- Tag results for Sudeep
![]() | 'ನಮ್ಮ ಜಲ, ನಮ್ಮ ಹಕ್ಕು' ಕಾವೇರಿ ಹೋರಾಟಕ್ಕೆ ಕಿಚ್ಚ ಸುದೀಪ್ ಬೆಂಬಲ!ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದರ ವಿರುದ್ದ ರೈತರು ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ನಟ ಕಿಚ್ಚ ಸುದೀಪ್ ಬೆಂಬಲ ವ್ಯಕ್ತಪಡಿಸಿದ್ದಾರೆ. ಕನ್ನಡದ ನೆಲ, ಜಲ, ಭಾಷೆಯ ಎಲ್ಲ ಹೋರಾಟಗಳಲ್ಲಿ ನಾನು ಸದಾ ನಿಮ್ಮೊಂದಿಗೆ ಇದ್ದೇನೆ ಎಂದಿದ್ದಾರೆ. |
![]() | ಕಾವೇರಿ ಹೋರಾಟ: ನಟರಾದ ದರ್ಶನ್, ಸುದೀಪ್, ಶಿವರಾಜ್ ಕುಮಾರ್ ಹೇಳಿದ್ದು ಹೀಗೆ...ಚಾಲೆಂಜಿಂಗ್ ದರ್ಶನ್, ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ಮೌನ ಮುರಿದಿದ್ದು, ಕಾವೇರಿ ಹೋರಾಟದ ಪರ ಮಾತುಗಳನ್ನಾಡಿದ್ದಾರೆ. |
![]() | ಸುದೀಪ್ ನಟನೆಯ 'ಮ್ಯಾಕ್ಸ್' ನಲ್ಲಿ 'ಮಾಣಿಕ್ಯ' ನಟಿ ವರಲಕ್ಷ್ಮಿ ಶರತ್‌ಕುಮಾರ್?ಕಿಚ್ಚ ಸುದೀಪ್ ಪ್ರಸ್ತುತ ವಿಜಯ್ ಕಾರ್ತಿಕೇಯನ್ ಚೊಚ್ಚಲ ನಿರ್ದೇಶನದ ಮ್ಯಾಕ್ಸ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಚಿತ್ರದಲ್ಲಿ ಸಂಯುಕ್ತ ಹೊರ್ನಾಡ್, ಸುಕೃತಾ ವಾಗ್ಲೆ, ಮತ್ತು ಅನಿರುದ್ಧ್ ಭಟ್ ಸೇರಿದಂತೆ ಹಲವು ಕಲಾವಿದರ ಬಗ್ಗೆ ಮಾಹಿತಿ ದೊರೆತಿದೆ. |
![]() | ಕಿಚ್ಚ 47: ಸುದೀಪ್ ಮುಂದಿನ ಸಿನಿಮಾಗೆ ಚೇರನ್ ನಿರ್ದೇಶನ!ನಟ ಕಿಚ್ಚ ಸುದೀಪ ನಟನೆಯ 47 ನೇ ಸಿನಿಮಾವನ್ನು ಚೇರನ್ ನಿರ್ದೇಶಿಸಲಿದ್ದಾರೆ ಎಂದು ಚಿತ್ರದ ನಿರ್ಮಾಪಕರು ಶನಿವಾರ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ |
![]() | 'ಹುಲಿ ನಾಯಕ' ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ ನಟ ಕಿಚ್ಚ ಸುದೀಪ್!ಡಿಜೆ ಚಕ್ರವರ್ತಿ ಅವರ ಮುಂಬರುವ ಚಿತ್ರದ ಶೀರ್ಷಿಕೆಯನ್ನು ಉಪೇಂದ್ರ ಅವರು ಅನಾವರಣಗೊಳಿಸಿದರು. ಏಳು ವರ್ಷಗಳ ನಂತರ ಚಕ್ರವರ್ತಿ ನಿರ್ದೇಶನಕ್ಕೆ ಮರಳುತ್ತಿದ್ದು, 'ಹುಲಿ ನಾಯಕ' ಚಿತ್ರದ ಮೋಷನ್ ಪೋಸ್ಟರ್ ಅನ್ನು ನಟ ಸುದೀಪ್ ಅವರು ಅದ್ಧೂರಿ ಸಮಾರಂಭದಲ್ಲಿ ಬಿಡುಗಡೆ ಮಾಡಿದರು. |
![]() | ಆರ್ ಆರ್ ಆರ್ ಸಿನಿಮಾ ಖ್ಯಾತಿಯ ವಿಜಯೇಂದ್ರ ಪ್ರಸಾದ್ ಕಥೆಗೆ ಕಿಚ್ಚ ಸುದೀಪ್ ನಾಯಕ; ಆರ್.ಚಂದ್ರು ನಿರ್ದೇಶನಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕಿಚ್ಚ ಸುದೀಪ್ ಅವರ ಮುಂದಿನ ಚಿತ್ರಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಕಬ್ಜ ನಿರ್ದೇಶಕ ಆರ್ ಚಂದ್ರು ಜೊತೆ ಸುದೀಪ್ ಮತ್ತೆ ಸಿನಿಮಾ ಮಾಡುತ್ತಿದ್ದಾರೆ. |
