• Tag results for Punjab Election

ಸ್ವಯಂಕೃತ ಅಪರಾಧದಿಂದಲೇ ಪಂಜಾಬ್ ನಲ್ಲಿ ಕಾಂಗ್ರೆಸ್ ಗೆ ಸೋಲು: ಸಿಧು ವಿರುದ್ಧ ಹಿರಿಯ ನಾಯಕ ಬಲ್ಬೀರ್ ಸಿಂಗ್ ಆರೋಪ

ಪಂಜಾಬ್ ನಲ್ಲಿ ಕಾಂಗ್ರೆಸ್ ತನ್ನ ಸ್ವಯಂಕೃತ ಅಪರಾಧದಿಂದಲೇ ಹೀನಾಯ ಸೋಲು ಕಂಡಿದೆ ಎಂದು ಹಿರಿಯ ನಾಯಕ ಬಲ್ಬೀರ್ ಸಿಂಗ್ ಸಿಧು ಆರೋಪ ಮಾಡಿದ್ದಾರೆ.

published on : 14th March 2022

ಭಗತ್ ಸಿಂಗ್ ಹುಟ್ಟೂರಲ್ಲಿ ಮಾರ್ಚ್ 16 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ: ರಾಜ್ಯಪಾಲರನ್ನು ಭೇಟಿ ಮಾಡಿದ ಭಗವಂತ್ ಮಾನ್

ಪಂಜಾಬ್ ರಾಜ್ಯದ ನಿಯೋಜಿತ ಮುಖ್ಯಮಂತ್ರಿ ಭಗವಂತ್ ಮಾನ್ ಇಂದು ಶನಿವಾರ ಬೆಳಗ್ಗೆ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ ನೂತನ ಆಮ್ ಆದ್ಮಿ ಪಕ್ಷದ ಸರ್ಕಾರ ರಚನೆಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದಾರೆ.

published on : 12th March 2022

ಕಾಂಗ್ರೆಸ್ ನಾಯಕತ್ವ ಬುದ್ದಿ ಕಲಿಯಲ್ಲ: ರಾಹುಲ್ ಗಾಂಧಿ ವಿರುದ್ಧ ಕ್ಯಾಪ್ಟನ್ ಅಮರೀಂದರ್ ಸಿಂಗ್ ವಾಗ್ದಾಳಿ

ಪಂಜಾಬ್ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ನಾಯಕತ್ವ ಎಂದಿಗೂ ಬುದ್ದಿ ಕಲಿಯಲ್ಲ ಎಂದು ಹೀಗಳೆದಿದ್ದಾರೆ.

published on : 11th March 2022

'ಮತದಾರರ ತೀರ್ಪನ್ನು ಸ್ವೀಕರಿಸುತ್ತೇನೆ': ಪಂಜಾಬ್ ಸಿಎಂ ಸ್ಥಾನಕ್ಕೆ ಚರಂಜಿತ್ ಸಿಂಗ್ ಚನ್ನಿ ರಾಜಿನಾಮೆ

ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡ ಬೆನ್ನಲ್ಲೇ ಇತ್ತ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಹಾಲಿ ಸಿಎಂ ಚರಂಜಿತ್ ಸಿಂಗ್ ಚನ್ನಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

published on : 11th March 2022

ಇದೇ ಕಾರಣದಿಂದ ಪಂಜಾಬ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಜಯಭೇರಿ! ಪಕ್ಷದ ಮುಖಂಡರು ಏನಂತಾರೆ?

ಉತ್ತಮ ಸಾರ್ವಜನಿಕ ಸೇವೆಗಳು, ಉತ್ತಮ ಗುಣಮಟ್ಟದ ಶಾಲೆಗಳು ಮತ್ತು ಆಸ್ಪತ್ರೆಗಳ ಭರವಸೆಯೊಂದಿಗೆ ದೆಹಲಿಯಲ್ಲಿ ಎಎಪಿ ಸತತ ಎರಡನೇ ಬಾರಿಗೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು.

published on : 10th March 2022

'ಜನರ ಧ್ವನಿ ದೇವರ ಧ್ವನಿ'; ಪಂಜಾಬ್ ಕಾಂಗ್ರೆಸ್ ಸೋಲಿನ ಕುರಿತು ನವಜೋತ್ ಸಿಂಗ್ ಸಿಧು ಪ್ರತಿಕ್ರಿಯೆ

ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿರುವ ಆಮ್ ಆದ್ಮಿ ಪಕ್ಷಕ್ಕೆ ಅಭಿನಂದನೆ ಸಲ್ಲಿಸಿರುವ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, ಜನರ ಧ್ವನಿ ದೇವರ ಧ್ವನಿ ಎಂದು ಹೇಳಿದ್ದಾರೆ.

published on : 10th March 2022

ಭದ್ರಕೋಟೆ ಪಟಿಯಾಲದಲ್ಲಿ  ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್ ಗೆ ಸೋಲು!

