- Tag results for Sandalwood
![]() | Present ಪ್ರಪಂಚ 0 % ಲವ್ ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಅಭಿರಾಮ್ ಬರೆದು, ನಿರ್ದೇಶಿಸಿರುವ ರೊಮ್ಯಾಂಟಿಕ್ ಥ್ರಿಲ್ಲರ್ 'Present ಪ್ರಪಂಚ 0 % ಲವ್' ಸಿನಿಮಾ 12 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಚಲನಚಿತ್ರವು ಆಧುನಿಕ ದಂಪತಿಯ ಜೀವನಶೈಲಿಯನ್ನು ತೋರಿಸುತ್ತದೆ ಮತ್ತು ಅವರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹಾಸ್ಯದೊಂದಿಗೆ ಸೇರಿಸಿ ತೆರೆಮೇಲೆ ಚಿತ್ರಿಸಲಿದೆ. |
![]() | ಯೋಗಿ ನಟನೆಯ ರೋಸಿ ಚಿತ್ರದಲ್ಲಿ ತಮಿಳು ನಟ-ನಿರ್ದೇಶಕ ಪಾರ್ಥಿಬನ್‌ಗೆ ಪ್ರಮುಖ ಪಾತ್ರ?ಮಣಿರತ್ನಂ ಅವರ ಬಹು ನಿರೀಕ್ಷಿತ ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ನಟ-ನಿರ್ದೇಶಕ ಪಾರ್ಥಿಬನ್, ಅಜಯ್ ರಾಜ್ ಅರಸ್ ಅವರ ದಾದಾ ಈಸ್ ಬ್ಯಾಕ್ (2017) ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡಿದರು. ಮೂಲಗಳ ಪ್ರಕಾರ, ಈ ನಟನನ್ನು ಈಗ ನಿರ್ದೇಶಕ ಶೂನ್ಯಾ ಅವರ ಮುಂಬರುವ ಚಿತ್ರ 'ರೋಸಿ'ಯ ಭಾಗವಾಗಲು ಸಂಪರ್ಕಿಸಲಾಗಿದೆ. |
![]() | ಅರವಿಂದ್ ಕುಪ್ಲಿಕರ್ ನಿರ್ದೇಶನದ ಚಿತ್ರಕ್ಕೆ ಯೋಗಿ ದ್ವಾರಕೀಶ್ ಬಂಡವಾಳ ಹೂಡಿಕೆ, ಶರಣ್- ಅಮೃತಾ ಅಯ್ಯಂಗಾರ್ ಜೋಡಿ2021ರ 'ಪುಕ್ಸಟ್ಟೆ ಲೈಫು ಪುರ್‌ಸೊತ್ತೇ ಇಲ್ಲ' ಚಿತ್ರದ ನಿರ್ದೇಶಕ ಅರವಿಂದ್ ಕುಪ್ಲಿಕರ್ ಅವರ ಮುಂದಿನ ಸಿನಿಮಾಗೆ ಚೌಕ ಚಿತ್ರದ ನಿರ್ಮಾಪಕ ಯೋಗಿ ದ್ವಾರಕೀಶ್ ಬಂಗಲೆ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಚಿತ್ರದಲ್ಲಿ ಶರಣ್ ಮತ್ತು ಅಮೃತಾ ಅಯ್ಯಂಗಾರ್ ನಟಿಸಲಿದ್ದಾರೆ. |
