• Tag results for UK

ಜಿಯೋಫೋನ್‌ ಬಳಕೆದಾರರಿಗೆ ರಿಲಯನ್ಸ್ ಜಿಯೋ ಬಂಪರ್ ಆಫರ್!

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐ ಎಲ್) ನ ಸಂಪೂರ್ಣ ಸ್ವಾಮ್ಯದ ಅಂಗ ಸಂಸ್ಥೆಯಾದ ರಿಲಯನ್ಸ್ ಜಿಯೋ ಇನ್ಫೋಕಾಮ್ (ಆರ್ ಜಿಯೋ) ತನ್ನ ಜಿಯೋಫೋನ್ ಬಳಕೆದಾರರಿಗೆ ಹೊಸ ಪ್ರಯೋಜನಗಳನ್ನು ಘೋಷಿಸಿದ್ದು, ಉಚಿತವಾಗಿ 100 ನಿಮಿಷಗಳ ಕರೆಗಳು  ಮಾಡಬಹುದಾಗಿದ್ದು, ಇದರೊಂದಿಗೆ 100 ಎಸ್‌ಎಂಎಸ್ ಗಳನ್ನು ಉಚಿತವಾಗಿ ಕಳುಹಿಸಬಹುದಾಗಿದೆ.

published on : 31st March 2020

ಮಹಾಭಾರತ, ರಾಮಾಯಣ ಆಯ್ತು ಈಗ ಬರಲಿದೆ ಶಕ್ತಿಮಾನ್! 

ದೂರದರ್ಶನದಲ್ಲಿ ಮಹಾಭಾರತ, ರಾಮಾಯಣ ದಾರಾವಾಹಿಗಳ ಮರುಪ್ರಸಾರವಾಗುತ್ತಿದೆ, ಈ ಬೆನ್ನಲ್ಲೇ ದಶಕಗಳ ಹಿಂದಿನ ಮತ್ತೊಂದು ಜನಪ್ರಿಯ ಧಾರಾವಾಹಿ ಮರುಪ್ರಸಾರವಾಗಲಿದೆ. 

published on : 30th March 2020

ಲಾಕ್ ಡೌನ್: ವಾರಂಟಿ, ಉಚಿತ ಸೇವೆ ಅವಧಿಯನ್ನು ವಿಸ್ತರಿಸಿದ ಮಾರುತಿ ಸುಜುಕಿ

ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ತನ್ನ ಗ್ರಾಹಕರ ವಾಹನಗಳ ವಾರಂಟಿ ಮತ್ತು ಸೇವಾ ಕಾಲನಿಗದಿಯನ್ನು ವಿಸ್ತರಿಸಿದೆ.

published on : 30th March 2020

ನೀವಿರುವಲ್ಲೇ ಜಾಗೃತಿ ಮೂಡಿಸಿ ಎಂದ ಜಿಲ್ಲಾಧಿಕಾರಿಗೆ ನನ್ನನ್ನು ಯಾರೂ ಪ್ರಶ್ನಿಸುವಂತಿಲ್ಲ ಎಂದ ರೇಣುಕಾಚಾರ್ಯ

ಕಳೆದೆರಡು ದಿನಗಳಿಂದ ದಾವಣಗೆರೆ ಮತ್ತು ಮತಕ್ಷೇತ್ರ ಹೊನ್ನಾಳಿಯಲ್ಲಿ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕೊರೋನಾ ವೈರಸ್ ನಿಯಂತ್ರಣ ಕುರಿತ ಜಾಗೃತಿಗಾಗಿ ಓಡಾಡುತ್ತಿದ್ದು, ಅವರ ಹಿಂದೆ ಬೆಂಬಲಿಗರು ಕಾರ್ಯಕರ್ತರ ಪಡೆಯೇ ತಿರುಗುತ್ತಿದೆ.

published on : 29th March 2020

ಹುಕ್ಕೇರಿ: ಪಾದಚಾರಿಗಳ ಮೇಲೆ ಹರಿದ ಬೊಲೆರೋ ವಾಹನ, ಸ್ಥಳದಲ್ಲೇ ಮೂವರು ಸಾವು

ಬೊಲೊರೋ ಜೀಪೊಂದು ಪಾದಾಚಾರಿಗಳ ಮೇಲೆ ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿಯ ಹುಕ್ಕೇರಿಯಲ್ಲಿ ನಡೆದಿದೆ.

