- Tag results for Sachin Pilot
![]() | ನಾವು ಪಕ್ಷದ ಸಿದ್ಧಾಂತವನ್ನು ಬಲಪಡಿಸುತ್ತೇವೆ, ಅದನ್ನು ಜನರ ಬಳಿಗೆ ಕೊಂಡೊಯ್ಯುತ್ತೇವೆ: ಸಿಡಬ್ಲ್ಯುಸಿ ಪುನರ್ ರಚನೆ ಬಳಿಕ ಸಚಿನ್ ಪೈಲಟ್ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು (ಸಿಡಬ್ಲ್ಯುಸಿ) ಪುನರ್ ರಚಿಸಿದ್ದು, ಸಮಿತಿಯಲ್ಲಿ ತಮ್ಮನ್ನು ಸದಸ್ಯರನ್ನಾಗಿ ಮಾಡಿದ್ದಕ್ಕೆ ಪಕ್ಷದ ಉನ್ನತ ನಾಯಕತ್ವಕ್ಕೆ ರಾಜಸ್ಥಾನದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಭಾನುವಾರ ಕೃತಜ್ಞತೆ ಸಲ್ಲಿಸಿದ್ದಾರೆ. |
![]() | ನನ್ನ ತಂದೆ ಬಾಂಬ್ ಹಾಕಿರುವುದು ನಿಜ, ಆದರೆ...: ಬಿಜೆಪಿ ಟ್ವೀಟ್ ಗೆ ಸಚಿನ್ ಪೈಲಟ್ ಸ್ಪಷ್ಟನೆಮಿಝೋರಾಂನಲ್ಲಿ 1966ರ ಮಾರ್ಚ್ ನಲ್ಲಿ ತನ್ನ ತಂದೆ ರಾಜೇಶ್ ಪೈಲಟ್ ವಾಯುಪಡೆಯ ಪೈಲಟ್ ಆಗಿ ಬಾಂಬ್ ಗಳನ್ನು ಹಾಕಿದ್ದಾರೆ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಹೇಳಿಕೆಗೆ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಮಂಗಳವಾರ ದಾಖಲೆ ಸಮೇತ ತಿರುಗೇಟು ನೀಡಿದ್ದಾರೆ. |
![]() | ಮಣಿಪುರ ಹಿಂಸಾಚಾರ: ಪ್ರಧಾನಿ ನರೇಂದ್ರ ಮೋದಿ ಮೌನ ಪ್ರಶ್ನಿಸಿದ ಸಚಿನ್ ಪೈಲಟ್ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಮಣಿಪುರ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮೌನವನ್ನು ಪ್ರಶ್ನಿಸಿದ್ದಾರೆ ಮತ್ತು ಹಿಂಸಾಚಾರವನ್ನು ತಗ್ಗಿಸುವ ವಿಚಾರದಲ್ಲಿ ಕೇಂದ್ರ ಸರ್ಕಾರವು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. |
![]() | ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ನೇತೃತ್ವದ ಕೇಂದ್ರದಿಂದ UCC ಎಂಬ ಗೂಗ್ಲಿ: ಸಚಿನ್ ಪೈಲಟ್ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ವಾಗ್ದಾಳಿ ನಡೆಸಿದ್ದು, ಪ್ರಮುಖ ವಿಷಯಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸರ್ಕಾರ ಏಕರೂಪ ನಾಗರಿಕ ಸಂಹಿತೆಯ ವಿಷಯವನ್ನು ಎತ್ತಿದೆ ಎಂದು ಹೇಳಿದ್ದಾರೆ. |
