• Tag results for Sa ra mahesh

ಆರ್ ಎಸ್ ಎಸ್ ಗೆ ಎಚ್ ಡಿಕೆ ಗುದ್ದು; ಬಿಜೆಪಿಯ ಮೋದಿ ಉತ್ಸವದಲ್ಲಿ ಸಾ.ರಾ. ಮಹೇಶ್ ಭಾಗಿ: ಏನಿದರ ಗುಟ್ಟು!

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರ್ ಎಸ್ ಎಸ್ ವಿರುದ್ಧ ಹರಿಹಾಯುತ್ತಿದ್ದರೇ ಮತ್ತೊಂದೆಡೆ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಎಸ್‌.ಎ. ರಾಮದಾಸ್‌ ಆಯೋಜಿಸಿದ್ದ ಮೋದಿ ಯುಗ ಉತ್ಸವ್‌ ಕಾರ್ಯಕ್ರಮದಲ್ಲಿ ಜೆಡಿಎಸ್‌ ಶಾಸಕ ಸಾ.ರಾ. ಮಹೇಶ್‌ ಪಾಲ್ಗೊಂಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

published on : 7th October 2021

ಸುಳ್ಳು ಆರೋಪ ಮಾಡಿ ತೇಜೋವಧೆಗೆ ಯತ್ನ: ರೋಹಿಣಿ ಸಿಂಧೂರಿ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಸಾರಾ ಮಹೇಶ್ ನಿರ್ಧಾರ

ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿ, ತೇಜೋವಧೆಗೆ ಯತ್ನಿಸಿದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಾಗಿ ಕೆ.ಆರ್‌. ನಗರ ಶಾಸಕ ಸಾ.ರಾ. ಮಹೇಶ್‌ ತಿಳಿಸಿದ್ದಾರೆ.

published on : 25th June 2021

ಮೈಸೂರಿನಲ್ಲಿ ಸಾ.ರಾ.ಮಹೇಶ್ ಒಡೆತನದ ಕಲ್ಯಾಣ ಮಂಟಪ ಸರ್ವೆ ಕಾರ್ಯ: ಸರ್ಕಾರಕ್ಕೆ ಇಂದು ತಂಡ ವರದಿ ಸಲ್ಲಿಕೆ

ರಾಜಕಾಲುವೆ ಮೇಲೆ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಕಲ್ಯಾಣ ಮಂಟಪ ನಿರ್ಮಾಣ ವಿವಾದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಸರ್ವೆ ಕಾರ್ಯ ನಡೆಸಿದ್ದು ಸೋಮವಾರ ವರದಿ ಸಲ್ಲಿಸಲಿದೆ.

published on : 12th June 2021

ರಾಜಕಾಲುವೆ ಒತ್ತುವರಿ ಆರೋಪ ಸಾಬೀತಾಗದಿದ್ರೆ ರೋಹಿಣಿ ಸಿಂಧೂರಿ ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು: ಸಾ.ರಾ. ಮಹೇಶ್

ರಾಜಕಾಲುವೆ ಮೇಲೆ ಕಲ್ಯಾಣ ಮಂಟಪ ಕಟ್ಟಿಸಿದ್ದೇನೆ ಎಂಬ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆರೋಪವನ್ನು ಸಾಬೀತುಪಡಿಸಲಿ, ತನಿಖಾಧಿಕಾರಿಯನ್ನಾಗಿ ಸರ್ಕಾರ ಅವರನ್ನೇ ಬೇಕಾದರೆ ನೇಮಿಸಲಿ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ತಿರುಗೇಟು ನೀಡಿದ್ದಾರೆ.

published on : 10th June 2021

'ರೋಹಿಣಿ ಸಿಂಧೂರಿಯವರನ್ನು ವರ್ಗಾವಣೆ ಮಾಡುವ ಬದಲು ಸರ್ಕಾರ ಅಮಾನತು ಮಾಡಬೇಕಿತ್ತು': ಶಾಸಕ ಸಾ.ರಾ. ಮಹೇಶ್ 

ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳ ಬಹಿರಂಗ ಕಿತ್ತಾಟದ ನಂತರ ಅವರನ್ನು ವರ್ಗಾವಣೆ ಮಾಡಿದರೂ ಹಿಂದಿನ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರ ಮೇಲೆ ಆರೋಪಗಳು ನಿಲ್ಲುತ್ತಲೇ ಇಲ್ಲ.

published on : 9th June 2021

ಚಾಮರಾಜನಗರ ದುರಂತ: ಮೈಸೂರು ಡಿಸಿ ವಿರುದ್ಧ ಹರಿಹಾಯ್ದ ಸಾರಾ ಮಹೇಶ್

ಚಾಮರಾಜನಗರದಲ್ಲಿ ನಡೆದ ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರು ಮಂಗಳವಾರ ಹರಿಹಾಯ್ದಿದ್ದಾರೆ.

published on : 5th May 2021

ಜಿಲ್ಲಾ ಉಸ್ತುವಾರಿ ಸಚಿವ ಬದುಕಿದ್ದಾರಾ? ಜಿಲ್ಲಾಡಳಿತ ಸತ್ತುಹೋಗಿದೆಯೇ?: ಸಾ.ರಾ. ಮಹೇಶ್

ಮೈಸೂರು ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ವಿರುದ್ಧ ಶಾಸಕ ಸಾ.ರಾ. ಮಹೇಶ್‌ ತೀವ್ರ ವಾಗ್ದಾಳಿ ನಡೆಸಿದ್ದಾರೆ. 

published on : 29th April 2021

'ಸಮಾಜದ ಡೊಂಕು ಪ್ರಶ್ನಿಸಿದವರು ತಮ್ಮ ಕುಟುಂಬದ ದೃಷ್ಟಿಯಲ್ಲಿ ದೊಡ್ಡವರಾದರೋ? ಸಣ್ಣವರಾದರೋ?' 

ಸಿಡಿ ವಿಚಾರವಾಗಿ ರಾಜಕೀಯ ನಾಯಕರ ನಡುವೆ ನಡೆಯುತ್ತಿರುವ ವಾಗ್ಯುದ್ಧಕ್ಕೆ ಜೆಡಿಎಸ್‌ ಮುಖಂಡರ ಸಾ.ರಾ. ಮಹೇಶ್‌ ಬೇಸರ ವ್ಯಕ್ತಪಡಿಸಿದ್ದಾರೆ.

published on : 25th March 2021

ಶಕುನಿ ಮಾತು ಕೇಳಿ ಹೆಚ್​.ಡಿ. ಕುಮಾರಸ್ವಾಮಿ ಜೆಡಿಎಸ್​​ ಸರ್ವನಾಶ ಮಾಡುತ್ತಿದ್ದಾರೆ: ಜಿ.ಟಿ. ದೇವೇಗೌಡ

ಮಹಾಭಾರತದಲ್ಲಿ ಶಕುನಿಯಿಂದ ಕೌರವರ ಸಂತತಿ ಸರ್ವ ನಾಶವಾಯಿತು, ಇದೀಗ ಮೈಸೂರಿನಲ್ಲೂ ಶಕುನಿ, ಮಂಥರೆಯ ಮಾತು ಕೇಳುತ್ತಿರುವ ಕುಮಾರಸ್ವಾಮಿ ಜೆಡಿಎಸ್ ಅನ್ನು ಸರ್ವನಾಶ ಮಾಡಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಜಿಟಿ ದೇವೇಗೌಡ ಆರೋಪಿಸಿದ್ದಾರೆ.

published on : 15th March 2021

'ಎಲ್ಲೂ ನಿಯತ್ತಾಗಿ ಇರದ ವಿಶ್ವನಾಥ್ ಕೋಗಿಲೆ ಅಲ್ಲ ಕಾಗೆ; ಅವರಿಗೆ ದೈಹಿಕ, ಮಾನಸಿಕ ಸ್ಟ್ರೋಕ್ ಆಗಿದೆ'

