• Tag results for Puneeth RajKumar

ಧೀರ್ಘಾಯುಷ್ಯ ಸಂಶೋಧನಾ ಕೇಂದ್ರಕ್ಕೆ ನಟ ಪುನೀತ್ ಹೆಸರು - ಡಾ. ಸಿ.ಎನ್. ಅಶ್ವತ್ಥ ನಾರಾಯಣ

ಧೀರ್ಘಾಯುಷ್ಯ ಮತ್ತು ಸಾಂಕ್ರಾಮಿಕ ರೋಗ ಪರಿಹಾರ ಸಂಶೋಧನಾ ಕೇಂದ್ರಗಳನ್ನು  ತೆರೆಯಲಾಗುವುದು, ಈ ಪೈಕಿ ಧೀರ್ಘಾಯುಷ್ಯ ಸಂಶೋಧನಾ ಕೇಂದ್ರಕ್ಕೆ ದಿವಂಗತ ನಟ  ಪುನೀತ್ ರಾಜ್ ಕುಮಾರ್ ಅವರ ಹೆಸರನ್ನಿಡಲಾಗುವುದು ಐಟಿ-ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.

published on : 12th May 2022

ಪವರ್ ಸ್ಟಾರ್ ಪುನೀತ್ ಗೆ ಮರಣೋತ್ತರ ಬಸವಶ್ರೀ ಪ್ರಶಸ್ತಿ ಪ್ರದಾನ!

ಪವರ್ ಸ್ಟಾರ್ ಡಾ.ಪುನೀತ್ ರಾಜಕುಮಾರ್ ಅವರಿಗೆ ಚಿತ್ರದುರ್ಗ ಮುರುಘಾ ಮಠದಿಂದ ಮರಣೋತ್ತರವಾಗಿ 2021ನೇ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಾಯಿತು.

published on : 3rd May 2022

ಮೇ 3ರಂದು ದಿವಂಗತ ನಟ ಪುನೀತ್ ರಾಜ್‌ಕುಮಾರ್‌ಗೆ ಬಸವಶ್ರೀ ಪ್ರಶಸ್ತಿ ಪ್ರದಾನ!

ಮೇ 3 ರಂದು ನಡೆಯುವ ಬಸವೇಶ್ವರ ಜಯಂತಿ ಆಚರಣೆಯಲ್ಲಿ ಚಿತ್ರದುರ್ಗದ ಮುರುಘಾ ಮಠದ ಬಸವ ಕೇಂದ್ರವು ನೀಡುವ 2021 ನೇ ಸಾಲಿನ ಬಸವಶ್ರೀ ಪ್ರಶಸ್ತಿಯನ್ನು ಕನ್ನಡದ ಸೂಪರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ನೀಡಲಾಗುವುದು.

published on : 28th April 2022

'ರಾಜಕುಮಾರ'ನ ಮುಡಿಗೆ ಮತ್ತೊಂದು ಗರಿ; ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿ!!

ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ರಾಜಕುಮಾರ್ ಚಿತ್ರದ ಹಿರಿಮೆಗೆ ಮತ್ತೊಂದು ಗರಿ ಲಭಿಸಿದ್ದು, ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿ ಪಡೆದಿದೆ.

published on : 27th April 2022

ಪುನೀತ್ ಫ್ಯಾನ್ಸ್ ಗೆ ಸಿಹಿ ಸುದ್ದಿ; ಹೊಂಬಾಳೆ ಫಿಲ್ಮ್ಸ್ ನಡಿ ಯುವ ರಾಜ್‌- ಸಂತೋಷ್ ಆನಂದ್ ರಾಮ್ ಹೊಸ ಚಿತ್ರ ಘೋಷಣೆ!

‘ಕೆ.ಜಿ.ಎಫ್‌ ಚಾಪ್ಟರ್‌–2’ ಯಶಸ್ಸಿನ ಹೊಳೆಯಲ್ಲಿ ತೇಲುತ್ತಿರುವ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಇದೀಗ ಪುನೀತ್ ಮತ್ತು ರಾಜ್ ಕುಟುಂಬದ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದು, ರಾಜ್ ಕುಟುಂಬದ ಕುಡಿ ಯುವ ರಾಜ್‌- ನಿರ್ದೇಶಕ ಸಂತೋಷ್ ಆನಂದ್ ರಾಮ್ ಜುಗಲ್ ಬಂದಿಯ ಹೊಸ ಚಿತ್ರ ಘೋಷಣೆ ಮಾಡಿದೆ. 

