• Tag results for Tree

ಸ್ವಯಂ-ಕಲಿಕೆಯಿಂದಲೇ NEET ಪರೀಕ್ಷೆ ಗೆದ್ದ ಕಾಶ್ಮೀರದ ಬೀದಿ ಬದಿ ವ್ಯಾಪಾರಿ ಮಗ

ಮನಸಿದ್ದರೆ ಮಾರ್ಗ ಎಂಬ ನಾಣ್ಣುಡಿ ಕಾಶ್ಮೀರದ ಬೀದಿ ಬದಿ ವ್ಯಾಪಾರಿ ಮಗನ ಜೀವನದಲ್ಲಿ ಅಕ್ಷರಃ ನಿಜವಾಗಿದ್ದು, NEET ಪರೀಕ್ಷೆ ತಯಾರಿಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಲಕ್ಷಾಂತರ ರೂ ವ್ಯಯಿಸುತ್ತಿರುವ ಈ ಕಾಲಘಟ್ಟದಲ್ಲಿ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಬೀದಿ ಬದಿ ವ್ಯಾಪಾರಿ ಮಗ ಸ್ವಯಂಕಲಿಕೆಯ ಮೂಲಕ NEET ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

published on : 10th September 2022

ನಿಮ್ಮ ನೆರೆಹೊರೆಯಲ್ಲಿರುವ ಮರಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಕೋಡ್‌ಗಳನ್ನು ಸ್ಕ್ಯಾನ್ ಮಾಡಿ!

ನಿಮ್ಮ ನೆರೆಹೊರೆಯಲ್ಲಿರುವ ಮರಗಳ ಬಗ್ಗೆ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಲು ನಿಮ್ಮ ಮೊಬೈಲ್ ಫೋನ್‌ಗಳಲ್ಲಿ ಕೋಡ್‌ಗಳನ್ನು ಸ್ಕ್ಯಾನ್ ಮಾಡಿದರೆ ಸಾಕು. ಮರಗಳ ಪ್ರಾಮುಖ್ಯತೆಯ ಬಗ್ಗೆ ಮಾಹಿತಿ ನೀಡಲು ಇಂತಹ ಕೋಡ್‌ಗಳ ಮೇಲೆ ರಾಜ್ಯ ಪರಿಸರ ಇಲಾಖೆಯು ಕಾರ್ಯನಿರ್ವಹಿಸುತ್ತಿದೆ.

published on : 5th September 2022

ಉಡುಪಿ: 25ಕ್ಕೂ ಹೆಚ್ಚು ಮರ ಕಡಿದ ಗ್ರಾಮ ಪಂಚಾಯಿತಿ ಸದಸ್ಯನ ವಿರುದ್ಧ ಪ್ರಕರಣ ದಾಖಲು

ಪರಿಸರ ಸಂರಕ್ಷಣೆಯಲ್ಲಿ ಇತರರಿಗೆ ಮಾದರಿಯಾಗಬೇಕಿದ್ದ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಕಳೆದ ವಾರ 25ಕ್ಕೂ ಹೆಚ್ಚು ಮರಗಳನ್ನು ಕಡಿದಿದ್ದಾರೆ. ಈ ಸಂಬಂಧ ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಆತನ ವಿರುದ್ಧ ಮರ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

published on : 3rd September 2022

ಗಾಲ್ಫ್ ಕ್ಲಬ್‌ ಆವರಣದ ಶ್ರೀಗಂಧದ ಮರ ಕಳ್ಳತನ: ತಮಿಳುನಾಡಿನ ಗ್ಯಾಂಗ್​ ಲೀಡರ್ ಸೇರಿ​ 8 ಮಂದಿ ಬಂಧನ, 10 ಪ್ರಕರಣ ಪತ್ತೆ

ಬೆಂಗಳೂರು ನಗರದ ಹೃದಯ ಭಾಗದ ಗಾಲ್ಫ್ ಕ್ಲಬ್‌ ಆವರಣದಲ್ಲಿ ಶ್ರೀಗಂಧದ ಮರಗಳನ್ನು ಕಡಿದು ಮಾರಾಟ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ವೊಂದನ್ನು ಹೈಗ್ರೌಂಡ್ಸ್ ಪೊಲೀಸರು ಭೇಟೆಯಾಡಿದ್ದಾರೆ.

