- Tag results for Temple
![]() | ಗುಜರಾತ್: ಸೋಮನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್!ಚಂದ್ರಯಾನ-3 ಯಶಸ್ವಿ ನಂತರ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಅವರು ದೇಶದ ವಿವಿಧ ಪವಿತ್ರ ಸ್ಥಳಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. |
![]() | ಗೋವುಗಳನ್ನು ಕಸಾಯಿಖಾನೆಗೆ ಮಾರುವ ಮೂಲಕ ಇಸ್ಕಾನ್ ಅತಿದೊಡ್ಡ ವಂಚನೆ; ಮನೇಕಾ ಗಾಂಧಿ ಆರೋಪ ತಳ್ಳಿಹಾಕಿದ ಇಸ್ಕಾನ್ಗೋವುಗಳ ಸಾಕಣೆ ಹೆಸರಲ್ಲಿ ಅವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವ ಮೂಲಕ ಭಾರತದಲ್ಲಿ ಅತಿದೊಡ್ಡ ವಂಚನೆಯನ್ನು ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ನಡೆಸುತ್ತಿದೆ ಎಂಬ ಬಿಜೆಪಿ ಸಂಸದೆ ಮನೇಕಾ ಗಾಂಧಿ ಆರೋಪಗಳನ್ನು ಇಸ್ಕಾನ್ ರಾಷ್ಟ್ರೀಯ ವಕ್ತಾರ ಯುಧಿಷ್ಟಿರ ಗೋವಿಂದ ದಾಸ್ ತಳ್ಳಿಹಾಕಿದ್ದಾರೆ. |
![]() | ಸಾಲ ಮಾಡಿ ಅದ್ಧೂರಿ ಮದುವೆ ಮಾಡುವುದು ನಿಲ್ಲಿಸಿ; ಚಾಮರಾಜನಗರಕ್ಕೆ ಭೇಟಿ ನೀಡಿ ಮೌಢ್ಯ ತೊರೆದಿದ್ದೇನೆ: ಸಿಎಂ ಸಿದ್ದರಾಮಯ್ಯಸಾಲ ಮಾಡಿ ಅದ್ಧೂರಿ ಮದುವೆ ಮಾಡುವುದು ಬಿಟ್ಟು ಸಾಲ ಮಾಡಿ ವ್ಯವಸಾಯ ಮಾಡಿ ಜೀವನ ರೂಪಿಸಿಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜನತೆಗೆ ಕರೆ ನೀಡಿದ್ದಾರೆ. |
![]() | ಶಕ್ತಿ ಯೋಜನೆಯಿಂದ ದೇವಸ್ಥಾನಗಳ ಆದಾಯ ಹೆಚ್ಚಳ: ಸಿಎಂ ಸಿದ್ದರಾಮಯ್ಯರಾಜ್ಯದಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕಾಗಿ ಜಾರಿಗೊಳಿಸಿದ ಶಕ್ತಿ ಯೋಜನೆಯಿಂದ ದೇವಸ್ಥಾನಗಳ ಆದಾಯ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ. |
![]() | ಕೆನಡಾದಲ್ಲಿ ಹಿಂದೂ ದೇವಾಲಯ, ಭಾರತೀಯ ಉದ್ಯಮಿಗಳ ಮೇಲೆ ಖಲಿಸ್ತಾನಿಗಳು ದಾಳಿ ಮಾಡಬಹುದು: ಗುಪ್ತಚರ ಸಂಸ್ಥೆಕೆನಡಾದಲ್ಲಿ ಖಲಿಸ್ತಾನ್ ಪರ ರಾಜಕೀಯ ಬೆಂಬಲ ಹೆಚ್ಚುತ್ತಿರುವ ಬಗ್ಗೆ ಭಾರತೀಯ ಗುಪ್ತಚರ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿದ್ದು ಕೆನಡಾದಲ್ಲಿ ನೆಲೆಸಿರುವ ಹಿಂದೂ ದೇವಾಲಯಗಳು, ಭಾರತೀಯರು ಮತ್ತು ಭಾರತೀಯ ಅಧಿಕಾರಿಗಳ ವಿರುದ್ಧ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ. |
