- Tag results for Rachita Ram
![]() | ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳಿಂದ ಈ ವರ್ಷ ನನ್ನ ಹುಟ್ಟುಹಬ್ಬದ ಆಚರಣೆ ಇಲ್ಲ: ನಟಿ ರಚಿತಾ ರಾಮ್ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ಖಂಡಿಸಿ ರಾಜ್ಯದಲ್ಲಿ ಸರಣಿ ಬಂದ್ ಆಚರಿಸಿದ್ದರ ಬೆನ್ನಲ್ಲೇ ನಟಿ ರಚಿತಾ ರಾಮ್ ಕೂಡ ಈ ಹೋರಾಟಕ್ಕೆ ಪರೋಕ್ಷ ಬೆಂಬಲ ವ್ಯಕ್ತಪಡಿಸಿದ್ದಾರೆ. ತಮ್ಮ ಹುಟ್ಟುಹಬ್ಬಕ್ಕೆ ಸಂಬಂಧಿಸಿದಂತೆ ನಟಿ ತಮ್ಮ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ. |
![]() | ಕಾರು ಡಿಕ್ಕಿ ಪ್ರಕರಣ: ಸಿಬ್ಬಂದಿಯನ್ನು ಮನೆಗೆ ಕರೆಸಿ ಕ್ಷಮೆ ಕೇಳಿ ರಚಿತಾ ರಾಮ್; ಡಿಂಪಲ್ ಕ್ವೀನ್ ನಡೆಗೆ ವ್ಯಾಪಕ ಪ್ರಶಂಸೆಇದು ಆಕಸ್ಮಿಕವಾಗಿ ನಡೆದಿರುವ ಘಟನೆ. ಈ ವಿಚಾರ ಗಮನಕ್ಕೆ ಬಂದಿರಲಿಲ್ಲ ಎಂದಿದ್ದಾರೆ. ಅಷ್ಟಲ್ಲದೆ, ರಂಗಪ್ಪ ಅವರನ್ನು ತಮ್ಮ ಮನೆಗೆ ಕರೆದು ಕ್ಷಮೆ ಕೋರಿದ್ದಾರೆ. ಈ ಸಂದರ್ಭದ ವಿಡಿಯೊವನ್ನೂ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. |
![]() | ಲಾಲ್ಬಾಗ್ ಸಿಬ್ಬಂದಿಗೆ ಗುದ್ದಿದ ರಚಿತಾ ರಾಮ್ ಕಾರು: ಕಾರ್ಮಿಕನನ್ನು ಮಾತನಾಡಿಸುವ ಸೌಜನ್ಯ ತೋರದ ನಟಿ!ರಚಿತಾ ಪ್ರಯಾಣಿಸುತ್ತಿದ್ದ ಕಾರು ಸ್ವಚ್ಛತಾ ಕಾರ್ಮಿಕನಿಗೆ ಗುದ್ದಿದೆ. ಜಸ್ಟ್ ಮಿಸ್ ಎನ್ನುವಂತೆ ಕಾರ್ಮಿಕ ಪಕ್ಕಕ್ಕೆ ಹಾರಿ ಅಪಘಾತದಿಂದ ತಪ್ಪಿಸಿಕೊಂಡಿದ್ದಾನೆ. ಈ ಘಟನೆ ನಡೆದಾಗ ರಚಿತಾ ರಾಮ್ ಕಾರಲ್ಲಿ ಇದ್ದರೂ, ಏನೂ ಆಗಿಯೇ ಇಲ್ಲ ಎನ್ನುವಂತೆ ಪ್ಲವರ್ ಶೋನತ್ತ ತೆರಳಿದ್ದಾರೆ. |
![]() | ‘ಏನಮ್ಮಿ, ಏನಮ್ಮಿ...’ ಬಳಿಕ ಮತ್ತೊಂದು ಹಿಟ್ ಹಾಡು ನೀಡಿದ ರಚಿತಾ ರಾಮ್-ಸತೀಶ್ ನೀನಾಸಂ: 'ಮ್ಯಾಟ್ನಿ’ ಗೀತೆಗೆ ಮರುಳಾದ ಫ್ಯಾನ್ಸ್!2018ರಲ್ಲಿ ತೆರೆಕಂಡ ಅಯೋಗ್ಯ ಚಿತ್ರದ ‘ಏನಮ್ಮಿ ಏನಮ್ಮಿ..’ ಹಾಡಿಗೆ ಕೇಳುಗರು ಮನಸೋತಿದ್ದರು. ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ಅವರು ಜೋಡಿಯಾಗಿ ಕಾಣಿಸಿಕೊಂಡ ಆ ಗೀತೆ ಇಂದಿಗೂ ಟ್ರೆಂಡಿಂಗ್ನಲ್ಲಿ ಇದೆ. ಇದೀಗ ಇದೇ ಜೋಡಿಯ ಮತ್ತೊಂದು ಸಿನಿಮಾದ ಹಾಡಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. |
![]() | ನಾಗಶೇಖರ್ ನಿರ್ದೇಶನದ ಸಂಜು ವೆಡ್ಸ್ ಗೀತಾ 2 ಚಿತ್ರದಿಂದ ರಮ್ಯಾ ಔಟ್; ನಾಯಕಿಯಾಗಿ ರಚಿತಾ ರಾಮ್ ಫಿಕ್ಸ್ಸಂಜು ವೆಡ್ಸ್ ಗೀತಾ 2 ಚಿತ್ರಕ್ಕಾಗಿ ನಿರ್ದೇಶಕ ನಾಗಶೇಖರ್ ಮತ್ತು ರಚಿತಾ ರಾಮ್ ಮಾತುಕತೆ ನಡೆಸುತ್ತಿದ್ದಾರೆ ಎಂದು ನಾವು ಈ ಹಿಂದೆ ವರದಿ ಮಾಡಿದ್ದೆವು ಮತ್ತು ಇದೀಗ ಆ ಸುದ್ದಿ ನಿಜವಾಗಿದೆ. ಚಿತ್ರದಲ್ಲಿ ನಟ ಶ್ರೀನಗರ ಕಿಟ್ಟಿಯೊಂದಿಗೆ ರಚಿತಾ ಇದೇ ಮೊದಲ ಬಾರಿಗೆ ತೆರೆಹಂಚಿಕೊಳ್ಳುತ್ತಿದ್ದಾರೆ. |
![]() | ಸಂಜು ವೆಡ್ಸ್ ಗೀತಾ 2 ಗೆ ಹೊಸ ನಾಯಕಿ; ರಚಿತಾ ರಾಮ್ ಜೊತೆಗೆ ನಿರ್ದೇಶಕ ನಾಗಶೇಖರ್ ಮಾತುಕತೆ; ರಮ್ಯಾ ಔಟ್?ನಿರ್ದೇಶಕ ನಾಗಶೇಖರ್ ಇತ್ತೀಚೆಗೆ ಸಂಜು ವೆಡ್ಸ್ ಗೀತಾ 2 ಸಿನಿಮಾ ಮಾಡುವುದಾಗಿ ಘೋಷಿಸಿದರು. 'ಲೈಫ್ ಈಸ್ ಬ್ಯೂಟಿಫುಲ್' ಎಂಬ ಅಡಿಬರಹವಿರುವ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಮೂಲ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ರಮ್ಯಾ ಎರಡನೇ ಭಾಗದಲ್ಲಿ ಪ್ರೆಸೆಂಟರ್ ಆಗಿರಲಿದ್ದಾರೆ. |
![]() | ಮಂಗಳೂರು: ಕುತ್ತಾರು ಕೊರಗಜ್ಜನ ಕ್ಷೇತ್ರಕ್ಕೆ ನಟಿ ರಚಿತಾ ರಾಮ್ ಭೇಟಿ, ಚಿತ್ರಗಳ ಯಶಸ್ಸಿಗಾಗಿ ಪ್ರಾರ್ಥನೆನನ್ನ ಸ್ನೇಹಿತರೆಲ್ಲರು ಹೇಳಿದ್ರು, ಇಲ್ಲಿನ ಕೊರಗಜ್ಜನ ಸನ್ನಿಧಿಗೆ ಬಂದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಬಹಳ ಪವರ್ಫುಲ್ ಕೊರಗಜ್ಜ ಅಂತ ಹಾಗಾಗಿ ಭೇಟಿ ನೀಡಿದೆ ಎಂದು ರಚಿತಾ ಹೇಳಿದರು. |
