• Tag results for Pakistana

ಪ್ರಪ್ರಥಮ ಬಾರಿಗೆ ಪಾಕಿಸ್ತಾನ ವಾಯುಸೇನೆಗೆ ಹಿಂದೂ ಪೈಲಟ್ ಆಯ್ಕೆ 

ಪಾಕಿಸ್ತಾನದ ವಾಯುಸೇನೆಗೆ ಇದೇ ಮೊದಲ ಬಾರಿಗೆ ಹಿಂದೂ ಪೈಲಟ್ ವೊಬ್ಬರು ಆಯ್ಕೆಯಾಗಿದ್ದಾರೆ. ರಾಹುಲ್ ದೇವ್ ಎಂಬ ಯುವಕ ಪಾಕಿಸ್ತಾನ ವಾಯುಪಡೆಗೆ ಜನರಲ್ ಡ್ಯೂಟಿ ಪೈಲಟ್ ಆಫೀಸರ್ ಆಗಿ ನೇಮಕವಾಗಿದ್ದಾರೆ ಎಂದು ಪಾಕಿಸ್ತಾನದ ನಿಯತಕಾಲಿಕೆಯೊಂದು ವರದಿ ಮಾಡಿದೆ.

published on : 5th May 2020

ಕೊರೋನಾದಿಂದ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ಐಎಂಎಫ್ ನಿಂದ 1.39 ಬಿಲಿಯನ್ ಡಾಲರ್ ತುರ್ತು ಸಾಲ

ಆರ್ಥಿಕ ದಿವಾಳಿತನಿಂದ ಕಂಗೆಟ್ಟಿರುವ  ಪಾಕಿಸ್ತಾನ ಇದೀಗ ಕೊರೋನಾ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಹಣಕಾಸು ನಿಧಿಯಿಂದ 1. 39 ಬಿಲಿಯನ್ ಡಾಲರ್ ನಷ್ಟು ತುರ್ತು ಸಾಲವನ್ನು ಪಡೆದುಕೊಂಡಿದೆ

published on : 23rd April 2020

ಮುಸ್ಲಿಂರ ವಿರುದ್ಧ ತಾರತಮ್ಯ: ಇಮ್ರಾನ್ ಖಾನ್ ಆರೋಪ ಆಧಾರ ರಹಿತ, ಹಾಸ್ಯಾಸ್ಪದ- ಭಾರತ ತಿರುಗೇಟು

ಕೊರೋನಾವೈರಸ್ ಸಾಂಕ್ರಾಮಿಕ ಕಾಯಿಲೆ ಹಿನ್ನೆಲೆಯಲ್ಲಿ ಭಾರತದಲ್ಲಿನ ಮುಸ್ಲಿಂರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರ ಆರೋಪವನ್ನು ಭಾರತ ತಳ್ಳಿ ಹಾಕಿದೆ.

published on : 20th April 2020

ಕರ್ತಾರ್‌ಪುರ ಗುರುದ್ವಾರ ಗುಮ್ಮಟ ಕುಸಿತ: ಕಾರಣ ಪರಿಶೀಲಿಸುವಂತೆ ಪಾಕ್ ಗೆ ಹೇಳಿದ ಭಾರತ

ಸಿಖ್ಖರ ಪವಿತ್ರ ಧಾರ್ಮಿಕ ಕ್ಷೇತ್ರ ಕರ್ತಾರ್ ಪುರ  ಸಾಹೀಬ್ ಗುರುದ್ವಾರದಲ್ಲಿನ ಗುಮ್ಮಟ ಕುಸಿತ ವಿಚಾರವನ್ನು ಭಾರತ ಪಾಕಿಸ್ತಾನದ ಗಮನಕ್ಕೆ ತಂದಿದೆ ಎಂಬುದು ಸರ್ಕಾರದ ಮೂಲಗಳಿಂದ ತಿಳಿದುಬಂದಿದೆ. 

published on : 19th April 2020

ಕೋವಿಡ್-19: ಧಾರ್ಮಿಕ ಸಭೆ ನಿಷೇಧ ಸರಿಯಲ್ಲ, ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಪಾಕ್ ಮೌಲ್ವಿಗಳು!

