• Tag results for Tax

ಬೃಹತ್ ಐಟಿ ದಾಳಿ; 56 ಕೋಟಿ ರೂ. ಕ್ಯಾಶ್, 32 ಕೆಜಿ ಚಿನ್ನ, 16 ಕೋಟಿ ರೂ. ಮೌಲ್ಯದ ವಜ್ರ ಸೇರಿ 390 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ!

ಮಹಾರಾಷ್ಟ್ರದಲ್ಲಿ ಬೃಹತ್ ಐಟಿ ದಾಳಿಯಾಗಿದ್ದು, 56 ಕೋಟಿ ಕ್ಯಾಶ್, 32 ಕೆಜಿ ಚಿನ್ನ, 16 ಕೋಟಿ ಮೌಲ್ಯದ ವಜ್ರ ಸೇರಿ 390 ಕೋಟಿ ಅಕ್ರಮ ಆಸ್ತಿಯನ್ನು ತೆರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

published on : 11th August 2022

ತೆರಿಗೆ ವಂಚನೆ ಆರೋಪ: ತಮಿಳು ಚಲನಚಿತ್ರ ನಿರ್ಮಾಪಕರು, ವಿತರಕರ ಮನೆ ಮೇಲೆ ಐಟಿ ದಾಳಿ

ತೆರಿಗೆ ವಂಚನೆ ಆರೋಪದ ಮೇಳೆ ಶಂಕಿತ 10 ತಮಿಳು ಚಲನಚಿತ್ರ ನಿರ್ಮಾಪಕರು ಮತ್ತು ವಿತರಕರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಇಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

published on : 2nd August 2022

2021-22 ಹಣಕಾಸು ವರ್ಷದ ಗಡುವು ಇಂದಿಗೆ ಮುಕ್ತಾಯ: 5 ಕೋಟಿ ರೂ. ಗೂ ಅಧಿಕ ಐಟಿಆರ್ ಸಲ್ಲಿಕೆ

2021-22ರ ಆರ್ಥಿಕ ವರ್ಷದ ಐಟಿಆರ್‌ ಸಲ್ಲಿಕೆ ಇಂದು ಜುಲೈ 31ಕ್ಕೆ ಮುಕ್ತಾಯವಾಗಲಿದ್ದು, ಅದಕ್ಕೆ ಒಂದು ದಿನ ಮುಂಚಿತವಾಗಿ ಅಂದರೆ ನಿನ್ನೆ ಶನಿವಾರ ಸಂಜೆ ತನಕ 5 ಕೋಟಿಗೂ ಹೆಚ್ಚು ಆದಾಯ ತೆರಿಗೆ ರಿಟರ್ನ್ಸ್ ಗಳು ಸಲ್ಲಿಕೆಯಾಗಿವೆ.

published on : 31st July 2022

ಭಾರತದ ಅತಿ ಹೆಚ್ಚು ತೆರಿಗೆ ಪಾವತಿದಾರ: ಅಕ್ಷಯ್ ಕುಮಾರ್ ಗೆ ತೆರಿಗೆ ಇಲಾಖೆ ಪ್ರಶಂಸನಾ ಪತ್ರ!

ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತೊಮ್ಮೆ ಆದಾಯ ತೆರಿಗೆ ಇಲಾಖೆಯ ಪ್ರಶಂಸನೆ ಪಾತ್ರವಾಗಿದ್ದು, ಭಾರತದ ಅತಿ ಹೆಚ್ಚು ತೆರಿಗೆ ಪಾವತಿದಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

