• Tag results for Sachin pilot

'ನಾಗ್ಪುರದಲ್ಲಿ ಅರ್ಧ ಪ್ಯಾಂಟ್ ಧರಿಸಿ ನಿಂತು ಮಾತನಾಡುವುದು ರಾಷ್ಟ್ರೀಯತೆಯಲ್ಲ'

ಅರ್ಧ ಪ್ಯಾಂಟ್ ಧರಿಸಿ ನಾಗ್ಪುರದಲ್ಲಿ ನಿಂತುಕೊಂಡು ಫೋನ್‌ನಲ್ಲಿ ಭಾಷಣಗಳನ್ನು ಮಾಡುವುದು ರಾಷ್ಟ್ರೀಯತೆಯಲ್ಲ, ಬದಲಾಗಿ ರೈತರ ಕಲ್ಯಾಣ ಯೋಜನೆಗಳ ಬಗ್ಗೆ ಮಾತಾಡಬೇಕು ಎಂದು ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಟೀಕಿಸಿದ್ದಾರೆ.

published on : 4th January 2021

ರೈತರ ಬೇಡಿಕೆಗಳನ್ನು ತಕ್ಷಣದಿಂದ ಜಾರಿಗೊಳಿಸಿ: ಕೇಂದ್ರಕ್ಕೆ ಸಚಿನ್ ಪೈಲಟ್ ಒತ್ತಾಯ

ದೆಹಲಿಯ ಹೊರಗೆ ಪ್ರತಿಭಟನೆ ನಡೆಸಿರುವ ರೈತರ ಬೇಡಿಕೆಗಳನ್ನು ತಕ್ಷಣದಿಂದ ಜಾರಿಗೆ ತರಬೇಕು ಎಂದು ಕಾಂಗ್ರೆಸ್ ಮುಖಂಡ ಮತ್ತು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಗುರುವಾರ ಕೇಂದ್ರವನ್ನು ಒತ್ತಾಯಿಸಿದ್ದಾರೆ. 

published on : 10th December 2020

ಸಚಿನ್ ಪೈಲಟ್ ಮಾಧ್ಯಮ ಮ್ಯಾನೇಜರ್, ಪತ್ರಕರ್ತನ ವಿರುದ್ಧದ ಕೇಸ್ ಮುಚ್ಚಿಹಾಕಿದ ಪೊಲೀಸರು

ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಸಚಿನ್ ಪೈಲಟ್ ಮಾಧ್ಯಮ ಮ್ಯಾನೇಜರ್ ಮತ್ತು ರಾಷ್ಟ್ರೀಯ ಸುದ್ದಿ ವಾಹಿನಿಯೊಂದರ ಪತ್ರಕರ್ತನ ವಿರುದ್ಧದ ಕೇಸ್ ನ್ನು ಪೊಲೀಸರು ಮುಚ್ಚಿ ಹಾಕಿದ್ದಾರೆ. ಅವರ ವಿರುದ್ಧ ಯಾವುದೇ ಸಾಕ್ಷ್ಯಧಾರ ಇಲ್ಲ ಎಂದು ಅಂತಿಮ ವರದಿಯನ್ನು ಸಲ್ಲಿಸಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

published on : 6th December 2020

ಯಾವ ಪಕ್ಷ ಸೇರಬೇಕೆಂದು ನಿರ್ಧರಿಸಲು ಪ್ರತಿಯೊಬ್ಬರು ಸ್ವತಂತ್ರರು: ಸಚಿನ್ ಪೈಲಟ್

ಯಾವ ಪಕ್ಷ ಸೇರಬೇಕು ಎಂಬುದನ್ನು ನಿರ್ಧರಿಸಲು ಪ್ರತಿಯೊಬ್ಬರು ಸ್ವತಂತ್ರ್ಯರಾಗಿರುತ್ತಾರೆ, ಹಾಗೇಯೇ ಯಾವುದು ತಪ್ಪು ಮತ್ತು ಯಾವುದು ಸರಿ ಎಂಬುದನ್ನು ನಿರ್ಧರಿಸುತ್ತಾರೆ ಎಂದು ಮಾಜಿ ಡಿಸಿಎಂ ಹಾಗೂ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಹೇಳಿದ್ದಾರೆ.

published on : 28th October 2020

ಮಧ್ಯಪ್ರದೇಶ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರ ಸಚಿನ್ ಪೈಲಟ್ ಪ್ರಚಾರ

ರಾಜಸ್ಥಾನದ ಸರ್ಕಾರ ಅಸ್ಥಿರ ಪ್ರಹಸನದಲ್ಲಿ ದೇಶದ ಗಮನ ಸೆಳೆದಿದ್ದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಮಧ್ಯಪ್ರದೇಶದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರ ನಡೆಸಲಿದ್ದಾರೆ. 

