• Tag results for Rama

20 ಶಾಸಕರೊಂದಿಗೆ ಹೈದರಾಬಾದ್ ಗೆ ಹಾರಿದ ಎಚ್ ಡಿ ಕುಮಾರಸ್ವಾಮಿ!

ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ 20 ಮಂದಿ ಜೆಡಿಎಸ್ ಶಾಸಕರೊಂದಿಗೆ ಸೇರಿ ಹೈದರಾಬಾದ್ ಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

published on : 4th October 2022

ಬಿಜೆಪಿ ಗೆದ್ದಿರುವ ಪ್ರತಿಯೊಂದು ಸ್ಥಾನದ ಹಿಂದೆ ಪರೇಶ್ ಮೇಸ್ತನಂತಹ ಅಮಾಯಕ ಯುವಕರ ರಕ್ತ ಇದೆ: ಸಿದ್ದರಾಮಯ್ಯ

ಪರೇಶ್‌ ಮೇಸ್ತ ಪ್ರಕರಣದಲ್ಲಿ ನಮ್ಮ ಮೇಲೆ ಮಾಡಿದ ಸುಳ್ಳು ಆರೋಪಕ್ಕಾಗಿ ಬಿಜೆಪಿಯು ಮಾನ ಮರ್ಯಾದೆ ಇದ್ದರೆ ಕ್ಷಮೆ ಕೋರಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

published on : 4th October 2022

ಸಿದ್ದರಾಮಯ್ಯ, ಪಿಎಫ್ ಐ ಉಗ್ರರ ನಡುವೆ ಭಾಯ್ ಭಾಯ್ ಸಂಬಂಧವಿತ್ತು- ಬಿಜೆಪಿ ಆರೋಪ

ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಪಿಎಫ್ ಐ ಉಗ್ರರ ನಡುವೆ ಭಾಯ್ ಭಾಯ್ ಸಂಬಂಧವಿತ್ತೆಂದು ರಾಜ್ಯ ಬಿಜೆಪಿ ಆರೋಪಿಸಿದೆ.

published on : 3rd October 2022

ವಿಭಜನೆಯ ಪಿತಾಮಹ ನೆಹರು ಎಂದ ಬಿಜೆಪಿ, ನೆಹರೂ ಜೈಲಿಗೆ ಹೋಗಿದ್ದು ಹೋರಾಟದಿಂದ.. ಅಮಿತ್ ಶಾ ಜೈಲಿಗೆ ಹೋಗಿದ್ದೇಕೆ?; ಕಾಂಗ್ರೆಸ್ ತೀವ್ರ ಟೀಕೆ

ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಭಾರತ ವಿಭಜನೆಯ ಪಿತಾಮಹ ಎಂದು ಕರೆದು ಕರ್ನಾಟಕದ ಕೆಲವು ಸ್ಥಳೀಯ ದಿನಪತ್ರಿಕೆಗಳಲ್ಲಿ ಮುಖಪುಟ ಜಾಹೀರಾತು ಪ್ರಕಟಿಸಿರುವ ಬಿಜೆಪಿ ವಿರುದ್ಧ ಕಾಂಗ್ರೆಸ್ ಶನಿವಾರ ತೀವ್ರ ವಾಗ್ದಾಳಿ ನಡೆಸಿದೆ.

published on : 1st October 2022

ಪೇಸಿಎಂ ಟೀ ಶರ್ಟ್ ಧರಿಸಿದ್ದ ವ್ಯಕ್ತಿ ಮೇಲೆ ಹಲ್ಲೆ: ಪೊಲೀಸ್ ಅಧಿಕಾರಿ ಅಮಾನತಿಗೆ ಸಿದ್ದರಾಮಯ್ಯ ಆಗ್ರಹ

ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಪೇಸಿಎಂ ಟೀ ಶರ್ಟ್ ಧರಿಸಿದ್ದ ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಶನಿವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

published on : 1st October 2022

ಕಾನ್ಪುರದಲ್ಲಿ ಲಂಕಾಪತಿ ರಾವಣನಿಗೆಂದೇ ವಿಶೇಷ ದೇವಾಲಯ

ರಾವಣೇಶ್ವರ ಅಥವಾ ರಾವಣನ ಬಗ್ಗೆ ಚರ್ಚೆಗಳು ಆಗಾಗ್ಗೆ ನಡೆಯುತ್ತಿರುತ್ತದೆ. ಸೀತಾಪಹರಣ ಮಾಡಿದ ರಾವಣ ಪರಮ ಶಿವಭಕ್ತನೆಂದೂ ಅವನನ್ನು ಕೆಲವು ಕಡೆ ಪೂಜೆ ಮಾಡಲಾಗುತ್ತದೆ ಎನ್ನುವ ಕಥೆಗಳು ಚಾಲ್ತಿಯಲ್ಲಿವೆ. ಶ್ರೀಲಂಕಾದಲ್ಲಿ ರಾವಣೇಶ್ವರನ ದೇಗುಲ ಇದ್ದು ಅವನನ್ನು ಅಲ್ಲೂ ಕೂಡ ಪೂಜಿಸಲಾಗುತ್ತದೆ. 

published on : 1st October 2022

ಆರ್ ಎಸ್ ಎಸ್ ನಿಷೇಧಿಸಬೇಕೆಂದು ಕೇಳುವುದೇ ದುರ್ದೈವ, ಸಿದ್ದರಾಮಯ್ಯರ ಈ ಮಟ್ಟಕ್ಕೆ ಇಳಿಯಬಾರದಾಗಿತ್ತು: ಸಿಎಂ ಬೊಮ್ಮಾಯಿ

ಆರ್​ಎಸ್​ಎಸ್​ ನಿಷೇಧಿಸಬೇಕು ಎನ್ನುವ ಸಿದ್ದರಾಮಯ್ಯ ಹೇಳಿಕೆಯೇ ದೊಡ್ಡ ದುರ್ದೈವ, ಅವರ ಹೇಳಿಕೆಗೆ ಆಧಾರಗಳಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. 

published on : 30th September 2022

'ನೆಹರೂನೆ ಕನ್ನಡ ಮಾತಾಡಿ ಬರಲಿ ಅಂದವರು ನಾವು.. ಇನ್ನು..': ಭಾರತ್ ಜೋಡೋ ಪೋಸ್ಟರ್ ಗಳ ಮೇಲೆ ಕನ್ನಡ ಬಳಸಿ ಬರವಣಿಗೆ ವೈರಲ್!

ಕರ್ನಾಟಕ ಪ್ರವೇಶ ಮಾಡಿರುವ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆಗೆ ಕನ್ನಡಪರ ಹೋರಾಟಗಾರರು ಶಾಕ್ ನೀಡಿದ್ದು, ಭಾರತ್ ಜೋಡೋ ಯಾತ್ರೆ ಪೋಸ್ಟರ್ ಗಳ ಮೇಲೆ 'ಕನ್ನಡ ಬಳಸಿ' ಎಂಬ ಪದಗಳನ್ನು ಬರೆದು ಪರಭಾಷಾ ಪ್ರೇಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

published on : 30th September 2022

ಸಂಸ್ಕೃತ ಭಾಷೆಗೆ ಕರ್ನಾಟಕದಲ್ಲಿ ಪೋಷಣೆ: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಶ್ಲಾಘನೆ

ಸುಮಾರು 35,000 ವಿದ್ಯಾರ್ಥಿಗಳು ಸಂಸ್ಕೃತ ಕಲಿಯಲು ಪ್ರೋತ್ಸಾಹಿಸುತ್ತಿರುವ ಕರ್ನಾಟಕದ ಪ್ರಯತ್ನಗಳನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶ್ಲಾಘಿಸಿದ್ದಾರೆ.

published on : 30th September 2022

Live: ಆರ್​ಎಸ್​ಎಸ್​ ಸಿದ್ಧಾಂತದ ವಿರುದ್ಧ ಭಾರತ್ ಜೋಡೋ ಯಾತ್ರೆ: ನಗಾರಿ ಬಾರಿಸುವ ಮೂಲಕ ಯಾತ್ರೆಗೆ ರಾಹುಲ್ ಗಾಂಧಿ ಚಾಲನೆ

ಭಾರತ್ ಜೋಡೋ ಯಾತ್ರೆ ಇನ್ನು ಕೆಲವೇ ಹೊತ್ತಿನಲ್ಲಿ ಕರ್ನಾಟಕದಲ್ಲಿ ಆರಂಭವಾಗಲಿದೆ. ಈ  ಹಿನ್ನೆಲೆಯಲ್ಲಿ ಇಂದು ಶುಕ್ರವಾರ ರಾಜ್ಯ ಪ್ರವೇಶಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬಂಡೀಪುರದ ಬಳಿ ಸಿದ್ದರಾಮಯ್ಯ ಅವರು ಬರ ಮಾಡಿಕೊಂಡರು. 