![]() | ಐಪಿಎಲ್ ನಡುವೆಯೂ ರಾಘವೇಂದ್ರ ಸ್ಟೋರ್ಸ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ; ವಿಜಯ್ ಕಿರಗಂದೂರು ಬಗ್ಗೆ ಜಗ್ಗೇಶ್ ಹೇಳಿದ್ದೇನು?ಐಪಿಎಲ್ ಮತ್ತು ಕರ್ನಾಟಕ ಚುನಾವಣೆಗಳ ಝೇಂಕಾರದ ನಡುವೆಯೇ ಏಪ್ರಿಲ್ 28 ರಂದು ಬಿಡುಗಡೆಯಾದ ರಾಘವೇಂದ್ರ ಸ್ಟೋರ್ಸ್ ಚಿತ್ರಕ್ಕೆ ಸಿಕ್ಕಿರುವ ಸಕಾರಾತ್ಮಕ ಪ್ರತಿಕ್ರಿಯೆಯ ಬಗ್ಗೆ ಚಿತ್ರತಂಡ ಸಂತೋಷ ವ್ಯಕ್ತಪಡಿಸಿದೆ. |
![]() | ನಟ ಧನಂಜಯ್ ಸಾಥ್ ಕೊಟ್ಟಿರುವ 'ಡೇರ್‌ಡೆವಿಲ್ ಮುಸ್ತಾಫಾ' ಸಿನಿಮಾ ಬಿಡುಗಡೆಗೆ ದಿನಾಂಕ ನಿಗದಿಕನ್ನಡದ ಪ್ರಸಿದ್ಧ ಲೇಖಕ ಪೂರ್ಣಚಂದ್ರ ತೇಜಸ್ವಿಯವರ ಅತ್ಯಂತ ಪ್ರೀತಿಯ ಸಣ್ಣ ಕಥೆಗಳಲ್ಲಿ ಒಂದನ್ನು ಜೀವಂತಗೊಳಿಸುವ ಕೆಲಸವನ್ನು ನಿರ್ದೇಶಕ ಶಶಾಂಕ್ ಸೋಗಲ್ ಮಾಡಿದ್ದಾರೆ. ಚಿತ್ರಕ್ಕೆ ಡೇರ್‌ಡೆವಿಲ್ ಮುಸ್ತಾಫಾ ಎಂದು ಹೆಸರಿಡಲಾಗಿದೆ. |
![]() | ಬಹುಭಾಷಾ 'ಎಂಗೇಜ್‌ಮೆಂಟ್' ಸಿನಿಮಾಗೆ ನಟಿ ಐಶ್ವರ್ಯಾ ಗೌಡ ನಾಯಕಿ!ನಿಖಿಲ್ ಕುಮಾರಸ್ವಾಮಿ ನಟನೆಯ ಜಾಗ್ವಾರ್ ಸಿನಿಮಾದಲ್ಲಿ ಬಾಲನಟಿಯಾಗಿ ಗುರುತಿಸಿಕೊಂಡಿದ್ದ ಐಶ್ವರ್ಯಾ ಗೌಡ ಇದೀಗ 'ಎಂಗೇಜ್‌ಮೆಂಟ್' ಎಂಬ ಬಹುಭಾಷಾ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. |
![]() | 777 ಚಾರ್ಲಿ ನಂತರ ಮುಂದಿನ ಸಿನಿಮಾಗೆ ಕಿರಣ್‌ರಾಜ್ ರೆಡಿ; ಹಾರರ್ ಕಾಮಿಡಿ ಚಿತ್ರ ತಯಾರಿಸಲು ಸಿದ್ಧತೆ777 ಚಾರ್ಲಿ ಸಿನಿಮಾ ನಿರ್ದೇಶನಕ್ಕಾಗಿ ಇಂದಿಗೂ ಮೆಚ್ಚುಗೆಯನ್ನು ಪಡೆಯುತ್ತಿರುವ ನಿರ್ದೇಶಕ ಕಿರಣರಾಜ್ ಅವರು ತಮ್ಮ ಮುಂದಿನ ಸಿನಿಮಾದ ಕೆಲಸವನ್ನು ಈಗಾಗಲೇ ಪ್ರಾರಂಭಿಸಿದ್ದಾರೆ. ಚಿತ್ರವು ಹಾರರ್ ಕಾಮಿಡಿ-ಫ್ಯಾಂಟಸಿ ಆಗಿದೆ ಎಂದು ಹೇಳಲಾಗುತ್ತಿದೆ. |
![]() | ಹೊಸಬರು ನಟಿಸಿರುವ 'ಧೀರ ಸಾಮ್ರಾಟ್'ಗೆ ನಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್ಹೊಸಬರಾದ ರಾಕೇಶ್ ಬಿರಾದಾರ್ ಮತ್ತು ನಟಿ ಅದ್ವಿತಿ ಶೆಟ್ಟಿ ಅಭಿನಯದ ಮುಂಬರುವ ಚಿತ್ರ 'ಧೀರ ಸಾಮ್ರಾಟ್' ಶೀಘ್ರದಲ್ಲೇ ತೆರೆಗೆ ಬರಲು ಸಿದ್ಧವಾಗಿದೆ. ಇತ್ತೀಚೆಗೆ, ಚಿತ್ರದ ‘ಏನ್ ಚಂದ ಕಾಣಿಸ್ತಾವ್ಳೆ’ ಎಂಬ ಹಾಡನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಬಿಡುಗಡೆ ಮಾಡಿದರು. ಚಿತ್ರತಂಡಕ್ಕೆ ಶುಭಕೋರಿದರು. |
