• Tag results for Twitter

ಬಿಜೆಪಿ ಅವಧಿಯಲ್ಲಿ ಬೆಲೆ‌ ಕಳೆದುಕೊಂಡಿರುವುದೆಂದರೆ ಅದು ಮನುಷ್ಯನ ಜೀವ: ಡಿ.ಕೆ. ಶಿವಕುಮಾರ್

ಬಿಜೆಪಿಯ ಅಧಿಕಾರಾವಧಿಯಲ್ಲಿ ಬೆಲೆ ಕಳೆದುಕೊಂಡಿರುವುದು ಎಂದರೆ ಅದು ಮನುಷ್ಯನ ಜೀವ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ.

published on : 12th June 2021

ಭಾರತದ ಖಡಕ್ ಎಚ್ಚರಿಕೆಗೆ ಮಣಿದು ಪಂಜಾಬಿ ಗಾಯಕ ಜಾಸ್ಸಿಬಿ, ಇತರ ಮೂವರ ಖಾತೆ ಬ್ಲಾಕ್ ಮಾಡಿದ ಟ್ವಿಟರ್!

ಭಾರತದಲ್ಲಿ ಕಾನೂನು ಪಾಲನೆ ಪ್ರತಿಕ್ರಿಯೆಯಾಗಿ ಪಂಜಾಬಿ ಗಾಯಕ ಜಾಸ್ಸಿಬಿ, ಹಿಪ್-ಹಾಪ್ ಕಲಾವಿದ ಎಲ್-ಫ್ರೆಶ್ ದಿ ಲಯನ್ ಮತ್ತು ಇನ್ನಿಬ್ಬರ ಖಾತೆಗಳನ್ನು ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ಬ್ಲಾಕ್ ಮಾಡಿದೆ. 

published on : 8th June 2021

ಸರ್ಕಾರದ ಹೊಸ ಐಟಿ ನಿಯಮಾವಳಿಗಳನ್ನು ಅನುಸರಿಸಲು ಕಾಲಾವಕಾಶ ಕೇಳಿದ ಟ್ವಿಟರ್

ಸಾಮಾಜಿಕ ಜಾಲತಾಣ ಸಂಸ್ಥೆ ಟ್ವಿಟರ್ ಭಾರತ ಸರ್ಕಾರದ ಹೊಸ ಐಟಿ ನಿಯಮಗಳನ್ನು ಅನುಸರಿಸುವುದಕ್ಕೆ ಹೆಚ್ಚಿನ ಕಾಲಾವಕಾಶವನ್ನು ಕೇಳಿದೆ.

published on : 7th June 2021

'6 ತಿಂಗಳಿಂದ ನಿಷ್ಕ್ರಿಯ, ಅಪೂರ್ಣ ವಿವರದ ಖಾತೆಗಳು'; ‘ಬ್ಲೂ ಟಿಕ್‌’ ತೆಗೆದದ್ದಕ್ಕೆ ಕಾರಣ ನೀಡಿದ ಟ್ವಿಟರ್‌!

ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಖಾತೆಗಳ ಬ್ಲೂಟಿಕ್ ತೆಗೆಯುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದ ಖ್ಯಾತ ಮೈಕ್ರೋ ಬ್ಲಾಗಿಂಗ್ ಸಾಮಾಜಿಕ ಜಾಲತಾಣ ಟ್ವಿಟರ್ ಇದೀಗ ತನ್ನ ಕಾರ್ಯಕ್ಕೆ ಕಾರಣಗಳನ್ನು ನೀಡಿದೆ.

published on : 5th June 2021

ಐಟಿ ನಿಯಮ ಅನುಸರಣೆ: ಕೇಂದ್ರ ಸರ್ಕಾರದಿಂದ ಟ್ವಿಟರ್ ಗೆ 'ಕೊನೆಯ' ನೋಟಿಸ್!

ಹೊಸ ಐಟಿ ನಿಯಮಗಳನ್ನು ಕೂಡಲೇ ಪಾಲಿಸುವಂತೆ ಕೊನೆಯದಾದ ಅವಕಾಶವೊಂದನ್ನು ನೀಡಿ ಕೇಂದ್ರ ಸರ್ಕಾರ ಶನಿವಾರ ಟ್ವಿಟರ್ ಗೆ ನೋಟಿಸ್ ನೀಡಿದೆ.ನಿಯಮಗಳನ್ನು ಪಾಲಿಸುವಲ್ಲಿ ವಿಫಲವಾದರೆ ಐಟಿ ಕಾಯ್ದೆಯಡಿ ಕಾನೂನು ಹೊಣೆಗಾರಿಕೆಯಿಂದ ವಿನಾಯಿತಿ ಕಳೆದುಕೊಳ್ಳಲು ಕಾರಣವಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

published on : 5th June 2021

ಉಪರಾಷ್ಟ್ರಪತಿ ನಾಯ್ಡು ಬಳಿಕ ಆರ್‌ಎಸ್‌ಎಸ್ ಮುಖಂಡ ಭಾಗವತ್ ಖಾತೆಯ 'ಬ್ಲೂ ಟಿಕ್' ತೆಗೆದ ಟ್ವಿಟ್ಟರ್

