• Tag results for Transport

ಮೊದಲ ಬಾರಿಗೆ ರೈಲು ಮೂಲಕ ಬಸ್ ಗಳ ಸಾಗಣೆ ಆರಂಭ- ವಿಡಿಯೋ

ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕ ಸ್ನೇಹಿಯಾಗಲು ಒಂದಲ್ಲಾ ಒಂದು ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಇದೀಗ ಬಸ್ ಗಳನ್ನು ಬೇರೊಂದು ರಾಜ್ಯಕ್ಕೆ ರೈಲುಗಳ ಮೂಲಕ ರವಾನಿಸಲಾಗುತ್ತಿದೆ.

published on : 19th May 2022

ಎಲ್ಲಾ ಎಲೆಕ್ಟ್ರಿಕ್ ವಾಹನ ಅಗ್ನಿ ಅವಘಡಗಳನ್ನು ತನಿಖೆ ಮಾಡಲಾಗುತ್ತಿದೆ: ಸಾರಿಗೆ ಸಚಿವಾಲಯ

ದೇಶದಲ್ಲಿ ಸಂಭವಿಸಿದ ಎಲ್ಲಾ ಎಲೆಕ್ಟ್ರಿಕ್ ವಾಹನಗಳ ಅಗ್ನಿ ಅವಘಡ ಪ್ರಕರಣಗಳನ್ನು ತನಿಖೆಗೊಳಪಡಿಸಲಾಗುತ್ತಿದೆ ಎಂದು ಕೇಂದ್ರ ಸಾರಿಗೆ ಸಚಿವಾಲಯ ಹೇಳಿದೆ.

published on : 1st May 2022

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ: ಬಿಸಿ.ನಾಗೇಶ್

ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ ಒದಗಿಸಲು ಹಲವು ಖಾಸಗಿ ಕಂಪನಿಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಬುಧವಾರ ಹೇಳಿದ್ದಾರೆ.

published on : 31st March 2022

ಡೀಸೆಲ್ ಬೆಲೆ ಏರಿಕೆಯಿಂದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಹೆಚ್ಚಿದ ಹೊರೆ

ಡೀಸೆಲ್ ಬೆಲೆ ಏರಿಕೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮೇಲಿದ್ದ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ. 

published on : 30th March 2022

ಪರಿಸರಸ್ನೇಹಿ ಹೈಡ್ರೋಜನ್ ಕಾರಿನಲ್ಲಿ ಸಂಸತ್ತಿಗೆ ಆಗಮಿಸಿದ ನಿತಿನ್ ಗಡ್ಕರಿ: ದೇಶದಲ್ಲೇ ಮೊದಲು 

ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಮಾಲಿನ್ಯ ನಿಯಂತ್ರಣದತ್ತ ಚಿಂತನೆ ನಡೆಸಿದ್ದಾರೆ. 

published on : 30th March 2022

ತಮಿಳುನಾಡು: ಜಾತಿ ನಿಂದನೆ ಆರೋಪ, ಸಾರಿಗೆ ಖಾತೆಯಿಂದ ಆರ್ ಎಸ್ ರಾಜಕಣ್ಣಪ್ಪನ್ ವಜಾ

ಅಧಿಕಾರಿ ವಿರುದ್ಧ ಜಾತಿ ನಿಂದನೆ ಆರೋಪದ ಮೇರೆಗೆ ತಮಿಳುನಾಡು ಸಾರಿಗೆ ಸಚಿವ ಸ್ಥಾನದಿಂದ ಆರ್ ಎಸ್ ರಾಜಕಣ್ಣಪ್ಪನ್ ಅವರನ್ನು ಮಂಗಳವಾರ ವಜಾಗೊಳಿಸಲಾಗಿದೆ.

published on : 29th March 2022

ತುಮಕೂರು ಜಿಲ್ಲೆಯ ಪಾವಗಡ ಬಳಿ ಖಾಸಗಿ ಬಸ್ ದುರಂತ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ: ಸಾರಿಗೆ ಸಚಿವ ಶ್ರೀರಾಮುಲು

