- Tag results for Tumkur
![]() | 'ಅರುಂಧತಿ' ಸಿನಿಮಾ ನೋಡಿ ಮೋಕ್ಷಕ್ಕಾಗಿ ಬೆಂಕಿ ಹಚ್ಚಿಕೊಂಡ ಯುವಕ ಸಾವುತೆಲುಗಿನ ಹಾರರ್ ಫ್ಯಾಂಟಸಿ ಸಿನಿಮಾ ‘ಅರುಂಧತಿ’ ನೋಡಿ ಮೋಕ್ಷಕ್ಕಾಗಿ ತನಗೆ ತಾನೇ ಬೆಂಕಿ ಹಚ್ಚಿಕೊಂಡು ಯುವಕನೋರ್ವ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. |
![]() | ರಾಜ್ಯ ಬಿಜೆಪಿಯಲ್ಲಿ ಆಗಸ್ಟ್ 15ರೊಳಗೆ ಮಹತ್ವದ ಬದಲಾವಣೆ? ತುಮಕೂರಿನ ಮಾಜಿ ಶಾಸಕ ಏನಂತಾರೆ?ರಾಜ್ಯ ಬಿಜೆಪಿಯಲ್ಲಿ ಮತ್ತೆ ಬದಲಾವಣೆಯ ಮಾತುಗಳು ಕೇಳಿಬರುತ್ತಿವೆ. 2023ರ ವಿಧಾನಸಭೆ ಚುನಾವಣೆಗೆ ಇನ್ನು ಬಾಕಿ ಉಳಿದಿರುವುದು ಕೇವಲ 8 ತಿಂಗಳು. ಈ ಹೊತ್ತಿನಲ್ಲಿ ಪಕ್ಷದಲ್ಲಿ ಹೈಕಮಾಂಡ್ ಏನೇ ಬದಲಾವಣೆ ಮಾಡುವುದಿದ್ದರೂ ಅಳೆದು ತೂಕಿ ಮಾಡಬೇಕು. |
![]() | ಹೆಚ್ ಎಂಎಸ್ ಸಂಸ್ಥೆಗೂ ಯುನಾನಿ ಮೆಡಿಕಲ್ ಕಾಲೇಜಿಗೂ ಸಂಬಂಧವಿಲ್ಲ: ತುಮಕೂರಿನ ಮಾಜಿ ಶಾಸಕ ಸ್ಪಷ್ಟನೆನಗರದ ಯುನಾನಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಯನ್ನು ಕೇಂದ್ರ ತನಿಖಾ ತಂಡ(NIA)ದವರು ಬಂಧಿಸಿದ್ದಾರೆ ಎಂಬ ವದಂತಿಯಿದೆ. ಯುನಾನಿ ಮೆಡಿಕಲ್ ಕಾಲೇಜು 15 ವರ್ಷಗಳ ಹಿಂದೆ ಹೆಚ್ ಎಂಎಸ್ ವಿದ್ಯಾಸಂಸ್ಥೆಯಿಂದ ಮುಂಬೈಯ ಐಡಳಿತ ಮಂಡಳಿಗೆ ಮಾರಾಟ ಮಾಡಿದ್ದೆವು ಎಂದು ತುಮಕೂರಿನ ಮಾಜಿ ಶಾಸಕ ಸ್ಪಷ್ಟೀಕರಣ ನೀಡಿದ್ದಾರೆ. |
![]() | ಐಎಸ್ಐಎಸ್ ಪ್ರಕರಣ: ರಾಜ್ಯದ ಭಟ್ಕಳ, ತುಮಕೂರು, 5 ರಾಜ್ಯಗಳಲ್ಲಿ ಎನ್ಐಎ ಶೋಧ ಕಾರ್ಯಾಚರಣೆರಾಷ್ಟ್ರೀಯ ತನಿಖಾ ದಳ (ಎನ್ಐಎ) ರಾಜ್ಯದ ಭಟ್ಕಳ, ತುಮಕೂರು ಹಾಗೂ 5 ರಾಜ್ಯಗಳ ವಿವಿಧ ಪ್ರದೇಶಗಳಲ್ಲಿ ಶೋಧಕಾರ್ಯಾಚರಣೆ ನಡೆಸಿದೆ. |
![]() | ಯಡಿಯೂರಪ್ಪ ಬೆನ್ನಲ್ಲೇ ಚುನಾವಣೆ ಬಿಜೆಪಿಯ ಮತ್ತೊಬ್ಬ ನಾಯಕ ನಿವೃತ್ತಿ ಘೋಷಣೆಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆ ಬೆನ್ನಲ್ಲೇ ಇದೀಗ ಮತ್ತೋರ್ವ ಬಿಜೆಪಿ ನಾಯಕ ಚುನಾವಣೆ ನಿವೃತ್ತಿ ಘೋಷಿಸಿದ್ದಾರೆ. |