published on : 20th September 2020

ರಕ್ಷಣೆಗಾಗಿ ಬಲಿಷ್ಠ ಸೈನಿಕನನ್ನು ಗಡಿಗೆ ಕಳಿಸುತ್ತಾರೆ: ಬದಲಾದ ಆಸನದ ಕುರಿತು 'ರೆಬೆಲ್' ಕೈ ನಾಯಕ ಸಚಿನ್ ಪೈಲಟ್ ಸ್ವಾರಸ್ಯಕರ ಹೇಳಿಕೆ

ರಾಜಸ್ಥಾನ ವಿಧಾನಸಭೆಯ ವಿಶೇಷ ಅಧಿವೇಶನ ಆರಂಭವಾಗಿದ್ದು, ಕಾಂಗ್ರೆಸ್ ಬಂಡಾಯಗಾರ ಸಚಿನ್ ಪೈಲಟ್ ಅವರಿಗೆ ಬದಲಾದ ಆಸನವು ಚರ್ಚೆಯ ವಿಷಯವಾಯಿತು.

published on : 14th August 2020

ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟಿಗೆ ತೆರೆ: ತಿಂಗಳ ನಂತರ ಸಿಎಂ ಗೆಹ್ಲೋಟ್, ಪದಚ್ಯುತ ಡಿಸಿಎಂ ಸಚಿನ್ ಪೈಲಟ್ ಮುಖಾಮುಖಿ

ರಾಜಸ್ಥಾನ ಸರ್ಕಾರದ ವಿರುದ್ಧ ಬಂಡೆದಿದ್ದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಗುರುವಾರ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿಯಾದರು, 

published on : 13th August 2020

ನನ್ನ ಹಾಗೂ ಬಂಡಾಯ ಶಾಸಕರ ಸಮಸ್ಯೆ ಆಲಿಸಿದ ಸೋನಿಯಾ ಗಾಂಧಿಗೆ ಧನ್ಯವಾದಗಳು: ಸಚಿನ್ ಪೈಲಟ್

ನನ್ನ ಹಾಗೂ ಬಂಡಾಯ ಶಾಸಕರ ಸಮಸ್ಯೆಗಳನ್ನು ಆಲಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಹಾಗೂ ಪಕ್ಷದ ನಾಯಕಿ, ನಾಯಕರಾದ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿಯವರಿಗೆ ಧನ್ಯವಾದಗಳು ಎಂದು ರಾಜಸ್ಥಾನದ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಮಂಗಳವಾರ ಹೇಳಿದ್ದಾರೆ. 

published on : 11th August 2020

ಸುಖಾಂತ್ಯದತ್ತ ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ಬಂಡಾಯ ನಾಯಕ ಸಚಿನ್ ಪೈಲಟ್ ಮತ್ತೆ 'ಕೈ'ವಶ

ಅಶೋಕ್ ಗೆಹ್ಲೋಟ್ ನೇತೃತ್ವದ ರಾಜ್ಯಸ್ಥಾನದ ಕಾಂಗ್ರೆಸ್ ಸರ್ಕಾರದ ವಿರುದ್ಧ ತಿಂಗಳ ಹಿಂದೆ ಬಂಡಾಯ ಸಾರುವ ಮೂಲಕ ಉಪ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡು, ಪಕ್ಷದಿಂದಲೇ ಉಚ್ಚಾಟನೆಗೊಂಡಿದ್ದ ಸಚಿನ್ ಪೈಲಟ್ ಅವರು ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಾಳಯಕ್ಕೆ ಮರಳಲು ಮುಂದಾಗಿದ್ದಾರೆ. 

published on : 11th August 2020

ರಾಜಸ್ಥಾನ ರಾಜಕೀಯ ಬಿಕ್ಕಟ್ಟು: ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ ಭೇಟಿ ಮಾಡಿದ ರೆಬೆಲ್ ನಾಯಕ ಸಚಿನ್ ಪೈಲಟ್!