ಕೊರೋನಾವೈರಸ್ ಉಲ್ಬಣದಿಂದಾಗಿ ಮಸೀದಿಗಳಲ್ಲಿ ಧಾರ್ಮಿಕ ಸಭೆ ನಿಷೇಧದ ವಿರುದ್ಧ ಸರ್ಕಾರಕ್ಕೆ ಪಾಕ್ ಧರ್ಮಗುರುಗಳು ಎಚ್ಚರಿಕೆ ನೀಡಿದ್ದಾರೆ. ಅಧಿಕಾರಿಗಳು ಧಾರ್ಮಿಕ ನಿಯಮಗಳನ್ನು ಪಾಲಿಸಬೇಕು, ಮಸೀದಿಗಳಲ್ಲಿ ಅಲ್ಲಾಹುವಿನಿಂದ ಕ್ಷಮೆ ಕೋರಲು ಹೆಚ್ಚಿನ ಸಂಖ್ಯೆಯ  ಆರಾಧಕರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.  

published on : 14th April 2020

ಕೊರೋನಾವೈರಸ್ ನಿಂದ ಪಾಕ್ ಸ್ಕ್ವ್ಯಾಷ್ ಆಟಗಾರ ಅಜಂಖಾನ್ ಸಾವು

ಕೊರೋನಾವೈರಸ್ ನಿಂದಾಗಿ ಪಾಕಿಸ್ತಾನದ ಖ್ಯಾತ ಸ್ಕ್ವ್ಯಾಷ್  ಆಟಗಾರ ಅಜಂ ಖಾನ್ ಮೃತಪಟ್ಟಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.

published on : 30th March 2020

ಪಾಕಿಸ್ತಾನ ಬಿಎಟಿ ಕಾರ್ಯಾಚರಣೆ ಕೈಗೊಳ್ಳುವ ಮುನ್ನವೇ ಅದನ್ನು ವಿಫಲಗೊಳಿಸುತ್ತಿದ್ದೇವೆ: ಸೇನಾ ಮುಖ್ಯಸ್ಥ

ಪಾಕಿಸ್ತಾನದ ಬಿಎಟಿ- ಗಡಿ ಕಾರ್ಯಾಚರಣೆ ತಂಡದಿಂದ ಎದುರಾಗುವ ಯಾವುದೇ ಅಡ್ಡಿ ಆತಂಕಗಳಿಗೆ ಅವಕಾಶ ನೀಡುವುದಿಲ್ಲ,  ಮುಂಚಿತವಾಗಿಯೇ  ಅವರ ಎಲ್ಲಾ ಪ್ರಯತ್ನಗಳನ್ನು  ವಿಫಲಗೊಳಿಸುತ್ತಿದ್ದೇವೆ ಎಂದು ಸೇನಾ ಮುಖ್ಯಸ್ಥ ಜನರಲ್ ಎಂಎಂ ನಾರವಾನೆ ತಿಳಿಸಿದ್ದಾರೆ.

published on : 20th February 2020

ಕಾಶ್ಮೀರ ವಿಚಾರ: ಟರ್ಕಿ ಅಧ್ಯಕ್ಷರ ಹೇಳಿಕೆ ತಿರಸ್ಕರಿಸಿದ ಭಾರತ, ಆಂತರಿಕ ವ್ಯವಹಾರದಲ್ಲಿ ತಲೆಹಾಕದಂತೆ ತಿರುಗೇಟು