![]() | ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿಗೆ ಮತ್ತೊಂದು ಗರಿ; ನಿರ್ದೇಶಕ ಕಿರಣ್‌ರಾಜ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿರಕ್ಷಿತ್ ಶೆಟ್ಟಿ ನಟಿಸಿರುವ 777 ಚಾರ್ಲಿ ಚಿತ್ರವು ದೆಹಲಿಯಲ್ಲಿ 13ನೇ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಅಧಿಕೃತವಾಗಿ ಆಯ್ಕೆಯಾಗಿದೆ. ಕಿರಣ್‌ರಾಜ್ ಅವರು ಚಿತ್ರೋತ್ಸವದಲ್ಲಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಸ್ವೀಕರಿಸಲು ಸಜ್ಜಾಗಿದ್ದಾರೆ. |
![]() | ಲಿಖಿತ್ ಕುಮಾರ್ ನಿರ್ದೇಶನದ ಪ್ರಯೋಗಾತ್ಮಕ ಥ್ರಿಲ್ಲರ್‌ನಲ್ಲಿ ಮಾಹಿರ್ ಮೊಹಿಯುದ್ದೀನ್- ಚೈತ್ರಾ ಜೆ ಆಚಾರ್ನಿರ್ದೇಶಕ ಲಿಖಿತ್ ಕುಮಾರ್ ಪ್ರಯೋಗಾತ್ಮಕ ಥ್ರಿಲ್ಲರ್‌ನೊಂದಿಗೆ ಸ್ಯಾಂಡಲ್‌ವುಡ್‌ಗೆ ಪ್ರವೇಶ ಮಾಡಲು ಸಿದ್ಧರಾಗಿದ್ದಾರೆ. ಚಿತ್ರದಲ್ಲಿ ಹೊಸ ಮುಖ ಮಾಹಿರ್ ಮೊಹಿಯುದ್ದೀನ್ ನಟಿಸಿದ್ದು, ಚೈತ್ರಾ ಜೆ ಆಚಾರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹರಿಣಿ ಸುಂದರರಾಜನ್ ಅವರು ವಿಶೇಷ ಹಾಡೊಂದನ್ನು ಹಾಡಿದ್ದಾರೆ. |
![]() | ಧರ್ಮ ಕೀರ್ತಿರಾಜ್ ನಟನೆಯ 'ರೋನಿ: ದಿ ಹಂಟರ್' ಚಿತ್ರೀಕರಣ ಮುಕ್ತಾಯ; ಟೀಸರ್ ಬಿಡುಗಡೆಮುಂಬರುವ ಮರ್ಡರ್ ಮಿಸ್ಟರಿ ಚಿತ್ರ 'ರೋನಿ: ದಿ ಹಂಟರ್' ಚಿತ್ರೀಕರಣ ಮುಗಿದಿದ್ದು, ಪ್ರಜ್ವಲ್ ದೇವರಾಜ್ ಅದರ ಮೋಷನ್ ಪೋಸ್ಟರ್ ಮತ್ತು ಟೀಸರ್ ಅನ್ನು ಅನಾವರಣಗೊಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಿರ್ಮಾಪಕಿ ಶೈಲಜಾ ನಾಗ್ ತಂಡಕ್ಕೆ ಶುಭ ಹಾರೈಸಿದರು. |