published on : 24th July 2022

ಹೋಟೆಲ್, ರೆಸ್ಟೋರೆಂಟ್ ಗಳು ಬಿಲ್ ನಲ್ಲಿ ಸೇವಾ ಶುಲ್ಕ ಸೇರಿಸುವಂತಿಲ್ಲ: ಸಿಸಿಪಿಎ ಆದೇಶ

ಹೋಟೆಲ್, ರೆಸ್ಟೋರೆಂಟ್ ಗಳು ಬಿಲ್ ನಲ್ಲಿ ಸ್ವಯಂಚಾಲಿತವಾಗಿ ಸೇವಾ ಶುಲ್ಕ ವಿಧಿಸದಂತೆ ಕೇಂದ್ರೀಯ ಗ್ರಾಹಕರ ರಕ್ಷಣಾ ಪ್ರಾಧಿಕಾರ ಸೋಮವಾರ ಆದೇಶ ಹೊರಡಿಸಿದೆ. ಒಂದು ವೇಳೆ ಈ ಆದೇಶ ಉಲ್ಲಂಘನೆಯಾದಲ್ಲಿ ಗ್ರಾಹಕರು ದೂರು ದಾಖಲಿಸಲು ಅವಕಾಶ ನೀಡಿದೆ.

published on : 4th July 2022

ಪೆಟ್ರೋಲ್, ಡೀಸೆಲ್ ಮೇಲೆ ರಫ್ತು ತೆರಿಗೆ ವಿಧಿಸಿದ ಕೇಂದ್ರ ಸರ್ಕಾರ; ಸ್ಥಳೀಯ ಕಚ್ಚಾ ತೈಲದ ಮೇಲೆ ಅನಿರೀಕ್ಷಿತ ತೆರಿಗೆ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನಂತಹ ಸಂಸ್ಥೆಗಳು ವಿದೇಶಕ್ಕೆ ಸಾಗಿಸುವ ಪೆಟ್ರೋಲ್, ಡೀಸೆಲ್ ಮತ್ತು ಜೆಟ್ ಇಂಧನ (ಎಟಿಎಫ್) ಮೇಲೆ ಕೇಂದ್ರ ಸರ್ಕಾರ ರಫ್ತು ತೆರಿಗೆ ವಿಧಿಸಿದೆ. 

published on : 1st July 2022

ಜಿಎಸ್ ಟಿ ಜಾರಿಗೆ ಬಂದು ನಾಳೆಗೆ 5 ವರ್ಷ: ಇನ್ನೂ ಸುಲಭವಾಗದ ಸರಳ ತೆರಿಗೆ ಪದ್ಧತಿ

ಕೇಂದ್ರ, ರಾಜ್ಯ ಮತ್ತು ಸ್ಥಳೀಯ ತೆರಿಗೆಯನ್ನು ವಿಧಿಸುವ ಹಿಂದಿನ ಕಾರ್ಯವಿಧಾನವನ್ನು ಸರಳಗೊಳಿಸಲು ಹೊಸ ಪರೋಕ್ಷ ತೆರಿಗೆ ವ್ಯವಸ್ಥೆಯೇ ಜಿಎಸ್ ಟಿ. ತರಾತುರಿಯಲ್ಲಿ ಜಾರಿಗೆ ತಂದ ಜಿಎಸ್ ಟಿಯಲ್ಲಿ ಹಲವು ನ್ಯೂನತೆಗಳಿದ್ದವು. ಕೆಲವು ನ್ಯೂನತೆಗಳನ್ನು ಇನ್ನೂ ಸರಿಪಡಿಸಬೇಕಾಗಿದೆ.

published on : 29th June 2022

ಬೃಹತ್ ಕೈಗಾರಿಕೆಗಳಿಗೆ ಶೇ.10 ರಷ್ಟು 'ಸೂಪರ್ ತೆರಿಗೆ' ಘೋಷಿಸಿದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್

ಸಿಮೆಂಟ್, ಉಕ್ಕು ಮತ್ತು ಆಟೋಮೊಬೈಲ್‌ನಂತಹ ದೊಡ್ಡ ಪ್ರಮಾಣದ ಕೈಗಾರಿಕೆಗಳ ಮೇಲೆ ಶೇಕಡಾ 10 ರಷ್ಟು "ಸೂಪರ್ ಟ್ಯಾಕ್ಸ್" ವಿಧಿಸುವುದಾಗಿ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಅವರು  ಶುಕ್ರವಾರ ಘೋಷಿಸಿದ್ದಾರೆ.

