• Tag results for Tamil Nadu

ತಮಿಳುನಾಡಿನಲ್ಲಿ ಭಾರಿ ಮಳೆ: ರಾಜಧಾನಿ ಚೆನ್ನೈನಲ್ಲಿ ಜಲಾವೃತ, ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನಲ್ಲಿ ಸುರಿಯುತ್ತಿರುವ ಮಳೆ ಮುಂದುವರೆದಿದ್ದು, ರಾಜಧಾನಿ ಚೆನ್ನೈನ ಹಲವು ಪ್ರದೇಶಗಳು ಜಲಾವೃತಗೊಂಡಿವೆ.

published on : 28th November 2021

ತಮಿಳುನಾಡು: ಲೈಂಗಿಕ ಕಿರುಕುಳದಿಂದ 12ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಬಳಿಕ ಸಾವಿಗೆ ಶರಣಾದ ಶಿಕ್ಷಕ

ತಮಿಳುನಾಡಿನ ಕರೂರಿನಲ್ಲಿ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ 12ನೇ ತರಗತಿ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ ಕೆಲವು ದಿನಗಳ ನಂತರ ನಿನ್ನೆ ತಡರಾತ್ರಿ ಆರೋಪಿತ ಗಣಿತ ಶಿಕ್ಷಕ ಸಹ ಆತ್ಮಹತ್ಯೆ...

published on : 25th November 2021

ತಮಿಳುನಾಡು: ನಿರಂತರ ಮಳೆಗೆ ಕುಸಿದ ಮನೆ, 9 ಮಂದಿ ಸಾವು

ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ಭಾರೀ ಮಳೆಗೆ ಮನೆ ಕುಸಿದುಬಿದ್ದ ಪರಿಣಾಮ ನಾಲ್ಕು ಮಕ್ಕಳು ಸೇರಿದಂತೆ ಒಂಬತ್ತು ಜನ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

published on : 19th November 2021

ಜರ್ಜರಿತಗೊಂಡಿರುವ ಚೆನ್ನೈಗೆ ಮುಂದಿನ 36 ಗಂಟೆಗಳು ಅಗ್ನಿ ಪರೀಕ್ಷೆ: ಕೆಳಹಂತದ ಪ್ರದೇಶಗಳ ನಿವಾಸಿಗಳಿಗೆ ಸಂಕಷ್ಟ!

ಸತತ ಮಳೆಯಿಂದಾಗಿ ಜರ್ಜರಿತವಾಗಿರುವ ಚೆನ್ನೈಗೆ ಮುಂದಿನ 36 ಗಂಟೆಗಳು ಅಗ್ನಿ ಪರೀಕ್ಷೆ ಎದುರಾಗಳಿದೆ. ದಕ್ಷಿಣ ಆಂಧ್ರದಿಂದ ಪಶ್ಚಿಮ ಕೇಂದ್ರ ಮತ್ತು ಪಕ್ಕದ ಬಂಗಾಳದ ನೈಋತ್ಯ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡಿನಲ್ಲಿ ಮುಂದಿನ ಎರಡು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

published on : 17th November 2021

ತನ್ನ ಲಾಭಕ್ಕಾಗಿ ತಮಿಳುನಾಡು ಸದಾಕಾಲ ನೀರು ವಿಚಾರದಲ್ಲಿ ರಾಜಕೀಯ ಮಾಡುತ್ತದೆ: ಸಿಎಂ ಬೊಮ್ಮಾಯಿ

ಕರ್ನಾಟಕದ ಜಲ-ಸಂಬಂಧಿತ ಯೋಜನೆಗಳಿಗೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮಿಳುನಾಡು ವಿರುದ್ಧ ಸೋಮವಾರ ವಾಗ್ದಾಳಿ ನಡೆಸಿದ್ದಾರೆ.

published on : 16th November 2021

ಕಾವೇರಿ-ವಗೈ-ಗುಂಡಾರ ಜೋಡಣಾ ಕಾಲುವೆಯ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

