• Tag results for Reaction

ಪರಸ್ಪರರ ಭಾವನೆಗಳಿಗೆ ಧಕ್ಕೆಯಾದಾಗ ಕ್ರಿಯೆ-ಪ್ರತಿಕ್ರಿಯೆಗಳು ಸಹಜ: ನೈತಿಕ ಪೊಲೀಸ್ ಗಿರಿ ಕುರಿತು ಸಿಎಂ ಬೊಮ್ಮಾಯಿ ಹೇಳಿಕೆ

ಪರಸ್ಪರರ ಭಾವನೆಗಳಿಗೆ ಧಕ್ಕೆ ಉಂಟಾದಾಗ ಸಹಜವಾಗಿಯೇ ಕ್ರಿಯೆ-ಪ್ರತಿಕ್ರಿಯೆಗಳು ಇದ್ದೇ ಇರುತ್ತದೆ. ಸಾಮಾಜಿಕವಾಗಿ ಸಾಮರಸ್ಯವನ್ನು ಕಾಪಾಡುವುದು ಸರ್ಕಾರದ ಕರ್ತವ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಬುಧವಾರ ಹೇಳಿದ್ದಾರೆ.

published on : 14th October 2021

ಡ್ರಗ್ಸ್ ಕೇಸ್: ಕಿಶೋರ್ ಆರೋಪ ಸುಳ್ಳು, ನಾನು ಎಲ್ಲಿಯೂ ಹಾರಿಹೋಗಿಲ್ಲ- ನಟಿ ಅನುಶ್ರೀ

ಡ್ರಗ್ಸ್ ಕೇಸ್ ಗೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಜಾರ್ಜ್ ಶೀಟ್ ಗೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಪ್ರತ್ರಿಕಿಯಿಸಿರುವ ನಟಿ ಅನುಶ್ರೀ, ತನ್ನ ವಿರುದ್ದ ಕಿಶೋರ್ ಅಮಾನ್ ಶೆಟ್ಟಿ ಮಾಡಿರುವ ಆರೋಪಗಳು ಸುಳ್ಳು ಎಂದಿದ್ದಾರೆ. 

published on : 9th September 2021

ಹೆಣ್ಣನ್ನು ಗೌರವಿಸದವರು ರಕ್ಕಸರು! ಕ್ರೂರಿಗಳು ಗಲ್ಲು ಶಿಕ್ಷೆಗೆ ಅರ್ಹರು: ನಟ ಜಗ್ಗೇಶ್

ಮೈಸೂರಿನಲ್ಲಿ ನಡೆದಿರುವ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಸ್ಯಾಂಡಲ್ ವುಡ್ ನಟ ಜಗ್ಗೇಶ್ ಖಂಡಿಸಿದ್ದಾರೆ.

published on : 26th August 2021

ಬದುಕುತ್ತಿರುವುದೇ ನನ್ನ ಅದೃಷ್ಟ ಎಂದು ನಾನು ನಂಬಿದ್ದೇನೆ: ಪತಿ ಬಂಧನದ ಬಳಿಕ ಶಿಲ್ಪಾ ಶೆಟ್ಟಿ ಮೊದಲ ಪ್ರತಿಕ್ರಿಯೆ

ಬದುಕುತ್ತಿರುವುದೇ ನನ್ನ ಅದೃಷ್ಟ ಎಂದು ನಾನು ನಂಬಿದ್ದೇನೆ. ಈ ಹಿಂದೆಯೂ ನಾನು ಸವಾಲುಗಳನ್ನು ಎದುರಿಸಿದ್ದೇನೆ. ಭವಿಷ್ಯದಲ್ಲೂ ಸವಾಲುಗಳನ್ನು ಸಮರ್ಪಕವಾಗಿ ಎದುರಿಸುತ್ತೇನೆ.

published on : 23rd July 2021

ನಾಯಕತ್ವ ಬದಲಾವಣೆ: ಪ್ರತಿಕ್ರಿಯೆ ಸಚಿವ ಈಶ್ವರಪ್ಪ ಮೌನಕ್ಕೆ ಶರಣು

ರಾಜ್ಯ ನಾಯಕತ್ವ ಬದಲಾವಣೆ ವಿಚಾರ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ನಿರಾಕರಿಸಿದ್ದಾರೆ. 

published on : 17th June 2021

ಯಡಿಯೂರಪ್ಪ ರಾಜೀನಾಮೆ ಹೇಳಿಕೆಗೆ ಡಿಕೆಶಿ ಪ್ರತಿಕ್ರಿಯಿಸಿದ್ದು ಹೀಗೆ..

