• Tag results for Rajanath Singh

ಬಿಹಾರ ಸರ್ಕಾರ ರಚನೆ, ಉಪ ಮುಖ್ಯಮಂತ್ರಿ ನೇಮಕ ಬಗ್ಗೆ ಇಂದು ತೀರ್ಮಾನ: ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ 

ಬಿಹಾರ ವಿಧಾನಸಭೆಗೆ ಆಯ್ಕೆಯಾಗಿರುವ ಎನ್ ಡಿಎಯ ಹೊಸ ಶಾಸಕರು ಪಾಟ್ನಾದಲ್ಲಿ ಭಾನುವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ ಸೇರಲಿದ್ದು, ಶಾಸಕಾಂಗ ಪಕ್ಷದ ನೂತನ ನಾಯಕನನ್ನು ಆಯ್ಕೆ ಮಾಡಲಿದ್ದಾರೆ. ಜೆಡಿಯು, ಬಿಜೆಪಿ, ಹಿಂದೂಸ್ತಾನಿ ಅವಾಮ್ ಮೋರ್ಚ ಮತ್ತು ವಿಕಾಸ್ ಶೀಲ್ ಇನ್ಸಾನ್ ಪಾರ್ಟಿಯ ನೂತನ ಶಾಸಕರು ರಾಜ್ಯದಲ್ಲಿ ಸರ್ಕಾರ ರಚನೆ ಸಂಬಂಧ ಇಂದಿನ ಸಭೆಯಲ್ಲ

published on : 15th November 2020

ಭಾರತ ಯಾವತ್ತಿಗೂ ನೆರೆ ದೇಶಗಳೊಂದಿಗೆ ಉತ್ತಮ ಬಾಂಧವ್ಯವನ್ನು ಬಯಸುತ್ತದೆ: ರಾಜನಾಥ್ ಸಿಂಗ್

ಭಾರತ ಯಾವತ್ತಿಗೂ ತನ್ನ ನೆರೆಯ ದೇಶಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತದೆ, ಆದರೆ ಕಾಲ ಕಾಲಕ್ಕೆ ತನ್ನ ದೇಶದ ಸಾರ್ವಭೌಮತ್ಯ ಮತ್ತು ಪ್ರಾಂತೀಯ ಐಕ್ಯತೆಯನ್ನು ಕಾಪಾಡಲು ಸರ್ವಶ್ರೇಷ್ಟ ತ್ಯಾಗಗಳನ್ನು ಸೇನೆಯ ಯೋಧರು ಮಾಡುವ ಪರಿಸ್ಥಿತಿ ಬರುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

published on : 25th October 2020

ಇಂದು ನಡೆದಿದ್ದು ಅತ್ಯಂತ ನೋವುಂಟುಮಾಡಿದೆ: ರಾಜ್ಯಸಭೆ ಸಭಾಧ್ಯಕ್ಷರ ಮೈಕ್ ಕಿತ್ತೆಸೆದ ಘಟನೆ ಬಗ್ಗೆ ರಾಜನಾಥ್ ಸಿಂಗ್ 

ರಾಜ್ಯಸಭೆಯಲ್ಲಿ ಕೃಷಿ ಸಂಬಂಧಿತ ಮಸೂದೆ ಮಂಡನೆ, ಅಂಗೀಕಾರದ ಸಂದರ್ಭದಲ್ಲಿ ಪ್ರತಿಪಕ್ಷಗಳು ನಡೆದುಕೊಂಡ ರೀತಿಯ ಬಗ್ಗೆ ಕೇಂದ್ರ ರಕ್ಷಣಾ ಸಚಿವ ತೀವ್ರ ಅಸಮಾಧಾನ, ಬೇಸರ ವ್ಯಕ್ತಪಡಿಸಿದ್ದಾರೆ. 

published on : 20th September 2020

ಪೂರ್ವ ಲಡಾಕ್ ಸಂಘರ್ಷ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಭೆ, ಪರಿಸ್ಥಿತಿಯ ಸಮಗ್ರ ವಿಮರ್ಶೆ