published on : 3rd September 2022

ಬೆಂಗಳೂರು: ವಿ ವಿ ಪುರಂ ಫುಡ್ ಸ್ಟ್ರೀಟ್ ನಲ್ಲಿ ಆಹಾರ ಸವಿದ ವಿದೇಶಾಂಗ ಸಚಿವ ಎಸ್. ಜೈಶಂಕರ್ 

ಬೆಂಗಳೂರಿನ ಹೆಸರಾಂತ ವಿವಿ ಪುರಂ ಫುಡ್ ಸ್ಟ್ರೀಟ್ ಗೆ ಭೇಟಿ ನೀಡಿದ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ , ಕೆಲ ತಿಂಡಿಗಳನ್ನು ಸವಿದರು. ಫುಡ್ ಸ್ಟ್ರೀಟ್ ಗೆ ಆಗಮಿಸಿದ್ದ ಆಹಾರ ಪ್ರಿಯರು, ಜನರೊಂದಿಗೆ ಕೆಲ ಸಮಯ ಮಾತನಾಡುವ ಮೂಲಕ ಇಲ್ಲಿನ ಆಹಾರದ ಬಗ್ಗೆ ಮಾಹಿತಿ ಪಡೆದರು.

published on : 13th August 2022

ಭೀಕರ: ಬೈಕ್ ಮೇಲೆ ಬಿದ್ದ ಬೃಹತ್ ಗಾತ್ರದ ಮರ; ನರಳಿ ಪ್ರಾಣ ಬಿಟ್ಟ ಸವಾರ!

ಬೈಕ್ ಮೇಲೆ ಬೃಹತ್ ಗಾತ್ರದ ಮರ ಬಿದ್ದ ಪರಿಣಾಮ ಸವಾರನೊಬ್ಬ ನರಳಿ ನರಳಿ ಪ್ರಾಣ ಬಿಟ್ಟಿರುವ ಘಟನೆ ಹಾಸನದಲ್ಲಿ ನಡೆದಿದೆ.

published on : 7th August 2022

ಬೆಂಗಳೂರು: ಅರಣ್ಯ ಇಲಾಖೆ ವ್ಯಾಪ್ತಿಯ 25 ಶ್ರೀಗಂಧ ಮರಗಳಿಗೆ ಖದೀಮರ ಕೊಡಲಿ ಪೆಟ್ಟು!

ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಅರಣ್ಯ ಇಲಾಖೆಯ, ಹೊಸಕೋಟೆ ತಾಲೂಕಿನ ಗೊಟ್ಟಿಪುರ ವನ ವಿಜ್ಞಾನ ಕೇಂದ್ರದ ಅರಣ್ಯ ಪ್ರದೇಶದಲ್ಲಿರುವ ಅರಣ್ಯೀಕರಣದ ವಿವಿಧ ಮರಗಳನ್ನು ಸಂಶೋಧನೆಗಾಗಿ ಬೆಳೆಸಲಾಗುತ್ತಿದೆ.

published on : 27th July 2022

ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ 1.80 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ!

ಪ್ರಧಾನ ಮಂತ್ರಿ ಸ್ವನಿಧಿ ಯೋಜನೆಯಲ್ಲಿ ಬಿಬಿಎಂಪಿ ಸಮಾಜಕಲ್ಯಾಣ ವಿಭಾಗದ ವತಿಯಿಂದ 1.80 ಲಕ್ಷ ಜನರಿಗೆ ಸಾಲ ನೀಡುವ ಗುರಿ ಹೊಂದಲಾಗಿದೆ ಎಂದು ವಿಶೇಷ ಆಯುಕ್ತ ಡಾ. ವಿ. ರಾಮ್‌ಪ್ರಸಾದ್‌ ಮನೋಹರ್‌ ಹೇಳಿದರು.

published on : 8th July 2022

ಉತ್ತರ ಪ್ರದೇಶ: ಪಿಕಪ್ ವ್ಯಾನ್ ಮರಕ್ಕೆ ಡಿಕ್ಕಿ ಹೊಡೆದು 10 ಜನರ ದುರ್ಮರಣ, 7 ಮಂದಿಗೆ ಗಾಯ

ಉತ್ತರ ಪ್ರದೇಶದ ಹರಿದ್ವಾರದಿಂದ 17 ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಪಿಕಪ್ ವ್ಯಾನ್ ವೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 10 ಜನರು ದುರ್ಮರಣ ಹೊಂದಿದ್ದಾರೆ.

published on : 23rd June 2022

ಬೆಂಗಳೂರಿಗರ ಹಸಿರು ಪ್ರೀತಿ: ಒಂಬತ್ತು ದಿನಗಳಲ್ಲಿ ಬಿಬಿಎಂಪಿಯಿಂದ 1 ಲಕ್ಷ ಸಸಿ ಪಡೆದ ಸಾರ್ವಜನಿಕರು

ವಿಶ್ವ ಪರಿಸರ ದಿನದ ನಂತರ ಕೇವಲ ಒಂಬತ್ತು ದಿನಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಅರಣ್ಯೀಕರಣವನ್ನು ಉತ್ತೇಜಿಸಲು ಸಾರ್ವಜನಿಕರಿಗೆ ಒಂದು ಲಕ್ಷ ಮರದ ಸಸಿಗಳನ್ನು ವಿತರಿಸಿದೆ.

published on : 18th June 2022

ಕೊಡಲಿ ಬೀಳುವಿಕೆಯಿಂದ ಮರಗಳ ರಕ್ಷಿಸಲು ಮ್ಯಾಪಿಂಗ್: ಮೈಸೂರಿನ ಪ್ರಾಜೆಕ್ಟ್ ವೃಕ್ಷ ಫೌಂಡೇಶನ್ ಕ್ರಮ!