![]() | ಬ್ಯಾಂಕ್ ಉದ್ಯೋಗ ತೊರೆದು ಚಿತ್ರರಂಗದತ್ತ ಒಲವು; ಗಮನ ಸೆಳೆಯುತ್ತಿದೆ ಹರಿ ಶೌರ್ಯ ನಿರ್ದೇಶನದ 'ಲಗೋರಿ'ಉದಯೋನ್ಮುಖ ಚಲನಚಿತ್ರ ನಿರ್ಮಾಪಕರಾದ ಹರಿ ಶೌರ್ಯ ಅವರು ತಮ್ಮ ಕಿರುಚಿತ್ರಗಳು ಮತ್ತು ಟೆಲಿಫಿಲ್ಮ್‌ಗಳ ಮೂಲಕ ಚಿತ್ರರಂಗದಲ್ಲಿ ಅದೃಷ್ಟವನ್ನು ಪರೀಕ್ಷಿಸುತ್ತಿದ್ದಾರೆ. ಅವರ ಚೊಚ್ಚಲ ಕಿರುಚಿತ್ರ 'ಕ್ರಶ್' ಮತ್ತು ಟೆಲಿಫಿಲ್ಮ್ 'ಲಗೋರಿ' ಕ್ರಮವಾಗಿ 2.5 ಮಿಲಿಯನ್ ಮತ್ತು 8.5 ಮಿಲಿಯನ್ ವೀಕ್ಷಣೆಗಳನ್ನು ಕಂಡಿವೆ. |
![]() | ನನ್ನ ಮೊದಲ ಚಿತ್ರ ಕಲಾತ್ಮಕ- ಕಮರ್ಷಿಯಲ್ ಆಗಿರುತ್ತದೆ: ನಿರ್ದೇಶಕ-ನಟ ವಂಶಿ ಕೃಷ್ಣರಾಧಾಕೃಷ್ಣ ರೆಡ್ಡಿ ಅವರ ಮಾಯಾಬಜಾರ್ ಚಿತ್ರದ ಮೂಲಕ ಸಹಾಯಕ ನಿರ್ದೇಶಕರಾಗಿ ವಂಶಿ ತಮ್ಮ ಸಿನಿಮಾ ಪಯಣ ಆರಂಭಿಸಿದ್ದರು. ಈ ಯುವ ಪ್ರತಿಭೆ ಇದೀಗ ನಿರ್ದೇಶಕರಾಗಿ ಪದಾರ್ಪಣೆ ಮಾಡಲಿದ್ದು, ಚಿತ್ರದಲ್ಲಿ ಅವರು ಪೂರ್ಣ ಪ್ರಮಾಣದ ಪಾತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. |
![]() | ನಟ ಶಿವರಾಜ್‌ಕುಮಾರ್ ಪುತ್ರಿ ನಿವೇದಿತಾ ಚಿತ್ರ ನಿರ್ಮಾಣಕ್ಕೆ ಮುಂದುನಟ ಶಿವರಾಜ್ ಕುಮಾರ್ ಅವರ ಪುತ್ರಿ ನಿವೇದಿತಾ ಅವರು ಧಾರಾವಾಹಿ ಮತ್ತು ಮೂರು ವೆಬ್ ಸರಣಿಗಳನ್ನು (ಹನಿಮೂನ್, ಬೈ ಮಿಸ್ಟೇಕ್ ಮತ್ತು ಹೇಟ್ ಯು ರೋಮಿಯೋ) ನಿರ್ಮಿಸಿದ್ದಾರೆ. ಅವರು ಇದೀಗ 'ಶ್ರೀ ಮುತ್ತು ಸಿನಿ ಸರ್ವಿಸಸ್ ಬ್ಯಾನರ್' ಅಡಿಯಲ್ಲಿ ಸಿನಿಮಾ ನಿರ್ಮಾಣದೊಂದಿಗೆ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. |
![]() | ಹುಚ್ಚ ರಾಯಪ್ಪನಾಗಿ 'ಔಟ್ ಆಫ್ ಸಿಲಬಸ್' ಪಾಠ ಮಾಡಲು ಬರುತ್ತಿದ್ದಾರೆ ಅಚ್ಯುತ್ ಕುಮಾರ್ಪ್ರದೀಪ್ ದೊಡ್ಡಯ್ಯ ಮತ್ತು ನಟ ಅಚ್ಯುತ್ ಕುಮಾರ್ ಅವರನ್ನು ಒಳಗೊಂಡ 'ಔಟ್ ಆಫ್ ಸಿಲಬಸ್' ಕುರಿತಾದ ದೃಶ್ಯವೊಂದನ್ನು ಚಿತ್ರತಂಡ ಇತ್ತೀಚೆಗೆ ಹಂಚಿಕೊಂಡಿದೆ. |