಟನಾಕಾರನ್ನು ತೆರವುಗೊಳಿಸಲಾಗಿದೆ.

published on : 24th March 2020

ಕೊರೋನಾ ಹಿನ್ನೆಲೆ: ಕೋರ್ಟ್ ಆವರಣ ಬಂದ್ ಮಾಡಿ, ಕಾರ್ಯಕಲಾಪ ಸ್ಥಗಿತಕ್ಕೆ ಮುಂದಾದ ಸುಪ್ರೀಂ!

ಕೊರೋನಾವೈರಸ್ ಭೀತಿಯ ಹಿನ್ನೆಲೆಯಲ್ಲಿ ತನ್ನ ಕಾರ್ಯಕಲಾಪಗಳನ್ನು ಸ್ಥಗಿತಗೊಳಿಸಿ, ವರ್ಚುವಲ್ ವಿಧಾನಗಳ ಮೂಲಕ ತುರ್ತು ವಿಷಯಗಳ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಮುಂದಾಗಿದೆ. 

published on : 23rd March 2020
1 2 3 4 5 6 >