• Tag results for Tweet

ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪಕ್ಷ ಆರಂಭ: ಡಿ.31ರಂದು ಘೋಷಣೆ

ರಾಜಕೀಯ ಪಕ್ಷ ಆರಂಭದ ಕುರಿತ ಘೋಷಣೆಯನ್ನು ಡಿಸೆಂಬರ್ 31ರಂದು ಮಾಡುವುದಾಗಿ ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.

published on : 3rd December 2020

ಈಗ ಮತ್ತೊಂದು ಟ್ವೀಟ್ ಗಾಗಿ ಕಾಮ್ರಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಎಜಿ ಅಸ್ತು

ಸುಪ್ರೀಂ ಕೋರ್ಟ್‌ ವಿರುದ್ಧದ ತಮ್ಮ ವಿವಾದಾತ್ಮಕ ಟ್ವೀಟ್‌ಗಳನ್ನು ಡಿಲೀಟ್ ಮಾಡುವುದಿಲ್ಲ ಎಂದು ನವೆಂಬರ್ 18 ಮಾಡಿದ್ದ ಹೊಸ ಟ್ವೀಟ್ ಗೆ ಸಂಬಂಧಿಸಿದಂತೆ ಕಾಮಿಡಿಯನ್ ಕುನಾಲ್ ಕಾಮ್ರಾ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರು ಶುಕ್ರವಾರ ಅನುಮತಿ ನೀಡಿದ್ದಾರೆ.

published on : 20th November 2020

ಚುನಾವಣೆಯಲ್ಲಿ ಗೆದ್ದಿರುವುದಾಗಿ ಟ್ವೀಟ್ ಮಾಡಿ ಅಪಹಾಸ್ಯಕ್ಕೆ ಗುರಿಯಾದ ಡೊನಾಲ್ಡ್ ಟ್ರಂಪ್!

ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ ವಿರುದ್ಧ ಸೋಲೋಪ್ಪಿಕೊಳ್ಳದ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ನಾನು ಗೆದ್ದಿದ್ದೇನೆ ಎಂದಿದ್ದಾರೆ.

published on : 17th November 2020

ಮೋದಿ ಸರ್ಕಾರ‌ದ ಮಾರ್ಗದರ್ಶನ‌ದಂತೆ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ: ಸಿಎಂ ಯಡಿಯೂರಪ್ಪ

ತುಮಕೂರಿನ ಶಿರಾ ಹಾಗೂ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಅಭಿನಂದನೆಗಳನ್ನು ತಿಳಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಧನ್ಯವಾದಗಳನ್ನು ತಿಳಿಸಿದ್ದಾರೆ. 

published on : 11th November 2020

ನಳಿನ್ ಕುಮಾರ್ ಕಟೀಲ್ ಒಬ್ಬ ಕಾಮಿಡಿ ಕಿಲಾಡಿ: ಕೆಪಿಸಿಸಿ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಆಚಾರವಿಲ್ಲದ ನಾಲಿಗೆ, ವಿಚಾರವಿಲ್ಲದ ತಲೆ ಹೊಂದಿದ ಕಾಮಿಡಿ ಕಿಲಾಡಿ ಎಂದು ರಾಜ್ಯ ಕೆಪಿಸಿಸಿ ಟೀಕಿಸಿದೆ.

published on : 8th November 2020

ದಕ್ಷಿಣ ಕಾರೊಲಿನಾ ಕ್ಷೇತ್ರದಲ್ಲಿ ಫಲಿತಾಂಶಕ್ಕೆ ಮುನ್ನವೇ ಗೆಲುವು ಘೋಷಿಸಿಕೊಂಡ ಟ್ರಂಪ್: ಎಚ್ಚರಿಕೆ ನೀಡಿದ ಟ್ವಿಟ್ಟರ್!

ದಕ್ಷಿಣ ಕಾರೊಲಿನಾ ಕ್ಷೇತ್ರದಲ್ಲಿ ತಮ್ಮ ಗೆಲುವಿನ ಬಗ್ಗೆ ಘೋಷಿಸಿ ಟ್ವೀಟ್ ಮಾಡುವ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಎಚ್ಚರಿಕೆ ನೀಡಿದ ಟ್ವಿಟ್ಟರ್, ಅಧಿಕೃತ ಮೂಲಗಳು ದೃಢಪಡಿಸುವ ಮೊದಲೇ ನೀವು ನಿಮ್ಮ ಗೆಲುವನ್ನು ಘೋಷಿಸಿಕೊಂಡಿದ್ದೀರಿ, ತಪ್ಪು ಕ್ರಮ ಎಂದು ಹೇಳಿದೆ.