published on : 24th June 2022

ಚಾರ್ಲಿ ಸಿನಿಮಾಗೆ ತೆರಿಗೆ ವಿನಾಯ್ತಿ ಘೋಷಿಸಿದ ರಾಜ್ಯ ಸರ್ಕಾರ

ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಸಿನಿಮಾಗೆ ರಾಜ್ಯ ಸರ್ಕಾರ ತೆರಿಗೆ ವಿನಾಯ್ತಿ ಘೋಷಿಸಿದೆ. 

published on : 18th June 2022

ನಗರದ 7 ಮಾಲ್ ಗಳಿಂದ ತೆರಿಗೆ ಪಾವತಿ ಬಾಕಿ: ಬಿಬಿಎಂಪಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಇದೂವರೆಗೆ ರೂ.2,093 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸಿದೆ, ಆದರೆ 44 ಮಾಲ್‌ಗಳ ಪೈಕಿ ಏಳು ಮಾಲ್‌ಗಳು ಇನ್ನೂ 46.70 ಕೋಟಿ ತೆರಿಗೆ ಪಾವತಿಸಬೇಕಾಗಿದೆ ಎಂದು ಬಿಬಿಎಂಪಿ (ಕಂದಾಯ) ವಿಶೇಷ ಆಯುಕ್ತ ಆರ್‌ಎಲ್ ದೀಪಕ್ ಅವರು ಶುಕ್ರವಾರ ಹೇಳಿದ್ದಾರೆ.

published on : 18th June 2022

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 'ಟ್ಯಾಕ್ಸಿ ಬಾಟ್' ಕಾರ್ಯನಿರ್ವಹಣೆ! ಏನಿದರ ವಿಶೇಷತೆ?

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಅರೆ ರೋಬೋಟಿಕ್ ಟೋಯಿಂಗ್ ಸಾಧನವನ್ನು ನಿಯೋಜಿಸಿದ ವಿಶ್ವದ ಎರಡನೇ ವಿಮಾನ ನಿಲ್ದಾಣವಾಗಿದೆ.

published on : 11th June 2022

ಮತ್ತೆ ಇ-ಫೈಲಿಂಗ್ ಪೋರ್ಟಲ್ ನಲ್ಲಿ ತಾಂತ್ರಿಕ ದೋಷ; ಸಮಸ್ಯೆ ಸರಿಪಡಿಸಿ ಎಂದು ಇನ್ಫೋಸಿಸ್ ಗೆ ಕೇಂದ್ರ ಸೂಚನೆ

I-T ಫೈಲಿಂಗ್ ಪೋರ್ಟಲ್ ಪ್ರಾರಂಭವಾದ ಒಂದು ವರ್ಷದ ನಂತರ ಮತ್ತೊಂದು ದೋಷದೊಂದಿಗೆ ಹಾನಿಗೊಳಗಾಗಿದ್ದು, ಕೂಡಲೇ ಸಮಸ್ಯೆಯನ್ನು ಸರಿಪಡಿಸುವಂತೆ ಕೇಂದ್ರ ಸರ್ಕಾರ ಇನ್ಫೋಸಿಸ್ ಸಂಸ್ಥೆಗೆ ನಿರ್ದೇಶಿಸಿದೆ.

published on : 7th June 2022

ಅಕ್ಷಯ್ ಕುಮಾರ್ ನಟನೆಯ 'ಸಾಮ್ರಾಟ್ ಪೃಥ್ವಿರಾಜ್': ಬಿಜೆಪಿ ಆಡಳಿತವಿರುವ ಉ.ಪ್ರ, ಮ.ಪ್ರ, ಉತ್ತರಾಖಂಡಗಳಲ್ಲಿ ತೆರಿಗೆ ವಿನಾಯಿತಿ