ಕಾಶ್ಮೀರ ವಿಚಾರ ಕುರಿತಂತೆ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ಡೊಗನ್ ನೀಡಿರುವ ಹೇಳಿಕೆಯನ್ನು ಭಾರತ ತಿರಸ್ಕರಿಸಿದೆ. ಭಾರತದ ಆಂತರಿಕ ವ್ಯವಹಾರದಲ್ಲಿ ತಲೆಹಾಕದಂತೆ ತಿರುಗೇಟು ನೀಡಿದೆ. 

published on : 15th February 2020

ಕಬಡ್ಡಿ ಆಟಗಾರರು ಪಾಕಿಸ್ತಾನಕ್ಕೆ ಹೋಗಲು ಅನುಮತಿ ನೀಡಲ್ಲ- ಕಿರಣ್ ರಿಜಿಜು

ವಿಶ್ವ ಕಬ್ಬಡಿ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ಪ್ರಯಾಣಿಸಲು ಯಾವುದೇ ಭಾರತೀಯ ಆಟಗಾರರಿಗೆ ಅನುಮತಿ ನೀಡುವುದಿಲ್ಲ ಎಂದು ಕೇಂದ್ರ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸ್ಪಷ್ಟಪಡಿಸಿದ್ದಾರೆ

published on : 10th February 2020

ಪಿಸಿಬಿ ಏಷ್ಯಾ ಕಪ್ ಆತಿಥ್ಯದಿಂದ ತೊಂದರೆ ಇಲ್ಲ, ಆದರೆ, ಪಾಕ್ ನಲ್ಲಿ ಭಾರತ ಆಡಲ್ಲ: ಬಿಸಿಸಿಐ

ಪಾಕಿಸ್ತಾನ ಕ್ರಿಕೆಟ್ ಮಂಡಳಿ  2020ರ ಏಷ್ಯಾಕಪ್ ಆತಿಥ್ಯ ವಹಿಸುವುದರಿಂದ ಯಾವುದೇ ತೊಂದರೆ ಇಲ್ಲ. ಆದರೆ, ಭಾರತ ಪಾಕಿಸ್ತಾನದಲ್ಲಿ ಆಡಲ್ಲ ಎಂದು ಬಿಸಿಸಿಐ ಇಂದು ಸ್ಪಷ್ಟಪಡಿಸಿದೆ.

published on : 29th January 2020

ಮದುವೆ ಮಂಟಪದಿಂದ ಹಿಂದೂ ಯುವತಿ ಅಪಹರಣ: ಪಾಕ್ ಹೈ ಕಮೀಷನ್ ಅಧಿಕಾರಿಗೆ ಸಮನ್ಸ್ ನೀಡಿದ ಭಾರತ

ಸಿಂಧೂ ಪ್ರಾಂತ್ಯದಲ್ಲಿ ಹಿಂದೂ ಯುವತಿಯೊಬ್ಬರನ್ನು ಮದುವೆ ಮಂಟಪದಿಂದ ಅಪಹರಣ ಮಾಡಿರುವುದಕ್ಕೆ ಸಂಬಂಧಿಸಿದಂತೆ  ತುರ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪಾಕಿಸ್ತಾನದ ಹೈ ಕಮೀಷನ್ ಹಿರಿಯ ಅಧಿಕಾರಿಗೆ ಭಾರತ ಇಂದು  ಸಮನ್ಸ್ ನೀಡಿದೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ.

published on : 28th January 2020

ನಾಂಕನಾ ಸಾಹೀಬ್ ಗುರುದ್ವಾರ ಮೇಲೆ ದಾಳಿ: ಪಾಕ್ ಗೆ ಎಸ್ ಜಿಪಿಸಿಯ ನಿಯೋಗ 

ನಾಂಕನ  ಸಾಹೀಬ್  ಗುರುದ್ವಾರ ದಾಳಿಯಿಂದಾಗಿ ಉಂಟಾಗಿರುವ ಪರಿಸ್ಥಿತಿಯನ್ನು  ಪರಿಶೀಲಿಸಲು ಗುರುದ್ವಾರಗಳ ನಿರ್ವಹಣೆ ಮಾಡುತ್ತಿರುವ ದಿ ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ ( ಎಸ್ ಜಿಪಿಸಿ) ನಾಲ್ಕು ಸದಸ್ಯರನ್ನೊಳಗೊಂಡ ನಿಯೋಗವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರ್ಧರಿಸಿದೆ. 