published on : 30th September 2022

ಮಾಜಿ ಪ್ರಧಾನಿಗಳ ಮನೆಗೆ ನಿರ್ಮಲಾ ಸೀತಾರಾಮನ್ ಭೇಟಿ: ದೇವೇಗೌಡರ ಆರೋಗ್ಯ ವಿಚಾರಿಸಿದ ಕೇಂದ್ರ ಹಣಕಾಸು ಸಚಿವೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಅವರು  ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

published on : 30th September 2022

ಯಾವ ಆಧಾರದ ಮೇಲೆ ಆರ್ ಎಸ್ಎಸ್ ನಿಷೇಧಿಸಬೇಕೆಂದು ಸಿದ್ದರಾಮಯ್ಯ ಕೇಳುತ್ತಾರೆ: ಸಿಎಂ ಸೇರಿ ಬಿಜೆಪಿ ನಾಯಕರ ಪ್ರಶ್ನೆ

ಪಿಎಫ್ಐ ಸಂಘಟನೆಯನ್ನು ನಿಷೇಧಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿಯವರ ಆರ್ ಎಸ್ಎಸ್ ಸಂಘಟನೆಯನ್ನು ಕೂಡ ನಿಷೇಧಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದರು.

published on : 30th September 2022

ಪಿಎಫ್ಐ ಸಿದ್ದರಾಮಯ್ಯನವರ ಪಾಪದ ಕೂಸು, ಅವರ ಅಪರಾಧಗಳಿಂದ ಇಷ್ಟೆಲ್ಲ ಅನಾಹುತಗಳಾಗಿದೆ: ಬಿ ಎಸ್ ಯಡಿಯೂರಪ್ಪ

ಪಿಎಫ್ಐ ಸಂಘಟನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾಪದ ಕೂಸು. ಪಿಎಫ್ಐ ಸಂಘಟನೆಗೆ ಹೇರಲಾಗಿದ್ದ ನಿಷೇಧವನ್ನು ತೆಗೆದುಹಾಕಿದ್ದು ಅವರು ಮುಖ್ಯಮಂತ್ರಿಯಾಗಿದ್ದಾಗಲೇ. ಇವತ್ತು ಏನೂ ತೋಚದೆ ಸಿದ್ದರಾಮಯ್ಯನವರು ಮನಬಂದಂತೆ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆರೋಪಿಸಿದ್ದಾರೆ.

published on : 29th September 2022

ಹಿರಿಯ ವಕೀಲ ಆರ್. ವೆಂಕಟರಮಣಿ ಭಾರತದ ಹೊಸ ಅಟಾರ್ನಿ ಜನರಲ್!

ಭಾರತದ ನೂತನ ಅಟಾರ್ನಿ ಜನರಲ್ ಆಗಿ ಹಿರಿಯ ವಕೀಲ ಆರ್ ವೆಂಕಟರಮಣಿ ಅವರನ್ನು ನೇಮಕ ಮಾಡಲಾಗಿದೆ. 

published on : 28th September 2022

PFI ನಿಷೇಧ: ಡಿಕೆಶಿ ಸ್ವಾಗತ, SDPI ಕುರಿತು ಪ್ರಶ್ನೆ ಎತ್ತಿದ ಕಾಂಗ್ರೆಸ್, RSS ಕುರಿತ ಸಿದ್ದು ಹೇಳಿಕೆಗೆ ಬಿಎಸ್ ವೈ ಗರಂ

ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಕಾಂಗ್ರೆಸ್, SDPIನ ನಿಷೇಧವೇಕಿಲ್ಲ ಎಂದು ಪ್ರಶ್ನೆ ಮಾಡಿದ್ದು, ಮಾತ್ರವಲ್ಲದೇ PFI ಮತ್ತು SDPI ಸಂಘಟನೆಗಳು ಬಿಜೆಪಿ ಮತ್ತು RSS ನ B Team ಎಂದು ಕಿಡಿಕಾರಿದೆ.

published on : 28th September 2022
1 2 3 4 5 6 > 

ರಾಶಿ ಭವಿಷ್ಯ