ಬಿಜೆಪಿ ಆಡಳಿತದ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳಲ್ಲಿ ಅಕ್ಷಯ್ ಕುಮಾರ್ ಅಭಿನಯದ 'ಸಾಮ್ರಾಟ್ ಪೃಥ್ವಿರಾಜ್' ಚಿತ್ರಕ್ಕೆ ತೆರಿಗೆ ಮುಕ್ತ ಎಂದು ಘೋಷಿಸಲಾಗಿದೆ. ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲಕ್ನೋದಲ್ಲಿ ಚಿತ್ರದ ವಿಶೇಷ ಪ್ರದರ್ಶನದ ನಂತರ ತಮ್ಮ ಸರ್ಕಾರದ ನಿರ್ಧಾರವನ್ನು ಪ್ರಕಟಿಸಿದರು.

published on : 3rd June 2022

ಉತ್ತರ ಪ್ರದೇಶದಲ್ಲಿ 'ಸಾಮ್ರಾಟ್ ಪೃಥ್ವಿರಾಜ್' ಚಿತ್ರಕ್ಕೆ ತೆರಿಗೆ ವಿನಾಯಿತಿ: ಸಿಎಂ ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶದಲ್ಲಿ ಅಕ್ಷಯ್ ಕುಮಾರ್ ಅಭಿನಯದ 'ಸಾಮ್ರಾಟ್ ಪೃಥ್ವಿರಾಜ್' ಚಿತ್ರಕ್ಕೆ ತೆರಿಗೆ ಮುಕ್ತಗೊಳಿಸಲಾಗಿದೆ. ಐತಿಹಾಸಿಕ ಆಧಾರಿತ ಚಿತ್ರವನ್ನು ತನ್ನ ಸಂಪುಟ ಸಹೋದ್ಯೋಗಿಗಳೊಂದಿಗೆ ಇಂದು ವೀಕ್ಷಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಈ ಚಿತ್ರಕ್ಕೆ ರಾಜ್ಯದಲ್ಲಿ ತೆರಿಗೆ ಮುಕ್ತಗೊಳಿಸುವುದಾಗಿ ಘೋಷಿಸಿದರು.

published on : 2nd June 2022

ರಾಜ್ಯದ ಉದ್ಯಮಿಗಳಿಗೆ ಬೆಳ್ಳಂಬೆಳಗ್ಗೆ ಐಟಿ ಶಾಕ್: 50ಕ್ಕೂ ಹೆಚ್ಚು ಕಡೆಗಳಲ್ಲಿ ಏಕಕಾಕ್ಕೆ ದಾಳಿ, ತೆರಿಗೆ ವಂಚನೆ ಆರೋಪ

ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಬಳಿಕ ಇದೀಗ ರಾಜ್ಯದ ಪ್ರಮುಖ ಉದ್ಯಮಿಗಳಿಗೆ ಇಂದು ಬುಧವಾರ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದೆ. ಬೆಳ್ಳಂಬೆಳಗ್ಗೆಯೇ ರಾಜ್ಯದ 50ಕ್ಕೂ ಹೆಚ್ಚು ಕಡೆಗಳಲ್ಲಿ ಏಕಕಾಲದಲ್ಲಿ ದಾಳಿ ಮಾಡಿ, ಶೋಧ ಕಾರ್ಯ ನಡೆಸಿದೆ. ಬೆಂಗಳೂರಿನಲ್ಲೇ 35ಕ್ಕೂ ಹೆಚ್ಚು ಕಡೆ ಐಟಿ ದಾಳಿ ನಡೆಸಲಾಗಿದೆ.

published on : 1st June 2022
1 2 3 4 5 6 > 

ರಾಶಿ ಭವಿಷ್ಯ