• Tag results for School

ಸರ್ಕಾರಿ ಕಾಲೇಜುಗಳಿಗೆ ಕಂಪ್ಯೂಟರ್ ಸರಬರಾಜು ಆರಂಭ

ಉನ್ನತ ಶಿಕ್ಷಣ ಇಲಾಖೆಯ ಹೆಲ್ಪ್ ಎಜುಕೇಟ್ ಉಪಕ್ರಮದಡಿ ಕಾಗ್ನಿಜೆಂಟ್ ಸಂಸ್ಥೆ ನೀಡಿರುವ ಡಿ ಬಾಂಡೆಡ್ ಕಂಪ್ಯೂಟರ್‍ಗಳನ್ನು ವಿವಿಧ ಕಾಲೇಜುಗಳಿಗೆ ಹೊತ್ತು ಸಾಗುವ ವಾಹನಗಳಿಗೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪ್ರದೀಪ್ ಅವರು ಶುಕ್ರವಾರ ಚಾಲನೆ ನೀಡಿದರು. 

published on : 10th April 2021

ಮಲ್ಲೇಶ್ವರಂನಲ್ಲಿ 25 ನರ್ಸರಿ ಶಾಲೆಗಳ ಸ್ಥಾಪನೆ: ಡಿಸಿಎಂ ಅಶ್ವತ್ಥ ನಾರಾಯಣ

ನಗರದ ಮಲ್ಲೇಶ್ವರಂ ನಲ್ಲಿ 25 ಹೊಸ ನರ್ಸರಿ ಶಾಲೆಗಳನ್ನು ಸ್ಥಾಪಿಸಲಾಗುವುದು ಎಂದು ಡಿಸಿಎಂ ಅಶ್ವತ್ಥ ನಾರಾಯಣ ಹೇಳಿದ್ದಾರೆ.

published on : 8th April 2021

ತುಮಕೂರು: 5 ಸಾವಿರ ರೂ. ಟ್ಯೂಷನ್ ಶುಲ್ಕ ಕಟ್ಟಲಿಲ್ಲವೆಂದು ಬಾಲಕನಿಗೆ ಹೊಡೆದ ಶಾಲೆಯ ಸಿಬ್ಬಂದಿ, ಕ್ರಮಕ್ಕೆ ಒತ್ತಾಯ 

ಕೊರೋನಾ ವೈರಸ್ ಗೆ ತಂದೆಯನ್ನು ಕಳೆದುಕೊಂಡ 15 ವರ್ಷದ ಬಾಲಕನಿಗೆ ಶಾಲೆಯಲ್ಲಿ ಟ್ಯೂಷನ್ ಫೀಸ್ 5 ಸಾವಿರ ರೂಪಾಯಿ ಕಟ್ಟಲಿಲ್ಲವೆಂದು ಶಾಲಾ ಸಿಬ್ಬಂದಿ ಹೊಡೆದ ಪ್ರಕರಣ ನಡೆದಿದೆ.

published on : 8th April 2021

ಅನುದಾನ ರಹಿತ ಮತ್ತು ಅನುದಾನ ಸಹಿತ ಶಾಲೆಗಳಲ್ಲಿ ಶೇ. 36% ಆರ್ ಟಿಇ ಸೀಟು ಇನ್ನೂ ಖಾಲಿ!

ಅನುದಾನ ರಹಿತ ಮತ್ತು ಅನುದಾನ ಸಹಿತ ಖಾಸಗಿ ಶಾಲೆಗಳಲ್ಲಿ ಸರಾಸರಿ ಶೇ. 36 ರಷ್ಟು ಆರ್ ಟಿ ಇ ಸೀಟುಗಳು ಉಪಯೋಗವಾಗದೇ ಹಾಗೆಯೇ ಉಳಿದಿವೆ. 

published on : 7th April 2021

ಚಿಕ್ಕಮಗಳೂರು: ಒಂದೇ ಶಾಲೆಯ 26 ವಿದ್ಯಾರ್ಥಿಗಳಿಗೆ ಕೊರೋನಾ ಸೋಂಕು, ಹೆಚ್ಚಿದ ಆತಂಕ

ಚಿಕ್ಕಮಗಳೂರಿನ ಬಸವನಹಳ್ಳಿಯ ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಬರೋಬ್ಬರಿ 26 ಮಂದಿ ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.