ಪಾವಗಡ ತಾಲ್ಲೂಕಿನ ಪಳವಳ್ಳಿ ಕಟ್ಟೆ ಬಳಿ ಸಂಭವಿಸಿದ ಖಾಸಗಿ ಬಸ್ ಭೀಕರ ದುರಂತ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.

published on : 19th March 2022

ಸಾರಿಗೆ ಇಲಾಖೆಯಲ್ಲಿ 30 ಜನಸ್ನೇಹಿ ಸಂಪರ್ಕ ರಹಿತ ಸೇವೆಗಳು ಲಭ್ಯ: ಮುಖ್ಯಮಂತ್ರಿ ಬೊಮ್ಮಾಯಿ

ಸಾರಿಗೆ ಇಲಾಖೆಯು ವಾಹನ ನೋಂದಣಿ, ಕಲಿಕಾ ಚಾಲನಾ ಪರವಾನಗಿ ಸೇರಿದಂತೆ 30 ಸೇವೆಗಳನ್ನು ಆನ್ ಲೈನ್ ಮೂಲಕ ಒದಗಿಸಲಿದೆ. 

published on : 10th February 2022

ಮಾರ್ಚ್ ಅಂತ್ಯದೊಳಗೆ ಸಾರಿಗೆ ಸುಧಾರಣಾ ವರದಿ

ಕೋವಿಡ್ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಕೆಕೆಆರ್‌ಟಿಸಿ ಮತ್ತು ಬಿಎಂಟಿಸಿ ಸೇರಿದಂತೆ ಸರ್ಕಾರಿ ಸ್ವಾಮ್ಯದ ರಸ್ತೆ ಸಾರಿಗೆ ನಿಗಮಗಳು ಈ ವರ್ಷದ ಮಾರ್ಚ್ ಅಂತ್ಯದವರೆಗೆ ರೂ. 2,130 ನಷ್ಟವನ್ನು ಎದುರಿಸಿದ್ದು, ನಷ್ಟ ದೂರಾಗಿಸಿ ಲಾಭದಾಯಕ ಹಾದಿಯನ್ನು ಹೇಗೆ ಹಿಡಿಯಬಹುದು ಎಂಬುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ...

published on : 27th January 2022

12 ವರ್ಷದೊಳಗಿನ ಮಕ್ಕಳಿಗೆ ಉಚಿತ ಬಸ್ ಪ್ರಯಾಣ: ತೆಲಂಗಾಣ ಸಾರಿಗೆ ಸಂಸ್ಥೆ ಘೋಷಣೆ

ಟಿಎಸ್ಸಾರ್ಟಿಸಿ ಕೇಂದ್ರ ಕಚೇರಿಯ ಬಸ್‌ ಭವನದಲ್ಲಿ ನಡೆದ ಹೊಸ ವರ್ಷಾಚರಣೆ ಕಾರ್ಯಕ್ರಮದಲ್ಲಿ ಟಿಎಸ್ಸಾರ್ಟಿಸಿ ಅಧ್ಯಕ್ಷ ಬಾಜಿರೆಡ್ಡಿ ನೂತನ ಸವಲತ್ತನ್ನು ಘೋಷಿಸಿದರು.

published on : 2nd January 2022

ಬಂದ್'ಗೆ ಬೆಂಬಲ ವ್ಯಕ್ತಪಡಿಸಿ ಕರ್ತವ್ಯಕ್ಕೆ ಗೈರು ಹಾಜರಾಗದಿರಿ: ಸಿಬ್ಬಂದಿಗೆ ಕೆಎಸ್ಆರ್'ಟಿಸಿ ಸೂಚನೆ

ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿಷೇಧಿಸುವಂತೆ ಆಗ್ರಹಿಸಿ ಡಿ.31ರಂದು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ಈ ಬಂದ್'ಗೆ ಸಾರಿಗೆ ನೌಕರರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಅಧಿಕಾರಿಗಳು ಗೈರು ಹಾಜರಾಗದಂತೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.

