• Tag results for Shivarajkumar

ಯೋಗರಾಜ್ ಭಟ್ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಶಿವಣ್ಣ ಜತೆಗೆ ಪ್ರಭುದೇವ ಸಾಥ್!

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಯೋಗರಾಜ್ ಭಟ್ ಜತೆಗೆ ಚಿತ್ರವೊಂದನ್ನು ಮಾಡುತ್ತಾರೆನ್ನುವ ಸುದ್ದಿ ಕೆಲ ದಿನಗಳಿಂದ ಗಾಂಧಿನಗರದಲ್ಲಿ ಹರಿದಾಡುತ್ತಿತ್ತು. ಇದೀಗ ಈ ಸುದ್ದಿ ಅಧಿಕೃತವಾಗಿದ್ದು ಭಟ್ರ ಚಿತ್ರಕಥೆಗೆ ಶಿವಣ್ಣ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

published on : 21st October 2020

ಚಿತ್ರಮಂದಿರಗಳ ತೆರೆಯಲು ಅನುಮತಿ ನೀಡಿ: ಜೈರಾಜ್, ಶಿವರಾಜ್ ಕುಮಾರ್ ನೇತೃತ್ವದ ನಿಯೋಗದಿಂದ ಸಿಎಂ ಯಡಿಯೂರಪ್ಪಗೆ ಮನವಿ

ಕೊರೋನಾ ವೈರಸ್ ಕಾರಣದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡ ಚಿತ್ರೋದ್ಯಮವು ವಿಶೇಷ ಪ್ಯಾಕೇಜ್ ಘೋಷಣೆ ಸೇರಿದಂತೆ ಕೆಲ ಪ್ರಮುಖ ಬೇಡಿಕೆಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮುಂದಿಟ್ಟಿದ್ದಾರೆ. 

published on : 10th September 2020

ನನ್ನಿಂದ ಎಂದಿಗೂ ಇನ್ನೊಂದು 'ಜೋಗಿ'  ಚಿತ್ರ ಬರೋಕೆ ಸಾಧ್ಯವಿಲ್ಲ: ನಿರ್ದೇಶಕ ಪ್ರೇಮ್

ಆಗಸ್ಟ್ 19- ಇಂದಿಗೆ ಪ್ರೇಮ್ ನಿರ್ದೇಶನದ, ಶಿವರಾಜ್‌ಕುಮಾರ್‌ ಅಭಿನಯದ "ಜೋಗಿ" ಚಿತ್ರ ತೆರೆಗೆ ಬಂದು 15 ವರ್ಷವಾಗಿದೆ,  15 ವರ್ಷಗಳ ಹಿಂದೆ ಈ ದಿನ "ಜೋಗಿ" ತೆರೆಕಂಡು ಇತಿಹಾಸ ನಿರ್ಮಿಸಿತ್ತು. ಸೆಂಚುರಿ ಸ್ಟಾರ್ ಅಭಿಮಾನಿಗಳು ಇದಾಗಲೇ ಸಂಭ್ರಮಾಚರಣೆಯಲ್ಲಿ ತೊಡಗಿದ್ದು ಎಲ್ಲರೂ ಕಾಮನ್ ಡಿಪಿ ಹಾಕಿಕೊಂಡಿರುವುದು ಕಾಣಬಹುದು.

published on : 19th August 2020

ಮತ್ತೆ ಅಖಾಡಕ್ಕೆ ಎಂಟ್ರಿ: ಆಗಸ್ಟ್ 10ರಿಂದ ಭಜರಂಗಿ 2 ಚಿತ್ರದ ಚಿತ್ರೀಕರಣ ಶುರು!