ಚೀನಾ ಸೇನೆಯಿಂದ ಗಡಿ ಉಲ್ಲಂಘನೆಯ ಸತತ ಪ್ರಯತ್ನ ಮತ್ತು ಭಾರತೀಯ ಸೇನೆಯನ್ನು ಹಿಮ್ಮೆಟ್ಟಿಸಲು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಮಾಡುತ್ತಿರುವ ಪ್ರಚೋದನಕಾರಿ ವರ್ತನೆಗಳ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಸರ್ವ ರೀತಿಯಲ್ಲಿಯೂ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಮತ್ತು ಅಲ್ಲಿನ ಒಟ್ಟಾರೆ ಪರಿಸ್ಥಿತಿಗಳ ಬಗ್ಗೆ ನಿನ್ನೆ ಕೇಂದ್ರ ಸರ್ಕಾರ ಸವಿಸ್ತಾರವಾಗಿ ಪರಿಶೀಲನೆ ನಡೆಸಿದೆ.

published on : 19th September 2020

ಶಿವಸೇನೆ ಕಾರ್ಯಕರ್ತರಿಂದ ದಾಳಿಗೊಳಗಾದ ನೌಕಾಪಡೆ ಅಧಿಕಾರಿಯ ಆರೋಗ್ಯ ವಿಚಾರಿಸಿದ ರಾಜನಾಥ್ ಸಿಂಗ್

ಮುಂಬೈನಲ್ಲಿ ಶಿವಸೇನೆ ಕಾರ್ಯಕರ್ತರಿಂದ ಹಲ್ಲೆಗೊಳಗಾದ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಮದನ್ ಶರ್ಮಾ ಅವರೊಂದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಮಾತನಾಡಿದ್ದಾರೆ.

published on : 12th September 2020

ಭಾರತದ ಸಾರ್ವಭೌಮತ್ವ ಮೇಲೆ ಹಕ್ಕು ಹೊಂದಲು ನೋಡುವವರಿಗೆ 'ರಫೇಲ್'ಸೇರ್ಪಡೆ ಕಠಿಣ ಸಂದೇಶ ರವಾನಿಸಿದೆ:ರಾಜನಾಥ್ ಸಿಂಗ್

ನಮ್ಮ ದೇಶದ ಸಾರ್ವಭೌಮತ್ವದ ಮೇಲೆ ಪ್ರಭಾವ ಬೀರಲು ನೋಡುವವರಿಗೆ ರಫೇಲ್ ಯುದ್ಧ ವಿಮಾನ ಭಾರತೀಯ ವಾಯುಪಡೆಗೆ ಸೇರ್ಪಡೆ ಅತಿದೊಡ್ಡ ಕಠಿಣ ಸಂದೇಶ ರವಾನಿಸಿದೆ. ನಮ್ಮ ದೇಶದ ಗಡಿಭಾಗದಲ್ಲಿ ಸದ್ಯ ಇರುವ ಪರಿಸ್ಥಿತಿಗೆ ಅಥವಾ ನಮ್ಮ ನೆರೆಯ ದೇಶಗಳು ಉಂಟುಮಾಡಿರುವ ಪರಿಸ್ಥಿತಿ ಪರಿಗಣಿಸಿದರೆ ರಫೇಲ್ ಯುದ್ಧ ವಿಮಾನ ಸೇರ್ಪಡೆ ಅತ್ಯಂತ ಮುಖ್ಯವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂ

published on : 10th September 2020

ಲಡಾಕ್ ನಲ್ಲಿ ಯಥಾಸ್ಥಿತಿ ಮುರಿಯುವ ಚೀನಾದ ಪ್ರಯತ್ನ ದ್ವಿಪಕ್ಷೀಯ ಸಂಬಂಧ ಉಲ್ಲಂಘನೆಯಾಗಿದೆ:ರಾಜನಾಥ್ ಸಿಂಗ್ 