![]() | ಡಾರ್ಲಿಂಗ್ ಕೃಷ್ಣ-ರಚಿತಾ ರಾಮ್ ಅಭಿನಯದ 'ಲವ್ ಮಿ OR ಹೇಟ್ ಮಿ' ಚಿತ್ರದ ಪ್ರಮುಖ ಪಾತ್ರದಲ್ಲಿ ರೂಪೇಶ್ ಶೆಟ್ಟಿಲವ್ ಮಿ OR ಹೇಟ್ ಮಿ ಸಿನಿಮಾ ಮೂಲಕ ಕೃಷ್ಣ ಮತ್ತು ರಚಿತಾ ಇದೇ ಮೊದಲ ಬಾರಿಗೆ ತೆರೆಹಂಚಿಕೊಳ್ಳುತ್ತಿದ್ದಾರೆ ಮತ್ತು ಈ ಚಿತ್ರದಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 9ರ ವಿಜೇತ ಮತ್ತು ನಟ ರೂಪೇಶ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. |
![]() | ಪ್ರಜ್ವಲ್ ದೇವರಾಜ್- ರಚಿತಾ ರಾಮ್ ಅಭಿನಯದ ವೀರಂ ಸಿನಿಮಾ ಬಿಡುಗಡೆಗೆ ದಿನಾಂಕ ಫಿಕ್ಸ್!ನಟ ಪ್ರಜ್ವಲ್ ದೇವರಾಜ್ ಅವರ ಮುಂದಿನ ವೀರಂ ಸಿನಿಮಾ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಇದೇ ಮೊದಲ ಬಾರಿಗೆ ನಿರ್ದೇಶಕನ ಕ್ಯಾಪ್ ತೊಟ್ಟಿರುವ ಖಾದರ್ ಕುಮಾರ್ ಅವರ ಚಿತ್ರವು ಏಪ್ರಿಲ್ 7 ರಂದು ಬಿಡುಗಡೆಯಾಗಲಿದೆ. |
![]() | ಕುಲು ಮನಾಲಿಯಲ್ಲಿ ಮ್ಯಾಟ್ನಿ ಹಾಡಿನ ಚಿತ್ರೀಕರಣದಲ್ಲಿ ನಟ ಸತೀಶ್ ನೀನಾಸಂ- ನಟಿ ಅದಿತಿ ಪ್ರಭುದೇವನಿರ್ದೇಶಕ ಮನೋಹರ್ ಕಾಂಪಲ್ಲಿ ಅವರ ಮುಂಬರುವ ರೋಮ್ಯಾಂಟಿಕ್ ಥ್ರಿಲ್ಲರ್ ಮ್ಯಾಟ್ನಿ ಸಿನಿಮಾದಲ್ಲಿ ಸತೀಶ್ ನೀನಾಸಂ, ರಚಿತಾ ರಾಮ್ ಮತ್ತು ಅದಿತಿ ಪ್ರಭುದೇವ ನಟಿಸಿದ್ದಾರೆ. ಸದ್ಯ, ಕೊನೆಯ ಹಂತದ ಶೂಟಿಂಗ್‌ನಲ್ಲಿ, ತಂಡವು ಇತ್ತೀಚೆಗೆ ಕುಲು ಮನಾಲಿಗೆ ಭೇಟಿ ನೀಡಿತು. ಅಲ್ಲಿ ಸತೀಶ್ ಮತ್ತು ಅದಿತಿ ಹಾಡೊಂದನ್ನು ಚಿತ್ರೀಕರಿಸಿದ್ದಾರೆ. |
![]() | ಸಿನಿಮಾ ಇಂಡಸ್ಟ್ರಿಯಿಂದ ನಾನು ಸಾಕಷ್ಟು ಕಲಿತಿದ್ದೇನೆ: ನಟಿ ರಚಿತಾ ರಾಮ್ಬುಲ್ ಬುಲ್ (2013) ಚಿತ್ರದ ಮೂಲಕ ಕಿರುತೆರೆಯಿಂದ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದವರು ನಟಿ ರಚಿತಾ ರಾಮ್. ತಮ್ಮ ಮೊದಲ ಚಿತ್ರದಲ್ಲಿಯೇ ದರ್ಶನ್ ಅವರಂತಹ ಸ್ಟಾರ್ ಜೊತೆ ಕೆಲಸ ಮಾಡಿದರು. ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡಿತು ಮತ್ತು ಅಂದಿನಿಂದ ಡಿಂಪಲ್ ಕ್ವೀನ್ ಅಥವಾ ಬುಲ್‌ಬುಲ್ ಎಂದೇ ಜನಪ್ರಿಯರಾದರು ರಚಿತಾ ರಾಮ್. |