ಮೈಸೂರಿನ 8 ಮಂದಿಯಿರುವ ಯುವಕರ ಗುಂಪೊಂದು ಕೊಡಲಿ ಬೀಳುವಿಕೆಯಿಂದ ಮರಗಳ ರಕ್ಷಿಸಲು ಕೈಗೊಂಡಿರುವ ಕ್ರಮ ಇದೀಗ ಎಲ್ಲರ ಗಮನ ಸೆಳೆದಿದೆ. 

published on : 5th June 2022

ಬಿರುಗಾಳಿ ಮಳೆಗೆ ಮುರಿದು ಬಿದ್ದ 'ದೊಡ್ಡ ಆಲದ ಮರದ ಕೊಂಬೆ' ತೆರವಿಗೆ ಕಷ್ಟಪಡುತ್ತಿರುವ ಅಧಿಕಾರಿಗಳು!

ಬಿರುಗಾಳಿ ಮತ್ತು ಭಾರಿ ಮಳೆಯಿಂದಾಗಿ ಭಾನುವಾರ ರಾತ್ರಿ ದೊಡ್ಡ ಆಲದ ಮರದ ಭಾಗವೊಂದು ಕುಸಿದು ಬಿದ್ದಿದೆ. ಆದರೆ, ಬಿದ್ದಿರುವ ಕೊಂಬೆಗಳನ್ನು ತೆರವುಗೊಳಿಸಲು ರಾಜ್ಯ ಅರಣ್ಯ ಮತ್ತು ತೋಟಗಾರಿಕೆ ಅಧಿಕಾರಿಗಳು ಕಷ್ಟಪಡುವಂತಾಗಿದೆ.

published on : 12th May 2022

ಎಲ್‌&ಟಿ ಮತ್ತು ಮೈಂಡ್‌ ಟ್ರೀ ವಿಲೀನ, ಈಗ ಭಾರತದ 5ನೇ ಅತಿದೊಡ್ಡ ಐಟಿ ಸೇವಾ ಪೂರೈಕೆದಾರ

ಬೆಂಗಳೂರು ಮೂಲದ ಮಿಡ್-ಕ್ಯಾಪ್ ಮಾಹಿತಿ ತಂತ್ರಜ್ಞಾನ ಕಂಪನಿ ಮೈಂಡ್‌ ಟ್ರೀ ಹಾಗೂ ಎಂಜಿನಿಯರಿಂಗ್‌ ದಿಗ್ಗಜ ಎಲ್‌&ಟಿ ವಿಲೀನವಾಗಿದ್ದು, ವಿಲೀನವಾದ ಘಟಕಕ್ಕೆ ಎಲ್ ಟಿಐ ಮೈಂಡ್ ಟ್ರೀ ಎಂದು ಕರೆಯಲಾಗಿದೆ.

published on : 6th May 2022

ಬೆಂಗಳೂರಲ್ಲಿ ಧಾರಾಕಾರ ಮಳೆ: ವಿದ್ಯುತ್ ವ್ಯತ್ಯಯ

ನಗರದಲ್ಲಿ ಇಂದು ಸುರಿದ ಧಾರಾಕಾರ ಮಳೆಯಿಂದಾಗಿ ಬಹುತೇಕ ಪ್ರದೇಶಗಳಲ್ಲಿ ಮರಗಳು ಉರುಳಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ. 

published on : 1st May 2022

ರಾಮನಗರ: ಒಮ್ನಿ ಕಾರಿನ ಮೇಲೆ ಮರದ ಕೊಂಬೆ ಬಿದ್ದು ತಂದೆ-ಮಗನ ದಾರುಣ ಸಾವು

ಚಲಿಸುತ್ತಿದ್ದ ಮಾರುತಿ ಒಮಿನಿ ಕಾರಿನ ಮೇಲೆ ಮರ ಬಿದ್ದು ಇಬ್ಬರು ಸಾವನ್ನಪ್ಪಿದ ಘಟನೆ ರಾಮನಗರದಲ್ಲಿ ನಡೆದಿದೆ. ಮೂವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

published on : 26th April 2022
1 2 > 

ರಾಶಿ ಭವಿಷ್ಯ