• Tag results for Travel

ಓಮಿಕ್ರಾನ್ ರೂಪಾಂತರಿ: ಸೂಕ್ತ ಮುನ್ನೆಚ್ಚರಿಕೆ, ಜಾಗತಿಕ ಪ್ರಯಾಣ ನಿರ್ಬಂಧ ಪರಿಶೀಲನೆಗೆ ಅಧಿಕಾರಿಗಳಿಗೆ ಪ್ರಧಾನಿ ಸೂಚನೆ

ಪ್ರಧಾನಿ ನರೇಂದ್ರ ಮೋದಿ ಅವರು ಓಮೈಕ್ರಾನ್ ರೂಪಾಂತರಿ ಕೊರೋನಾ ತಳಿಯ ಬಗ್ಗೆ ಮಾಹಿತಿ ಪಡೆದಿದ್ದು, ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

published on : 27th November 2021

ಜಗತ್ತಿಗೆ ಕಂಟಕವಾಗಿರುವ ಹೊಸ ಕೊರೋನಾ ರೂಪಾಂತರ: ಭಾರತಕ್ಕೆ ಬರಲು ಈ ದೇಶಗಳ ಪ್ರಯಾಣಿಕರಿಗೆ ಟೆಸ್ಟ್ ಕಡ್ಡಾಯ...

ಮಹಾಮಾರಿ ಕೊರೋನಾ ಹೊಸ ತಳಿ B.1.1.529 ವೈರಸ್ ಜಗತ್ತಿನ ಹಲವು ದೇಶಗಳಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕೆಲ ನಿರ್ದಿಷ್ಟ ದೇಶಗಳಿಂದ ಆಗಮಿಸುವವರಿಗೆ ಟೆಸ್ಟ್‌ ಕಡ್ಡಾಯಗೊಳಿಸಿದೆ. 

published on : 27th November 2021

99 ರಾಷ್ಟ್ರಗಳ ಪ್ರಯಾಣಿಕರಿಗೆ ಕ್ವಾರಂಟೈನ್ ಮುಕ್ತ ಪ್ರವೇಶಕ್ಕೆ ಭಾರತ ಅವಕಾಶ

ಕೋವಿಡ್-19 ಸಾಂಕ್ರಾಮಿಕ ನಿರ್ಬಂಧ ಹೇರಲಾಗಿದ್ದ ಸುಮಾರು 20 ತಿಂಗಳ ನಂತರ 99 ರಾಷ್ಟ್ರಗಳಿಂದ ಆಗಮಿಸುವ ಪ್ರವಾಸಿಗರು  ಕ್ವಾರಂಟೈನ್ ಇಲ್ಲದೆ ಮುಕ್ತವಾಗಿ ಪ್ರಯಾಣಿಸಲು ಸೋಮವಾರ ಅವಕಾಶ ನೀಡಲಾಗಿದೆ.

published on : 15th November 2021

ವಿದ್ಯಾರ್ಥಿಗಳು ಐಡಿ ಕಾರ್ಡ್, ಶುಲ್ಕ ರಸೀದಿ ತೋರಿಸಿ ಬಿಎಂಟಿಸಿ ಸಾಮಾನ್ಯ ಬಸ್ ಗಳಲ್ಲಿ ಪ್ರಯಾಣಿಸಲು ಅವಕಾಶ

2021-22ನೇ ಶೈಕ್ಷಣಿಕ ಸಾಲಿನ ಶಾಲಾ, ಕಾಲೇಜುಗಳು ಪ್ರಾರಂಭವಾಗಿದ್ದು, ಬಿಎಂಟಿಸಿಯ ಸಾಮಾನ್ಯ ಸೇವೆಗಳಲ್ಲಿ ಶಾಲಾ, ಕಾಲೇಜಿನ  ರಸೀದಿ ಶುಲ್ಕ  ಅಥವಾ ಶಾಲಾ, ಕಾಲೇಜಿನ ಗುರುತಿನ ಚೀಟಿಯೊಂದಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

published on : 23rd October 2021

ಭಾರತದ ಕೋವಿಡ್-19 ಪ್ರಯಾಣಿಕ ಪ್ರಮಾಣಪತ್ರದ ಬಗ್ಗೆ ಬ್ರಿಟನ್ ಹೇಳಿದ್ದಿಷ್ಟು...

