• Tag results for Property

ಆಸ್ತಿ ವಿವಾದ: ರಕ್ತ ಸಂಬಂಧಿಯನ್ನು ಗುಂಡಿಕ್ಕಿ ಹತ್ಯೆ ಮಾಡಿ ವೈಎಸ್‌ಆರ್‌ಸಿ ಮುಖಂಡ ತಾನೂ ಆತ್ಮಹತ್ಯೆ!

62 ವರ್ಷದ ವೈಎಸ್‌ಆರ್‌ಸಿ ಪಕ್ಷದ ಮುಖಂಡ ಶಿವಪ್ರಸಾದ್ ರೆಡ್ಡಿ ತಮ್ಮ ಸಂಬಂಧಿ ಹಾಗೂ ಅದೇ ಪಕ್ಷದ ನಾಯಕರೂ ಆಗಿದ್ದ 45 ವರ್ಷದ ಪಾರ್ಥಸಾರಥಿ ರೆಡ್ಡಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿತಾನೂ ಆತ್ಮಹತ್ಯೆಗೆ ಶರಣಾಗಿದ್ದಾರೆ.

published on : 15th June 2021

ಆಸ್ತಿ ವಿವಾದ: ಅಯೋಧ್ಯೆಯಲ್ಲಿ 3 ಅಪ್ರಾಪ್ತ ಮಕ್ಕಳು ಸೇರಿ ಒಂದೇ ಕುಟುಂಬದ ಐವರ ಭೀಕರ ಹತ್ಯೆ

ಜಿಲ್ಲೆಯ ಇನಾಯತ್‌ನಗರ ಪ್ರದೇಶದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಐವರನ್ನು ಸಂಬಂಧಿಕರೇ ಹತ್ಯೆ ಮಾಡಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.

published on : 23rd May 2021

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ ಪಾವತಿಗೆ ಶೇ.5 ರಿಯಾಯತಿ ಅವಧಿ ಜೂನ್ 30ರವರೆಗೆ ವಿಸ್ತರಣೆ

ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆಯ ಪಾವತಿಗೆ ನೀಡಲಾಗುತ್ತಿರುವ ಶೇ.5 ರ ರಿಯಾಯತಿ ಅವಧಿಯನ್ನು ಸರ್ಕಾರ ಜೂನ್ 30ರವರೆಗೆ ವಿಸ್ತರಿಸಿದೆ.

published on : 5th May 2021

ರಾಷ್ಟ್ರೀಯ ಸ್ವಾಮಿತ್ವ ಯೋಜನೆಗೆ ಪ್ರಧಾನಿ ಮೋದಿ ಚಾಲನೆ

ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚಾರಣೆ ಪ್ರಯುಕ್ತ ಇಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಸ್ವಾಮಿತ್ವ ಯೋಜನೆ ಇ-ಪ್ರಾಪರ್ಟಿ ಕಾರ್ಡ್ ವಿತರಿಸುವ ವಿಸ್ತರಣಾ ಯೋಜನೆಗೆ ಚಾಲನೆ ನೀಡಿದರು.

published on : 24th April 2021

'ಕನಕಪುರದಲ್ಲಿ ಕಳ್ಳ ಮಾಲು ಮಾರುತ್ತಿದ್ದ ಮಹಾನಾಯಕನ ಸಂಪತ್ತಿನ ಮೂಲ ಹುಡುಕುವಿರಾ!?'

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇಷ್ಟೊಂದು ಧನ ಸಂಪಾದಿಸಿದ್ದು ಹೇಗೆ? ಕನಕಪುರದಲ್ಲಿ ಕಳ್ಳ ಮಾಲು ಮಾರುತ್ತಿದ್ದ ಮಹಾನಾಯಕನ ಸಂಪತ್ತಿನ ಮೂಲ ಹುಡುಕುವಿರಾ ಎಂದು ಭಾರತೀಯ ಬಿಜೆಪಿ ಪ್ರಶ್ನಿಸಿದೆ.

published on : 15th April 2021

ಆಸ್ತಿ ವಿವಾದ: ಶಾಸಕ, ಎಂಎಲ್‌ಸಿ ವಿರುದ್ಧ ಎಫ್ಐಆರ್, ಗುಂಪನ್ನು ಚದುರಿಸಲು ಗಾಳಿಯಲ್ಲಿ ಗುಂಡು!

