• Tag results for Tokyo olympics

ಟೋಕಿಯೊ ಒಲಿಂಪಿಕ್ಸ್ ನಡೆಸಲು ಕಡೇ ಅವಕಾಶ, ತಪ್ಪಿದರೆ ರದ್ದು: ಐಒಸಿ ಮುಖ್ಯಸ್ಥ

ಮುಂದಿನ ವರ್ಷಕ್ಕೆ ಮುಂದೂಡಲಾಗಿರುವ ಟೋಕಿಯೊ ಒಲಿಂಪಿಕ್ಸ್ ಕೂಟವನ್ನು ಮತ್ತೊಮ್ಮೆ ಮುಂದೂಡಲಾಗುವುದಿಲ್ಲ. ಹೀಗಾಗಿ ಆಯೋಜಕರಿಗೆ ಇರುವುದು ಇದೊಂದೇ ಅವಕಾಶ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಮುಖ್ಯಸ್ಥ ಥಾಮಸ್ ಬ್ಯಾಕ್ ಹೇಳಿದ್ದಾರೆ.

published on : 21st May 2020

ಕೋವಿಡ್ ನಿಯಂತ್ರಣಕ್ಕೆ ಬಾರದಿದ್ದರೆ ಟೋಕಿಯೊ ಒಲಿಂಪಿಕ್ಸ್ ರದ್ದು: ಯೊಶಿರೊ

ಮುಂದಿನ ವರ್ಷ ಒಂದು ವೇಳೆ ಕೋವಿಡ್-19 ನಿಯಂತ್ರಣಕ್ಕೆ ಬಾರದಿದ್ದರೆ ಈಗಾಗಲೇ ಮುಂದೂಡಿಕೆಯಾಗಿರುವ ಟೋಕಿಯೊ ಒಲಿಪಿಕ್ಸ್ ರದ್ದುಗೊಳ್ಳಲಿದೆ ಎಂದು ಒಲಿಂಪಿಕ್ ಸಂಘಟನಾ ಸಮಿತಿಯ ಅಧ್ಯಕ್ಷ ಯೋಶಿರೊ ಮೋರಿ ಹೇಳಿದ್ದಾರೆ.

published on : 28th April 2020

ಕೊರೋನಾ ಭೀತಿಯಿಂದ ಮುಂದೂಡಿಕೆಯಾಗಿದ್ದ ಟೋಕಿಯೊ ಒಲಿಂಪಿಕ್ಸ್ 2021ರ ಜುಲೈ 23ರಿಂದ ಆರಂಭ

ಕೊವಿಡ್ -19 ಸೋಂಕಿನ ಹಿನ್ನೆಲೆಯಲ್ಲಿ ಕಳೆದ ವಾರ ಮುಂದೂಡಲ್ಪಟ್ಟಿದ್ದ ಟೋಕಿಯೊ ಒಲಿಂಪಿಕ್ಸ್ -2020 ಕ್ರೀಡಾಕೂಟ ಮುಂದಿನ ವರ್ಷದ ಜುಲೈ 23 ರಿಂದ ಆಗಸ್ಟ್ 8 ರವರೆಗೆ ನಡೆಯಲಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

published on : 30th March 2020

ಕೊರೋನಾವೈರಸ್ ಕಾರಣ ಟೋಕಿಯೊ ಒಲಿಂಪಿಕ್ಸ್  2021ಕ್ಕೆ ಮುಂದೂಡಿಕೆ -ಐಒಸಿ

ಜಾಗತಿಕ ಸಾಂಕ್ರಾಮಿಕ ರೋಗವಾಗಿ ಮಾರ್ಪಟ್ಟಿರುವ ಕೊರೊನಾ ವೈರಸ್ ಭೀತಿ ಹಾಗೂ ಜಾಗತಿಕ ಒತ್ತಡದಿಂದಾಗಿ, ಜಪಾನ್ ಈ ವರ್ಷ 2021 ರಲ್ಲಿ ಟೋಕಿಯೊ ಒಲಿಂಪಿಕ್ಸ್ ನಡೆಸಲು ನಿರ್ಧರಿಸಿದೆ.

published on : 24th March 2020

ಕೊರೋನಾ ವಿರುದ್ಧ ಹೋರಾಟಕ್ಕೆ ತನ್ನ ಆರು ತಿಂಗಳ ಸಂಬಳ ನೀಡಿದ ಭಜರಂಗ್ ಪುನಿಯಾ

ಭಾರತದ ಖ್ಯಾತ ಕುಸ್ತಿಪಟು  ಭಜರಂಗ್ ಪುನಿಯಾ ಸೋಮವಾರ ತನ್ನ ಆರು ತಿಂಗಳ ಸಂಬಳವನ್ನು ಮಾರಕ ಕೊರೋನಾವೈರಸ್  ಸಾಂಕ್ರಾಮಿಕ ರೋಗದ ವಿರುದ್ಧ ಸೆಣೆಸುವವರಿಗಾಗಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಅಲ್ಲದೆ ಈ ವರ್ಷ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್ ಅನ್ನು ಮುಂದೂಡಲು ಕರೆ ನೀಡಿದರು, 