ತನ್ನ ದೇಶಕ್ಕೆ ವಿದೇಶದಿಂದ ಬರುವವರ ಲಸಿಕೆ ಪ್ರಮಾಣಪತ್ರಗಳು ಅಲ್ಲಿನ ಕನಿಷ್ಠ ಮಾನದಂಡಗಳನ್ನು ಪೂರೈಕೆ ಮಾಡಿರಬೇಕು ಎಂದು ಬ್ರಿಟನ್ ಹೇಳಿದೆ.

published on : 23rd September 2021

ಅನ್ಯಧರ್ಮೀಯ ಯುವತಿ ಜೊತೆ ಪ್ರಯಾಣ ಮಾಡುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ: ಇಬ್ಬರ ಬಂಧನ 

ಅನ್ಯ ಧರ್ಮದ ಯುವತಿ ಜೊತೆ ಪ್ರಯಾಣ ಮಾಡುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬೆಂಗಳೂರು ಪೊಲೀಸರು ತಕ್ಷಣ ಬಂಧಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

published on : 19th September 2021

ಕೆಂಗೇರಿ ಮಾರ್ಗದಲ್ಲಿ ಮೆಟ್ರೋ ಮತ್ತು ರೈಲ್ವೆ ನಿಲ್ದಾಣಗಳ ಸಂಪರ್ಕ: ಮೈಸೂರು-ಸುತ್ತಮುತ್ತಲ ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲ

ಮೆಟ್ರೊದ ಮೈಸೂರು ರಸ್ತೆ-ಕೆಂಗೇರಿ ಮಾರ್ಗವನ್ನು ತೆರೆಯುವುದರಿಂದ ಮೈಸೂರು ಮತ್ತು ನೆರೆಯ ಪಟ್ಟಣಗಳು ಮತ್ತು ಬೆಂಗಳೂರು ನಡುವೆ ಕಚೇರಿಗೆ, ದಿನನಿತ್ಯ ಕೆಲಸ-ಕಾರ್ಯಗಳಿಗೆ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ. 

published on : 26th August 2021

ವಿಮಾನ ಪ್ರಯಾಣ ಮತ್ತಷ್ಟು ದುಬಾರಿ: ದೇಶಿ ವಿಮಾನ ದರಗಳ ಮಿತಿ ಶೇ.9.83 ರಿಂದ 12.82ಕ್ಕೆ ಹೆಚ್ಚಳ

ಕೋವಿಡ್ ಸಂಕಷ್ಟದ ನಡುವೆ ದೇಶಿ ವಿಮಾನ ಪ್ರಮಾಣ ಮತ್ತಷ್ಟು ದುಬಾರಿಯಾಗುತ್ತಿದ್ದು, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ವಿಮಾನ ದರಗಳ ಮೇಲಿನ ಮಿತಿಯನ್ನು ಶೇ. 9.83 ರಿಂದ ಶೇ. 12.82ಕ್ಕೆ ಹೆಚ್ಚಿಸಿದೆ.

published on : 13th August 2021

ಕೇರಳದಿಂದ ತಮಿಳುನಾಡಿಗೆ ಬರುವವರಿಗೆ ಆಗಸ್ಟ್ 5 ರಿಂದ ಆರ್ ಟಿ-ಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ

ಕೇರಳದಿಂದ ಬರುವವರಿಗೆ ಆರ್ ಟಿ- ಪಿಸಿಆರ್ ನೆಗೆಟಿವ್ ವರದಿಯನ್ನು ತಮಿಳುನಾಡು ಸರ್ಕಾರ ಭಾನುವಾರ ಕಡ್ಡಾಯ ಮಾಡಿದೆ. ಅಲ್ಲದೇ, ತಮಿಳುನಾಡಿಗೆ ಬರುವ ಪ್ರಯಾಣಿಕರು ಸಂಪೂರ್ಣ ಲಸಿಕೆ ಪ್ರಮಾಣ ಪತ್ರವನ್ನು ಹಾಜರುಪಡಿಸಬಹುದಾಗಿದೆ.

published on : 1st August 2021

ಕೋವಿಡ್ ಭೀತಿ: ಭಾರತೀಯ ಪ್ರಯಾಣಿಕರಿಗೆ ಕೆನಡಾ ಪ್ರವೇಶ ನಿಷೇಧ ಆಗಸ್ಟ್ 21 ರವರೆಗೆ ಮುಂದುವರಿಕೆ

ಕೋವಿಡ್-19 ಡೆಲ್ಟಾ ರೂಪಾಂತರದಿಂದಾಗಿ ಭಾರತದಿಂದ ಒಳಬರುವ ಪ್ರಯಾಣಿಕರ ವಿಮಾನಗಳ ನಿಷೇಧವನ್ನು ಇನ್ನೂ ಒಂದು ತಿಂಗಳು ವಿಸ್ತರಿಸುವುದಾಗಿ ಕೆನಡಾ ಸರ್ಕಾರ ಜುಲೈ 19, 2021 ರ ಸೋಮವಾರದ ಹೇಳಿಕೆಯಲ್ಲಿ ತಿಳಿಸಿದೆ.

published on : 20th July 2021

ಪ್ರಯಾಣಿಕರಿಗೆ ಆರ್ ಟಿ- ಪಿಸಿಆರ್ ವರದಿಯಿಂದ ವಿನಾಯಿತಿ ನೀಡಿದ ಮಹಾರಾಷ್ಟ್ರ ಸರ್ಕಾರ

ಕೋವಿಡ್ -19 ಲಸಿಕೆಯ ಎರಡು ಡೋಸ್ ಪಡೆದಂತಹ ಜನರು ರಾಜ್ಯಕ್ಕೆ ಭೇಟಿ ನೀಡಲು ನೆಗೆಟಿವ್ ಆರ್ ಟಿ- ಪಿಸಿಆರ್ ಪರೀಕ್ಷಾ ವರದಿಯಿಂದ ವಿನಾಯಿತಿಯನ್ನು ಮಹಾರಾಷ್ಟ್ರ ಸರ್ಕಾರ ನೀಡಿದೆ. ಆದಾಗ್ಯೂ, ರಾಜ್ಯಕ್ಕೆ ಬರುವ ಮುನ್ನ ಎರಡನೇ ಡೋಸ್ ಪಡೆದು 15 ದಿನಗಳ ಅಂತರವಿರಬೇಕು.