![]() | 10 ವರ್ಷಗಳ ನಂತರ ಸುದೀಪ್ ಮತ್ತೆ ನಿರ್ದೇಶನಕ್ಕೆ: 'ಕೆಕೆ' ಸಿನಿಮಾ ಪೋಸ್ಟರ್ ರಿಲೀಸ್ಕಿಚ್ಚ ಸುದೀಪ್ ನಿರ್ದೇಶನಕ್ಕೆ ಯಾವಾಗ ಮರಳುತ್ತಾರೆ ಎಂಬ ಪ್ರಶ್ನೆ ಅವರ ಅಭಿಮಾನಿಗಳ ವಲಯದಲ್ಲಿ ಇದ್ದೇ ಇತ್ತು. ಆ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ಸುದೀಪ್ ಬಹುಮುಖ ಪ್ರತಿಭೆಯುಳ್ಳ ನಟ. ಸಿನಿಮಾ ನಟನೆಯ ಜೊತೆಗೆ ಸಿನಿಮಾದ ಇತರೆ ಕಲೆಗಳ ಬಗ್ಗೆ ಆಸಕ್ತಿ ವಹಿಸಿರುವುದು ಮಾತ್ರವೇ ಅಲ್ಲದೆ ಕಲೆಗಳಲ್ಲಿ ಪರಿಣಿತಿಯನ್ನೂ ಹೊಂದಿದ್ದಾರೆ. |
![]() | ಕಿಚ್ಚ ಸುದೀಪ್ @50: ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್‍ನಲ್ಲಿ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆಸ್ಯಾಂಡಲ್ ವುಡ್ ಬಾದ್ ಶಾ, ಅಭಿಮಾನಿಗಳ ಪಾಲಿನ ಪ್ರೀತಿಯ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಇಂದು ಸೆಪ್ಟೆಂಬರ್ 2ರಂದು 50ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. |
![]() | ಕಿಚ್ಚನ ಅಭಿಮಾನಿಗಳಿಗೆ ಸಿಹಿಸುದ್ದಿ: ಸುದೀಪ್-ಕೆಆರ್‌ಜಿ ಸ್ಟುಡಿಯೋಸ್ ಕಾಂಬಿನೇಶನ್‌ನಲ್ಲಿ ಹೈ-ಬಜೆಟ್ ಸಿನಿಮಾ!ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬಕ್ಕೆ (ಸೆಪ್ಟೆಂಬರ್ 2) ಕೆಲವೇ ದಿನಗಳು ಬಾಕಿ ಉಳಿದಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯ ವಿಶೇಷ ದಿನವನ್ನು ಆಚರಿಸಲು ಪ್ಲಾನ್ ಮಾಡುತ್ತಿರುವಾಗಲೇ ಸಿಹಿಸುದ್ದಿಯೊಂದು ಹೊರಬಿದ್ದಿದೆ. ನಟನ ಜನ್ಮದಿನದಂದು ಮತ್ತೊಂದು ಹೈಬಜೆಟ್ ಸಿನಿಮಾ ಅಧಿಕೃತವಾಗಿ ಘೋಷಣೆಯಾಗುವ ನಿರೀಕ್ಷೆಯಿದೆ. |
![]() | ಸ್ಯಾಂಡಲ್‌ವುಡ್‌ನಲ್ಲಿ ದಿಗ್ಗಜರ ದೋಸ್ತಿ ಜಪ: ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ 'ಮಾರ್ಮಿಕ' ಪೋಸ್ಟ್ ವೈರಲ್!ಸ್ಯಾಂಡಲ್‌ವುಡ್‌ನಲ್ಲಿನ ಇತ್ತೀಚಿನ ಕೆಲ ಬದಲಾವಣೆಗಳು ಶುಭ ಸೂಚನೆಯನ್ನು ನೀಡಿದ್ದವು. ದೂರವಾಗಿದ್ದ ಚಂದನವನದ ಬಹುಕಾಲದ ಸ್ನೇಹಿತರು ಮತ್ತೆ ಬಂದಾಗುವ ಸುಳಿವು ಸಿಕ್ಕಿತ್ತು. ಹರಿದಾಡಿದ ವಿಡಿಯೋ ನೋಡಿದ ಅಭಿಮಾನಿಗಳು ಕಿಚ್ಚ, ದರ್ಶನ್ ಒಂದಾದರು ಎಂದೇ ಮಾತನಾಡಿಕೊಂಡಿತ್ತು. |