![]() | ಐಕಿಯಾ ಶಾಪಿಂಗ್ ಮಾಲ್'ಗೆ ಜನಸಾಗರ: ತುಮಕೂರು ರಸ್ತೆಯಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟತುಮಕೂರು ರಸ್ತೆ ನಾಗಸಂದ್ರ ಸಮೀಪ ಆರಂಭವಾಗಿರುವ ಪ್ರಖ್ಯಾತ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆ ಐಕಿಯಾ ಶಾಪಿಂಗ್ ಮಾಲ್'ಗೆ ಶನಿವಾರ ಮತ್ತು ಭಾನುವಾರ ಸಾಗರೋಪಾದಿಯಲ್ಲಿ ಗ್ರಾಹಕರು ಹರಿದು ಬಂದಿದ್ದು, ಇದರ ಪರಿಣಾಮ ತುಮಕೂರು ರಸ್ತೆಯಲ್ಲಿ ಗಂಟೆಗಟ್ಟಲೆ ಸಂಚಾರ ದಟ್ಟಣೆ ಎದುರಾಗಿ, ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು. |
![]() | ತುಮಕೂರು: ಮೇಲ್ಸೇತುವೆಯಿಂದ ಕೆಳಗೆ ಬಿದ್ದ ಬೈಕ್, ಇನ್ಫೋಸಿಸ್ ಟೆಕ್ಕಿ ಸಾವುಬೈಕ್ ಅಪಘಾತದಲ್ಲಿ ಬೆಂಗಳೂರಿನ ಇನ್ಫೋಸಿಸ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಟೆಕ್ಕಿ ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಗವಿಮಠದ ಬಳಿ ಭಾನುವಾರ ನಡೆದಿದೆ. |
![]() | ತುಮಕೂರು: ದಲಿತ ಸಂಘರ್ಷ ಸಮಿತಿ ಮುಖಂಡ ನರಸಿಂಹಮೂರ್ತಿ ಬರ್ಬರ ಹತ್ಯೆದಲಿತ ಸಂಘರ್ಷ ಸಮಿತಿ ಮುಖಂಡ ನರಸಿಂಹಮೂರ್ತಿ ಅಲಿಯಾಸ್ ಕುರಿ ಮೂರ್ತಿ ಅವರನ್ನು ಬರ್ಬರ ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿದೆ. |
![]() | ತುಮಕೂರು: ಹಾಸ್ಟೆಲ್ ನಲ್ಲೇ ಆತ್ಮಹತ್ಯೆಗೆ ಶರಣಾದ ಎಂಜಿನಿಯರಿಂಗ್ ವಿದ್ಯಾರ್ಥಿನಿಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ. |
![]() | ತುಮಕೂರು: ಇನ್ನೋವಾ ಕಾರು- ಟಿಟಿ ಮುಖಾಮುಖಿ ಡಿಕ್ಕಿ; ಸ್ಥಳದಲ್ಲೇ ಇಬ್ಬರು ದುರ್ಮರಣ, 11 ಮಂದಿಗೆ ಗಾಯಚಾಲಕನ ನಿಯಂತ್ರಣ ತಪ್ಪಿದ ಇನೋವಾ ಕಾರು, ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದು ನಂತರ ಎದುರುಗಡೆ ಬರುತ್ತಿದ್ದ ಟಿಟಿ ಮತ್ತು ಬುಲೆಟ್ಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟು, 11 ಮಂದಿ ಗಾಯಗೊಂಡಿದ್ದಾರೆ. |