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರ ವೈಯಕ್ತಿಕ ಖಾತೆಯಿಂದ ಅಲ್ಲದೆ ಸಂಘಟನೆಯ ಹಲವಾರು ನಾಯಕರ ಖಾತೆಗಳಿಂದ "ಬ್ಲೂ ಟಿಕ್" ಬ್ಯಾಡ್ಜ್ ಅನ್ನು ಟ್ವಿಟ್ಟರ್ ಶನಿವಾರ ತೆಗೆದುಹಾಕಿದೆ.

published on : 5th June 2021

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಟ್ವಿಟರ್ ಖಾತೆ ಹ್ಯಾಕ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ಗೌರವ್‍ ಗುಪ್ತ ಅವರ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಿದ್ದ ಕಿಡಿಕೇಡಿಗಳು, ಗೌರವ್ ಗುಪ್ತಾ ಎಂಬ ಹೆಸರಿನ ಬದಲಿಗೆ ಟೆಸ್ಲಾ ಎಂದು ನಮೂದಿಸಿ ಕ್ರಿಪ್ಟೊಕರೆನ್ಸಿಯ ಬಗ್ಗೆ ಕೆಲವು ಟ್ವೀಟ್ ಗಳನ್ನು ಮಾಡಿದ್ದರು ಎಂದು ಹೇಳಲಾಗುತ್ತಿದೆ. 

published on : 5th June 2021

ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ಖಾತೆಯಿಂದ ಬ್ಲೂ ಟಿಕ್ ಮಾರ್ಕ್ ತೆಗೆದು ಮತ್ತೆ ಕೊಟ್ಟ ಟ್ವಿಟ್ಟರ್!

ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಟ್ವಿಟ್ಟರ್ ಖಾತೆಯಿಂದ ಬೆಳಗ್ಗೆ ನೀಲಿ ಬಣ್ಣದ ಟಿಕ್ ಮಾರ್ಕ್ ತೆಗೆದಿದ್ದ ಟ್ವಿಟ್ಟರ್ ಈಗ ಮರು ನೀಡಿದೆ. 

published on : 5th June 2021

ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ವೈಯಕ್ತಿಕ ಟ್ವಿಟರ್ ಖಾತೆಯಲ್ಲಿ ಬ್ಲೂ ಟಿಕ್ ಮಾರ್ಕ್ ಮಾಯ!

ಗಣ್ಯ ವ್ಯಕ್ತಿಗಳು, ರಾಜಕಾರಣಿಗಳು, ಸೆಲೆಬ್ರಿಟಿಗಳ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹೆಸರಿನ ಎದುರಿಗೆ ಬ್ಲೂ ಬ್ಯಾಡ್ಜ್ ಅಥವಾ ಟಿಕ್ ಮಾರ್ಕ್ ಬರುತ್ತದೆ. ನೀಲಿ ಬಣ್ಣದ ಟಿಕ್ ಮಾರ್ಕ್ ಇದ್ದರೆ ಸಂಬಂಧಪಟ್ಟವರ ಅಧಿಕೃತ ಟ್ವಿಟ್ಟರ್ ಖಾತೆ ಎಂದರ್ಥ.

published on : 5th June 2021

ಎನ್‌ಸಿಇಆರ್‌ಟಿ ಪುಸ್ತಕದಲ್ಲಿ ಈಶಾನ್ಯದ ಅಧ್ಯಾಯಕ್ಕೆ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರಿಂದ ಟ್ವಿಟರ್‌ನಲ್ಲಿ 'ಸುನಾಮಿ' ಸೃಷ್ಟಿ!

ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳಲ್ಲಿ ಈಶಾನ್ಯ ಪ್ರದೇಶದ ಭೌಗೋಳಿಕತೆ, ಸಂಸ್ಕೃತಿ, ಜನಾಂಗೀಯತೆ ಮತ್ತು ಜನರ ಜೀವನಶೈಲಿ ಬಗ್ಗೆ ಒಂದು ಅಧ್ಯಾಯವನ್ನು ಸೇರಿಸಬೇಕೆಂದು ಒತ್ತಾಯಿಸಿ ಈಶಾನ್ಯದ ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಮತ್ತು ಇತರರು ಟ್ವೀಟ್ ಮಾಡುವ ಮೂಲಕ 'ಟ್ವಿಟರ್‌ನಲ್ಲಿ ಸುನಾಮಿ' ಎಬ್ಬಿಸಿದರು.

published on : 5th June 2021

ಲವ್ ಮಾಕ್ಟೇಲ್ ಕನ್ನಡ ಚಿತ್ರ ವೀಕ್ಷಿಸಿ, ಹೊಗಳಿದ ಆಸಿಸ್ ಪತ್ರಕರ್ತೆ; ಕನ್ನಡದಲ್ಲೇ 'ಈ ಸಲ ಕಪ್ ನಮ್ದೇ' ಅಂದ್ರು!

ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಅಭಿನಯದ ಲವ್ ಮಾಕ್ಟೇಲ್ ಚಿತ್ರ ಇದೀಗ ವಿದೇಶದಲ್ಲೂ ಸದ್ದು ಮಾಡುತ್ತಿದ್ದು, ಚಿತ್ರವನ್ನು ವೀಕ್ಷಿಸಿದ ಆಸ್ಚ್ರೇಲಿಯಾದ ಪತ್ರಕರ್ತೆಯೊಬ್ಬರು ಚಿತ್ರವನ್ನು ಹೊಗಳಿ ಟ್ವಿಟರ್ ನಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

published on : 30th May 2021

'ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವಕ್ಕೆ ನಿಯಮಗಳನ್ನು ನಿರ್ದೇಶಿಸುವ ಪ್ರಯತ್ನ': ಟ್ವಿಟರ್ ಹೇಳಿಕೆ ಕುರಿತು ಕೇಂದ್ರ ಸರ್ಕಾರ ಖಂಡನೆ

'ತಿರುಚಿದ ಮೀಡಿಯಾ' ಟ್ಯಾಗ್ ಗಳ ವಿಚಾರದಲ್ಲಿ ಪೊಲೀಸರಿಂದ ಬೆದರಿಕೆ ಹಾಕಲಾಗಿದೆ ಎಂದು ಟ್ವಿಟರ್ ಹೇಳಿದ ನಂತರ ಮೈಕ್ರೊಬ್ಲಾಗಿಂಗ್ ವೇದಿಕೆ ನೀಡಿರುವ ಹೇಳಿಕೆ ನಿರಾಧಾರ, ತಪ್ಪು ಮತ್ತು ದೇಶಕ್ಕೆ ಅಪಖ್ಯಾತಿ ತರುವ ಪ್ರಯತ್ನವಾಗಿದೆ ಎಂದು ಕೇಂದ್ರ ಸರ್ಕಾರ ಗುರುವಾರ ಖಂಡಿಸಿದೆ.

published on : 27th May 2021

ಪೊಲೀಸರ ಬೆದರಿಕೆ ತಂತ್ರಗಳು ಆತಂಕಕಾರಿ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ: ಟ್ವಿಟರ್ ಕಳವಳ

ಇತ್ತೀಚೆಗೆ ಭಾರಿ ಸುದ್ದಿಯಾಗಿದ್ದ, ಕಾಂಗ್ರೆಸ್ ಪಕ್ಷದ್ದು ಎನ್ನಲಾದ ಕೋವಿಡ್ ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟರ್ ಕಚೇರಿಗೆ ಮೇಲೆ ದೆಹಲಿ ಪೊಲೀಸರ ದಾಳಿಯನ್ನು ಸಾಮಾಜಿಕ ಜಾಲತಾಣ ಸಂಸ್ಥೆ ಆತಂಕಕಾರಿ ಎಂದು ವಿಶ್ಲೇಷಿಸಿದೆ. 

published on : 27th May 2021

ಟ್ವಿಟರ್ ಗೆ ಪೈಪೋಟಿ ನೀಡುತ್ತಿರುವ 'ಕೂ'ಗೆ 30 ಮಿಲಿಯನ್ ಡಾಲರ್ ಹೂಡಿಕೆ!

ಟ್ವಿಟರ್ ಗೆ ಪೈಪೋಟಿ ನೀಡುತ್ತಿರುವ ಕೂ'ಸಾಮಾಜಿಕ ಜಾಲತಾಣದ ಆಪ್ ಗೆ ಹೂಡಿಕೆ ಹರಿದುಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೂ'ಗೆ 30 ಮಿಲಿಯನ್ ಡಾಲರ್ ನಷ್ಟು ಹೂಡಿಕೆ ಹರಿದುಬಂದಿದೆ ಎಂದು ಸಂಸ್ಥೆ ತಿಳಿಸಿದೆ. 

published on : 26th May 2021

ಕೇಂದ್ರದಿಂದ ರಾಜ್ಯಕ್ಕೆ 1.25 ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕೆ ಬಂದಿದೆ: ಸಚಿವ ಸುಧಾಕರ್

ಕೇಂದ್ರ ಸರ್ಕಾರದ ಕೋಟಾದಡಿಯಲ್ಲಿ 1.25 ಲಕ್ಷ ಡೋಸ್ ಕೋವ್ಯಾಕ್ಸಿನ್ ಲಸಿಕೆ ಕರ್ನಾಟಕಕ್ಕೆ ಬಂದಿದೆ ಎಂದು ಆರೋಗ್ಯ ಸಚಿವ ಸುಧಾಕರ್ ಅವರು ಮಂಗಳವಾರ ಹೇಳಿದ್ದಾರೆ.

published on : 25th May 2021
1 2 3 4 5 6 >