ಕೊರೋನಾ ಸುದೀರ್ಘ ಲಾಕ್ ಡೌನ್ ಬಳಿಕ ಇದೀಗ ಕನ್ನಡ ಚಿತ್ರರಂಗ ಮತ್ತೆ ಸಹಜ ಸ್ಥಿತಿಗೆ ಮರಳು ಸಜ್ಜಾಗುತ್ತಿದೆ. ಹೌದು ಕನ್ನಡದ ಸಾಲು ಸಾಲು ಚಿತ್ರಗಳು ಚಿತ್ರೀಕರಣಕ್ಕೆ ರೆಡಿಯಾಗುತ್ತಿವೆ. ಈ ಪೈಕಿ ಶಿವರಾಜ್‌ಕುಮಾರ್ ಅವರ ಭಜರಂಗಿ 2 ಚಿತ್ರವು ಸೇರಿದೆ. 

published on : 4th August 2020

ಹೆದರಬೇಡ... ಕ್ಷಮಿಸಬೇಡ: ಮತ್ತೆ ಕೈಜೋಡಿಸಿದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಹರ್ಷ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ನಿರ್ದೇಶ ಎ ಹರ್ಷ ಕಾಂಬಿನೇಷನ್ ಎಂದ್ರೆ ಅಲ್ಲೊಂದು ಭರ್ಜರಿ ಸಿನಿಮಾವಂತೂ ಗ್ಯಾರಂಟಿ ಎಂಬ ನಿರೀಕ್ಷೆ ಸಹಜವಾಗಿಯೇ ಹುಟ್ಟಿಕೊಂಡು ಬಿಟ್ಟಿದೆ. ಈಗಾಗಲೇ ಈ ಇಬ್ಬರ ಕಾಂಬಿನೇಷನ್ ನಲ್ಲಿ ಎರಡು ಸಿನಿಮಾ ಭರ್ಜರಿ ಹಿಟ್ ನೀಡಿದ್ದು...

published on : 30th July 2020

ರಾಮ್ ಧುಲಿಪುಡಿ ನಿರ್ದೇಶನದಲ್ಲಿ ಸೆಂಚುರಿ ಸ್ಟಾರ್ ಶಿವಣ್ಣ, ಚಿತ್ರಕ್ಕೆ ಅಧಿಕೃತ ಚಾಲನೆ

ಶಿವರಾಜ್‌ಕುಮಾರ್ ಅಭಿನಯದ ರಾಮ್ ಧುಲಿಪುಡಿಯ ನಿರ್ದೇಶನದ ಚಿತ್ರ ಸೆಟ್ಟೇರುವುದು ಪಕ್ಕಾ ಆಗಿದೆ. ಶಿವಣ್ಣನ ಜನ್ಮದಿನವಾದ ಭಾನುವಾರ (ಜುಲಯ್ 12) ದಂದು ಚಿತ್ರದ  ಸ್ಕ್ರಿಪ್ಟ್ ಪೂಜೆ ನೆರವೇರಿದೆ.  

published on : 13th July 2020

ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಬರ್ತಡೇ ಸಂಭ್ರಮ, ಪತ್ನಿ, ಆಪ್ತರ ಸಮ್ಮುಖದಲ್ಲಿ ಹುಟ್ಟುಹಬ್ಬ ಆಚರಣೆ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಇಂದು (ಜುಲಯ್ 12) 58ನೇ ಬರ್ತಡೇ ಸಂಭ್ರಮ. ದೇಶಾದ್ಯಂತ ಕೊರೋನಾ ಹಾವಳಿ ಇರುವ ಕಾರಣ ನಟ ಈ ಬಾರಿ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡಿದ್ದಾರೆ.

published on : 12th July 2020

'ಭಜರಂಗಿ 2' ತಂಡದಿಂದ ಶಿವರಾಜ್ ಕುಮಾರ್ ಗೆ ಕಾದಿದೆ ಅಚ್ಚರಿ!

ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿಮಾನಿಗಳಿಗೆ ಸಂತೋಷದ ಹಾಗೂ ಕುತೂಹಲಕಾರಿ ಸುದ್ದಿಯೊಂದು ಹೊರಬಿದ್ದಿದೆ. ಜುಲೈ 12 ರಂದು ಹ್ಯಾಟ್ರಿಕ್ ಹಿರೋ ಹುಟ್ಟುಹಬ್ಬದ ಪ್ರಯುಕ್ತ ಭಜರಂಗಿ 2 ಚಿತ್ರದ ದೃಶ್ಯ ವಿಡಿಯೋವೊಂದನ್ನು ಬಿಡುಗಡೆ ಮಾಡಲು ನಿರ್ದೇಶಕ ಎ. ಹರ್ಷ ಎದುರು ನೋಡುತ್ತಿದ್ದಾರೆ.

published on : 18th June 2020

ನಾಳೆ 'ಓಂ’‌ ಸಿನಿಮಾಗೆ 25 ವರ್ಷ: ರಿಯಲ್ ಸ್ಟಾರ್ ಉಪ್ಪಿ,-ಶಿವಣ್ನರಿಂದ ಫೇಸ್ ಬುಕ್ ಲೈವ್ ಮೂಲಕ ಸಂಭ್ರಮಾಚರಣೆ 

ಕನ್ನಡ ಚಿತ್ರರಂಗದಲ್ಲಿ ಉಪೇಂದ್ರ ನಿರ್ದೇಶನದ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ "ಓಂ" ಬಹುದೊಡ್ದ ಯಶಸ್ವಿ ಚಿತ್ರ. ಚಿತ್ರರಂಗದ ಅದುವರೆಗಿನ ಎಲ್ಲಾ ಎಣಿಕೆಗಳನ್ನು ಮೀರಿ ಹೊಸತನದ ಹಾದಿ ತೋರಿದ ಚಿತ್ರವೆಂದರೆ ತಪ್ಪಲ್ಲ. ಅಂತಹಾ ಸೆನ್ಸೇಷನ್ ಚಿತ್ರ ಬಿಡುಗಡೆಯಾಗಿ ನಾಳೆ (ಮೇ 19) ಗೆ 25 ವರ್ಷ ತುಂಬಲಿದೆ.  

published on : 18th May 2020

ಶಿವರಾಜ್ ಕುಮಾರ್ ಅಭಿನಯದ ನೂತನ ಚಿತ್ರಕ್ಕೆ ರಾಮ್ ಧುಲಿಪುಡಿ ನಿರ್ದೇಶನ

ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ಮತ್ತೊಂದು ಸಿನಿಮಾ ಆರಂಭಗೊಳ್ಳಲಿದೆ. ಕೊರೋನಾ ಲಾಕ್ ಡೌನ್ ತೆರವಿನ ಬಳಿಕ ಬರುವ ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರೀಕರಣ ಶುರುವಾಗಲಿರುವ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ.

published on : 23rd April 2020

'ಡಾ.ರಾಜ್ ಪುಣ್ಯಸ್ಮರಣೆ- ನಮನ ಸಲ್ಲಿಸಿದ ಸಿಎಂ ಬಿಎಸ್ ಯಡಿಯೂರಪ್ಪ

ವರನಟ ದಿ.ಡಾ.ರಾಜ್‌ಕುಮಾರ್ ಅವರ 14 ನೇ ಪುಣ್ಯಸ್ಮರಣೆ ಪ್ರಯುಕ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮನ ಸಲ್ಲಿಸಿದ್ದಾರೆ.

published on : 12th April 2020

ರಾಜ್ ಕುಮಾರ್ ಪುಣ್ಯಸ್ಮರಣೆ: ಸಮಾಧಿಗೆ ಗೌರವ ಸಲ್ಲಿಸಿದ ಶಿವಣ್ಣ

ಇಂದು ವರನಟ ದಿ ಡಾ.ರಾಜ್ ಕುಮಾರ್ ಅವರ ಪುಣ್ಯಸ್ಮರಣೆ ದಿನವಾಗಿದ್ದು, ಶಿವರಾಜ್ ಕುಮಾರ್ ಅವರು ಸ್ಮಾರಕಕ್ಕೆ ತೆರಳಿ ಪೂಜೆ ಸಲ್ಲಿಸಿದರು.

