• Tag results for Team India

ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಸದಾಶಿವ್ ಪಾಟೀಲ್ ನಿಧನ

ಟೀಂ ಇಂಡಿಯಾ ಮಾಜಿ ಆಲ್‌ರೌಂಡರ್ ಸದಾಶಿವ್ ಪಾಟೀಲ್(86) ಅವರು ಕೊಲ್ಹಾಪುರದ ತಮ್ಮ ನಿವಾಸದಲ್ಲಿ ಮಂಗಳವಾರ ನಿಧನರಾಗಿದ್ದಾರೆ. ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ.

published on : 15th September 2020

ಲಂಕಾ ಪ್ರೀಮಿಯರ್ ಲೀಗ್ ಹರಾಜಿನಲ್ಲಿ ಟೀಂ ಇಂಡಿಯಾ ಮಾಜಿ ವೇಗಿ ಮುನಾಫ್ ಪಟೇಲ್

ಐಪಿಎಲ್ ಮಾದರಿಯಲ್ಲಿ ಶ್ರೀಲಂಕಾದಲ್ಲಿ ಪ್ರಾರಂಭವಾಗುತ್ತಿರುವ ಶ್ರೀಲಂಕಾ ಪ್ರೀಮಿಯರ್ ಲೀಗ್ (ಎಲ್ಪಿಎಲ್)ನಲ್ಲಿ ಭಾರತದ ಮಾಜಿ ವೇಗಿ ಮುನಾಫ್ ಪಟೇಲ್ ಮತ್ತು ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಹರಾಜು ಪ್ರವೇಶಿಸಲಿದೆ.

published on : 12th September 2020

ಪ್ರತಿಯೊಂದು ಪಂದ್ಯದಲ್ಲಿ ನಾನೇ ನಾಯಕನೆಂದು ತಿಳಿದು ಆಡಿದ್ದೇನೆ: ಕೆಎಲ್ ರಾಹುಲ್

ಕರ್ನಾಟಕದ ತಾರೆ ಕೆಎಲ್‌ ರಾಹುಲ್‌ಗೆ ಈ ಬಾರಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಅತ್ಯಂತ ಮಹತ್ವದ್ದಾಗಿದೆ. ಐಪಿಎಲ್‌ 2020 ಟೂರ್ನಿಯಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು ಮುನ್ನಡೆಸುವ ಮೂಲಕ ತಮ್ಮ ವೃತ್ತಿ ಬದುಕಿನಲ್ಲಿ ಮೊತ್ತ ಮೊದಲ ಬಾರಿ ಫ್ರಾಂಚೈಸಿ ತಂಡದ ನಾಯಕನಾಗಿ ಹೊಸ ಇನಿಂಗ್ಸ್‌ ಆರಂಭಿಸಲಿದ್ದಾರೆ.

published on : 25th August 2020

ಧೋನಿಯೊಂದಿಗೆ ಬಿಸಿಸಿಐ ಉತ್ತಮವಾಗಿ ನಡೆದುಕೊಳ್ಳಲಿಲ್ಲ: ಸಕ್ಲೈನ್ ಮುಷ್ತಾಕ್

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು ಭಾರತ ಕ್ರಿಕೆಟ್ ನಿಯಂತ್ರಣಾ ಮಂಡಳಿ(ಬಿಸಿಸಿಐ) ಉತ್ತಮವಾಗಿ ನಡೆಸಿಕೊಂಡಿಲ್ಲ ಎಂದು ಪಾಕಿಸ್ತಾನದ ಮಾಜಿ ಸ್ಪಿನ್ನರ್ ಸಕ್ಲೈನ್ ​​ಮುಷ್ತಾಕ್ ಹೇಳಿದ್ದಾರೆ.

published on : 23rd August 2020

ಫೆಬ್ರವರಿ 2021 ರಲ್ಲಿ ಇಂಗ್ಲೆಂಡ್‌ಗೆ ಆತಿಥ್ಯ ವಹಿಸಲು ಬದ್ಧ: ಗಂಗೂಲಿ

ಮುಂದಿನ ಪ್ರವಾಸ ಕಾರ್ಯಕ್ರಮವನ್ನು ಪೂರ್ಣಗೊಳಿಸಲು ಮಂಡಳಿ ಬದ್ಧ ಮತ್ತು ಮುಂದಿನ ವರ್ಷ ಫೆಬ್ರವರಿಯಲ್ಲಿ ಇಂಗ್ಲೆಂಡ್‌ಗೆ ಆತಿಥ್ಯ ವಹಿಸಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣಾ ಮಂಡಳಿ (ಬಿಸಿಸಿಐ) ಸೌರಭ್ ಗಂಗೂಲಿ ರಾಜ್ಯ ಸಂಘಗಳಿಗೆ ಪತ್ರ ಬರೆದಿದ್ದಾರೆ.