![]() | ರಾಜ್ಯದ ಹೊಯ್ಸಳ ದೇವಾಲಯಗಳು ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆ: ದೇಶಕ್ಕೆ ಮತ್ತಷ್ಟು ಹೆಮ್ಮೆ ಎಂದ ಪ್ರಧಾನಿಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕರ್ನಾಟಕದ ಹೊಯ್ಸಳ ದೇವಾಲಯಗಳನ್ನು ಸೇರ್ಪಡೆ ಮಾಡಲಾಗಿದೆ. ಕರ್ನಾಟಕದ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ಪ್ರಸಿದ್ಧ ಹೊಯ್ಸಳ ದೇವಾಲಯಗಳನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೊ) ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿದೆ. |
![]() | ದೇವಸ್ಥಾನದಲ್ಲಿ ನಮಾಜ್ ಮಾಡಿದ ತಾಯಿ, ಮಗಳ ಬಂಧನ!ಶಿವ ದೇವಸ್ಥಾನದಲ್ಲಿ ನಮಾಜ್ ಮಾಡಿದ ಆರೋಪದ ಮೇಲೆ 38 ವರ್ಷದ ಮಹಿಳೆ ಮತ್ತು ಆಕೆಯ ಮಗಳನ್ನು ಉತ್ತರ ಪ್ರದೇಶದ ಬರೇಲಿಯಲ್ಲಿ ಭಾನುವಾರ ಬಂಧಿಸಲಾಗಿದೆ. |
![]() | ದೇವಾಲಯಗಳ ಒತ್ತುವರಿ ಶೀಘ್ರದಲ್ಲೇ ತೆರವು: ಸಚಿವ ರಾಮಲಿಂಗಾರೆಡ್ಡಿಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಾಲಯಗಳ ಸ್ಥಿರಾಸ್ತಿಗಳ ಸಮೀಕ್ಷೆ ನಡೆಸಿ, ಎಲ್ಲಾ ಒತ್ತುವರಿ ತೆರವಿಗೆ ಕ್ರಮಕೈಗೊಳ್ಳಲಾಗುವುದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಶನಿವಾರ ಹೇಳಿದರು. |
![]() | ಮನೆ ಬಾಗಿಲಿಗೆ ಬರಲಿದೆ ಜೀವನದಿ ಕಾವೇರಿ ತೀರ್ಥ ಪೂರೈಕೆ; ಅಂಚೆ ಇಲಾಖೆ ಯೋಜನೆ!ತಲಕಾವೇರಿಯ ‘ಬ್ರಹ್ಮಕುಂಡಿಕೆ’ಯಲ್ಲಿ ತೀರ್ಥರೂಪಿಣಿಯಾಗಿ ಉಕ್ಕಲಿರುವ ಕಾವೇರಿ ತೀರ್ಥವನ್ನು ಭಾರತೀಯ ಅಂಚೆ ಇಲಾಖೆಯು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದತ್ತಿ ಇಲಾಖೆಯ ಸಹಯೋಗದೊಂದಿಗೆ ಕೇವಲ 300 ರೂ. ಗಳಲ್ಲಿ ಅಂಚೆ ಮೂಲಕ ನಿಮ್ಮ ಮನೆ ಬಾಗಿಲಿಗೆ ತಲುಪಿಸಲಿದೆ. |
![]() | ಪಂಚತಂತ್ರ ಕಥೆಗಳ ಹಿಂದಿರುವ ವ್ಯಕ್ತಿ ದುರ್ಗಸಿಂಹನ ಕಥೆ ಹೇಳುತ್ತದೆ ಈ ದೇವಾಲಯ!ಗದಗ ಜಿಲ್ಲೆಯ ರೋಣ ತಾಲೂಕಿನ ಸವದಿ ಗ್ರಾಮದ ದುರ್ಗಸಿಂಹ ಈ ಕಥೆಗಳ ಮೂಲ ಲೇಖಕ. ಅವುಗಳನ್ನು ಆತ ಅಸಂಖ್ಯಾತ ಭಾರತೀಯ ಮತ್ತು ವಿದೇಶಿ ಭಾಷೆಗಳಿಗೆ ಅನುವಾದಿಸಿದ್ದಾನೆ ಎಂದು ಕೆಲವು ಇತಿಹಾಸ ಪ್ರಾಧ್ಯಾಪಕರು ಪ್ರತಿಪಾದಿಸುತ್ತಾರೆ. |