![]() | 'ಕೆ 46' ಚಿತ್ರಕ್ಕೆ ತಯಾರಿ: ಭರ್ಜರಿ ವರ್ಕೌಟ್ ಫೋಟೋ ಶೇರ್ ಮಾಡಿದ ಕಿಚ್ಚ ಸುದೀಪ್!ಕಿಚ್ಚ ಸುದೀಪ್ ಅವರ ಹೊಸ ಪ್ರಾಜೆಕ್ಟ್‌ಗೆ ತಾತ್ಕಾಲಿಕವಾಗಿ 'ಕೆ 46' ಎಂದು ಹೆಸರಿಸಲಾಗಿದ್ದು, ಚಿತ್ರಕ್ಕಾಗಿ ಭರ್ಜರಿ ವರ್ಕೌಟ್ ಮಾಡುತ್ತಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವರ್ಕೌಟ್ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ |
![]() | ಹಳೆ ಮುನಿಸು ಮರೆತು ಮತ್ತೆ ಒಂದಾದರೇ ಕಿಚ್ಚ ಸುದೀಪ್-ದರ್ಶನ್?: ಸಂಸದೆ ಸುಮಲತಾ ಹುಟ್ಟುಹಬ್ಬ ಪಾರ್ಟಿಯಲ್ಲಿ ಇಬ್ಬರು ಮುಖಾಮುಖಿಸ್ಯಾಂಡಲ್ ವುಡ್ ನ ಸ್ಟಾರ್ ನಟರಾದ ಕಿಚ್ಚ ಸುದೀಪ್(Kichcha Sudeep) ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging star Darshan) ಅಭಿಮಾನಿಗಳಿಗೆ ಇದು ಖುಷಿಯ ಸಂಗತಿ ಎನ್ನಬಹುದು. ಈ ಇಬ್ಬರು ನಾಯಕ ನಟರು ಕೆಲವು ವೈಯಕ್ತಿಕ ಕಾರಣಗಳಿಂದ ಆರು ವರ್ಷಗಳ ಹಿಂದೆ ಮುನಿಸಿಕೊಂಡು ದೂರವಾಗಿದ್ದರು. |
![]() | ನಟ ಸುದೀಪ್ ವಿರುದ್ಧ ಹೇಳಿಕೆ ನೀಡದಂತೆ ನಿರ್ಮಾಪಕರಿಗೆ ನ್ಯಾಯಾಲಯ ಆದೇಶಕನ್ನಡ ಚಲನಚಿತ್ರ ನಿರ್ಮಾಪಕರಾದ ಎಂ ಎನ್ ಸುರೇಶ್ ಮತ್ತು ಎಂ ಎನ್ ಕುಮಾರ್ ಅವರು ನಟ ಸುದೀಪ್ ವಿರುದ್ಧ ಮಾನಹಾನಿ ಹೇಳಿಕೆ ನೀಡದಂತೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸೋಮವಾರ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದೆ. |
![]() | ಸುದೀಪ್ ನಟನೆಯ 'ಕಿಚ್ಚ 46' ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ಸಂಯುಕ್ತಾ ಹೊರನಾಡ್ನಟಿ ಸಂಯುಕ್ತಾ ಹೊರನಾಡ್ ಆಸಕ್ತಿದಾಯಕ ಸಿನಿಮಾಗಳೊಂದಿಗೆ ಸಖತ್ ಬ್ಯುಸಿಯಾಗಿದ್ದಾರೆ. ಆಗಸ್ಟ್ 25ರಂದು ಬಿಡುಗಡೆಯಾಗಲಿರುವ ರಾಜ್ ಬಿ ಶೆಟ್ಟಿಯವರ ಟೋಬಿ ಸಿನಿಮಾದಲ್ಲೂ ನಟಿಸಿರುವ ಹೊಂದಿಸಿ ಬರೆಯಿರಿ ಮತ್ತು ಕ್ರಾಂತಿ ಸಿನಿಮಾ ನಟಿ, ಇದೀಗ ಕಿಚ್ಚ 46 ಚಿತ್ರಕ್ಕೂ ಬಣ್ಣ ಹಚ್ಚುತ್ತಿದ್ದಾರೆ. |
![]() | ನಟ ಸುದೀಪ್ ಮಾನನಷ್ಟ ಮೊಕದ್ದಮೆ ಪ್ರಕರಣ: ಇಬ್ಬರು ನಿರ್ಮಾಪಕರಿಗೆ ಸಮನ್ಸ್ ಜಾರಿ ಮಾಡಿದ ಕೋರ್ಟ್ನಟ ಕಿಚ್ಚಾ ಸುದೀಪ್ ಹೂಡಿರುವ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಕೋರ್ಟ್ ಇಬ್ಬರು ನಿರ್ಮಾಪಕರಿಗೆ ಸಮನ್ಸ್ ಜಾರಿ ಮಾಡಿದೆ. |