ಪಂಜಾಬ್ ನ ಮಾಜಿ ಸಿಎಂ ಅಮರಿಂದರ್ ಸಿಂಗ್ ತಮ್ಮ ಭದ್ರಕೋಟೆಯಾಗಿದ್ದ ಪಾಟಿಯಾಲ ಅರ್ಬನ್ ಕ್ಷೇತ್ರದಿಂದ ಸೋಲು ಕಂಡಿದ್ದಾರೆ.

published on : 10th March 2022

ಪಂಜಾಬ್ ಚುನಾವಣೆಯಲ್ಲಿ ಆಪ್ ಮುನ್ನಡೆ: ಕಾಂಗ್ರೆಸ್ ಗೆ ಮುಳುವಾಯಿತೇ ಈ ಅಂಶಗಳು?!!

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರುವ ಕನಸು ಕಾಣುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಭ್ರಮ ನಿರಸನವಾಗಿದ್ದು, ಆಮ್ ಆದ್ಮಿ ಪಕ್ಷ ಅಧಿಕಾರದತ್ತ ದಾಪುಗಾಲಿರಿಸಿದೆ. ಇಷ್ಟಕ್ಕೂ ಕಾಂಗ್ರೆಸ್ ಹಿನ್ನಡೆಗೆ ಕಾರಣವಾದ ಅಂಶಗಳಾವುವು?

published on : 10th March 2022

ಪಂಜಾಬ್ ಚುನಾವಣೆ: ಹಾಲಿ ಸಿಎಂ ಚನ್ನಿ, ಮಾಜಿ ಸಿಎಂ ಅಮರೀಂದರ್ ಸಿಂಗ್, ಸಿಧುಗೆ ಹಿನ್ನಡೆ

ಪಂಜಾಬ್ ವಿಧಾನಸಭೆ ಚುನಾವಣಾ ಫಲಿತಾಂಶಗಳು ಪ್ರಕಟವಾಗುತ್ತಿದ್ದು, ಹಾಲಿ ಸಿಎಂ ಚರಣ್ ಜಿತ್ ಚನ್ನಿ ಹಾಗೂ ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ತಮ್ಮದೇ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ ಎನ್ನಲಾಗಿದೆ.

published on : 10th March 2022

'ಕೈ' ಗುಡಿಸಿ ಹಾಕಿದ 'ಪೊರಕೆ': ಅಧಿಕಾರದತ್ತ ಆಪ್, ಸಿಎಂ ಅಭ್ಯರ್ಥಿ ಭಗವಂತ್ ಮಾನ್ ನಿವಾಸದ ಎದುರು ಸಂಭ್ರಮಾಚರಣೆ

ಆಮ್ ಆದ್ಮಿ ಪಕ್ಷ ದೆಹಲಿಯಾಚೆಗೆ ತನ್ನ ಅಸ್ತಿತ್ವವನ್ನು ವಿಸ್ತರಿಸಿಕೊಳ್ಳುತ್ತಿದೆ. ಪಂಜಾಬ್ ರಾಜ್ಯದಲ್ಲಿ 'ಕೈ'ಯನ್ನು 'ಪೊರಕೆ'ಯಿಂದ ಗುಡಿಸಿ ಅಧಿಕಾರದ ಗದ್ದುಗೆ ಹಿಡಿಯುವುದು ಬಹುತೇಕ ಖಚಿತವಾಗಿದೆ. ಪಂಜಾಬ್ ನಲ್ಲಿ ಸರ್ಕಾರ ರಚಿಸಲು ಇರುವ ಮ್ಯಾಜಿಕ್ ನಂಬರ್ 59ನ್ನು ಆಪ್ ದಾಟಿದೆ. 88 ಕ್ಷೇತ್ರಗಳಲ್ಲಿ ಆಪ್ ಮುನ್ನಡೆಯಲ್ಲಿದೆ.

published on : 10th March 2022

ಪಂಚರಾಜ್ಯಗಳ ಚುನಾವಣೆ ಫಲಿತಾಂಶ: ಉ.ಪದಲ್ಲಿ ಬಿಜೆಪಿ, ಪಂಜಾಬ್ ನಲ್ಲಿ ಆಪ್ ಮುನ್ನಡೆ, ಗೋವಾ-ಉತ್ತರಾಖಂಡಗಳಲ್ಲಿ ಕಾಂಗ್ರೆಸ್-ಬಿಜೆಪಿ ನೇರ ಹಣಾಹಣಿ