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಹುಮನಾಬಾದ್ ಶಾಸಕ ರಾಜಶೇಖರ್ ಪಾಟೀಲ್, ಎಂಎಲ್‌ಸಿ ಚಂದ್ರಶೇಖರ್ ಪಾಟೀಲ್, ಬೀದರ್ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭೀಮ್ ರಾವ್ ಪಾಟೀಲ್ ಮತ್ತು ಇತರ 9 ಜನರ ವಿರುದ್ಧ ಪೊಲೀಸರು ಹುಮನಾಬಾದ್ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

published on : 1st April 2021

80 ಕೋಟಿ ರೂ. ಮೌಲ್ಯದ 2.02 ಎಕರೆ ಬಿಡಿಎ ಜಾಗ ವಶ: ಎಸ್.ಆರ್.ವಿಶ್ವನಾಥ್

ನಾಗರಭಾವಿಯಲ್ಲಿ ಬಿಡಿಎಗೆ ಸೇರಿದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಾಣವಾಗಿದ್ದ ತಾತ್ಕಾಲಿಕ ಶೆಡ್ ಗಳು, ಗ್ಯಾರೇಜ್ ಗಳು ಮತ್ತು ಕಾಂಪೌಂಡ್ ಗಳನ್ನು ಬುಧವಾರ ಬೆಳಗ್ಗೆ ಬಿಗಿ ಪೊಲೀಸ್ ಬಂದೋಬಸ್ತಿನೊಂದಿಗೆ ತೆರವುಗೊಳಿಸಿದ ಬಿಡಿಎ ಅಧಿಕಾರಿಗಳು ಸುಮಾರು 2 ಎಕರೆ 2 ಗುಂಟೆ ಜಾಗವನ್ನು ವಶ ಪಡಿಸಿಕೊಂಡಿದ್ದಾರೆ.

published on : 3rd March 2021

ಬೆಂಗಳೂರು: ಎಇಇ ಮನೆ ಮೇಲೆ ಎಸಿಬಿ ದಾಳಿ, ಅಪಾರ ಪ್ರಮಾಣದ ಆಸ್ತಿ ಪತ್ತೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ನಡೆಸಿದ್ದು ಈ ವೇಳೆ ಕೋಟಿ ಮೌಲ್ಯದ ನಗನಾಣ್ಯಗಳು ಪತ್ತೆಯಾಗಿದೆ.

published on : 23rd January 2021

ಆಸ್ತಿ ವಿವಾದ: ತಾಯಿ, ತಮ್ಮನ ಪತ್ನಿ, 3 ವರ್ಷದ ಮಗುವಿಗೆ ಚೂರಿ ಇರಿದ ವ್ಯಕ್ತಿ!

ಆಸ್ತಿ ವಿವಾದದಲ್ಲಿ ವ್ಯಕ್ತಿಯೋರ್ವ ತನ್ನ ತಾಯಿ, ತಮ್ಮನ ಪತ್ನಿ ಹಾಗೂ 3 ವರ್ಷದ ಮಗುವಿಗೆ ಚೂರಿ ಇರಿದ ಘಟನೆ ಮಡಿವಾಳದಲ್ಲಿ ನಡೆದಿದೆ.

published on : 19th January 2021

ಮನೆ, ಸೈಟ್ ಹೊಂದಿರುವ ನಗರವಾಸಿಗಳೇ ಅಧಿಕ ಆಸ್ತಿ ತೆರಿಗೆ ಕಟ್ಟಲು ಸಜ್ಜಾಗಿ: ಕೆಎಂಸಿ ಕಾಯ್ದೆಗೆ ಸರ್ಕಾರ ತಿದ್ದುಪಡಿ 

ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಇತರ ನಗರ ಪಾಲಿಕೆ ಮತ್ತು ಪುರಸಭೆ ವ್ಯಾಪ್ತಿಗಳಲ್ಲಿ ಆಸ್ತಿ ತೆರಿಗೆ ದರ ಹೆಚ್ಚಾಗಲಿದೆ. ಕರ್ನಾಟಕ ಮುನ್ಸಿಪಲ್ ಕಾರ್ಪೊರೇಶನ್ (ಕೆಎಂಸಿ)ಕಾಯ್ದೆಯಡಿ ಆಸ್ತಿ ತೆರಿಗೆ ಹೆಚ್ಚಿಸಿ ನಿನ್ನೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

published on : 14th January 2021

ಕೋವಿಡ್ ಸಂಕಷ್ಟದಲ್ಲೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿ ತೆರಿಗೆ ಹೆಚ್ಚಳಕ್ಕೆ ಸಂಪುಟ ಸಮ್ಮತಿ

