social_icon
  • Tag results for Sandalwood

ಅನೀಶ್ ನಟನೆಯ 'ಮಾಯಾನಗರಿ' ಚಿತ್ರದಲ್ಲಿ ಹಿರಿಯ ನಟ ದ್ವಾರಕೀಶ್ ಪ್ರಮುಖ ಪಾತ್ರ!

ಶಂಕರ್ ಆರಾಧ್ಯ ನಿರ್ದೇಶನದ ಮಾಯಾನಗರಿ ಚಿತ್ರತಂಡ ಇತ್ತೀಚೆಗಷ್ಟೇ ಚಿತ್ರದ ಎರಡನೇ ಹಾಡನ್ನು ಬಿಡುಗಡೆ ಮಾಡಿದೆ. ಅನೀಶ್ ಮತ್ತು ಶ್ರಾವ್ಯಾ ರಾವ್ ನಟನೆಯ ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಮತ್ತು ನಟ ದ್ವಾರಕೀಶ್ ಅವರು ನಿರ್ಣಾಯಕ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಚಿತ್ರತಂಡ ಬಹಿರಂಗಪಡಿಸಿದೆ.

published on : 21st November 2023

ಸಾರ್ವಜನಿಕವಾಗಿ ಲಾಂಗ್ ಹಿಡಿದು ದರ್ಶನ್ ಪೋಸ್! ಮತ್ತೆ ವಿವಾದ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾರ್ವಜನಿಕವಾಗಿ ಲಾಂಗ್ ಹಿಡಿಯುವ ಮೂಲಕ ಇದೀಗ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಇತ್ತೀಚಿಗೆ ಜಯನಗರದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ದರ್ಶನ್ ಲಾಂಗ್ ಹಿಡಿದುಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. 

published on : 20th November 2023

ಈಶ್ವರ್ ಕಾರ್ತಿಕ್ ನಿರ್ದೇಶನದ ಬಹುಭಾಷಾ ಚಿತ್ರ 'ಜೀಬ್ರಾ' ಚಿತ್ರೀಕರಣ ಮುಗಿಸಿದ ನಟ ಡಾಲಿ ಧನಂಜಯ್!

ನಟ ಧನಂಜಯ್ ಮತ್ತು ಸತ್ಯದೇವ್ ಅಭಿನಯದ ಈಶ್ವರ್ ಕಾರ್ತಿಕ್ ನಿರ್ದೇಶನದ ಮುಂಬರುವ ಚಿತ್ರ 'ಜೀಬ್ರಾ'ದ ಚಿತ್ರೀಕರಣ ಪೂರ್ಣಗೊಂಡಿದೆ. ಚಿತ್ರದ ಮೊದಲ ಕೆಲವು ಸ್ಟಿಲ್‌ಗಳನ್ನು ಚಿತ್ರತಂಡ ಹಂಚಿಕೊಂಡಿದ್ದಾರೆ. ಬಹು ನಿರೀಕ್ಷಿತ ಚಿತ್ರ ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಬಿಡುಗಡೆಗೆ ಸಜ್ಜಾಗುತ್ತಿದೆ. 

published on : 20th November 2023

ಧನಂಜಯ್-ರಮ್ಯಾ ನಟನೆಯ 'ಉತ್ತರಕಾಂಡ' ಚಿತ್ರತಂಡಕ್ಕೆ ನಟ ಶಿವರಾಜಕುಮಾರ್ ಸೇರ್ಪಡೆ

ರೋಹಿತ್ ಪದಕಿ ನಿರ್ದೇಶನದ ಮುಂಬರುವ 'ಉತ್ತರಕಾಂಡ'ದಲ್ಲಿ ನಟ ಧನಂಜಯ್ ನಟಿಸುತ್ತಿದ್ದು, ವಿರಾಮದ ನಂತರ ನಟನೆಗೆ ನಟಿ ರಮ್ಯಾ ಅವರು ಕಮ್‌ಬ್ಯಾಕ್ ಮಾಡುತ್ತಿದ್ದಾರೆ. ಇದೀಗ ನಟ ಶಿವರಾಜಕುಮಾರ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.  