published on : 27th December 2021

ಭಾರತ ಅಫ್ಘಾನಿಸ್ತಾನಕ್ಕೆ ಗೋಧಿ, ಜೀವ ರಕ್ಷಕ ಔಷಧ ಸಾಗಿಸಲು ಪಾಕ್ ಒಪ್ಪಿಗೆ

ವಾಘಾ ಗಡಿ ಮೂಲಕ ಅಫ್ಘಾನಿಸ್ತಾನದ ಜನರಿಗೆ ಮಾನವೀಯ ನೆಲೆಯಲ್ಲಿ ಅಪ್ಘನ್ ಟ್ರಕ್ ಗಳಲ್ಲಿ  50 ಸಾವಿರ ಮೆಟ್ರಿಕ್ ಟನ್ ಗೋಧಿ ಮತ್ತು ಜೀವ ರಕ್ಷಕ ಔಷಧವನ್ನು ಭಾರತ ಸಾಗಿಸಲು ಪಾಕಿಸ್ತಾನ ಶುಕ್ರವಾರ ಒಪ್ಪಿಕೊಂಡಿದೆ. ಈ ಸಾಗಾಣಿಕೆ ವಿಚಾರವಾಗಿ ಉಭಯ ದೇಶಗಳ ನಡುವೆ ವಿವಾದ ತಲೆದೋರಿತ್ತು. 

published on : 3rd December 2021

ಭ್ರಷ್ಟ ಪೊಲೀಸರು ನಾಯಿಗಳಂತೆ: ಆರಗ ಜ್ಞಾನೇಂದ್ರ ಕಿಡಿ; ಗೃಹ ಸಚಿವರ ಹೇಳಿಕೆ ಪೊಲೀಸರ ಆತ್ಮಹತ್ಯೆಗೆ ಪ್ರೇರಣೆ ಎಂದ ಕಾಂಗ್ರೆಸ್

ಭ್ರಷ್ಟ ಪೊಲೀಸರ ವಿರುದ್ಧ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕೈ ತುಂಬ ಸಂಬಳ ನೀಡುತ್ತಿದ್ದರೂ, ಭ್ರಷ್ಟ ಪೊಲೀಸರು ನಾಯಿಗಳಂತೆ ಎಂಜಲು ಕಾಸು ತಿಂದು ಬದುಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

published on : 3rd December 2021

ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ವಾವಲಂಬನೆಗೆ ಸಮಿತಿ ರಚನೆ

ರಾಜ್ಯದ ಎಲ್ಲಾ ರಸ್ತೆ ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಡೀಕರಣಗಳ ಅಧ್ಯಯನ ನಡೆಸಿ ವರದಿ ನೀಡಲು ಸರ್ಕಾರ ಸಮಿತಿ‌ ರಚಿಸಿದೆ.

published on : 1st December 2021

ದ್ವಿಚಕ್ರವಾಹನದಲ್ಲಿ ಹಿಂದುಗಡೆ ಮಕ್ಕಳಿದ್ದಾರೆಯೇ? ಹಾಗಾದರೆ ಸರ್ಕಾರದ ಈ ನಿಯಮ ಪಾಲಿಸಲೇ ಬೇಕು

ಮಕ್ಕಳನ್ನು ಹಿಂದುಗಡೆ ಸೀಟಿನಲ್ಲಿ ಕೂರಿಸಿಕೊಂಡು ವಾಹನ ಚಲಾಯಿಸುವ ಪಾಲಕರು ನಿರ್ಲಕ್ಷ್ಯದಿಂದ, ವೇಗವಾಗಿ ವಾಹನ ಚಲಾಯಿಸಿ ಅಪಾಯಕ್ಕೆ ಗುರಿಯಾದ ಹಲವು ನಿದರ್ಶನಗಳು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

published on : 5th November 2021
1 2 3 4 5 > 

ರಾಶಿ ಭವಿಷ್ಯ