published on : 4th November 2020

ವಿಯೆನ್ನಾದಲ್ಲಿ ನಡೆದ ಭಯೋತ್ಪಾದನಾ ದಾಳಿ: ಪ್ರಧಾನಿ ಮೋದಿ ಆಘಾತ

ವಿಯೆನ್ನಾದಲ್ಲಿ ನಡೆದ ಭಯೋತ್ಪಾದನಾ ದಾಳಿಗೆ ಪ್ರಧಾನಮಂದ್ರಿ ನರೇಂದ್ರ ಮೋದಿಯವರು ಮಂಗಳವಾರ ಆಘಾತ ವ್ಯಕ್ತಪಡಿಸಿದ್ದಾರೆ.

published on : 3rd November 2020

ಕೃತಕ ಬುದ್ಧಿಮತ್ತೆ ಬಳಸಿ ಟ್ವೀಟ್ ಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ತಿಳಿಸಲು ಸಾಧ್ಯ!

ಈಗಿನ ಕಾಲದ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲೇ ಹೆಚ್ಚು ಸಮಯ ಕಳೆಯುತ್ತಿರುತ್ತಾರೆ, ಓದಿನತ್ತ ಹೆಚ್ಚು ಗಮನ ಹರಿಸುವುದಿಲ್ಲ ಎಂಬ ಆರೋಪ ಕೇಳಿಬರುವುದು ಸಾಮಾನ್ಯ. ಆದರೆ ಮುಂದಿನ ದಿನಗಳಲ್ಲಿ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ತಿಳಿಯುವುದಕ್ಕೆ ಇದೇ ಸಾಮಾಜಿಕ ಜಾಲತಾಣ ಸಹಕಾರಿಯಾಗಬಲ್ಲದು! 

published on : 26th October 2020

ತುಮಕೂರು: ರೈತರ ವಿರುದ್ಧ ಟ್ವೀಟ್ ಮಾಡಿದ್ದ ಕಂಗನಾ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶ

ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ ಕೃಷಿ ಸಂಬಂಧಿತ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸಿದ ರೈತರನ್ನು ಗುರಿಯಾಗಿಸಿ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದ ಬಾಲಿವುಡ್ ನಟಿ ಕಂಗನಾ ರಾಣಾವತ್ ವಿರುದ್ಧ ಪ್ರಕರಣ ದಾಖಲಿಸುವಂತೆ ಕರ್ನಾಟಕದ ತುಮಕೂರು ಸ್ಥಳೀಯ ನ್ಯಾಯಾಲಯವೊಂದು ಶುಕ್ರವಾರ ಪೊಲೀಸರಿಗೆ ನಿರ್ದೇಶನ ನೀಡಿದೆ.

published on : 9th October 2020

ಸುಶಾಂತ್ ಸಿಂಗ್ ಬಗೆಗೆ ನಕಲಿ ಟ್ವೀಟ್‌ಗಳನ್ನು ಪ್ರಸಾರ ಮಾಡಿದ್ದ ಆಜ್ ತಕ್ ಗೆ ಎನ್‌ಬಿಎಸ್‌ಎನಿಂದ 1 ಲಕ್ಷ ರೂ. ದಂಡ

ನಟ ಸುಶಾಂತ್ ಸಿಂಗ್ ರಜಪೂತ್‌ಗೆ ಸಂಬಂಧಿಸಿದ ನಕಲಿ ಟ್ವೀಟ್‌ಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ನ್ಯೂಸ್ ಬ್ರಾಡ್‌ಕಾಸ್ಟಿಂಗ್ ಸ್ಟ್ಯಾಂಡರ್ಡ್ಸ್ ಅಥಾರಿಟಿ (ಎನ್‌ಬಿಎಸ್‌ಎ) ಸುದ್ದಿ ವಾಹಿನಿ  ಆಜ್ ತಕ್ ಗೆ 1 ಲಕ್ಷ ರೂ.ಗಳ ದಂಡ ವಿಧಿಸಿದೆ ಎಂದು ಲೈವ್ ಲಾ ಗುರುವಾರ ವರದಿ ಮಾಡಿದೆ.

published on : 8th October 2020

'ಎಂದಿಗೂ 'ತಲೆಬಾಗುವುದಿಲ್ಲ': ಗಾಂಧೀ ಜಯಂತಿ ಹಿನ್ನೆಲೆ ಹತ್ರಾಸ್ ಪ್ರತಿಭಟನೆ ಘಟನೆ ನೆನೆದು ರಾಹುಲ್ ಹೇಳಿಕೆ