ಗಡಿ ವಾಸ್ತವ ರೇಖೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಒಪ್ಪದೆ ಚೀನಾ ತನ್ನ ದ್ವಿಪಕ್ಷೀಯ ಒಪ್ಪಂದವನ್ನು ಮುರಿಯುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಸ್ಕೊದಲ್ಲಿ ಅಲ್ಲಿನ ರಕ್ಷಣಾ ಸಚಿವರ ಜೊತೆ ನಡೆಸಿದ ಸಭೆಯಲ್ಲಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

published on : 5th September 2020

ಗಡಿ ಸಂಘರ್ಷ:ರಾಜನಾಥ್ ಸಿಂಗ್ ಜೊತೆ ಶಾಂಘೈ ಶೃಂಗಸಭೆ ಹೊರಗೆ ಮಾತುಕತೆ ನಡೆಸಲು ಚೀನಾ ರಕ್ಷಣಾ ಸಚಿವ ಒಲವು?

ರಷ್ಯಾದ ಮಾಸ್ಕೊದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘದ ಸಭೆಯ ಹೊರಗೆ ಚೀನಾದ ರಕ್ಷಣಾ ಸಚಿವ ವೈ ಫೆಂಗಿ, ಭಾರತ-ಚೀನಾ ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಚರ್ಚೆ ನಡೆಸಲು ಸಮಯಾವಕಾಶ ಕೇಳಿದ್ದಾರೆ ಎಂದು ತಿಳಿದುಬಂದಿದೆ.

published on : 4th September 2020

ಕೈ ಕುಲುಕಲು ಮುಂದೆ ಬಂದ ರಷ್ಯಾದ ಅಧಿಕಾರಿಗೆ 'ನಮಸ್ತೆ' ಹೇಳಿ ಬದ್ಧತೆ ಮೆರೆದ ರಕ್ಷಣಾ ಸಚಿವ ರಾಜನಾಥ್ ಸಿಂಗ್!

ಶಾಂಘೈ ಸಹಕಾರ ಸಂಘ(ಎಸ್ ಸಿಒ)ದ ಪ್ರಮುಖ ಸಭೆಯಲ್ಲಿ ಪಾಲ್ಗೊಳ್ಳಲು ರಷ್ಯಾದಲ್ಲಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೋವಿಡ್-19ನ ಈ ಸಮಸ್ಯೆಯ ಸಮಯದಲ್ಲಿ ಅಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಗಮನ ಸೆಳೆದಿದ್ದಾರೆ.

published on : 3rd September 2020

ಚೀನಾ ಗಡಿಯಲ್ಲಿ ಉದ್ವಿಗ್ನ ಸ್ಥಿತಿಯ ನಡುವೆಯೇ ರಷ್ಯಾಕ್ಕೆ ಪ್ರಯಾಣ ಬೆಳೆಸಿದ ರಾಜನಾಥ್ ಸಿಂಗ್;ಎಸ್ ಸಿಒ ಸಭೆಯಲ್ಲಿ ಭಾಗಿ

ಶಾಂಘೈ ಸಹಕಾರ ಸಂಘಟನೆ(ಎಸ್ ಸಿಒ)ಯ ಪ್ರಮುಖ ಸಭೆಯಲ್ಲಿ ಭಾಗವಹಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬುಧವಾರ ಮೂರು ದಿನಗಳ ರಷ್ಯಾ ಪ್ರವಾಸಕ್ಕೆ ತೆರಳಿದ್ದಾರೆ.

published on : 2nd September 2020

ಪೂರ್ವ ಲಡಾಕ್ ಭದ್ರತಾ ಸ್ಥಿತಿಗತಿ ಕುರಿತು ಪರಾಮರ್ಶೆ:ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ

ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯುದ್ದಕ್ಕೂ(ಎಲ್ ಎಸಿ) ಭಾರತ ಮತ್ತು ಚೀನಾ ದೇಶಗಳು ಸಂಪೂರ್ಣವಾಗಿ ಸೇನೆಯನ್ನು ಹಿಂತೆಗೆದುಕೊಳ್ಳುವ ಸಂಬಂಧ ಮಾತುಕತೆಗಳು ನಡೆಯುತ್ತಿರುವಾಗಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಲ್ಲಿನ ಒಟ್ಟಾರೆ ಭದ್ರತಾ ಸ್ಥಿತಿಗತಿಗಳ ಪರಾಮರ್ಶೆ ನಡೆಸಿದ್ದಾರೆ.