published on : 24th March 2020

ಟೋಕಿಯೊ ಒಲಿಂಪಿಕ್ಸ್: ಕಾದು ನೋಡಲು ಐಒಎ ನಿರ್ಧಾರ

ಮುಂಬರುವ ಟೋಕಿಯೊ ಒಲಿಂಪಿಕ್ಸ್ ನಲ್ಲಿ ದೇಶ ಪಾಲ್ಗೊಳ್ಳುವ ಕುರಿತು ಯಾವುದೇ ನಿರ್ಧಾರ ಕೈಗೊಳ್ಳುವ ಬಗ್ಗೆ ಕನಿಷ್ಠ ಒಂದು ತಿಂಗಳು ಕಾದು ನೋಡಲಾಗುವುದು ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ ಸೋಮವಾರ ಹೇಳಿದೆ.

published on : 23rd March 2020

ಟೋಕಿಯೋ ಒಲಿಂಪಿಕ್ಸ್ ಮುಂದೂಡುವ ಬಗ್ಗೆ ಜಪಾನ್ ಪ್ರಧಾನಿ ಸುಳಿವು

ಮುಂಬರುವ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕ್ರೀಡಾಪಟುಗಳ ಆರೋಗ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುವುದು ಎಂದು ಜಪಾನ್ ಪ್ರಧಾನಮಂತ್ರಿ ಶಿಂಜೊ ಅಬೆ ಹೇಳಿದ್ದಾರೆ. ಈ ಮೂಲಕ ಕೂಟವನ್ನು ಮುಂದೂಡುವ ಕುರಿತು ಸುಳಿವು ನೀಡಿದ್ದಾರೆ.

published on : 23rd March 2020

ಒಲಂಪಿಕ್ಸ್ ಇತಿಹಾಸದಲ್ಲೇ ಮೊದಲು! ಬಾಕ್ಸಿಂಗ್ ಕಣಕ್ಕಿಳಿಯಲಿದ್ದಾರೆ 9 ಭಾರತೀಯರು

ವಿಶ್ವ ಚಾಂಪಿಯನ್‌ಶಿಪ್ ನಲ್ಲಿ ಕಂಚಿನ ಪದಕ ವಿಜೇತ ಮನೀಶ್ ಕೌಶಿಕ್ (63 ಕೆಜಿ) ಬುಧವಾರ ನಡೆದ ಏಷ್ಯಾ / ಓಷಿಯಾನಿಯಾ ಒಲಿಂಪಿಕ್ಸ್ ಕ್ವಾಲಿಫೈಯರ್ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಸೊಗಸಾದ ಪ್ರದರ್ಶನ ನೀಡಿ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ. ಈ ಮೂಲಕ ಭಾರತ ಟೋಕೊಯೊ ಒಲಿಂಪಿಕ್ಸ್ ನಲ್ಲಿ ಒಟ್ಟು ಒಂಬತ್ತು ಬಾಕ್ಸರ್ ಗಳ ತಂಡವನ್ನು ಕಳುಹಿಸಲಿದೆ.  

published on : 11th March 2020

ಟೋಕಿಯಾ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತದ ಎಂಟು ಬಾಕ್ಸರ್‌ಗಳು

ಏಷ್ಯಾ/ಓಷಿಯಾನಿಯಾ ಒಲಿಂಪಿಕ್ಸ್ ಅರ್ಹತಾ ಬಾಕ್ಸಿಂಗ್ ಪಂದ್ಯಾವಳಿಯ ಸೆಮಿಫೈನಲ್ಸ್ ಪ್ರವೇಶಿಸುವ ಮೂಲಕ ಭಾರತದ ಎಂಟು ಬಾಕ್ಸರ್‌ಗಳು, ಟೋಕಿಯೊ ಟಿಕೆಟ್ ಪಡೆದುಕೊಂಡಿದ್ದಾರೆ. ಇದು ಭಾರತ ಈ ಟೂರ್ನಿಯಲ್ಲಿ ನೀಡಿದ ಅತ್ಯುತಮ ಪ್ರದರ್ಶನವಾಗಿದೆ.

published on : 10th March 2020

ಬಾಕ್ಸಿಂಗ್: ಭರ್ಜರಿ ಗೆಲುವಿನೊಡನೆ ಟೊಕಿಯೋ ಟಿಕೆಟ್ ಗಿಟ್ಟಿಸಿದ ಮೇರಿ ಕೋಮ್

ಆರು ಬಾರಿಯ ವಿಶ್ವ ಚಾಂಪಿಯನ್ ಎಂ ಸಿ ಮೇರಿ ಕೋಮ್ (51 ಕೆಜಿ) ಸೋಮವಾರ ನಡೆದ ಬಾಕ್ಸಿಂಗ್ ಹಣಾಹಣಿಯಲ್ಲಿ ಫಿಲಿಪೈನ್ಸ್ ಐರಿಶ್ ಮ್ಯಾಗ್ನೊ ವಿರುದ್ಧ ಸುಲಭ ಗೆಲುವು ಸಾಧಿಸುವುದರೊಡನೆ ಏಷ್ಯನ್ ಕ್ವಾಲಿಫೈಯರ್ಸ್ ಸೆಮಿಫೈನಲ್‌ಗೆ ಮುನ್ನಡೆದಿದ್ದಾರೆ. ಇದೇ ವೇಳೆ ಮೇರಿ ಕೋಮ್ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

published on : 9th March 2020

ಬಾಕ್ಸಿಂಗ್: ಪೂಜಾ ರಾಣಿ, ವಿಕಾಸ್ ಕ್ರಿಶನ್ ಗೆ ಜಯ,ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಜೋಡಿ

ಏಷ್ಯಾ ಚಾಂಪಿಯನ್ ಪೂಜಾ ರಾಣಿ (75 ಕೆಜಿ) ಮತ್ತು ವಿಕಾಸ್ ಕ್ರಿಶನ್ (69 ಕೆಜಿ) ಈ ವರ್ಷದ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಬಾಕ್ಸರ್‌ಗಳಾಗಿದ್ದಾರೆ.ಭಾನುವಾರ ಜೋರ್ಡಾನಿನ ಅಮ್ಮನ್ ನಲ್ಲಿ ನಡೆದ ಕ್ರಾರ್ಟರ್ ಫೈನಲ್ಸ್ ನಲ್ಲಿ ಜಯಗಳಿಸಿ ಸೆಮೀಸ್ ಪ್ರವೇಶಿಸುವ ಮೂಲಕ  ಒಲಿಂಪಿಕ್ಸ್‌ಗೆ 

published on : 8th March 2020

ರೇಸ್ ವಾಕಿಂಗ್ ನಲ್ಲಿ ಭಾವನಾ ಜಾಟ್‌ ಹೊಸ ದಾಖಲೆ: ಟೋಕಿಯೋ ಒಲಂಪಿಕ್ಸ್ ಗೆ ಆಯ್ಕೆ 

ನಡಿಗೆ ಸ್ಪರ್ಧೆಯಲ್ಲಿ ರಾಜಸ್ತಾನದ ಭಾವನಾ ಜಾಟ್ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದು, ಟೋಕಿಯೋ ಒಲಂಪಿಕ್ಸ್ ಗೆ ಆಯ್ಕೆಯಾಗಿದ್ದಾರೆ.

published on : 17th February 2020

ಶೂಟಿಂಗ್ ಚಾಂಪಿಯನ್‌ಶಿಪ್: ಫೈನಲ್ಸ್ ತಲುಪಿ ಒಲಿಂಪಿಕ್ಸ್  ಅರ್ಹತೆ ಗಿಟ್ಟಿಸಿದ ಚಿಂಕಿ ಯಾದವ್

ಶುಕ್ರವಾರ ನಡೆದ ಏಷ್ಯಾ ಚಾಂಪಿಯನ್‌ಶಿಪ್‌ನ ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಭಾರತದ ಯುವ ಶೂಟರ್ ಚಿಂಕಿ ಯಾದವ್ ಬೆಳ್ಳಿ ಗೆದ್ದು, ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ನಲ್ಲಿ ಭಾರತ ಪಡೆದ 11ನೇ ಸ್ಥಾನವಾಗಿದೆ.  

published on : 8th November 2019

ರಷ್ಯಾ ಮಣಿಸಿ ಒಲಿಂಪಿಕ್ಸ್ ಗೆ ಪ್ರವೇಶ ಪಡೆದ ಭಾರತ ಪುರುಷರ ತಂಡ

ಸ್ಟಾರ್ ಆಟಗಾರರಾದ ರೂಪೇಂದ್ರ ಬಾರಿಸಿದ ಹ್ಯಾಟ್ರಿಕ್ ಹಾಗೂ ಆಕಾಶ್ ದೀಪ್ ಬಾರಿಸಿದ ಎರಡು ಗೋಲುಗಳ ಸಹಾಯದಿಂದ ಭಾರತ 7-1 ರಿಂದ ಒಲಿಂಪಿಕ್ಸ್ ಹಾಕಿ ಅರ್ಹತಾ ಪಂದ್ಯದಲ್ಲಿ ರಷ್ಯಾ...

published on : 3rd November 2019

ಸೋತರೂ ಮೂರನೇ ಬಾರಿಗೆ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಭಾರತ ವನಿತೆಯರು!

ಒಲಿಂಪಿಕ್ಸ್ ಅರ್ಹತಾ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಎರಡನೇ ಪಂದ್ಯದಲ್ಲಿ ಸೋತರೂ ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದೆ. ಎರಡನೇ ಪಂದ್ಯದಲ್ಲಿ ಅಮೆರಿಕ ವಿರುದ್ಧ 4-1 ರಿಂದ ನಿರಾಸೆ ಅನುಭವಿಸಿದರೂ, ಎರಡೂ ಪಂದ್ಯಗಳ ಗೋಲುಗಳ ಲೆಕ್ಕಾಚಾರದ ಮೇಲೆ ಭಾರತ ಒಲಿಂಪಿಕ್ಸ್ ಗೆ ಪ್ರವೇಶಿಸಿದೆ.

published on : 2nd November 2019
1 2 >