![]() | ಕಾಂಗ್ರೆಸ್ ನನ್ನ ಸಮಸ್ಯೆ ಗಮನಿಸಿದೆ, ಒಗ್ಗಟ್ಟಿನಿಂದ ಚುನಾವಣೆ ಎದುರಿಸುತ್ತೇವೆ: ಸಚಿನ್ ಪೈಲಟ್ಕಾಂಗ್ರೆಸ್ ನನ್ನ ಸಮಸ್ಯೆಗಳನ್ನು ಗಮನಿಸಿದೆ ಎಂದು ಗುರುವಾರ ಸಂತಸ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು, ಒಗ್ಗಟ್ಟಿನಿಂದ ವಿಧಾನಸಭೆ ಚುನಾವಣೆ ಎದುರಿಸುವ ಮೂಲಕ ಪಕ್ಷ ಭರ್ಜರಿ ಗೆಲುವು ಸಾಧಿಸಲಿದೆ ಎಂದು ಹೇಳಿದ್ದಾರೆ. |
![]() | ಸಚಿನ್ ಪೈಲಟ್ ರಿಂದ ಹೊಸ ಪಕ್ಷ ಸ್ಥಾಪನೆ? ಕಾಂಗ್ರೆಸ್ ಹೇಳಿದ್ದೇನು?ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ಜೂನ್ 11 ರಂದು ತಮ್ಮ ತಂದೆ ರಾಜೇಶ್ ಪೈಲಟ್ ಅವರ ಪುಣ್ಯತಿಥಿಯಂದು ಹೊಸ ರಾಜಕೀಯ ಪಕ್ಷ... |
![]() | ಸಚಿನ್ ಪೈಲಟ್ ಜೊತೆಗಿನ ಹೊಂದಾಣಿಕೆ ಶಾಶ್ವತ: ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಭೆಯ ನಂತರ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮೊದಲ ಬಾರಿಗೆ ಪ್ರತಿಕ್ರಿಯಿಸಿ, 'ಸಚಿನ್ ಪೈಲಟ್ ಜೊತೆಗಿನ ಹೊಂದಾಣಿಕೆ ಶಾಶ್ವತ' ಎಂದು ಹೇಳಿದ್ದಾರೆ. |
![]() | ರಾಜಸ್ತಾನದಲ್ಲಿ ಸಚಿನ್ ಪೈಲಟ್ ಹೊಸ ಪಕ್ಷ ಸ್ಥಾಪನೆ ಅಥವಾ ಬಿಜೆಪಿ ಸೇರ್ಪಡೆ? ಕುತೂಹಲಕ್ಕೆ ಜೂನ್ 11ಕ್ಕೆ ತೆರೆ?ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರ ಮುಂದಿನ ನಡೆಯ ಬಗ್ಗೆ ಊಹಾಪೋಹಗಳ ನಡುವೆ, ಅವರ ನಿಕಟವರ್ತಿಗಳು ಹೇಳುವ ಪ್ರಕಾರ, ಹಿಂದಿನ ವಸುಂಧರಾ ರಾಜೆ ಸರ್ಕಾರದ ಅವಧಿಯಲ್ಲಿ ಆಪಾದಿತ ಭ್ರಷ್ಟಾಚಾರದ ವಿರುದ್ಧ ಕ್ರಮ ಸೇರಿದಂತೆ ತಮ್ಮ ಬೇಡಿಕೆಗಳ ಬಗ್ಗೆ ದೃಢವಾಗಿದ್ದಾರೆ. |
![]() | ಕರ್ನಾಟಕದಲ್ಲಿನ ಕಾಂಗ್ರೆಸ್ ಸರ್ಕಾರ ಜನರಿಗಾಗಿ ಕೆಲಸ ಮಾಡುತ್ತದೆ: ಸಚಿನ್ ಪೈಲಟ್ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ನಂತರ ಪಕ್ಷದ ನಾಯಕ ಸಚಿನ್ ಪೈಲಟ್ ಭಾನುವಾರ, ಪಕ್ಷವು ಜನರಿಗಾಗಿ ಕೆಲಸ ಮಾಡುತ್ತದೆ ಮತ್ತು ನಿರೀಕ್ಷೆಗಳನ್ನು ಈಡೇರಿಸುತ್ತದೆ ಎಂದು ಹೇಳಿದ್ದಾರೆ. |
![]() | ನವದೆಹಲಿ: ಕುಸ್ತಿಪಟುಗಳ ಪ್ರತಿಭಟನಾ ಸ್ಥಳಕ್ಕೆ ಸಚಿನ್ ಪೈಲಟ್ ಭೇಟಿ, ಬೆಂಬಲಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ಭೇಟಿಯಾದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಬೆಂಬಲ ಸೂಚಿಸಿದ್ದಾರೆ. |