ತಮಿಳುನಾಡಿನ ಪುದುಕೋಟ್ಟಯಿ ಜಿಲ್ಲೆಯ ಕುಣತ್ತೂರುವಿನಲ್ಲಿ ನಿರ್ಮಿಸುತ್ತಿರುವ ಕಾವೇರಿ-ವಗೈ-ಗುಂಡಾರ ಜೋಡಣಾ ಕಾಲುವೆ ನಿರ್ಮಾಣವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಿರುವ ಮೂಲದಾವೆ ವಿಚಾರಣೆಗೆ ಕೈಗೆತ್ತಿಕೊಂಡು ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳ ಮನವಿ ಮೇರೆಗೆ 6 ವಾರ ಮುಂದೂಡಿತು. 

published on : 15th November 2021

ತಮಿಳುನಾಡಿನಲ್ಲಿ ಮತ್ತೆ ಭಾರೀ ಮಳೆ ಸಾಧ್ಯತೆ: ಚೆನ್ನೈ ಮತ್ತಿತರ ಜಿಲ್ಲೆಗಳಲ್ಲಿ ಆರೆಂಜ್ ಆಲರ್ಟ್ ಘೋಷಣೆ 

ಇತ್ತೀಚಿನ ನಿರಂತರ ಮಳೆಯಿಂದ ಉಂಟಾದ ಪ್ರವಾಹದಿಂದ ಚೆನ್ನೈ ನಿವಾಸಿಗಳು ಇನ್ನೂ ಚೇತರಿಸಿಕೊಳ್ಳುತ್ತಿರುವಾಗಲೇ ಮತ್ತೊಂದು ಮಳೆಯ ಪರಿಸ್ಥಿತಿ ಉತ್ತರ ತಮಿಳುನಾಡನ್ನು ಕಾಡಲಿದೆ. ನವೆಂಬರ್ 17ರಿಂದ 19ರವರೆಗೆ ಚೆನ್ನೈ ಹಾಗೂ ನೆರೆಯ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎನ್ನಲಾಗುತ್ತಿದೆ.

published on : 15th November 2021

ತಮಿಳು ನಾಡು ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಮತ್ತಷ್ಟು ಅವ್ಯಾಹತ ಮಳೆ, ರೆಡ್ ಅಲರ್ಟ್ ಘೋಷಣೆ 

ತಮಿಳು ನಾಡು ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಅವ್ಯಾಹತ ಮಳೆಯಾಗಿ ಸಾಕಷ್ಟು ಹಾನಿಯುಂಟಾಗಿದೆ. ಮುಂದಿನ ನಾಲ್ಕೈದು ದಿನಗಳ ಕಾಲ ಇನ್ನಷ್ಟು ಮಳೆ ಸುರಿಯುವ ಸಾಧ್ಯತೆಯಿರುವುದರಿಂದ ರಾಜ್ಯ ಮತ್ತಷ್ಟು ಆಪತ್ತಿಗೆ ಒಡ್ಡಿಕೊಳ್ಳುವ ಸಾಧ್ಯತೆಯಿದೆ.

published on : 10th November 2021

ವರುಣಾರ್ಭಟ: ಚೆನ್ನೈ ಸೇರಿ 4 ಜಿಲ್ಲೆಗಳ ಶಾಲೆಗಳಿಗೆ 2 ದಿನ ರಜೆ ಘೋಷಿಸಿದ ಸಿಎಂ, ಜನರ ಸ್ಥಳಾಂತರಕ್ಕೆ ಸೂಚನೆ

ತಮಿಳುನಾಡು ಮತ್ತು ಅದರ ಉಪನಗರ ಪ್ರದೇಶಗಳಲ್ಲಿ ಭಾನುವಾರವೂ ಭಾರೀ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಚೆನ್ನೈ ಮತ್ತು ಇತರ ಮೂರು ಜಿಲ್ಲೆಗಳ ಶಾಲೆಗಳಿಗೆ ಮುಖ್ಯಮಂತ್ರಿ ಸ್ಟಾಲಿನ್ ಎರಡು ದಿನ ರಜೆ ಘೋಷಿಸಿದ್ದಾರೆ.

published on : 7th November 2021

ತಮಿಳುನಾಡು: ನೀಟ್‌ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ವೈದ್ಯಕೀಯ ಆಕಾಂಕ್ಷಿ ಆತ್ಮಹತ್ಯೆಗೆ ಶರಣು

ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯಲ್ಲಿ(ನೀಟ್) ಕಡಿಮೆ ಅಂಕ ಗಳಿಸಿದ್ದರಿಂದ ಖಿನ್ನತೆಗೆ ಒಳಗಾಗಿದ್ದ 20 ವರ್ಷದ ವೈದ್ಯಕೀಯ ಆಕಾಂಕ್ಷಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ...