published on : 12th April 2020

ನಾನು ಯಾವತ್ತಿಗೂ ಆನಂದ್ ಶಿವರಾಜ್‌ಕುಮಾರ್ ಆಗಿರಲು ಬಯಸುತ್ತೇನೆ: ಸೆಂಚುರಿ ಸ್ಟಾರ್ ಶಿವಣ್ಣ

ಫೆಬ್ರವರಿ 19 ರಂದು ಹ್ಯಾಟ್ರಿಕ್ ಹೋರೋ ಶಿಶಿವರಾಜ್‌ಕುಮಾರ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿ 34 ವರ್ಷ ಪೂರೈಸುತ್ತಿದೆ. ಶಿವಣ್ಣ ಮೊಟ್ಟ ಮೊದಲ ಬಾರಿಗೆ ಮೆರಾವನ್ನು ಎದುರಿಸಿದ್ದು "ಆನಂದ್" ನಟನೆಗಾಗಿ. ಇದೇ ನಟ ಇಂದು ತಮ್ಮ 123 ನೇ ಯೋಜನೆಯಾದ ಆರ್ಡಿಎಕ್ಸ್ ಪ್ರಾರಂಭದ ಎದುರು ನೋಡುತ್ತಿದ್ದಾರೆ.ಮತ್ತು ಅಂದಿನ ಉತ್ಸಾಹ, ಕುತೂಹಲ ಅವರಲ್ಲಿ ಇಂದಿಗೂ ಉಳಿದಿದೆ.

published on : 19th February 2020

ಶಿವಣ್ಣನ 'ಆರ್‌ಡಿಎಕ್ಸ್' ಗೆ ಜತೆಯಾದ ಪ್ರಿಯಾ ಆನಂದ್

ಪುನೀತ್ ರಾಜ್‌ಕುಮಾರ್ ಅಭಿನಯದ ರಾಜಕುಮಾರ ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ ಪ್ರಿಯಾ ಆನಂದ್ ರವಿ ಅರಸು ನಿರ್ದೇಶನದ ಶಿವರಾಜ್‌ಕುಮಾರ್ ಅಭಿನಯದ ಆರ್‌ಡಿಎಕ್ಸ್ ಚಿತ್ರದಲ್ಲಿ ಮತ್ತೊಮ್ಮೆ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಗೋಲ್ಡನ್ ಸ್ಟಾರ್ ಗನೇಶ್ ನಟನೆಯ ಆರೆಂಜ್ ಬಳಿಕ ಪ್ರಿಯಾ ಪಾಲಿನ ಮೂರನೇ ಕನ್ನಡ ಸಿನಿಮಾ ಆಗಿದೆ.

published on : 19th February 2020

ಸೆಂಚುರಿ ಸ್ಟಾರ್ ಶಿವಣ್ಣನಿಗಾಗಿ ಡೈರೆಕ್ಟರ್ ಕ್ಯಾಪ್ ಧರಿಸಲಿರುವ ವಿಜಯ್ ಮಿಲ್ಟನ್?

ಸಧ್ಯಕ್ಕೆ  ಧ್ರುವ ಸರ್ಜಾ ಅವರ ಪೊಗರು ಚಿತ್ರದಲ್ಲಿ ಡಿಒಪಿ ಆಗಿ ಕೆಲಸ ಮಾಡುತ್ತಿರುವ ಛಾಯಾಗ್ರಾಹಕ ರ್ದೇಶಕ ವಿಜಯ್ ಮಿಲ್ಟನ್, ಶಿವರಾಜ್‌ಕುಮಾರ್ ಜತೆಗಿನ ಚಿತ್ರಕ್ಕಾಗಿ ಸಿದ್ದವಾಗುತ್ತಿದ್ದಾರೆ ಎಂಬ ವದಂತಿಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿವೆ. ಇದೀಗ ನಿರ್ದೇಶಕರು ಹ್ಯಾಟ್ರಿಕ್ ಹೋರೋ ಶಿವಣ್ಣಗೆ ಸ್ಕ್ರಿಪ್ಟ್ ವಿವರಿಸಿದ್ದು ನಟ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ

published on : 10th February 2020
1 2 3 4 >