![]() | ರಾಜಸ್ಥಾನದಲ್ಲಿ ಸಚಿನ್ ಪೈಲಟ್, ಅಶೋಕ್ ಗೆಹ್ಲೋಟ್ ಬೆಂಬಲಿಗರ ಬಡಿದಾಟ!ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಅವರ ವಿರೋಧಿ ಬಣದಲ್ಲಿರುವ ಸಚಿನ್ ಪೈಲಟ್ ಬೆಂಬಲಿಗರ ನಡುವೆ ಘರ್ಷಣೆ ಉಂಟಾಗಿದೆ. |
![]() | ಕರ್ನಾಟಕದೊಂದಿಗೆ ರಾಜಸ್ಥಾನ ಹೋಲಿಸಿದ ಸಚಿನ್ ಪೈಲಟ್, ಭ್ರಷ್ಟಾಚಾರ ಕುರಿತ ಭರವಸೆ ಈಡೇರಿಸುವಂತೆ ಒತ್ತಾಯರಾಜಸ್ಥಾನ ಕಾಂಗ್ರೆಸ್ ಹಿರಿಯ ಮುಖಂಡ ಸಚಿನ್ ಪೈಲಟ್, ಕರ್ನಾಟಕದಲ್ಲಿನ ಪಕ್ಷದ ಗೆಲುವನ್ನು ಉಲ್ಲೇಖಿಸುವ ಮೂಲಕ ಹಿಂದಿನ ಬಿಜೆಪಿ ಆಡಳಿತದಲ್ಲಿ ನಡೆರುವ ಭ್ರಷ್ಟಾಚಾರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರವನ್ನು ಒತ್ತಾಯಿಸಿದ್ದಾರೆ. |
![]() | ಕಾಂಗ್ರೆಸ್‌ನ '40 ಪರ್ಸೆಂಟ್ ಸರ್ಕಾರ' ಘೋಷಣೆಯನ್ನು ಜನರು ಒಪ್ಪಿಕೊಂಡಿದ್ದಾರೆ: ಸಚಿನ್ ಪೈಲಟ್ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯ ಮತ ಎಣಿಕೆ ಬಿರುಸಿನಿಂದ ಸಾಗುತ್ತಿದ್ದು, ಕಾಂಗ್ರೆಸ್ ಪಕ್ಷ ಎಲ್ಲೆಡೆ ಉತ್ತಮ ಮುನ್ನಡೆ ಕಾಯ್ದುಕೊಂಡಿದೆ. ಆರಂಭಿಕ ಮುನ್ನಡೆ ಕಾಯ್ದುಕೊಂಡಿರುವ ಕಾಂಗ್ರೆಸ್, ಸರಳ ಬಹುಮತದತ್ತ ಸಾಗುತ್ತಿದೆ. |
![]() | ರಾಜಸ್ಥಾನ: ಭ್ರಷ್ಟಾಚಾರ, ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ; ಸರ್ಕಾರದ ವಿರುದ್ಧ ಸಚಿನ್ ಪೈಲಟ್ 'ಜನ ಸಂಘರ್ಷ' ಯಾತ್ರೆ ಆರಂಭರಾಜಸ್ಥಾನದಲ್ಲಿನ ಭ್ರಷ್ಟಾಚಾರ ಹಾಗೂ ಶಿಕ್ಷಕರ ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರ ಮುಂದಿಟ್ಟುಕೊಂಡು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಕಾಂಗ್ರೆಸ್ ವರಿಷ್ಠರ ಮೇಲೆ ಒತ್ತಡ ಹೇರಲು ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಜನ ಸಂಘರ್ಷ ಯಾತ್ರೆ ಆರಂಭಿಸಿದ್ದಾರೆ. |
![]() | 'ಅಶೋಕ್ ಗೆಹ್ಲೊಟ್ ಅವರ ನಾಯಕಿ ವಸುಂಧರಾ ರಾಜೆ ಎಂದು ಕಾಣುತ್ತದೆ': ಸಚಿನ್ ಪೈಲಟ್ ಟಾಂಗ್ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರು ಮಂಗಳವಾರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಮತ್ತೊಮ್ಮೆ ಹರಿಹಾಯ್ದಿದ್ದಾರೆ, ಅಶೋಕ್ ಗೆಹ್ಲೊಟ್ ಅವರು ಧೋಲ್‌ಪುರದಲ್ಲಿ ಮಾಡಿದ ಭಾಷಣವನ್ನು ನೋಡಿದಾಗ ಅವರ ನಾಯಕಿ "ಸೋನಿಯಾ ಗಾಂಧಿ ಅಲ್ಲ ಆದರೆ ವಸುಂಧರಾ ರಾಜೇ ಸಿಂಧಿಯಾ" ಎಂದು ತೋರಿಸುತ್ತದೆ ಎಂದು ಟೀಕಿಸಿದ್ದಾರೆ. |