published on : 4th January 2020

ನಕಲಿ ವಿಡಿಯೋ ಟ್ವೀಟ್ ಮಾಡಿ ತಾವೇ ಮೂರ್ಖರಾದ ಪಾಕ್ ಪ್ರಧಾನಿ, ಸೇನೆಯ ಕೈಗೊಂಬೆ -ಗಂಭೀರ್

ನಾಂಕನ್ ಸಾಹೇಬ್ ಗುರುದ್ವಾರದ ಮೇಲೆ ದಾಳಿ ಘಟನೆ ಹಿನ್ನೆಲೆಯಲ್ಲಿ ಪಾಕಿಸ್ತಾನ ವಿರುದ್ದ ಮಾಜಿ ಕ್ರಿಕೆಟ್ ಆಟಗಾರ ಹಾಗೂ ಹಾಲಿ ಸಂಸದ ಗೌತಮ್ ಗಂಭೀರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಲವಂತವಾಗಿ ಯುವತಿಯನ್ನು ಮತಾಂತರಗೊಳಿಸಲು ನೆರೆಯ ರಾಷ್ಟ್ರ ಬೆಂಬಲ ನೀಡುತ್ತಿದೆ ಎಂದು ಕಿಡಿಕಾರಿದ್ದಾರೆ.

published on : 4th January 2020

ನನ್ನ ಹೇಳಿಕೆಯನ್ನು ಸಂದರ್ಭಾತೀತವಾಗಿ ಬಳಸಲಾಗಿದೆ- ಶೊಯೆಬ್ ಅಖ್ತರ್  

ಪಾಕಿಸ್ತಾನ ತಂಡದ ಮಾಜಿ ಲೆಗ್ ಸ್ಪಿನ್ನರ್ ದನೀಶ ಕನೇರಿಯಾ ಅವರು ಹಿಂದೂ ಧರ್ಮ ಎಂಬ ಕಾರಣಕ್ಕೆೆ ಅವರನ್ನು ಕೆಲ ಆಟಗಾರರು ತಾರತಮ್ಯ ಮಾಡಿದ್ದರು ಎಂದು ಆರೋಪ ಮಾಡಿದ್ದ ಮಾಜಿ ವೇಗಿ ಶೊಯೆಬ್ ಅಖ್ತರ್ ಸ್ಪಷ್ಟನೆ ನೀಡಲು ಮುಂದಾಗಿದ್ದು, ನನ್ನ ಹೇಳಿಕೆಯನ್ನು ಸಂದರ್ಭಾತೀತವಾಗಿ ಬಳಸಲಾಗಿದೆ ಎಂದು ದೂರಿದ್ದಾರೆ.

published on : 29th December 2019

ಭಾರತ ಕ್ರಿಕೆಟ್ ಆಡಲು ಅಸುರಕ್ಷಿತ: ಪ್ರವಾಸ ಕೈಗೊಳ್ಳುವ ತಂಡಗಳನ್ನು ಐಸಿಸಿ ತಡೆಯಬೇಕು- ಜಾವೇದ್ ಮಿಯಾಂದಾದ್

ನೂತನ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕ್ರಿಕೆಟ್ ತಂಡಗಳು ಭಾರತ ಪ್ರವಾಸ ಕೈಗೊಳ್ಳುವುದನ್ನು ಐಸಿಸಿ  ತಡೆಯಬೇಕು ಎಂದು ಪಾಕಿಸ್ತಾನದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ವಿವಾದಾತ್ಮಕ ಹೇಳಿಕೆ ಮೂಲಕ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. 

published on : 27th December 2019
1 2 3 >