published on : 22nd August 2020

1971ರಲ್ಲೇ ಟೀಂ ಇಂಡಿಯಾ ವಿಶ್ವದ ನಂ.1 ಟೆಸ್ಟ್‌ ತಂಡವಾಗಿತ್ತು: ದೀಪ್‌ ದಾಸ್‌ಗುಪ್ತ

ಟೀಂ ಇಂಡಿಯಾ ಕಂಡ ಸಾರ್ವಕಾಲಿಕ ಶ್ರೇಷ್ಠ ಕ್ಯಾಪ್ಟನ್‌ಗಳ ಬಗ್ಗೆ ಮಾತನಾಡಿರುವ ಮಾಜಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್ ದೀಪ್‌ ದಾಸ್‌ಗುಪ್ತ, 1971ರಲ್ಲಿ ಭಾರತ ತಂಡ ವಿಶ್ವದ ಅನಧಿಕೃತ ನಂ.1 ಟೆಸ್ಟ್‌ ತಂಡವಾಗಿತ್ತು ಎಂದಿದ್ದಾರೆ.

published on : 19th August 2020

ಸುರೇಶ್‌ ರೈನಾ ವಿರುದ್ಧ ಶಾಂತ ಸ್ವಭಾವದ ಧೋನಿ ಗರಂ ಆಗಿದ್ದ ಪ್ರಸಂಗವನ್ನು ಸ್ಮರಿಸಿದ ಆರ್‌ಪಿ ಸಿಂಗ್‌

ಮಹೇಂದ್ರ ಸಿಂಗ್‌ ಧೋನಿ ಭಾರತದ ನಾಯಕತ್ವ ವಹಿಸಿಕೊಂಡ ಆರಂಭದಿಂದ ಕೊನೆಯವರೆಗೂ ಅತ್ಯಂತ ತಾಳ್ಮೆ ಹಾಗೂ ಶಾಂತ ಸ್ವಭಾವದಿಂದ ತಂಡವನ್ನು ಮುನ್ನಡೆಸಿದ್ದರು. ಈ ಕಾರಣದಿಂದಲೇ ಅವರಿಗೆ ಕ್ಯಾಪ್ಟನ್‌ ಕೂಲ್‌ ಎಂಬ ಬಿರುದು ನೀಡಲಾಯಿತು. ಆದರೂ, ಒಮ್ಮೆ ಎಂಎಸ್ ಧೋನಿ ತಾಳ್ಮೆ ಕಳೆದುಕೊಂಡಿದ್ದರು ಎಂದು ಮಾಜಿ ವೇಗಿ ಆರ್‌ಪಿ ಸಿಂಗ್‌ ಹೇಳಿದ್ದಾರೆ.

published on : 19th August 2020

2024ರ ಸಾರ್ವತ್ರಿಕ ಚುನಾವಣೆಯಲ್ಲಿ ಎಂಎಸ್ ಧೋನಿ ಸ್ಪರ್ಧಿಸಬೇಕು: ಸುಬ್ರಮಣಿಯನ್ ಸ್ವಾಮಿ

ಭಾರತ ತಂಡಕ್ಕೆ ಎರಡು ವಿಶ್ವಕಪ್‌ ಗೆದ್ದುಕೊಟ್ಟ ಅಪ್ರತಿಮ ನಾಯಕ ಎಂಎಸ್‌ ಧೋನಿ, ಕೊನೆಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿಬದುಕಿಗೆ ವಿದಾಯ ಹೇಳಿದ್ದಾರೆ. ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆ ಮೂಲಕ ವಿಡಿಯೋ ಒಂದನ್ನು ಹಂಚಿಕೊಂಡ ಕ್ಯಾಪ್ಟನ್‌ ಕೂಲ್‌, ನಿವೃತ್ತಿ ವಿಚಾರವನ್ನು ಶನಿವಾರ ಬಹಿರಂಗ ಪಡಿಸಿದ್ದರು.

published on : 16th August 2020

ಎಂಎಸ್ ಧೋನಿ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ರೈನಾ!

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿದಾಯ ಘೋಷಿಸಿದ ಬೆನ್ನಲ್ಲೇ ಸುರೇಶ್ ರೈನಾ ಸಹ ಗುಡ್ ಬೈ ಹೇಳಿದ್ದಾರೆ.

published on : 15th August 2020

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಎಂಎಸ್ ಧೋನಿ!