published on : 23rd August 2020

'ಭಾರತೀಯ ಸೇನೆಯಲ್ಲಿ ಆತ್ಮ ನಿರ್ಭರಕ್ಕೆ ಒತ್ತು, 101 ರಕ್ಷಣಾ ಸಾಮಗ್ರಿಗಳ ಆಮದು ಮೇಲೆ ನಿರ್ಬಂಧ': ರಕ್ಷಣಾ ಸಚಿವ ರಾಜನಾಥ್ ಸಿಂಗ್ 

ರಕ್ಷಣಾ ಸಚಿವಾಲಯ ಆತ್ಮನಿರ್ಭರ ಯೋಜನೆಗೆ ಉತ್ತೇಜನ ನೀಡಲು ಸಿದ್ಧವಾಗಿದ್ದು, ದೇಶೀಯ ಕಂಪನಿಗಳ ಜತೆ ರಕ್ಷಣಾ ಇಲಾಖೆ ಒಪ್ಪಂದ ಮಾಡಿಕೊಂಡಿದೆ. ವಿದೇಶಗಳಿಂದ 101  ರಕ್ಷಣಾ ಸಾಮಗ್ರಿಗಳ ಆಮದಿನ ಮೇಲೆ ನಿಷೇಧ ಹೇರಲಾಗಿದೆ.

published on : 9th August 2020

ಭಾರತ ದುರ್ಬಲ ದೇಶವಲ್ಲ, ವಿಶ್ವದ ಯಾವುದೇ ಶಕ್ತಿ ನಮ್ಮ ಭೂಪ್ರದೇಶದ ಒಂದಿಂಚೂ ಮುಟ್ಟಲಾಗದು: ರಾಜನಾಥ್ ಸಿಂಗ್

ಭಾರತವು ಪೂರ್ವ ಲಡಾಕ್ ಗಡಿಯಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಗೌರವಿಸುತ್ತದೆ ಎಂದಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿಶ್ವದ ಯಾವುದೇ ಶಕ್ತಿಯು ಭಾರತದ ಭೂಪ್ರದೇಶವನ್ನು ಮುಟ್ಟಲಾಗುವುದಿಲ್ಲ ಎಂದು ರಾಷ್ಟ್ರಕ್ಕೆ ಭರವಸೆ ನೀಡಿದ್ದಾರೆ.

published on : 17th July 2020

ಲೇಹ್ ಗೆ ಬಂದಿಳಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್: ಯೋಧರ ಕಸರತ್ತು ವೀಕ್ಷಣೆ

ಭಾರತ-ಚೀನಾ ಗಡಿ ವಿವಾದ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಬಳಿಕ ಇದೀಗ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಡಾಕ್ ಮತ್ತು ಜಮ್ಮು-ಕಾಶ್ಮೀರಕ್ಕೆ ಎರಡು ದಿನಗಳ ಭೇಟಿಗೆ ಆಗಮಿಸಿದ್ದಾರೆ.

published on : 17th July 2020

ಸಂಪೂರ್ಣ ಸನ್ನದ್ಧರಾಗಿರಿ: ಸಿಡಿಎಸ್, ಸೇನಾ ಮುಖ್ಯಸ್ಥರಿಗೆ ರಾಜನಾಥ್ ಸಿಂಗ್ ಸೂಚನೆ 

ಲಡಖ್ ನಲ್ಲಿ ಚೀನಾ ಸೇನೆಯ ಕ್ಯಾತೆಯ ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇನಾ ಸಿಬ್ಬಂದಿ ಮುಖ್ಯಸ್ಥ, ಮೂವರು ಸೇನಾ ಮುಖ್ಯಸ್ಥರೊಂದಿಗೆ ಸಭೆ ನಡೆಸಿದ್ದು, ಸಂಪೂರ್ಣ ಸನ್ನದ್ಧರಾಗಿರಿ ಎಂಬ ಸೂಚನೆ ನೀಡಿದ್ದಾರೆ. 

published on : 21st June 2020
1 2 3 >