• Tag results for Sourav Ganguly

ಈ ವರ್ಷವೂ ವಿಶ್ವಕಪ್ ಟೂರ್ನಿ ರದ್ದಾದರೆ, ಕ್ರಿಕೆಟ್ ಗೆ ಆಗುವ ದೊಡ್ಡ ನಷ್ಟವದು: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ಕೊರೋನಾ ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷವೂ ಟಿ20 ವಿಶ್ವಕಪ್ ರದ್ದುಗೊಂಡರೆ ಅದು ಕ್ರಿಕೆಟ್ ಆಟಕ್ಕೆ ಆಗುವ ದೊಡ್ಡ ನಷ್ಟವಾಗಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಗುರುವಾರ ಹೇಳಿದ್ದಾರೆ. 

published on : 8th July 2021

ಚೊಚ್ಚಲ ಪಂದ್ಯದಲ್ಲೇ ಗಂಗೂಲಿಯ 25 ವರ್ಷದ ಹಳೆಯ ದಾಖಲೆ ಉಡೀಸ್; ದ್ವಿಶತಕ ಸಿಡಿಸಿದ ಡೆವೊನ್ ಕಾನ್ವೇ!

ಲಾರ್ಡ್ಸ್ ನಲ್ಲಿ ನಡೆಯತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿದ ಆರನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು ಅಲ್ಲದೆ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ದಾಖಲೆಯನ್ನು ಮುರಿದರು.

published on : 3rd June 2021

ದೇಶಾದ್ಯಂತ 2000 ಆಕ್ಸಿಜನ್ ಕಾನ್ಸಂಟ್ರೇಟರ್ ಗಳ ವಿತರಣೆಗೆ ಬಿಸಿಸಿಐ ಮುಂದು

ಕೋವಿಡ್ -19 ಸಾಂಕ್ರಾಮಿಕ ರೋಗ ನಿಯಂತ್ರಣದಲ್ಲಿ ಭಾರತದ ಪ್ರಯತ್ನ ಇನ್ನಷ್ಟು ಹೆಚ್ಚಿಸುವಂತೆ ಮಾಡಲು 10 ಲೀಟರ್ ಸಾಮರ್ಥ್ಯದ 2000 ಆಮ್ಲಜನಕ ಕಾನ್ಸಂಟ್ರೇಟರ್ ಗಳನ್ನು ನೀಡುವುದಾಗಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೋಮವಾರ ಪ್ರಕಟಿಸಿದೆ.

published on : 24th May 2021

ಪಾಸಿಟಿವ್ ಬಂದರೆ ಸರಣಿಯಿಂದಲೇ ಔಟ್; ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ಎಚ್ಚರಿಕೆ

ಇಂಗ್ಲೆಂಡ್ ಪ್ರವಾಸ ಸಂಬಂಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಆಟಗಾರರು ಕೊರೋನಾ ನಿರ್ಲಕ್ಷಿಸದಂತೆ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿದೆ.

published on : 11th May 2021

ಭಾರತ-ಲಂಕಾ ನಡುವೆ 3 ಏಕದಿನ ಮತ್ತು 5 ಟಿ20 ಪಂದ್ಯಗಳ ಸರಣಿ ನಡೆಯಲಿದೆ: ಬಿಸಿಸಿಐ ಅಧ್ಯಕ್ಷ ಗಂಗೂಲಿ

ರದ್ದುಗೊಂಡಿರುವ ಐಪಿಎಲ್ ಟೂರ್ನಿ ಭಾರತದಲ್ಲಿ ನಡೆಯುವುದಿಲ್ಲ ಎಂದು ಹೇಳಿರುವ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಇದೀಗ ಭಾರತ ಮತ್ತು ಲಂಕಾ ನಡುವಿನ ಕ್ರಿಕೆಟ್ ಸರಣಿ ಜುಲೈನಲ್ಲಿ ನಡೆಯಲಿದೆ ಎಂದು ಹೇಳಿದ್ದಾರೆ.

published on : 10th May 2021

ಇನ್ನುಳಿದ 2021ರ ಐಪಿಎಲ್ ಪಂದ್ಯಗಳು ಭಾರತದಲ್ಲಿ ನಡೆಯಲ್ಲ: ಗಂಗೂಲಿ

ಬಯೋ-ಬಬಲ್ ನಲ್ಲಿದ್ದ ಆಟಗಾರರಿಗೂ ಕೊರೋನಾ ವಕ್ಕರಿಸಿದ್ದರಿಂದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ಧಿಷ್ಠಾವಧಿಗೆ ಮುಂದೂಡಲಾಗಿದ್ದು ಇದೀಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಇನ್ನುಳಿದ ಪಂದ್ಯಗಳು ಭಾರತದಲ್ಲಿ ನಡೆಯುವುದಿಲ್ಲ ಎಂದು ಖಚಿತಪಡಿಸಿದ್ದಾರೆ.

published on : 10th May 2021

ಬಂಗಾಳ ಚುನಾವಣೆಯಲ್ಲಿ ಬಿಜೆಪಿಯ ಸಾಧನೆ ಗಂಗೂಲಿ ಬ್ಯಾಟಿಂಗ್‌ನಂತೆಯೇ ಇರುತ್ತದೆ: ರಾಜನಾಥ್ ಸಿಂಗ್

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದಂತೆ ರಾಜಕೀಯ ಪಕ್ಷಗಳು ಭರ್ಜರಿಯಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿವೆ. ಬಿಜೆಪಿ ಪರ ಚುನಾವಣಾ ಪ್ರಚಾರ ನಡೆಸಿದ ರಾಜನಾಥ್ ಸಿಂಗ್ ಅವರು ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಸಾಧನೆ ಸೌರವ್ ಗಂಗೂಲಿ ಬ್ಯಾಟಿಂಗ್ ನಂತೆಯೇ ಇರುತ್ತದೆ ಎಂದು ಹೇಳಿದರು. 