published on : 3rd April 2021

6 ರಿಂದ 9 ರವರೆಗಿನ ಭೌತಿಕ ತರಗತಿಗಳನ್ನು ಸ್ಥಗಿತಗೊಳಿಸಿದ್ದೇಕೆ?: ಖಾಸಗಿ ಶಾಲೆಗಳ ಅಸಮಾಧಾನ

6ನೇ ತರಗತಿಯಿಂದ 9ರವರೆಗೆ ಭೌತಿಕ ತರಗತಿ ಸ್ಥಗಿತಗೊಳಿಸಿರುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಖಾಸಗಿ ಅನುದಾನರಹಿತ ಶಾಲೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. 

published on : 3rd April 2021

ಉತ್ತರಪ್ರದೇಶದಲ್ಲಿ ಮಿತಿಮೀರಿದ ಕೊರೋನಾ ಸೋಂಕು: ಏಪ್ರಿಲ್ 11ರವರೆಗೆ ಶಾಲೆಗಳು ಬಂದ್ 

ಕೊರೋನಾ ಸೋಂಕು ಮಿತಿ ಮೀರುತ್ತಿರುವ ಹಿನ್ನೆಲೆಯಲ್ಲಿ  ಏಪ್ರಿಲ್ 11ರವೆರೆಗೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ.

published on : 2nd April 2021

ಕೊರೋನಾ ಹೆಚ್ಚಳ: ನಗರದಲ್ಲಿ 6 ರಿಂದ 9ನೇ ತರಗತಿ ಬಂದ್, ಎಸ್ಎಸ್ಎಲ್'ಸಿಗೆ ಹಾಜರಾತಿ ಕಡ್ಡಾಯವಲ್ಲ- ರಾಜ್ಯ ಸರ್ಕಾರ

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕೊರೋನಾ ಸೋಂಕು ಪ್ರಮಾಣ ಹೆಚ್ಚುತ್ತಿರುವುದರಿಂದ 6 ರಿಂದ 9ನೇ ತರಗತಿ ಮಕ್ಕಳಿಗೆ ಶಾಲೆಗಳಲ್ಲಿ ನಡೆಸಲಾಗುತ್ತಿರುವ ವಿದ್ಯಾಗಮ ಹಾಗೂ ಭೌತಿಕ ತರಗತಿಗಳನ್ನು ತಾತ್ಕಾಲಿಕವಾಗಿ ನಿಲ್ಲಿಸುವಂತೆ ಸಚಿವ ಸುರೇಶ್ ಕುಮಾರ್ ಅವರು ಗುರುವಾರ ಶಾಲೆಗಳಿಗೆ ಸೂಚಿಸಿದ್ದಾರೆ. 

published on : 2nd April 2021

ರಾಜ್ಯದ 5 ಸರ್ಕಾರಿ ಶಾಲೆಗಳಿಗೆ ಮೌಂಟ್ ಕಾರ್ಮೆಲ್ ಕಾಲೇಜಿನಿಂದ ಹೊಸ ರೂಪ!

ಅಕ್ಷರ ಯೋಜನೆ ಅಡಿಯಲ್ಲಿ ದತ್ತು ಪಡೆದುಕೊಂಡಿದ್ದ ರಾಜ್ಯದ 5 ಶಾಲೆಗಳಿಗೆ ಮೌಂಟ್ ಕಾರ್ಮೆಲ್ ಕಾಲೇಜು ಹೊಸ ರೂಪ ನೀಡಲಿದೆ.

published on : 31st March 2021

ಆಂಧ್ರಪ್ರದೇಶ: ಶಾಲಾ ಅವಧಿಯಲ್ಲಿ ವಿದ್ಯಾರ್ಥಿಗಳ ಎದುರೇ ಕುಡಿಯುತ್ತಿದ್ದ ಶಿಕ್ಷಕ ಅಮಾನತು!