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ನೇತೃತ್ವದ ಮೈತ್ರಿಕೂಟಕ್ಕಿಂತ ಬಿಜೆಪಿ ಮುಂದಿದೆ. R ಈ ಮೂಲಕ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಮತ್ತೊಂದು ಅತಿದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಅಧಿಕಾರ ಹಿಡಿಯುವತ್ತ ದಾಪುಗಾಲು ಇಡುತ್ತಿದೆ.

published on : 10th March 2022

ಚುನಾವಣೋತ್ತರ ಸಮೀಕ್ಷೆಗಳನ್ನೇ ನಿಷೇಧಿಸಿ: ಸುಖ್ಬೀರ್ ಸಿಂಗ್ ಬಾದಲ್

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದು ಹಲವು ಚುನಾವಣೋತ್ತರ ಸಮೀಕ್ಷೆಗಳು ಅಂದಾಜಿಸಿರುವ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳನ್ನು ನಿಷೇಧಿಸಬೇಕೆಂದು ಸುಖ್ಬೀರ್ ಸಿಂಗ್ ಬಾದಲ್ ಹೇಳಿದ್ದಾರೆ. 

published on : 9th March 2022

ಪಂಜಾಬ್ ಚುನಾವಣೆ: ಮತಗಟ್ಟೆಗೆ ಹೋಗದಂತೆ ನಟ ಸೋನು ಸೂದ್ ಗೆ ನಿರ್ಬಂಧ, ಕಾರು ಜಪ್ತಿ

ಪಂಜಾಬ್ ವಿಧಾನಸಭೆಗೆ ಭಾನುವಾರ ಒಂದೇ ಹಂತದ ಚುನಾವಣೆ ನಡೆಯುತ್ತಿದ್ದು, ನಟ ಸೋನು ಸೂದ್ ಮೊಗಾದಲ್ಲಿ ಮತದಾನ ಕೇಂದ್ರಗಳಿಗೆ ತೆರಳದಂತೆ ಚುನಾವಣಾ ಆಯೋಗ ನಿರ್ಬಂಧ ಹೇರಿದೆ.

published on : 20th February 2022

ನಿರ್ಭೀತಿಯಿಂದ ಉತ್ತರಿಸುವವರಿಗೆ ಮತ ನೀಡಿ: ಪಂಜಾಬ್ ಮತದಾರರಿಗೆ ರಾಹುಲ್ ಗಾಂಧಿ ಕರೆ

ಪಂಜಾಬ್ ವಿಧಾನಸಭೆ ಚುನಾವಣಾ ಕಣ ರಂಗೇರಿದೆ. ಇಂದು ಏಕಹಂತದಲ್ಲಿ 117 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯದ ಜನತೆಗೆ ನಿಮಗೆ ಬೆಂಬಲ ನೀಡುವ ಮತ್ತು ನಿಮಗೆ ನಿರ್ಭೀತಿಯಿಂದ ಉತ್ತರ ನೀಡುವ ಅಭ್ಯರ್ಥಿಗಳಿಗೆ ಮತ ಹಾಕಿ ಎಂದು ಕರೆ ನೀಡಿದ್ದಾರೆ.

published on : 20th February 2022

ಯುವ ಮತದಾರರು, ಮೊದಲ ಬಾರಿ ಮತ ಚಲಾಯಿಸುವವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಹಕ್ಕು ಚಲಾಯಿಸಿ: ಪ್ರಧಾನಿ ಮೋದಿ

ಪಂಜಾಬ್ ವಿಧಾನಸಭೆಯ ಎಲ್ಲಾ 117 ಕ್ಷೇತ್ರಗಳಿಗೆ ಏಕಹಂತದಲ್ಲಿ ಮತ್ತು ಉತ್ತರ ಪ್ರದೇಶ ವಿಧಾನಸಭೆಗೆ ಮೂರನೇ ಹಂತದ ಮತದಾನ ಇಂದು ಭಾನುವಾರ ಪ್ರಗತಿಯಲ್ಲಿರುವಾಗ ಎರಡೂ ರಾಜ್ಯಗಳ ಮತದಾರರಿಗೆ ಅದರಲ್ಲೂ ಯುವ ಮತದಾರರು ಹೆಚ್ಚು ಉತ್ಸಾಹದಲ್ಲಿ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೋರಿದ್ದಾರೆ.

published on : 20th February 2022
1 2 3 > 

ರಾಶಿ ಭವಿಷ್ಯ