published on : 16th March 2021

ಭಾರತ-ನ್ಯೂಜಿಲ್ಯಾಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಸೌತಾಂಪ್ಟನ್‌ನಲ್ಲಿ ನಡೆಯಲಿದೆ: ಗಂಗೂಲಿ

ಟೀಂ ಇಂಡಿಯಾ ಮತ್ತು ನ್ಯೂಜಿಲ್ಯಾಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಜೂನ್ 18ರಿಂದ 22ರವರೆಗೆ ಸೌತಾಂಪ್ಟನ್‌ನ ಏಗಾಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೋಮವಾರ ಖಚಿತಪಡಿಸಿದ್ದಾರೆ.

published on : 8th March 2021

ಸೌರವ್ ಗಂಗೂಲಿ ಪತ್ನಿ ಹೆಸರಲ್ಲಿ ನಕಲಿ ಫೇಸ್‌ಬುಕ್ ಪೇಜ್: ದೂರು ದಾಖಲು

ಕ್ರಿಕೆಟ್ ದಂತಕಥೆ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಪತ್ನಿ ಡೋನಾ ಗಂಗೂಲಿ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಪೇಜ್ ತೆರೆದಿರುವ ಬಗ್ಗೆ ಪೊಲೀಸ್ ದೂರು ದಾಖಲಿಸಲಾಗಿದೆ.

published on : 17th February 2021

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್!

ಇತ್ತೀಚೆಗೆ ಆ್ಯಂಜಿಯೋ ಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಗುರಿಯಾಗಿದ್ದ ಬಿಸಿಸಿಐ ಅಧ್ಯಕ್ಷ ಹಾಗೂ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

published on : 31st January 2021

ಸೌರವ್ ಗಂಗೂಲಿ ಆರೋಗ್ಯ ಸ್ಥಿತಿ ಉತ್ತಮ, ಪ್ರಮುಖ ನಿಯತಾಂಕಗಳು ಸ್ಥಿರ- ಆಸ್ಪತ್ರೆ

 ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಸ್ಥಿತಿ ಉತ್ತಮವಾಗಿದ್ದು, ಅವರ ಎಲ್ಲಾ ಪ್ರಮುಖ  ನಿಯತಾಂಕಗಳು ಸ್ಥಿರವಾಗಿವೆ ಎಂದು ಅಪೊಲೊ ಗ್ಲೆನೆಗಲ್ಸ್ ಆಸ್ಪತ್ರೆ ಶನಿವಾರ ಬಿಡುಗಡೆ ಮಾಡಿರುವ ವೈದ್ಯಕೀಯ ಬುಲೆಟಿನ್  ನಲ್ಲಿ ತಿಳಿಸಿದೆ.

published on : 30th January 2021

ವೈದ್ಯಕೀಯ ಪರೀಕ್ಷೆ ಫಲಿತಾಂಶಗಳು ಸಹಜವಾಗಿದ್ದರೆ ಇಂದೇ ಆಸ್ಪತ್ರೆಯಿಂದ ಸೌರವ್ ಗಂಗೂಲಿ ಡಿಸ್ಚಾರ್ಜ್

ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಸ್ಥಿರವಾಗಿದ್ದು, ಅವರ ಮೇಲೆ ನಡೆಸಬೇಕಾದ ವೈದ್ಯಕೀಯ ಪರೀಕ್ಷೆಗಳ ಫಲಿತಾಂಶಗಳು ಸಾಮಾನ್ಯ ಸ್ಥಿತಿಗೆ ಬಂದರೆ ಅವರನ್ನು ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.

published on : 30th January 2021

ಆಂಜಿಯೋಪ್ಲ್ಯಾಸ್ಟಿ ನಂತರ ಗಂಗೂಲಿಯ ಆರೋಗ್ಯ ಸ್ಥಿತಿ ಸ್ಥಿರ: ವೈದ್ಯರ ಮಾಹಿತಿ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಸಿಸಿಐ) ಮುಖ್ಯಸ್ಥ ಸೌರವ್ ಗಂಗೂಲಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಶುಕ್ರವಾರ ಸಹ ವೈದ್ಯರು ಗಂಗೂಲಿಯವರಿಗೆ ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲು ಯೋಜಿಸುತ್ತಿದ್ದಾರೆ ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

published on : 29th January 2021

ಸೌರವ್ ಗಂಗೂಲಿಗೆ 2ನೇ ಬಾರಿಗೆ ಆ್ಯಂಜಿಯೋಪ್ಲಾಸ್ಟಿ, ಮತ್ತೆರಡು ಸ್ಟೆಂಟ್ ಅಳವಡಿಕೆ!

ಎದೆನೋವಿನಿಂದ ಬಳಲುತ್ತಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಒಂದೇ ತಿಂಗಳಲ್ಲಿ ಎರಡನೇ ಬಾರಿಗೆ ಆ್ಯಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

published on : 28th January 2021

ಸೌರವ್ ಗಂಗೂಲಿ ಹೃದಯದಲ್ಲಿ 3 ಬ್ಲಾಕೇಜ್, ವರದಿ ನಂತರ ಮತ್ತೊಂದು ಸ್ಟೆಂಟ್ ಅಳವಡಿಸುವ ನಿರ್ಧಾರ: ವೈದ್ಯರು

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುವುದು, ವರದಿ ನಂತರ ಮುಂದಿನ ಚಿಕಿತ್ಸೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆ.

published on : 28th January 2021
1 2 3 > 

ರಾಶಿ ಭವಿಷ್ಯ