ಪ್ರಾಥಮಿಕ ಶಾಲೆಯನ್ನು ಬಾರ್ ಆಗಿ ಪರಿವರ್ತಿಸಿಕೊಂಡಿದ್ದ ಸೆಕೆಂಡರಿ ಗ್ರೇಡ್ ಶಿಕ್ಷಕರೊಬ್ಬರನ್ನು ಜಿಲ್ಲಾ ಶಿಕ್ಷಣಾಧಿಕಾರಿ ಶುಕ್ರವಾರ ಸೇವೆಯಿಂದ ಅಮಾನತು ಮಾಡಿದ್ದಾರೆ. ಅಮಾನತುಗೊಂಡ ಶಿಕ್ಷಕನನ್ನು ಕೆ ಕೋಟೇಶ್ವರ ರಾವ್ ಎಂದು ಗುರುತಿಸಲಾಗಿದೆ.  

published on : 27th March 2021

ಕನ್ನಡ ಶಾಲೆಗಳಿಗೆ 150 ಕೋಟಿ ರು ಅನುದಾನ ನೀಡಿ: ಸಿಎಂ ಗೆ ಶಿಕ್ಷಣ ಸಚಿವರ ಪತ್ರ

1995 ರಿಂದ 2000ರ ವರೆಗೆ ಸ್ಥಾಪಿತವಾದ ಅನುದಾನರಹಿತ ಕನ್ನಡ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವುದಕ್ಕೆ 150 ಕೋಟಿ ರೂ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ. 

published on : 25th March 2021

ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಬಾರದಿದ್ದರೆ ಶಾಲೆ, ಕಾಲೇಜು ಬಂದ್: ಸಿಎಂ ಯಡಿಯೂರಪ್ಪ

ರಾಜ್ಯದಲ್ಲಿ ಕೊರೋನಾ ಸೋಂಕು ಇದೇ ರೀತಿ ಏರಿಕೆಯಾಗುತ್ತಲೇ ಇದ್ದರೆ ಶಾಲೆ, ಕಾಲೇಜು ಬಂದ್ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶನಿವಾರ ಹೇಳಿದ್ದಾರೆ. 

published on : 21st March 2021

ಬೆಂಗಳೂರು: ಪುನರುಜ್ಜೀವನಗೊಳಿಸಲಾದ ಕೋಟೆ ಪ್ರೌಢಶಾಲೆ ಇಂದು ಸರ್ಕಾರಕ್ಕೆ ಹಸ್ತಾಂತರ

115 ವರ್ಷಗಳಷ್ಟು ಪುರಾತನವಾದ ಪಾರಂಪರಿಕ ರಚನೆ, ನೂತನವಾಗಿ ಪುನರುಜ್ಜೀವನಗೊಳಿಸಲಾಗಿರುವ ಕೋಟೆ ಪ್ರೌಢಶಾಲೆ ಕಟ್ಟಡವನ್ನು ಜೀರ್ಣೋದ್ಧಾರಗೊಳಿಸಿದ್ದ ಸಂಸ್ಥೆ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (ಇಂಟಚ್) ಶಿಕ್ಷಣ ಇಲಾಖೆಗೆ ಶನಿವಾರ ಹಸ್ತಾಂತರಿಸಲಿದೆ. 

published on : 20th March 2021

ಶುಲ್ಕ ಕಟ್ಟದ ಮಕ್ಕಳನ್ನು ಪರೀಕ್ಷೆ, ಕ್ಲಾಸ್'ನಿಂದ ದೂರವಿಟ್ಟ ಖಾಸಗಿ ಶಾಲೆಗಳು: ಕಠಿಣ ಕ್ರಮದ ಎಚ್ಚರಿಕೆ ನೀಡಿದ ಸಚಿವ ಸುರೇಶ್ ಕುಮಾರ್

ಖಾಸಗಿ ಶಾಲೆಗಳು ಶುಲ್ಕಕ್ಕಾಗಿ ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ಹೊರಗಿಡುವುದು, ಆನ್'ಲೈನ್ ತರಗತಿ ಬಂದ್ ಮಾಡುವುದನ್ನು ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಸುರೇಶ್ ಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ.

published on : 20th March 2021

ಪ್ರಧಾನಮಂತ್ರಿ 'ಪರೀಕ್ಷಾ ಪೆ ಚರ್ಚಾ'ಗೆ ಕುಂದಾಪುರದ ಚಾರ್ಮಕ್ಕಿ ಶಾಲೆಯ ಅನುಷಾ ಆಯ್ಕೆ

ಕುಂದಾಪುರದ ಅಲ್ಪಾಡಿ-ಆರ್ಡಿಯ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಅನುಷಾ, 'ಪರೀಕ್ಷಾ ಪೆ ಚರ್ಚಾ' ಎನ್ನುವ ಪ್ರಧಾನಿ ನರೇಂದ್ರ ಮೋದಿಯವರೊಡನೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.

published on : 19th March 2021
1 2 3 4 5 6 >