![]() | ಮಂಡ್ಯ: ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ವಿರುದ್ಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು!ಸ್ಯಾಂಡಲ್ವುಡ್ನ ಡಿಂಪಲ್ ಕ್ವೀನ್ ನಟಿ ರಚಿತಾ ರಾಮ್ ವಿರುದ್ಧ ಮಂಡ್ಯ ಜಿಲ್ಲೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. |
![]() | ಗಣರಾಜ್ಯೋತ್ಸವ ಮರೆತು 'ಕ್ರಾಂತಿ' ಉತ್ಸವ ಮಾಡಿ ಎಂದ ನಟಿ ರಚಿತಾ ರಾಮ್ ವಿರುದ್ಧ ನೆಟ್ಟಿಗರ ಆಕ್ರೋಶಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಟಿ ರಚಿತಾ ರಾಮ್ ಅಭಿನಯದ ಬಹುನಿರೀಕ್ಷಿತ ಕ್ರಾಂತಿ ಸಿನಿಮಾ ಇದೇ ಜನವರಿ 26 ರಂದು ಬಿಡುಗಡೆಗೆ ಸಜ್ಜಾಗಿದ್ದು, ಅಬ್ಬರದ ಪ್ರಚಾರ ನಡೆಯುತ್ತಿದೆ. ಪ್ರಚಾರದ ಭಾಗವಾಗಿ ನಟಿ ರಚಿತಾ ರಾಮ್ ನೀಡಿರುವ ಹೇಳಿಕೆ ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ. |
![]() | ಕ್ರಾಂತಿ ಟ್ರೈಲರ್ ಬಿಡುಗಡೆ: ಮಾಸ್ ಮತ್ತು ಕ್ಲಾಸ್ ಮಿಶ್ರಣದ ಭರವಸೆ ನೀಡಿದ ದರ್ಶನ್ ಅಭಿನಯದ ಸಿನಿಮಾಮೈಸೂರು, ಹೊಸಪೇಟೆ, ಹುಬ್ಬಳ್ಳಿ ನಂತರ ದರ್ಶನ್ ಜೊತೆಗಿನ ಕ್ರಾಂತಿ ಸಂಭ್ರಮ ಬೆಂಗಳೂರಿನಲ್ಲಿ ಶನಿವಾರವೂ ಮುಂದುವರಿದಿದೆ. ಚಿತ್ರದ ಬಹು ನಿರೀಕ್ಷಿತ ಟ್ರೈಲರ್ ಅನ್ನು ಚಿತ್ರತಂಡ, ಸಿಬ್ಬಂದಿ ಮತ್ತು ದರ್ಶನ್ ಅಭಿಮಾನಿಗಳ ಸಮ್ಮುಖದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಬಿಡುಗಡೆಮಾಡಲಾಯಿತು. |
![]() | 'ಶಬರಿ ಸರ್ಚಿಂಗ್ ಫಾರ್ ರಾವಣ' ಪೋಸ್ಟರ್ ರಿವೀಲ್: ಹೊಸ ಗೆಟಪ್ ನಲ್ಲಿ ಗುಳಿಕೆನ್ನೆ ಬೆಡಗಿ ರಚಿತಾ ರಾಮ್!ಸ್ಯಾಂಡಲ್ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಜನ್ಮದಿನದ ಹಿನ್ನೆಲೆಯಲ್ಲಿ ಶಬರಿ ಸೆರ್ಚಿಂಗ್ ಫಾರ್ ರಾವಣ ಚಿತ್ರತಂಡ ಸಿನಿಮಾದ ಪೋಸ್ಟರ್ ರಿವೀಲ್ ಮಾಡಿದೆ. |