ಪ್ರಮುಖ ಬೆಳವಣಿಗೆಯಲ್ಲಿ ರಾಜಸ್ಥಾನ ಕಾಂಗ್ರೆಸ್ ನಲ್ಲಿ ರೆಬೆಲ್ ನಾಯಕರಾಗಿ ಗುರುತಿಸಿಕೊಂಡಿದ್ದ ಸಚಿನ್ ಪೈಲಟ್ ಇಂದು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ವಾದ್ರಾರನ್ನು ಭೇಟಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

published on : 10th August 2020

ಸಚಿನ್ ಪೈಲಟ್ ಗೆ ಕಾಂಗ್ರೆಸ್ ನಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಬೆಂಬಲವಿದೆ: ಗೆಹ್ಲೂಟ್ ಕ್ಯಾಂಪ್ ಶಾಸಕನ ಹೇಳಿಕೆ

ಕಾಂಗ್ರೆಸ್ ನ ರೆಬೆಲ್ ನಾಯಕ ಸಚಿನ್ ಪೈಲಟ್ ಅವರಿಗೆ ಅವರ ನಿರೀಕ್ಷೆಗಿಂತಲೂ ಹೆಚ್ಚಿನ ಶಾಸಕರ ಬೆಂಬಲವಿದೆ ಎಂದು ಸಿಎಂ ಅಶೋಕ್ ಗೆಹ್ಲೂಟ್ ಕ್ಯಾಂಪ್ ನಲ್ಲಿರುವ ಶಾಸಕರೊಬ್ಬರು ಹೇಳಿದ್ದಾರೆ.

published on : 7th August 2020

ರಾಜಸ್ತಾನ: ಮುಖ್ಯ ಸಚೇತಕರಿಗೆ ಪತ್ರ ಬರೆದ ಸಚಿನ್ ಪೈಲಟ್, ಗೆಹ್ಲೋಟ್ ಸರ್ಕಾರಕ್ಕೆ ಬಹುಮತವಿಲ್ಲ ಎಂದ ಬಿಜೆಪಿ

ಕಳೆದ 15-20 ದಿನಗಳಿಂದ ನಡೆಯುತ್ತಿದ್ದ ರಾಜಸ್ತಾನ ರಾಜಕೀಯ ಹೈಡ್ರಾಮಾ ಇದೀಗ ಒಂದು ಹಂತಕ್ಕೆ ತಲುಪಿದ್ದು ಬಂಡಾಯ ನಾಯಕ ಸಚಿನ್ ಪೈಲಟ್ ಪಕ್ಷದ ಮುಖ್ಯ ಸಚೇತಕ ಮಹೇಶ್ ಜೋಶಿಯವರಿಗೆ ಬರೆದಿದ್ದಾರೆ.

published on : 2nd August 2020

ವಿಧಾನಸಭೆ ಅಧಿವೇಶನ ಪ್ರಸ್ತಾಪವನ್ನು ಮತ್ತೆ ತಿರಸ್ಕರಿಸಿದ ರಾಜಸ್ಥಾನ ರಾಜ್ಯಪಾಲ, ರಾಜಭವನಕ್ಕೆ ಗೆಹ್ಲೋಟ್ ಭೇಟಿ

ವಿಧಾನಸಭೆ ಅಧಿವೇಶನ ಕರೆಯುವ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಮೂರನೇ ಬಾರಿಗೆ ಹಿಂದಿರುಗಿಸಿರುವ ರಾಜಸ್ಥಾನ ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರನ್ನು ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ರಾಜಭವನದಲ್ಲಿ ಭೇಟಿಯಾಗಿದ್ದಾರೆ.

published on : 29th July 2020

ರಾಜಸ್ತಾನ ರಾಜಕೀಯ ಬಿಕ್ಕಟ್ಟು: ರಾಷ್ಟ್ರಪತಿಗೆ ಪತ್ರ ಬರೆದಿದ್ದೇನೆ, 'ಕೈ' ಶಾಸಕರಿಗೆ ಸಿಎಂ ಗೆಹ್ಲೋಟ್ ಭರವಸೆ!

ರಾಜಸ್ತಾನ ರಾಜಕೀಯ ಪರಿಸ್ಥಿತಿ ಕುರಿತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮ್ಮ ಪಕ್ಷದ ಶಾಸಕರಿಗೆ ತಿಳಿಸಿದ್ದಾರೆ. 

published on : 27th July 2020

ಸಚಿನ್ ಪೈಲಟ್ ಬಣ ಸದ್ಯಕ್ಕೆ ಸೇಫ್: ಯಥಾಸ್ಥಿತಿ ಕಾಯ್ದುಕೊಳ್ಳಲು ರಾಜಸ್ತಾನ ಹೈಕೋರ್ಟ್ ಆದೇಶ

ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ಇತರ 18 ಮಂದಿ ಬಂಡಾಯ ಶಾಸಕರ ವಿರುದ್ಧ ಸದ್ಯಕ್ಕೆ ಯಾವುದೇ ಕ್ರಮ ಕೈಗೊಳ್ಳದೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ರಾಜಸ್ತಾನ ಹೈಕೋರ್ಟ್ ಶುಕ್ರವಾರ ಸ್ಪೀಕರ್ ಗೆ ಆದೇಶ ನೀಡಿದೆ.

published on : 24th July 2020
1 2 3 >