ವಿಶ್ವನಾಥ್ ಎಲ್ಲೂ ನಿಯತ್ತಾಗಿ ಇರುವುದಿಲ್ಲ. ವಿಶ್ವನಾಥ್ ಕೋಗಿಲೆ ಅಲ್ಲ ಕಾಗೆ. ಅವರ ವೈಯಕ್ತಿಕ ಇಚ್ಚೆಗಳು ಈಡೇರದೇ ಹೋದರೆ ಎಲ್ಲರಿಗೂ ಬಯ್ಯುತ್ತಾರೆ. ದೈಹಿಕ, ಮಾನಸಿಕ ಸ್ಟ್ರೋಕ್ ಆಗಿರೋದು ವಿಶ್ವನಾಥ್ ಗೆ, ಯಡಿಯೂರಪ್ಪ ಅವರಿಗಲ್ಲ ಎಂದು ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ವಾಗ್ದಾಳಿ ನಡೆಸಿದ್ದಾರೆ.

published on : 15th January 2021

ರೋಹಿಣಿ ಸಿಂಧೂರಿ ವರ್ತನೆ ಅಕ್ಷಮ್ಯ, ಖಂಡನೀಯ: ಸಾ.ರಾ. ಮಹೇಶ್

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವರ್ತನೆ ಅಕ್ಷಮ್ಯ ಮತ್ತು ಖಂಡನೀಯ. ತಾವೊಬ್ಬ ಅತ್ಯಂತ ಪ್ರಾಮಾಣಿಕ ಅಧಿಕಾರಿ ಎಂದು ಬಿಂಬಿಸಿಕೊಳ್ಳುತ್ತಿರುವ ಇವರು ಜನಪ್ರತಿನಿಧಿಗಳ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ...

published on : 13th January 2021

ಸಾ.ರಾ. ಮಹೇಶ್- ರೋಹಿಣಿ ಸಿಂಧೂರಿ ನಡುವೆ ಮುಂದುವರಿದ ಶೀತಲ ಸಮರ: ಬಹಿರಂಗ ಜಟಾಪಟಿ

ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಮತ್ತು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಮುಸುಕಿನ ಗುದ್ದಾಟ ಮುಂದುವರಿದಿದೆ.

published on : 13th January 2021

'ಸಿದ್ದರಾಮಯ್ಯ ಸೋಲಿಸಿದ ದೇವೇಗೌಡರನ್ನು ಏಕೆ ಉಚ್ಚಾಟಿಸಲಿ: ಮುಂದಿನ ಚುನಾವಣೆಯಲ್ಲಿ ಅಪ್ಪ ಮಗ ಇಬ್ಬರು ಸ್ಪರ್ಧೆ'

ಜಿ.ಟಿ.ದೇವೇಗೌಡರೇ ನಮ್ಮ ನಾಯಕರು. ಮುಂದಿನ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡರೇ ಮೈಸೂರು ಭಾಗದ ನಾಯಕತ್ವ ವಹಿಸಿಕೊಳ್ಳುತ್ತಾರೆ. ಅವರಷ್ಟೇ ಅಲ್ಲ,  ಅವರ ಮಗ ಕೂಡ ಜೆಡಿಎಸ್ ನಿಂದ ಸ್ಪರ್ಧೆ ಮಾಡುತ್ತಾರೆ. ಅಪ್ಪ-ಮಗ ಇಬ್ಬರೂ ಜೆಡಿಎಸ್​ ಪಕ್ಷದಿಂದಲೇ ಚುನಾವಣೆಗೆ ನಿಲ್ಲುತ್ತಾರೆ.

published on : 9th January 2021

 ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯಿಂದ ಬಹುಕೋಟಿ ಹಣ ದುರ್ಬಳಕೆ: ಸಾ.ರಾ ಮಹೇಶ್ ಆರೋಪ

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಬಹುಕೋಟಿ ಹಣ ದುರ್ಬಳಕೆ ಮಾಡಿದ್ದಾರೆ ಎಂದು ಶಾಸಕ ಸಾ.ರಾ. ಮಹೇಶ್ ಗಂಭೀರ ಆರೋಪ ಮಾಡಿದ್ದಾರೆ.

published on : 2nd October 2020

ರಾಶಿ ಭವಿಷ್ಯ