![]() | ಉಜ್ಜಯನಿ ಮಹಾಕಾಳೇಶ್ವರ ದೇವಾಲಯದಲ್ಲಿ ಬಿಎಸ್ ಯಡಿಯೂರಪ್ಪ ವಿಶೇಷ ಪೂಜೆ ಸಲ್ಲಿಕೆ!ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರಿಂದು ಮಧ್ಯಪ್ರದೇಶದ ಉಜ್ಜಯನಿ ಮಹಾಕಾಳೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. |
![]() | 'ಹೆಮ್ಮೆಯ ಹಿಂದೂ' ಬ್ರಿಟನ್ ಪ್ರಧಾನಿ ರಿಷಿ ಸುನಕ್ ಪತ್ನಿ ಜೊತೆಗೆ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಅವರು ಇಂದು ಭಾನುವಾರ ಬೆಳ್ಳಂಬೆಳಗ್ಗೆಯೇ ಜಿ20 ಶೃಂಗಸಭೆ ಮುಂದುವರಿಯುವಿಕೆಗೆ ಮುನ್ನವೇ ತಮ್ಮ ಪತ್ನಿ ಅಕ್ಷತಾ ಮೂರ್ತಿ ಜೊತೆಗೂಡಿ ದೆಹಲಿಯ ಅಕ್ಷರಧಾಮ ದೇವಸ್ಥಾನಕ್ಕೆ ತೆರಳಿ ಪ್ರಾರ್ಥನೆ ಪೂಜೆ ಸಲ್ಲಿಸಿದರು. |
![]() | 'ಜವಾನ್' ಬಿಡುಗಡೆ ಮುನ್ನ ತಿರುಪತಿ ಬಾಲಾಜಿ ಮೊರೆ ಹೋದ ಬಾಲಿವುಡ್ ನಟ ಶಾರೂಕ್ ಖಾನ್, ವಿಡಿಯೊ ನೋಡಿಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಚಿತ್ರ ಜವಾನ್ ತೆರೆಗೆ ಬರಲು ಸಜ್ಜಾಗಿದೆ. ಈ ಸಂದರ್ಭದಲ್ಲಿ ಸಿನಿಮಾದ ಸಕ್ಸಸ್ ಗಾಗಿ ಅವರು ಇಂದು ಮಂಗಳವಾರ ಆಂಧ್ರ ಪ್ರದೇಶದ ತಿರುಪತಿ ಬಾಲಾಜಿ ದೇವರ ಮೊರೆ ಹೋಗಿದ್ದಾರೆ. |
![]() | ಗದಗ: ಸೋಮೇಶ್ವರ ದೇವಸ್ಥಾನದಲ್ಲಿ ನಿಧಿ ಶೋಧ; ಶಿವನ ಮೂರ್ತಿಯನ್ನು ವಿರೂಪಗೊಳಿಸಿದ ದುಷ್ಕರ್ಮಿಗಳುಲಕ್ಕುಂಡಿಯ ಐತಿಹಾಸಿಕ ಸೋಮೇಶ್ವರ ದೇವಸ್ಥಾನದ ಶಿವನ ಮೂರ್ತಿಯನ್ನು ಕೆಲ ಕಿಡಿಗೇಡಿಗಳು ಶುಕ್ರವಾರ ಹೊರತೆಗೆದಿದ್ದಾರೆ. ದೇವಸ್ಥಾನದ ಅರ್ಚಕರು ಪೊಲೀಸರಿಗೆ ದೂರು ನೀಡಿದ್ದು, ಘಟನೆ ಬೆಳಕಿಗೆ ಬಂದಿದೆ. ನಿಧಿಯನ್ನು ಪರಿಶೀಲಿಸಲು ದುಷ್ಕರ್ಮಿಗಳು ಶಿವನ ಮೂರ್ತಿಯನ್ನು ತೆಗೆದು ಅದರಡಿಯಲ್ಲಿ 10 ಅಡಿಗೂ ಹೆಚ್ಚು ಆಳಕ್ಕೆ ನೆಲವನ್ನು ಅಗೆದಿದ್ದಾರೆ. |
![]() | ಗದಗ: ಆಂಜನೇಯ ದೇವಾಲಯದ ಅರ್ಚಕರಾಗಿ ಕೆಲಸ ನಿರ್ವಹಿಸುತ್ತಿರುವ ಮುಸ್ಲಿಂ ವ್ಯಕ್ತಿ; ಕೋಮು ಸೌಹಾರ್ದತೆಗೆ ಉದಾಹರಣೆ!ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದ ಕೋರಿಕೊಪ್ಪ ಹನುಮಾನ ದೇವಸ್ಥಾನದಲ್ಲಿ ಕಳೆದ 150 ವರ್ಷಗಳಿಂದ ಮುಸ್ಲಿಮರು ಅರ್ಚಕ ವೃತ್ತಿ ನಿರ್ವಹಿಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಹಿಂದೂ ಸಹೋದರರು ಅವರಿಗೆ ವಿಶೇಷ ಹಕ್ಕು ನೀಡಿದ್ದಾರೆ. |