published on : 6th November 2021

ತಮಿಳುನಾಡು ಸರ್ಕಾರದಿಂದ ಪೊಲೀಸ್​ ಸಿಬ್ಬಂದಿಗೆ ವಾರದ ರಜೆ ಘೋಷಣೆ

ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಆದೇಶದ ಮೇರೆಗೆ ಪೊಲೀಸ್ ಸಿಬ್ಬಂದಿಗೆ ವಾರದ ರಜೆಯನ್ನು ನೀಡುವ ಸರ್ಕಾರಿ ಆದೇಶವನ್ನು ಬುಧವಾರ ಹೊರಡಿಸಲಾಗಿದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.

published on : 3rd November 2021

ತಮಿಳುನಾಡು: ವಣ್ಣಿಯಾರ್ ಸಮುದಾಯಕ್ಕೆ ಕಲ್ಪಿಸಿದ್ದ ಶೇ 10.5 ಮೀಸಲಾತಿ ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ವಣ್ಣಿಯಾರ್ ಜಾತಿಗೆ ಶೇ. 10.5 ರಷ್ಟು ಮೀಸಲಾತಿ ಒದಗಿಸುವ ತಮಿಳುನಾಡು ಸರ್ಕಾರದ ಕಾನೂನನ್ನು ಮದ್ರಾಸ್ ಹೈಕೋರ್ಟ್ ರದ್ದುಪಡಿಸಿದೆ.

published on : 2nd November 2021

ತಮಿಳು ನಾಡು: ಪಟಾಕಿ ಅಂಗಡಿಯಲ್ಲಿ ಬೆಂಕಿ ಸ್ಫೋಟ; ಮೃತಪಟ್ಟವರ ಸಂಖ್ಯೆ 6ಕ್ಕೆ ಏರಿಕೆ, 10 ಮಂದಿಗೆ ಗಾಯ

ದೀಪಾವಳಿ ಹೊತ್ತಿನಲ್ಲಿ ತಮಿಳು ನಾಡಿನ ಕಲ್ಲಕುರಿಚಿ ಜಿಲ್ಲೆಯ ಶಂಕರಾಪುರಂ ಎಂಬಲ್ಲಿ ಕಳೆದ ರಾತ್ರಿ ಅನಾಹುತ ಸಂಭವಿಸಿದೆ. ಪಟಾಕಿಗಳನ್ನು ಮಾರಾಟ ಮಾಡುವ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಮೃತಪಟ್ಟವರ ಸಂಖ್ಯೆ 6ಕ್ಕೇರಿದ್ದು, 10 ಮಂದಿ ಗಾಯಗೊಂಡಿದ್ದಾರೆ.

published on : 27th October 2021

ತಮಿಳುನಾಡು: ಮೂರು ತಿಂಗಳ ಮಗುವನ್ನು ಹತ್ಯೆ ಮಾಡಿದ ಅಜ್ಜಿ, ಮತ್ತೊಂದು ಮಗುವಿನ ಹತ್ಯೆಗೂ ಯತ್ನ

ಅಜ್ಜಿಯೋರ್ವಳು ತನ್ನ ಮೂರು ತಿಂಗಳ ಮೊಮ್ಮಗನನ್ನೇ ಕೊಲೆ ಮಾಡಿ ಕ್ರೌರ್ಯ ಮೆರೆದಿದ್ದಾಳೆ. ಅಲ್ಲದೆ ಮತ್ತೊಂದು ಮಗುವಿನ ಹತ್ಯೆಗೂ ಯತ್ನಿಸಿದ ಅಮಾನವೀಯ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.

published on : 22nd October 2021

16 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ: ಖ್ಯಾತ ನಿರ್ದೇಶಕ ಶಂಕರ್ ಅಳಿಯನ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಕೇಸ್ ದಾಖಲು

16 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಖ್ಯಾತ ತಮಿಳು ಚಲನಚಿತ್ರ ನಿರ್ದೇಶಕ ಎಸ್ ಶಂಕರ್ ಅವರ ಅಳಿಯನ ವಿರುದ್ಧ ಪೋಕ್ಸೋ(ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

published on : 21st October 2021
1 2 3 4 5 6 > 

ರಾಶಿ ಭವಿಷ್ಯ