published on : 28th March 2020

ಶಾರುಖ್ ಅವರನ್ನು ಸಿನಿ ಜಗತ್ತಿಗೆ ಪರಿಚಯಿಸಿದ 'ಸರ್ಕಸ್' ಡಿಡಿಯಲ್ಲಿ ಮರುಪ್ರಸಾರ

ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರೀಗ ಮತ್ತೊಮ್ಮೆ ಟಿವಿ ಪರದೆ ಮೇಲೆ ಕಾಣಿಸಿಕೊಳ್ಲುತ್ತಿದ್ದಾರೆ! ವಿಷಯವೇನೆಂದರೆ ದೂರದರ್ಶ್ನ ವಾಹಿನಿಯು ಶಾರುಖ್ ನಟನೆಯ ಜೀಜ್ ಮಿರ್ಜಾ ಅವರ 1989ರ ಪ್ರಸಿದ್ದ ಟಿವಿ ಸರಣಿ  "ಸರ್ಕಸ್"  ಅನ್ನು ಇಂದಿನಿಂದ (ಮಾರ್ಚ್ 28) ಮರುಪ್ರಸಾರ ಮಾಡುತ್ತಿದೆ.

published on : 28th March 2020

ವೈರಮುಡಿ ಉತ್ಸವ ಮುಂದೂಡುವ ಪ್ರಶ್ನೆಯೇ ಇಲ್ಲ: ಮಂಡ್ಯ ಜಿಲ್ಲಾಧಿಕಾರಿ

ವಿಶ್ವವಿಖ್ಯಾತ ವೈರಮುಡಿ ಉತ್ಸವ ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.

published on : 27th March 2020

ಕೊರೋನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ ಅಂಬಾನಿ, 15 ದಿನದಲ್ಲೇ 100 ಬೆಡ್ ಸಾಮರ್ಥ್ಯವುಳ್ಳ ಆಸ್ಪತ್ರೆ ನಿರ್ಮಾಣ, ನಿತ್ಯ 1 ಲಕ್ಷ ಮಾಸ್ಕ್ ತಯಾರಿ

ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ವಿರುದ್ಧದ ಭಾರತದ ಹೋರಾಟಕ್ಕೆ ಖ್ಯಾತ ಉಧ್ಯಮಿ ಮುಖೇಶ್ ಅಂಬಾನಿ ಕೈ ಜೋಡಿಸಿದ್ದು, ಕೊರೋನ ಸೋಂಕಿತರಿಗಾಗಿ 15 ದಿನದಲ್ಲೇ 100 ಬೆಡ್ ಸಾಮರ್ಥ್ಯವುಳ್ಳ ಆಸ್ಪತ್ರೆ ನಿರ್ಮಿಸಿದ್ದಾರೆ.

published on : 24th March 2020

ಕಾಂಗ್ರೆಸ್ ಸಭೆಗೆ ದುಬೈನಿಂದ ಆಗಮಿಸಿದ್ದ ರುಕ್ಸಾನಾ ಉಸ್ತಾದ್ ವಾಪಸ್ ಕಳುಹಿಸಿದ ನಾಯಕರು

 ಕಾಂಗ್ರೆಸ್ ಹಿರಿಯ ನಾಯಕ ಎಂಎಲ್ ಉಸ್ತಾದ್ ಪುತ್ರಿ ಕಳೆದ 10 ದಿನಗಳ ಹಿಂದೆ ದುಬೈನಿಂದ ಆಗಮಿಸಿದ್ದರು.  ನಿನ್ನೆ ನಡೆದ ಕೆಪಿಸಿಸಿ ಸಭೆಗೆ ಹಾಜರಾಗಲು ಕಾಂಗ್ರೆಸ್ ಕಚೇರಿಗೆ ಬಂದಿದ್ದರು.

published on : 24th March 2020

ಭಗತ್ ಸಿಂಗ್, ಸುಖ್ ದೇವ್, ರಾಜ್ ಗುರು ಹುತಾತ್ಮ ದಿನ: ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿ ಗಣ್ಯರ ನಮನ

ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸುಖ್‌ದೇವ್ ಹಾಗೂ ರಾಜ್‌ಗುರು ಅವರ ಹುತಾತ್ಮ ದಿನದ ಅಂಗವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೌರವ ನಮನ ಸಲ್ಲಿಸಿದ್ದಾರೆ.

published on : 23rd March 2020

ನಕ್ಸಲರ ಅಟ್ಟಹಾಸ: ಕಾರ್ಯಾಚರಣೆ ವೇಳೆ ಕಣ್ಮರೆಯಾಗಿದ್ದ 17 ಎಸ್‍ಟಿಎಫ್ ಸೈನಿಕರ ಮೃತದೇಹ ಪತ್ತೆ!

ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್ ವಿರುದ್ಧದ ಕಾರ್ಯಾಚರಣೆ ವೇಳೆ ಕಣ್ಮರೆಯಾಗಿದ್ದ 17 ವಿಶೇಷ ಕಾರ್ಯಪಡೆ(ಎಸ್‍ಟಿಎಫ್)ಯ ಸೈನಿಕರ ಮೃತದೇಹ ಪತ್ತೆಯಾಗಿದ್ದು ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ನಕ್ಸಲರು ಹೊತ್ತೊಯ್ದಿದ್ದಾರೆ.

published on : 22nd March 2020

ನನ್ನ ಅಂಗಾಂಗ ದಾನ ಮಾಡಿ: ಗಲ್ಲಿಗೇರಿದ ನಿರ್ಭಯಾ ಹತ್ಯಾಚಾರಿಯ ಆಸೆ!

ಸತತ 8 ವರ್ಷಗಳ ಬಳಿಕ ನಿರ್ಭಯಾ ಹತ್ಯಾಚಾರಿಗಳನ್ನು ಇಂದು ಮುಂಜಾನೆ ಗಲ್ಲಿಗೇರಿಸಲಾಗಿದ್ದು, ಪ್ರಕರಣ ಅಪರಾಧಿಗಳಲ್ಲಿ ಒಬ್ಬ ತನ್ನ ಮರಣಾನಂತರ ತನ್ನ ದೇಹದ ಅಂಗಗಳನ್ನು ದಾನ ಮಾಡುವಂತೆ ಅಧಿಕಾರಿಗಳಲ್ಲಿ ತನ್ನ ಆಸೆ ಹೇಳಿಕೊಂಡಿದ್ದನಂತೆ.

published on : 20th March 2020

ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ ) ವಿಧೇಯಕ 2020ಕ್ಕೆ ವಿಧಾನಸಭೆ ಒಪ್ಪಿಗೆ

ಲೋಕಾಯುಕ್ತರು ಯಾವುದೇ ಪ್ರಕರಣದ ವಿಚಾರಣೆಯನ್ನು ತಾವಾಗಿಯೇ ಮಾಡಲಾಗದಿದ್ದ ಸಂದರ್ಭದಲ್ಲಿ ಅಂತಹ ಪ್ರಕರಣವನ್ನು ಉಪ ಲೋಕಾಯುಕ್ತರಿಗೆ ವರ್ಗಾವಣೆ ಮಾಡುವ ಅಧಿಕಾರ ನೀಡುವ ಉದ್ದೇಶದ ಕರ್ನಾಟಕ ಲೋಕಾಯುಕ್ತ (ತಿದ್ದಪಡಿ) ವಿಧೇಯಕ 2020ಕ್ಕೆ ವಿಧಾನಸಭೆ ಒಪ್ಪಿಗೆ ನೀಡಿತು

published on : 17th March 2020

ಲಂಡನ್ ನಿಂದ ಆಗಮಿಸಿದ್ದ 3 ವರ್ಷದ ಮಗುವಿಗೆ ಕೊರೋನಾ ಶಂಕೆ: ಮುಂದುವರೆದ ಚಿಕಿತ್ಸೆ

ಮಾರಣಾಂತಿಕ ಕೊರೋನಾ ವೈರಸ್ ನಿಯಂತ್ರಣ ಕ್ರಮಗಳು ಮುಂದುವರೆದಿದ್ದು, ಲಂಡನ್ ನಿಂದ ಆಗಮಿಸಿದ್ದ ಮೂರು ವರ್ಷದ ಮಗುವಿಗೆ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

published on : 17th March 2020

ಘಟನೆ ನಡೆದ ದಿನ ನಾನು ದೆಹಲಿಯಲ್ಲೇ ಇರ್ಲಿಲ್ಲ: ನೇಣುಗಂಬಕ್ಕೇರಲು 3 ದಿನವಿರುವಾಗ ನಿರ್ಭಯಾ ಅಪರಾಧಿಯ ಹೊಸ ವರಸೆ

ಆಘಾತಕಾರಿ ಬೆಳವಣಿಗೆಯಲ್ಲಿ 2012 ರ ದೆಹಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಆರೋಪಿಗಳಲ್ಲಿ ಒಬ್ಬನಾದ ಮುಖೇಶ್ ಸಿಂಗ್ ತಾನು ಘಟನೆ ನಡೆದ ದಿನ (ಡಿಸೆಂಬರ್ 16 2012) ರಂದು ದೆಹಲಿಯಲ್ಲಿ ಇರಲೇ ಇಲ್ಲ ಹಾಗಾಗಿ ತನಗೆ ವಿಧಿಸಲಾಗಿರುವ ಮರಣದಂಡನೆಯನ್ನು ರದ್ದುಗೊಳಿಸಬೇಕೆಂದು ಕೋರಿ ನ್ಯಾಯಾಲಯದ ಮೊರೆ ಹೊಕ್ಕಿದ್ದಾನೆ. ನಾಲ್ವರು ಅಪರಾಧಿಗಳಿಗೆ ನೇಣುಗಂಬವೇರಲು

published on : 17th March 2020
1 2 3 4 5 6 >