ಅನ್ಯಾಯ ಮಾಡುವವರ ಎದುರು ಎಂದಿಗೂ ತಲೆಬಾಗುವುದಿಲ್ಲ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಹಿನ್ನೆಲೆಯಲ್ಲಿ ಹತ್ರಾಸ್ ಪ್ರತಿಭಟನೆ ಘಟನೆ ನೆನೆದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಶುಕ್ರವಾರ ಹೇಳಿದ್ದಾರೆ. 

published on : 2nd October 2020

ದರಿದ್ರ ದೇಶ ಚೀನಾ ಮಟ್ಟಹಾಕಿ, ಮೂಲೆಗುಂಪು ಮಾಡಬೇಕು: ಎಸ್ ಪಿಬಿ ನಿಧನಕ್ಕೆ ಜಗ್ಗೇಶ್ ಕಂಬನಿ

ತಮ್ಮ ಸಿರಿಕಂಠದ ಮೂಲಕ ನಮ್ಮನ್ನು ರಂಜಿಸಿದ್ದ ಗಾನಚೇತನ ತಮ್ಮ ಗಾಯನವನ್ನು ನಿಲ್ಲಿಸಿದ್ದಾರೆ. ಹಲವಾರು ನಟರು ಮತ್ತು ಚಿತ್ರರಂಗದವರು ಅವರಿಗೆ ಸಂತಾಪ ಸೂಚಿಸಿದ್ದಾರೆ.

published on : 26th September 2020

ಕಾಡಿ ಬೇಡಿ ಮೋದಿ ಭೇಟಿಗೆ ಅವಕಾಶ ಪಡೆದಿದ್ದೀರಿ, ಇದನ್ನು ನಿಮ್ಮ ಕುರ್ಚಿ ಉಳಿಸಿಕೊಳ್ಳುವ ಕಸರತ್ತಿಗೆ ಬಳಸಿಕೊಳ್ಳಬೇಡಿ'

ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ನಿಮ್ಮ ಕುರ್ಚಿ ಉಳಿಸಿಕೊಳ್ಳುವ ಪ್ರಯತ್ನ ಮಾಡುವ ಬದಲು, ರಾಜ್ಯದ ಹಿತರಕ್ಷಣೆಗೆ ಅಗತ್ಯ ಮಾತುಗಳನ್ನಾಡಿ ಎಂದು ಸಿಎಂ ಬಿಎಸ್ ಯಡಿಯೂರಪ್ಪಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದ್ದಾರೆ.

published on : 18th September 2020

ನಾನು ಜಗಳಗಂಟಿ ಎಂಬುದನ್ನು ಸಾಬೀತು ಮಾಡಿದರೆ ಟ್ವಿಟರ್ ತೊರೆಯುತ್ತೇನೆ: ಕಂಗನಾ

ನಾನು 'ಲಡಾಕು'ವಿನಂತೆ (ಜಗಳಗಂಟಿ ಅಥವಾ ಕಲಹಪ್ರಿಯೆ) ಕಾಣಿಸಿಕೊಳ್ಳಬಹುದು ಆದರೆ ಅದು ನಿಜವಲ್ಲ ಎಂದು ಹೇಳಿದ್ದಾರೆ. ನಾನು ಜಗಳಗಂಟಿ ಎಂಬುದನ್ನು ಸಾಬೀತು ಪಡಿಸಿದರೆ ಟ್ವಿಟರ್ ತೊರೆಯುತ್ತೇನೆ ಎಂದು ಕಂಗನಾ ಹೇಳಿದ್ದಾರೆ.

published on : 18th September 2020

ನೀವು ಲೆಕ್ಕ ಮಾಡಿಲ್ಲ ಅಂದ್ರೆ ಯಾರೂ ಸತ್ತಿಲ್ಲವೇ?: ವಲಸಿಗರ ಸಾವು ಕುರಿತು ಪ್ರಧಾನಿ ಮೋದಿ ವಿರುದ್ಧ ರಾಹುಲ್ ಕಿಡಿ

ಲಾಕ್‌ಡೌನ್‌ ಅವಧಿಯಲ್ಲಿ ಎಷ್ಟು ಮಂದಿ ವಲಸೆ ಕಾರ್ಮಿಕರು ಸಾವಿಗೀಡಾದರು ಅಥವಾ ಎಷ್ಟು ಮಂದಿ ಕೆಲಸ ಕಳೆದು ಕೊಂಡರು ಎಂಬುದು ಮೋದಿ ಸರ್ಕಾರಕ್ಕೆ ತಿಳಿದಿಲ್ಲ ಎಂದು ಕಾಂಗ್ರೆಸ್ ಸಂಸದ ರಾಹುಲ್‌ ಗಾಂಧಿ ಟ್ವೀಟ್ ಮಾಡಿದ್ದಾರೆ.

published on : 15th September 2020
1 2 3 4 5 6 >