published on : 27th April 2022

ಅಪ್ಪು ಫ್ಯಾನ್ಸ್ ಗೆ ಸಿಹಿ ಸುದ್ದಿ; ಜಗತ್ತಿನಲ್ಲೇ ಮೊದಲ ಪ್ರಯತ್ನ, ಪುನೀತ್ ರಾಜ್ ಕುಮಾರ್ ಧ್ವನಿಯಲ್ಲೇ ಮತ್ತೆ ಜೇಮ್ಸ್ ಚಿತ್ರ ಬಿಡುಗಡೆ!

ಅಪ್ಪು ಅಭಿಮಾನಿಗಳಿಗೆ ಜೇಮ್ಸ್ ಚಿತ್ರತಂಡ ಮತ್ತೆ ಸಿಹಿ ಸುದ್ದಿ ನೀಡಿದ್ದು, ಜೇಮ್ಸ್ ಚಿತ್ರ ಪುನೀತ್ ರಾಜ್ ಕುಮಾರ್ ಧ್ವನಿಯಲ್ಲೇ ಮತ್ತೆ ಬಿಡುಗಡೆ ಮಾಡುವ ಕುರಿತು ನಿರ್ಧರಿಸಿದೆ.  

published on : 18th April 2022

ಯುವ ರಾಜಕುಮಾರ್ ಚಿತ್ರಕ್ಕೆ ಸಂತೋಷ್‌ ಆನಂದ್‌ ರಾಮ್‌ ನಿರ್ದೇಶನ

ಯುವ ರಾಜ್‌ಕುಮಾರ್‌ ನಟನೆಯ ಹೊಸ ಸಿನಿಮಾವನ್ನು ಸಂತೋಷ್‌ ಆನಂದ್‌ರಾಮ್‌ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಆದರೆ ಈ  ಬಗ್ಗೆ ನಿರ್ದೇಶಕರಾಗಲಿ ಅಥವಾ ನಟನಾಗಲಿ ಯಾವುದೇ ಮಾಹಿತಿ ನೀಡಿಲ್ಲ.

published on : 6th April 2022

'ಪಟ್ಟೆ ಪಟ್ಟೆ ಹುಲಿ, ಕೊಟ್ಟೆ ಕೊಟ್ಟೆ ತೊಗೊ’; ಅಪ್ಪುಗೆ 'ವಿಕ್ರಾಂತ್ ರೋಣ' ತಂಡದ ಗೌರವ

ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸುವ ಸಲುವಾಗಿ ವಿಕ್ರಾಂತ್ ರೋಣ ನಿರ್ದೇಶಕ ಅನೂಪ್ ಭಂಡಾರಿ ತಮ್ಮ ಸಿನಿಮಾದಲ್ಲಿ ಅಪ್ಪುವಿಗೆ ಒಂದು ದೃಶ್ಯದಲ್ಲಿ ಗೌರವ ಸಲ್ಲಿಸಿದ್ದಾರೆ.

published on : 4th April 2022

ಕೆಜಿಎಫ್ 2 ಬಿಡುಗಡೆ ದಿನವೇ ಓಟಿಟಿಗೆ ಪವರ್ ಫುಲ್ 'ಜೇಮ್ಸ್' ಎಂಟ್ರಿ!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಜಾತ್ರೆ ಥಿಯೇಟರ್ ನಲ್ಲಿ ಜೋರಾಗಿರುವಾಗಲೇ ಅಪ್ಪು ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ. ಅದೇನೆಂದರೆ ಆಕ್ಷನ್, ಥ್ರಿಲ್ಲರ್ ಸಿನಿಮಾ ಜೇಮ್ಸ್ ಓಟಿಟಿಗೆ ಎಂಟ್ರಿ ಕೊಡಲಿದೆ.

published on : 4th April 2022

ಬಿಬಿಎಂಪಿ ಕಚೇರಿ ಆವರಣದಲ್ಲಿ ಪುನೀತ್ ಪುತ್ಥಳಿ ಅನಾವರಣ; ಅರ್ಥಪೂರ್ಣವಾಗಿ ಕರ್ನಾಟಕ ರತ್ನ ನೀಡಲು ಚಿಂತನೆ: ಸಿಎಂ ಬೊಮ್ಮಾಯಿ

ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕಂಚಿನ ಪುತ್ಥಳಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಲೋಕಾರ್ಪಣೆಗೊಳಿಸಿದರು.

published on : 28th March 2022

ಪುನೀತ್ ಮನೆಗೆ ಭೇಟಿ ಕೊಟ್ಟ ಬಾಲಿವುಡ್ ನಟ ಸಂಜಯ್ ದತ್; ರಾಜ್ ಕುಟುಂಬಕ್ಕೆ ಸಾಂತ್ವನ ಹೇಳಿದ ನಟ!