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜೀನಾಮೆ ಕುರಿತ ಹೇಳಿಕೆ ರಾಜಕೀಯ ವಲಯದಲ್ಲಿ ನಾನಾ ರೀತಿಯ ಚರ್ಚೆಗೆ ಗ್ರಾಸವಾಗಿದೆ. ರಾಜಕೀಯ ಮುಖಂಡರು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ.

published on : 6th June 2021

ನನಗಿರುವುದು ಒಬ್ಬಳೇ ಹೆಂಡತಿ, ಒಂದೇ ಸಂಸಾರ: ಸುಧಾಕರ್ ಗೆ ಡಿಕೆ ಶಿವಕುಮಾರ್ ಟಾಂಗ್

ನನಗಿರುವುದು ಒಬ್ಬಳೇ ಹೆಂಡತಿ, ಒಂದೇ ಸಂಸಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

published on : 24th March 2021

ಮೋದಿ ಇದ್ದರೆ ಎಲ್ಲವೂ ಸಾಧ್ಯ: ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ವ್ಯಂಗ್ಯ

ಬಿಜೆಪಿ ಆಡಳಿತದ ಗುಜರಾತ್ ನಲ್ಲಿ ಕಾಂಗ್ರೆಸ್ ಶಾಸಕರನ್ನು ವಿಧಾನಸಭೆಯಿಂದ ಹೊರಹಾಕಿದ ವಿಚಾರದ ಕುರಿತು ಪಕ್ಷದ ಮುಖಂಡ ದಿಗ್ವಿಜಯ್ ಸಿಂಗ್ ವ್ಯಂಗ್ಯವಾಡುತ್ತಾ, ಮೋದಿ ಹೈ ತೋ ಮಮ್ಕಿನ್ ಹೈ ಎಂದು ಬಿಜೆಪಿಯ ಚುನಾವಣಾ ಘೋಷಣೆಯನ್ನೇ ಉಲ್ಲೇಖಿಸಿ ಟೀಕಿಸಿದ್ದಾರೆ.

published on : 16th March 2021

ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣದಲ್ಲಿ ಷಡ್ಯಂತ್ರ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಪ್ರಕರಣದಲ್ಲಿ ಮೇಲ್ನೊಟಕ್ಕೆ ಷಡ್ಯಂತ್ರ ನಡೆದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

published on : 4th March 2021

ಸೆಕ್ಸ್ ವಿಡಿಯೋ ಬಗ್ಗೆ ಗೊತ್ತಿಲ್ಲ; ಸಮಗ್ರ ತನಿಖೆ ನಡೆಯಲಿ: ರಮೇಶ್ ಜಾರಕಿಹೊಳಿ

ಯುವತಿಯೊಂದಿಗೆ ರಾಸಲೀಲೆ ವಿಡಿಯೋ ಕುರಿತಂತೆ ಪ್ರತಿಕ್ರಿಯಿಸಿರುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ವಿಡಿಯೋದಲ್ಲಿರುವ ಯುವತಿ ಯಾರು ಎಂಬುದೇ ಗೊತ್ತಿಲ್ಲ. ಇದೆಲ್ಲಾ ಷಡ್ಯಂತ್ರ. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಹೇಳಿದ್ದಾರೆ.