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ವಿದಾಯ ಘೋಷಿಸಿದ್ದಾರೆ. 

published on : 15th August 2020

ಸೆಹ್ವಾಗ್ ಮಾತು ಕೇಳಿದ್ದರೆ ಹೆಚ್ಚು ಕಾಲ ನಾನು ತಂಡದಲ್ಲಿ ಉಳಿಯುತ್ತಿದ್ದ: ಆಕಾಶ್ ಚೋಪ್ರಾ

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಮಾತು ಕೇಳಿದ್ದರೆ ನಾನು ತಂಡದಲ್ಲಿ ಉಳಿಯುತ್ತಿದ್ದೆನೋ ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಹೇಳಿದ್ದಾರೆ.

published on : 14th August 2020

ಜಾಗತಿಕವಾಗಿ ಕೊಹ್ಲಿ, ರೋಹಿತ್, ಧೋನಿ ಅತ್ಯಂತ ಜನಪ್ರಿಯ ಕ್ರಿಕೆಟಿಗರು: ಅಧ್ಯಯನ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಜನಪ್ರಿಯತೆಗೆ ಯಾವುದೇ ಮಿತಿಯಿಲ್ಲ ಎಂಬುದನ್ನು ಮತ್ತೊಮ್ಮೆ ಅಧ್ಯಯನವೊಂದು ಪುನಃ ದೃಢಪಡಿಸಿದ್ದು ಕೊಹ್ಲಿ ವಿಶ್ವದ ಅತ್ಯಂತ ಜನಪ್ರಿಯ ಕ್ರಿಕೆಟಿಗ ಎಂದು ತಿಳಿದುಬಂದಿದೆ.

published on : 10th August 2020

ಉದ್ದೇಶಪೂರ್ವಕವಾಗಿ 'ಬೀಮರ್‌' ಹಾಕಿದ್ದೆ': ಧೋನಿ ಕ್ಷಮೆ ಕೋರಿದ ಘಟನೆ ನೆನೆದ ಅಖ್ತರ್

ಫೈಸಲಾಬಾದ್‌ನಲ್ಲಿ ಭಾರತ ವಿರುದ್ಧದ 2006ರಲ್ಲಿ ನಡೆದಿದ್ದ ಟೆಸ್ಟ್ ಸರಣಿಯ ಎರಡನೇ ಪಂದ್ಯದ ವೇಳೆ ಎಂಎಸ್ ಧೋನಿಗೆ ಉದ್ದೇಶಪೂರ್ವಕವಾಗಿ ಬೀಮರ್ ಹಾಕಿದ್ದ ಬಗ್ಗೆ ವಿಷಾದಿಸುತ್ತೇನೆ ಎಂದು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಒಪ್ಪಿಕೊಂಡಿದ್ದಾರೆ. 

published on : 9th August 2020

ಧನಶ್ರೀ ವರ್ಮಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಯಜುವೇಂದ್ರ ಚಹಾಲ್

ಟೀಂ ಇಂಡಿಯಾ ಪ್ರೀಮಿಯರ್‌ ಸ್ಪಿನ್ನರ್‌ ಯಜ್ವೇಂದ್ರ ಚಹಲ್‌ ಶನಿವಾರ ನಿಶ್ಚಿತಾರ್ಥ ಮಾಡಿಕೊಂಡಿರುವ ವಿಚಾರವನ್ನು ಸೋಶಿಯಲ್‌ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಕೊರೊನಾ ವೈರಸ್‌ ಲಾಕ್‌ಡೌನ್‌ ಸಮಯದಲ್ಲಿ ಮನೆಯಲ್ಲಿಯೇ ತಮ್ಮ ಸಮಯವನ್ನು ಕಳೆಯುತ್ತಿರುವ ಚಹಲ್‌, ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದಾರೆ.

published on : 8th August 2020

ಪ್ರೇಕ್ಷಕರಿಗೆ ಅನುಮತಿಸಿದರೆ ಮೆಲ್ಬೋರ್ನ್​ನಲ್ಲೆ ಆಸ್ಟ್ರೇಲಿಯಾ VS ಭಾರತ ಬಾಕ್ಸಿಂಗ್ ಡೇ ಟೆಸ್ಟ್: ಕ್ರಿಕೆಟ್ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ಮತ್ತು ಭಾರತ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಆಯೋಜಿಸುವ ಇಚ್ಛೆಯನ್ನು ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣ ಕೈಬಿಟ್ಟಿಲ್ಲ. 

published on : 8th August 2020
1 2 3 4 5 6 >