published on : 20th November 2023

'ಕಾಂತಾರ' ಪ್ರೀಕ್ವೆಲ್ ಅಧಿಕೃತ ಲಾಂಚ್‌ಗೆ ವೇದಿಕೆ ಸಿದ್ಧ: ನವೆಂಬರ್ 27ರಂದು ಅದ್ಧೂರಿ ಮುಹೂರ್ತ

ಈ ವರ್ಷದ ಆರಂಭದಲ್ಲಿ ಬ್ಲಾಕ್‌ಬಸ್ಟರ್ ಸಿನಿಮಾ 'ಕಾಂತಾರ'ವನ್ನು ನೀಡಿದ ನಟ- ನಿರ್ದೇಶಕ ರಿಷಬ್ ಶೆಟ್ಟಿ, ಪ್ರಿಕ್ವೆಲ್‌ ಅನ್ನು ತಯಾರಿಸುವುದಾಗಿ ಬಹಿರಂಗಪಡಿಸಿದ್ದರು. ಅದಾದ 10 ತಿಂಗಳ ನಂತರ, ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಿರ್ಮಿಸಿದ ಬಹು ನಿರೀಕ್ಷಿತ ಚಿತ್ರವು ನವೆಂಬರ್ 27 ರಂದು ಅದ್ಧೂರಿ ಮುಹೂರ್ತದೊಂದಿಗೆ ಅಧಿಕೃತವಾಗಿ ಲಾಂಚ್ ಆಗಲಿದೆ.

published on : 20th November 2023

‘ಬ್ಯಾಡ್ ಮ್ಯಾನರ್ಸ್’ ಚಿತ್ರದಲ್ಲಿ ಸೂರಿ ವಿಭಿನ್ನ ಪ್ರಯೋಗ!

ಪಾಪ್‌ಕಾರ್ನ್ ಮಂಕಿ ಟೈಗರ್ ಸಿನಿಮಾಕ್ಕೆ ಬರಹಗಾರ ಮತ್ತು ಚಿತ್ರಕಥೆಗಾರ ಎಂದು ಸೂರಿ ಪರಿಚಯಿಸಿದ್ದ ಅಮ್ರಿ, ಮುಂಬರುವ ಚಿತ್ರ 'ಬ್ಯಾಡ್ ಮ್ಯಾನರ್ಸ್‌'ನಲ್ಲಿ ಬಹು ದೊಡ್ಡ ಪಾತ್ರವನ್ನು ವಹಿಸಿಕೊಂಡಿದ್ದಾರೆ.

published on : 18th November 2023

'ಸಪ್ತ ಸಾಗರದಾಚೆ ಎಲ್ಲೋ' ಪ್ರೇಮಕಥೆ ಎರಡು ಚಿತ್ರಗಳಾಗಿ ವಿಭಜನೆ, ಒಂದು ಹೊಸ ಪರಿಕಲ್ಪನೆ: ನಟ ರಕ್ಷಿತ್ ಶೆಟ್ಟಿ

'ಸಪ್ತ ಸಾಗರದಾಚೆ ಎಲ್ಲೋ ಬಿ ಸೈಡ್ ಬಿಡುಗಡೆ ಹಿನ್ನೆಲೆಯಲ್ಲಿ ಸಿನಿ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ರಕ್ಷಿತ್ ಶೆಟ್ಟಿ, ಈ ಸಿನಿಮಾದ ನಿರ್ಮಾಣ, ಅದರ ಮುಕ್ತಾಯ ಕುರಿತು ಮಾತನಾಡಿದರು. ಪ್ರೀಮಿಯರ್ ಶೋನಲ್ಲಿ ಸಿಕ್ಕ ಪ್ರತಿಕ್ರಿಯೆ ಚಿತ್ರದ ಯಶಸ್ಸು ಕುರಿತು ತಿಳಿಯಲು ನೆರವಾಯಿತು ಎಂದರು. 

published on : 16th November 2023

ದರ್ಶನ್ ಅಭಿನಯದ 'ನವಗ್ರಹ' ಚಿತ್ರಕ್ಕೆ 15 ವರ್ಷ; ಬರಲಿದೆಯಾ ನವಗ್ರಹ 2; ದಿನಕರ್ ತೂಗುದೀಪ ಹೇಳಿದ್ದೇನು?