published on : 2nd March 2021

ಕೇಂದ್ರ ಬಜೆಟ್ 2021: ಭಾರತೀಯರ ಆತ್ಮ ವಿಶ್ವಾಸವನ್ನು ಹೆಚ್ಚಿಸಲಿದೆ- ಪ್ರಧಾನಿ ನರೇಂದ್ರ ಮೋದಿ

ಕೊರೋನಾ ಸಾಂಕ್ರಾಮಿಕ ಬಿಕ್ಕಟ್ಟಿನ ನಡುವೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ ಬಜೆಟ್, ಸ್ವಾವಲಂಬನೆ ದೃಷ್ಟಿ ಹೊಂದಿದ್ದು, ಭಾರತೀಯರ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

published on : 1st February 2021

ನಿರುತ್ಸಾಹ, ನಿರಾಶಾದಾಯಕ, ಆತ್ಮ ಬರ್ಬರ ಬಜೆಟ್: ಸಿದ್ದರಾಮಯ್ಯ, ಡಿಕೆಶಿ ಟೀಕೆ

ಕೇಂದ್ರ ಸರ್ಕಾರದ 2021 ನೇ ಸಾಲಿನ ಕೇಂದ್ರ ಬಜೆಟ್ ಯಾವುದೇ ನಿರೀಕ್ಷೆ ಇಲ್ಲದ ಆತ್ಮಬರ್ಬರ ಬಜೆಟ್ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

published on : 1st February 2021

ಈ ಸಾಲಿನ ಕೇಂದ್ರ ಬಜೆಟ್ ಭಾರತದ ಅಭೂತಪೂರ್ವ ಯಶಸ್ಸಿಗೆ ಅಡಿಗಲ್ಲು: ನಳಿನ್ ಕುಮಾರ್ ಕಟೀಲ್

ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ 2021ನೇ ಸಾಲಿನ ಕೇಂದ್ರ ಬಜೆಟ್ ಭಾರತದ ಅಭೂತಪೂರ್ವ ಯಶಸ್ಸಿಗೆ ಅಡಿಗಲ್ಲಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್  ಕುಮಾರ್ ಕಟೀಲ್ ತಿಳಿಸಿದ್ದಾರೆ.

published on : 1st February 2021

ಕೊರೋನಾ ಲಸಿಕೆ: ಅಡ್ಡ ಪರಿಣಾಮಗಳ ಮೇಲೆ ವೈದ್ಯರ ನಿಗಾ!

ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ತುರ್ತು ಬಳಕೆಗೆ ಭಾರತೀಯ ಪ್ರಧಾನ ಔಷದ ನಿಯಂತ್ರಕ ಅನುಮತಿ ನೀಡಿದ ಬೆನ್ನಲ್ಲೇ ದೇಶದಾದ್ಯಂತ ಜನವರಿ 16 ರಿಂದ ಲಸಿಕೆ ವಿತರಣೆ ಮಾಡಲಾಗುತ್ತಿದ್ದು, ಈ ನಡುವಲ್ಲೇ ಲಸಿಕೆಯಿಂದ ಅಡ್ಡ ಪರಿಣಾಮಗಳೇನಾದರೂ ಆದರೆ ಪರಿಸ್ಥಿತಿ ಎದುರಿಸಲು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. 

published on : 12th January 2021

ಕೊರೋನಾಗೆ ಮಾಡರ್ನಾ ಲಸಿಕೆ ಪಡೆದ ವೈದ್ಯರಿಗೆ ಎದುರಾಯ್ತು ಅಲರ್ಜಿ ಸಮಸ್ಯೆ! 

ಜಗತ್ತು ಕೊರೋನಾ ವೈರಸ್ ಗೆ ಲಸಿಕೆಯನ್ನು ಎದುರುನೋಡುತ್ತಿದ್ದು,  ಅಮೆರಿಕಾದಲ್ಲಿ ಮಾಡರ್ನಾ ಲಸಿಕೆಯನ್ನು ಪಡೆದ ಬೋಸ್ಟನ್ ನ ವೈದ್ಯರೊಬ್ಬರಿಗೆ ಅಲರ್ಜಿ ಸಮಸ್ಯೆ ಎದುರಾಗಿದೆ.

published on : 26th December 2020
1 2 > 

ರಾಶಿ ಭವಿಷ್ಯ