![]() | ತುಮಕೂರು: ಬೈಕ್ಗಳ ಮುಖಾಮುಖಿ ಡಿಕ್ಕಿ: ನಾಲ್ವರ ಸಾವುದ್ವಿಚಕ್ರ ವಾಹನಗಳ ಮಧ್ಯೆ ನಡೆದ ಅಪಘಾತದಲ್ಲಿ ನಾಲ್ವರು ಮೃತಪಟ್ಟ ಘಟನೆ ತುಮಕೂರಿನಲ್ಲಿ ಶುಕ್ರವಾರ ಸಂಜೆ ನಡೆದಿದೆ. |
![]() | ತುಮಕೂರಿನಲ್ಲಿ ಭೀಕರ ರಸ್ತೆ ಅಪಘಾತ: ನವ ವರ ಸೇರಿ ಮೂವರ ದುರ್ಮರಣ, ನವ ವಧು ಸ್ಥಿತಿ ಗಂಭೀರತುಮಕೂರಿನ ತಾಲೂಕಿನ ಚಿಕ್ಕ ಶೆಟ್ಟಿಕೆರೆ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಲಾರಿ ಹಾಗೂ ಇವೋವಾ ಕಾರಿನ ನಡುವೆ ಡಿಕ್ಕಿ ಸಂಭವಿಸಿದ್ದು, ದುರ್ಘಟನೆಯಲ್ಲಿ ನವ ವರ ಸೇರಿ ಮೂವರು ದರ್ಮರಣವನ್ನಪ್ಪಿದ್ದಾರೆ. |
![]() | ಸಿದ್ದಗಂಗೆಯ ಡಾ ಶಿವಕುಮಾರ ಸ್ವಾಮಿಗಳ ಜೀವನ ಚರಿತ್ರೆಯನ್ನು ಪಠ್ಯದಲ್ಲಿ ಸೇರಿಸಿ: ಸರ್ಕಾರಕ್ಕೆ ಬಿ ಎಸ್ ಯಡಿಯೂರಪ್ಪ ಮನವಿಶಾಲಾ ಮಕ್ಕಳ ಪಠ್ಯಪುಸ್ತಕದಲ್ಲಿ ತುಮಕೂರಿನ ಸಿದ್ದಗಂಗಾ ಮಠದ ನಡೆದಾಡುವ ದೇವರೆಂದೇ ಹೆಸರು ಗಳಿಸಿರುವ ತ್ರಿವಿಧ ದಾಸೋಹಿ ಡಾ ಶಿವಕುಮಾರ ಸ್ವಾಮೀಜಿಗಳ ಜೀವನ ಚರಿತ್ರೆಯನ್ನು ಸೇರ್ಪಡೆ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. |
![]() | ತುಮಕೂರಿನ ಪಾವಗಡದಲ್ಲಿ ಬಸ್ ಅಪಘಾತ: ನಾಪತ್ತೆಯಾಗಿದ್ದ ಚಾಲಕ ಪೊಲೀಸ್ ವಶಕ್ಕೆ, ಎಫ್ಐಆರ್ ದಾಖಲುಜಿಲ್ಲೆಯ ಪಾವಗಡ ತಾಲ್ಲೂಕಿನ ಪಳವಳ್ಳಿ ಬಳಿ ಖಾಸಗಿ ಬಸ್ ದುರಂತ ಪ್ರಕರಣಕ್ಕೆ ಸಂಬಂಧಿಸಿ ಚಾಲಕ ರಘು ಎಂಬಾತನನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ. |
![]() | ತುಮಕೂರು ಜಿಲ್ಲೆಯ ಪಾವಗಡ ಬಳಿ ಭೀಕರ ಅಪಘಾತ: ಖಾಸಗಿ ಬಸ್ ಪಲ್ಟಿ; ಕನಿಷ್ಠ 5 ಸಾವು, 35 ಮಂದಿಗೆ ಗಾಯಭೀಕರ ದುರ್ಘಟನೆಯೊಂದರಲ್ಲಿ ಶನಿವಾರ ಬೆಳಗ್ಗೆ ಪಾವಗಡ ತಾಲೂಕಿನ ಪಳವಳ್ಳಿ ಗ್ರಾಮದ ಬಳಿ ತುಂಬಿ ತುಳುಕುತ್ತಿದ್ದ ಖಾಸಗಿ ಬಸ್ಸೊಂದು ಮಗುಚಿ ಬಿದ್ದ ಪರಿಣಾಮ ಇಬ್ಬರು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಕನಿಷ್ಠ ಐವರು ಮೃತಪಟ್ಟು ಮೂವತ್ತೈದು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. |