ನವಗ್ರಹ, ಸಾರಥಿ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಿರ್ದೇಶಕ ದಿನಕರ್ ತೂಗುದೀಪ. ಅವರು ತಮ್ಮ ಮುಂಬರುವ 'ರಾಯಲ್‌' ಸಿನಿಮಾದ ಪೋಸ್ಟ್ ಪ್ರೊಡಕ್ಷನ್‌ ಕೆಲಸದಲ್ಲಿ ಸದ್ಯ ಬ್ಯುಸಿಯಾಗಿದ್ದಾರೆ. ನಿರ್ದೇಶಕರು ಇತ್ತೀಚೆಗಷ್ಟೇ ತಮ್ಮ ನಿರ್ದೇಶನದ 'ನವಗ್ರಹ' (2008) ಚಿತ್ರದ 15ನೇ ವಾರ್ಷಿಕೋತ್ಸವವನ್ನು ಆಚರಿಸಿದ್ದಾರೆ.

published on : 16th November 2023

ನಟಿ ರಾಧಿಕಾ ಕುಮಾರಸ್ವಾಮಿಗೆ ಡಬಲ್ ಧಮಾಕ: ಭೈರಾದೇವಿ- ಅಜಾಗ್ರತ ಸಿನಿಮಾ ಬಿಡುಗಡೆಗೆ ಸಿದ್ಧತೆ!

ರಾಧಿಕಾ ಕುಮಾರಸ್ವಾಮಿ ಸದ್ಯಕ್ಕೆ 'ಭೈರಾದೇವಿ' ಮತ್ತು 'ಅಜಾಗ್ರತ'ಎಂಬ ಎರಡು ಚಿತ್ರಗಳಲ್ಲಿ ನಟಿಸುತ್ತಿದ್ದು, ಅವು ನಿರ್ಮಾಣದ ವಿವಿಧ ಹಂತಗಳಲ್ಲಿವೆ. ನಟಿಯ ಇತ್ತೀಚಿನ ಹುಟ್ಟುಹಬ್ಬದ ಸಂದರ್ಭದಲ್ಲಿ, ಎರಡೂ ಚಿತ್ರತಂಡಗಳು ಭೈರಾದೇವಿ ಸಿನಿಮಾದ ಟೀಸರ್‌ ಬಿಡುಗಡೆ ಮಾಡಿದೆ ಮತ್ತು ಅಜಾಗ್ರತ ಸಿನಿಮಾದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.

published on : 16th November 2023

ನಾಳೆ ನಟ ಧರ್ಮಣ್ಣ ನಟನೆಯ 'ರಾಜಯೋಗ' ಸಿನಿಮಾ ತೆರೆಗೆ; ಗರಿಗೆದರಿದ ನಿರೀಕ್ಷೆ

ಸತ್ಯ ಪ್ರಕಾಶ್ ನಿರ್ದೇಶನದ ರಾಮ ರಾಮಾ ರೇ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾದ ನಟ ಧರ್ಮಣ್ಣ ಅವರು ತಮ್ಮ ಹಾಸ್ಯ ಮತ್ತು ಪಾತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಈಗ, ನಟ 'ರಾಜಯೋಗ' ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

published on : 16th November 2023

ಕಾರ್ಕಳದ ಕಣಂಜಾರು ಗ್ರಾಮದಲ್ಲಿ ನಡೆಯುವ ಕಥೆಗಳನ್ನು ಹೊತ್ತು ತಂದ ಥ್ರಿಲ್ಲರ್ 'ಕಣಂಜಾರು'!

ನಿರ್ದೇಶಕ ಆರ್ ಬಾಲಚಂದ್ರ ಅವರು ತಮ್ಮ ಮುಂಬರುವ ಥ್ರಿಲ್ಲರ್ ಜಗತ್ತಿನ ಕಣಂಜಾರು ಸಿನಿಮಾಗಾಗಿ ಬಹು ಜವಾಬ್ದಾರಿಗಳನ್ನು ಹೊತ್ತುಕೊಂಡಿದ್ದಾರೆ. ನಿರ್ದೇಶನದ ಜೊತೆಗೆ ನಾಯಕನಾಗಿಯೂ ನಟಿಸುತ್ತಿರುವ ಅವರು ಆರ್‌ಪಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