ಕೋವಿಡ್ ಸಂಕಷ್ಟ ಪರಿಸ್ಥಿತಿ ಸಂದರ್ಭದಲ್ಲಿ ಜನರ ವಿರೋಧದ ನಡುವೆ ರಾಜ್ಯದ ನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಿಸಲು ರಾಜ್ಯ ಸಚಿವ ಸಂಪುಟ ಸಭೆ ಬುಧವಾರ ಸಮ್ಮತಿಸಿದೆ.

published on : 13th January 2021

ಪಂಚಾಯತ್ ಸರಹದ್ದಿನಲ್ಲಿ ಆಸ್ತಿ ತೆರಿಗೆ ದರ ಏರಿಕೆ ಸದ್ಯದಲ್ಲೆ: ಹೊಸ ಸದಸ್ಯರಿಗೆ ಕೆಲಸದ ಉಸ್ತುವಾರಿ

ಪಂಚಾಯತ್ ಗೆ ಒಳಪಡುವ ಪ್ರದೇಶಗಳಲ್ಲಿ ಆಸ್ತಿ ತೆರಿಗೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಇತ್ತೀಚೆಗೆ ಆಯ್ಕೆಯಾಗಿರುವ 91 ಸಾವಿರ ಪಂಚಾಯತ್ ಸದಸ್ಯರಿಗೆ ತೆರಿಗೆ ಹೆಚ್ಚಳದ ನಿರ್ಣಯವನ್ನು ಹೊರಡಿಸುವ ಕೆಲಸ ವಹಿಸಲಾಗಿದೆ.

published on : 5th January 2021

ಬೇನಾಮಿ ಆಸ್ತಿ: ರಾಬರ್ಟ್ ವಾದ್ರಾ ಹೇಳಿಕೆ ಪಡೆದ ಐಟಿ ಅಧಿಕಾರಿಗಳು 

ಬೇನಾಮಿ ಆಸ್ತಿ ಪ್ರಕರಣದಲ್ಲಿ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಅಳಿಯ, ಉದ್ಯಮಿ ರಾಬರ್ಟ್ ವಾದ್ರಾ ಅವರಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ಹೇಳಿಕೆ ಪಡೆದುಕೊಂಡಿದ್ದಾರೆ.

published on : 4th January 2021

ಕೌಟುಂಬಿಕ ಸಮಸ್ಯೆ: ಹೆತ್ತ ಮಕ್ಕಳಿಗೆ ಆಸ್ತಿ ನೀಡದೆ ಸಾಕು ನಾಯಿಗೆ ಅರ್ಧ ಸಂಪತ್ತನ್ನು ವಿಲ್ ಮಾಡಿದ ರೈತ!

ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯ 50 ವರ್ಷದ ವ್ಯಕ್ತಿಯೊಬ್ಬರು ತಮ್ಮ ಅರ್ಧ ಸ್ವತ್ತನ್ನು ಪ್ರೀತಿಯ ಶ್ವಾನದ ಹೆಸರಿಗೆ ವಿಲ್‌ ಬರೆದಿಟ್ಟಿದ್ದಾರೆ.

published on : 1st January 2021

ಬಂಗಾರದ ಕಿರೀಟವನ್ನು ಸರ್ಕಾರಕ್ಕೆ ಒಪ್ಪಿಸಿದ ಗೋವಿಂದ ಕಾರಜೋಳ

ವಿಜಯಪುರ ಜಿಲ್ಲೆಯ ಬಬಲೇಶ್ವರ ಮತಕ್ಷೇತ್ರದ ಕಾರಜೋಳ ಗ್ರಾಮಸ್ಥರು ತಮಗೆ ನೀಡಿದ್ದ ಬಂಗಾರದ ಕಿರೀಟವನ್ನು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಗುರುವಾರ ವಿಧಾನಸೌಧದಲ್ಲಿ ಮುಖ್ಯಕಾರ್ಯದರ್ಶಿಯರ ಮೂಲಕ ಸರ್ಕಾರಕ್ಕೆ ಒಪ್ಪಿಸಿದರು.

published on : 10th December 2020
1 2 >