ದಿವಂಗತ ಪುನೀತ್ ರಾಜಕುಮಾರ್ ಮನೆಗೆ ಬಾಲಿವುಡ್ ನಟ ಸಂಜಯ್ ದತ್ ಭೇಟಿ ನೀಡಿದರು. 

published on : 27th March 2022

ಹೆಚ್ಚು ದುಡ್ಡು ಸಿಗುತ್ತದೆ ಎಂದು ಆಸೆ ಪಡಬಾರದು, ಚಿತ್ರಮಂದಿರ ಸಮಸ್ಯೆ ಬಗೆಹರಿದಿದೆ: ಶಿವರಾಜ್ ಕುಮಾರ್

‘ಜೇಮ್ಸ್‌’ ಸಿನಿಮಾ ಪ್ರದರ್ಶನಕ್ಕೆ ಸಂಬಂಧಿಸಿದ ಸಮಸ್ಯೆಗಳು ಬಗೆಹರಿದಿದ್ದು, ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ ಎಂದು ನಟ ಶಿವರಾಜ್‌ಕುಮಾರ್‌ ಹೇಳಿದ್ದಾರೆ.

published on : 24th March 2022

88 ವರ್ಷದ ಎಲ್ಲಾ ದಾಖಲೆ ಉಡೀಸ್, ನಾಲ್ಕು ದಿನಗಳಲ್ಲಿ 100 ಕೋಟಿ ಕ್ಲಬ್ ಸೇರಿದ ಜೇಮ್ಸ್!

ಕನ್ನಡ ಚಿತ್ರರಂಗದ ಸಾರ್ವಕಾಲಿಕ ಪವರ್ ಸ್ಟಾರ್ ದಿವಂಗತ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ 'ಜೇಮ್ಸ್' ಬಾಕ್ಸ್ ಆಫೀಸ್ ನಲ್ಲಿ ದಾಖಲೆ ಮೇಲೆ ದಾಖಲೆ ಬರೆಯುತ್ತಾ ಸಾಗಿದೆ.  ಬಿಡುಗಡೆಯಾದ ನಾಲ್ಕೇ ದಿನಗಳಲ್ಲಿ 100 ಕೋಟಿ ಕ್ಲಬ್ ಸೇರುವ ಮೂಲಕ 88 ವರ್ಷದ  ಕನ್ನಡ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಮುರಿದು ಹೊಸ ಇತಿಹಾಸ ಬರೆದಿದೆ.

published on : 22nd March 2022

ಮೈಸೂರು ವಿವಿ ಘಟಿಕೋತ್ಸವ: ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರಧಾನ

ಕರ್ನಾಟಕ ರತ್ನ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ನೀಡಿ ಮೈಸೂರು ವಿಶ್ವವಿದ್ಯಾನಿಲಯ ಇಂದು ಗೌರವಿಸಿತು.

published on : 22nd March 2022

ಐಎಂಡಿಬಿ ರೇಟಿಂಗ್ ನಲ್ಲಿ 'ದಿ ಕಾಶ್ಮೀರ್ ಫೈಲ್ಸ್' ಹಿಂದಿಕ್ಕಿದ ಜೇಮ್ಸ್!

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಚಿತ್ರ ' ಜೇಮ್ಸ್ ' ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವಂತೆಯೇ, ಐಎಂಡಿಬಿ ರೇಟಿಂಗ್ ನಲ್ಲಿ ಹಿಂದಿಯ '' ದಿ ಕಾಶ್ಮೀರ್ ಫೈಲ್ಸ್ ' ಚಿತ್ರವನ್ನು ಹಿಂದಿಕ್ಕಿದೆ.

published on : 21st March 2022
1 2 3 4 5 6 > 

ರಾಶಿ ಭವಿಷ್ಯ