published on : 14th November 2023

ಪ್ರಿಯಾಂಕಾ ಉಪೇಂದ್ರ-ಮಾನ್ವಿತ ಕಾಮತ್ ಅಭಿನಯದ 'ಕ್ಯಾಪ್ಚರ್' ಸಿನಿಮಾ ಬಿಡುಗಡೆಗೆ ಸಿದ್ಧ

ಪ್ರಿಯಾಂಕಾ ಉಪೇಂದ್ರ ಅವರ ಮುಂಬರುವ 'ಕ್ಯಾಪ್ಚರ್' ಸಿನಿಮಾದ ಚಿತ್ರೀಕರಣ ಗೋವಾದಲ್ಲಿ 30 ದಿನಗಳ ಕಾಲ ನಡೆದಿದ್ದು, ಸಂಪೂರ್ಣ ಚಿತ್ರೀಕರಣ ಮುಗಿದಿದೆ. ಇದೀಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಸಿನಿಮಾವನ್ನು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗುತ್ತಿದೆ.

published on : 12th November 2023

ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಬಿ ಸಿನಿಮಾದ ಟೈಟಲ್ ಟ್ರ್ಯಾಕ್ ಬಿಡುಗಡೆ, ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್!

ಹೇಮಂತ್ ಎಂ ರಾವ್ ನಿರ್ದೇಶನದ ಮತ್ತು ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಮತ್ತು ಚೈತ್ರಾ ಜೆ ಆಚಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಮುಂಬರುವ ಕನ್ನಡ ಚಲನಚಿತ್ರ 'ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಬಿ' ಚಿತ್ರತಂಡ ಶುಕ್ರವಾರ ಟೈಟಲ್ ಟ್ರ್ಯಾಕ್ ಅನ್ನು ಬಿಡುಗಡೆ ಮಾಡಿದೆ. 

published on : 11th November 2023

ನಟ ಧನ್ವೀರ್, ಮೇಘಾ ಶೆಟ್ಟಿ ನಟನೆಯ ಬಹು ನಿರೀಕ್ಷಿತ 'ಕೈವ' ಚಿತ್ರ ಡಿಸೆಂಬರ್‌ನಲ್ಲಿ ಬಿಡುಗಡೆಗೆ ಸಿದ್ಧತೆ

ಧನ್ವೀರ್ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಕೈವ' ಚಿತ್ರ ಆರಂಭದಿಂದಲೂ ಗಮನ ಸೆಳೆಯುತ್ತಿದೆ. ಇದೊಂದು ವೈವಿಧ್ಯಮಯ ಪ್ರೇಮಕಥೆಯಾಗಿದ್ದು, ಸಾಹಸಮಯ ನಿರೂಪಣೆಯನ್ನೂ ಹೊಂದಿದೆ ಎನ್ನಲಾಗಿದೆ. ಜಯತೀರ್ಥ ನಿರ್ದೇಶನದಲ್ಲಿ, ನಟ ಧನ್ವೀರ್ ಅವರನ್ನು ಹೊಸ ಅವತಾರದಲ್ಲಿ ತೆರೆ ಮೇಲೆ ತರಲಾಗುತ್ತಿದೆ ಎಂದು ಹೇಳಲಾಗಿದೆ. 

published on : 11th November 2023

ಗಣೇಶ್, ರುಕ್ಮಿಣಿ ವಸಂತ್, ರೀಷ್ಮಾ ನಾಣಯ್ಯ ನಟನೆಯ 'ಬಾನದಾರಿಯಲ್ಲಿ' ಒಟಿಟಿಯಲ್ಲಿ ಬಿಡುಗಡೆ

ಸೆಪ್ಟೆಂಬರ್ 15 ರಂದು ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಬಾನದರಿಯಲ್ಲಿ' ಸಿನಿಮಾ ಇದೀಗ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ. ಪ್ರೀತಂ ಗುಬ್ಬಿ ನಿರ್ದೇಶನದ ಈ ಸಿನಿಮಾ ಸಿನಿಪ್ರಿಯರಿಂದ ಸಕಾರಾತ್ಮಕ ಮೆಚ್ಚುಗೆಗೆ ಪಾತ್ರವಾಯಿತು.

published on : 11th November 2023
 < 12 3 4 5 6 7 > 

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9