published on : 16th July 2021

10 ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಉಚಿತ ಸಾರಿಗೆ ವ್ಯವಸ್ಥೆ 

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ರಾಜ್ಯ ಸರ್ಕಾರ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಿದೆ. ವಿದ್ಯಾರ್ಥಿಗಳ ಅಗತ್ಯತೆಗಳನ್ನು ಮನಗಂಡು ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸುತ್ತಿದೆ.

published on : 13th July 2021

ಗ್ರೀನ್ ಪಾಸ್ ಯೋಜನೆಯಡಿ ಕೋವಿಶೀಲ್ಡ್, ಕೋವಾಕ್ಸಿನ್ ಲಸಿಕೆ ಪಡೆದವರನ್ನು ಪರಿಗಣಿಸಿ: ಇಯು ರಾಷ್ಟ್ರಗಳಿಗೆ ಭಾರತದ ಮನವಿ

ಯುರೋಪಿಯನ್ ಒಕ್ಕೂಟವು ತನ್ನ 'ಗ್ರೀನ್ ಪಾಸ್' ಯೋಜನೆಯಡಿ ಪ್ರಯಾಣ ನಿರ್ಬಂಧಗಳನ್ನು ಸಡಿಲಿಸುತ್ತಿರುವುದರಿಂದ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಗಳನ್ನು ತೆಗೆದುಕೊಂಡು ಯುರೋಪ್ ಗೆ ತೆರಳಲು ಬಯಸುವ ಭಾರತೀಯರಿಗೆ ಅವಕಾಶ ನೀಡುವುದನ್ನು ಪ್ರತ್ಯೇಕವಾಗಿ ಪರಿಗಣಿಸುವಂತೆ  ಭಾರತ 27 ರಾಷ್ಟ್ರಗಳ ಗುಂಪಿನ ಸದಸ್ಯರನ್ನು ಕೇಳಿದೆ.

published on : 1st July 2021

ಪಾಸ್ ಪೋರ್ಟ್ ಸಂಖ್ಯೆಯನ್ನು ಲಸಿಕೆ ಪ್ರಮಾಣಪತ್ರ ಜೊತೆಗೆ ಜೋಡಿಸಿ, ವಿದೇಶಕ್ಕೆ ಸುಲಭವಾಗಿ ಪ್ರಯಾಣಿಸಿ!

ಸರ್ಕಾರದ ಕೋವಿನ್ ಪೋರ್ಟಲ್ ನಲ್ಲಿ ಬಳಕೆದಾರರು ತಮ್ಮ ಲಸಿಕೆ ಪ್ರಮಾಣಪತ್ರಗಳನ್ನು ಪಾಸ್ ಪೋರ್ಟ್ ಜೊತೆ ಸಂಪರ್ಕಿಸಿ ಪ್ರಯಾಣ ಮಾಡಬಹುದು. ಪಾರ್ಸ್ ಪೋರ್ಟ್ ಸಂಖ್ಯೆಯನ್ನು ಲಸಿಕೆ ಪ್ರಮಾಣಪತ್ರದ ಜೊತೆಗೆ ಅಪ್ ಡೇಟ್ ಮಾಡಿಕೊಳ್ಳಬಹುದು ಎಂದು ಆರೋಗ್ಯ ಸೇತು ಆಪ್ ಟ್ವೀಟ್ ಮಾಡಿದೆ.

published on : 25th June 2021

ರೈಲು ಪ್ರಯಾಣಿಕರಿಗೆ ಶುಭ ಸುದ್ದಿ… ಟ್ರೈನ್‌ ಹತ್ತಲು ಪ್ಲಾಟ್‌ ಫಾಮ್‌ ಟಿಕೆಟ್‌ ಮಾತ್ರ ಸಾಕು!

ರೈಲ್ವೆ ಪ್ರಯಾಣಿಕರಿಗೆ ಶುಭಸುದ್ದಿ.. ಮುಂಗಡವಾಗಿ ಟಿಕೆಟ್‌ ಕಾಯ್ದಿರಿಸದಿದ್ದರೂ, ಟಿಕೆಟ್‌ ಪಡೆದುಕೊಳ್ಳದಿದ್ದರೂ ಕೂಡಾ ನಿರ್ಭಯವಾಗಿ ರೈಲು ಹತ್ತಬಹುದು. 

published on : 16th June 2021
1 2 > 

ರಾಶಿ ಭವಿಷ್ಯ