social_icon
  • Tag results for Ukraine Conflict

ಪೂರ್ವ ಉಕ್ರೇನ್‌ ನಗರದ ಪಿಜ್ಜಾ ರೆಸ್ಟೋರೆಂಟ್‌ ಮೇಲೆ ರಷ್ಯಾ  ಕ್ಷಿಪಣಿ ದಾಳಿ; 3 ಮಕ್ಕಳು ಸೇರಿದಂತೆ 9 ಮಂದಿ ಸಾವು

ಪೂರ್ವ ಉಕ್ರೇನ್‌ನ ಕ್ರಾಮಾಟೋರ್ಸ್ಕ್ ನಗರದ ಜನನಿಬಿಡ ಪಿಜ್ಜಾ ರೆಸ್ಟೋರೆಂಟ್‌ಗೆ ರಷ್ಯಾದ ಕ್ಷಿಪಣಿ ಅಪ್ಪಳಿಸಿದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಕನಿಷ್ಠ ಒಂಬತ್ತು ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. 

published on : 28th June 2023

ಉಕ್ರೇನ್ ಸಂಘರ್ಷದ ನಡುವೆ ಭಾರತಕ್ಕೆ ತೈಲ ರಫ್ತು 22 ಪಟ್ಟು ಏರಿಕೆ: ರಷ್ಯಾ

ಉಕ್ರೇನ್‌ನಲ್ಲಿನ ಸಂಘರ್ಷದ ನಂತರ ಯುರೋಪಿಯನ್ ಖರೀದಿದಾರರು ಇತರ ಮಾರುಕಟ್ಟೆಗಳತ್ತ ಮುಖ ಮಾಡಿದ್ದರಿಂದ ಕಳೆದ ವರ್ಷ ಭಾರತಕ್ಕೆ ರಷ್ಯಾದ ತೈಲ ಮಾರಾಟವು ಇಪ್ಪತ್ತು ಪಟ್ಟುಕ್ಕಿಂತ ಹೆಚ್ಚಾಗಿದೆ ಎಂದು ರಷ್ಯಾದ ಉಪ ಪ್ರಧಾನ ಮಂತ್ರಿ ಮಂಗಳವಾರ ಹೇಳಿದ್ದಾರೆ.

published on : 28th March 2023

ಮಾತುಕತೆ, ರಾಜತಾಂತ್ರಿಕತೆಯಿಂದ ಮಾತ್ರ ಉಕ್ರೇನ್ ಬಿಕ್ಕಟ್ಟು ಪರಿಹರಿಸಲು ಸಾಧ್ಯ: ನರೇಂದ್ರ ಮೋದಿ

ಭಾರತಕ್ಕೆ ಭೇಟಿ ನೀಡಿರುವ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗಿನ ದ್ವಿಪಕ್ಷೀಯ ಮಾತುಕತೆಯ ನಂತರ ಜಂಟಿ ಹೇಳಿಕೆಯಲ್ಲಿ ಮೋದಿ, 'ಉಕ್ರೇನ್ ವಿವಾದವನ್ನು ಮಾತುಕತೆ ಮತ್ತು ರಾಜತಾಂತ್ರಿಕತೆ ಮೂಲಕ ಪರಿಹರಿಸಬಹುದು ಎಂದು ಭಾರತವು ಮೊದಲಿನಿಂದಲೂ ಸ್ಪಷ್ಟಪಡಿಸಿದೆ' ಎಂದು ಹೇಳಿದರು.

published on : 2nd March 2023

ಉಕ್ರೇನ್‌ನ ಐದು ಅಂತಸ್ತಿನ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ; ಮೂವರು ಸಾವು, ಆರು ಮಂದಿಗೆ ಗಾಯ

ಆಗ್ನೇಯ ಉಕ್ರೇನ್‌ನ ನಗರದ ಐದು ಅಂತಸ್ತಿನ ಅಪಾರ್ಟ್‌ಮೆಂಟ್ ಕಟ್ಟಡಕ್ಕೆ ಗುರುವಾರ ರಷ್ಯಾದ ಕ್ಷಿಪಣಿ ಅಪ್ಪಳಿಸಿದ್ದರಿಂದ ಮೂವರು ಸಾವಿಗೀಡಾಗಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧವು ಎರಡನೇ ವರ್ಷಕ್ಕೆ ವಿಸ್ತರಿಸಿದೆ.

published on : 2nd March 2023

ದಕ್ಷಿಣ ಕೊರಿಯಾದ ಮಿಲಿಟರಿ ಬೆಂಬಲ ಉಕ್ರೇನ್‌ಗೆ ಧನಾತ್ಮಕವಾಗಿರುತ್ತದೆ: ವೊಲೊಡಿಮಿರ್ ಝೆಲೆನ್‌ಸ್ಕಿ 

ದಕ್ಷಿಣ ಕೊರಿಯಾದ ಮಿಲಿಟರಿ ಬೆಂಬಲವು ರಷ್ಯಾ ವಿರುದ್ಧದ ಯುದ್ಧದಲ್ಲಿ ತನ್ನ ದೇಶಕ್ಕೆ ಧನಾತ್ಮಕವಾಗಿರುತ್ತದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿದ್ದಾರೆ. ಸಹಾಯ ಮಾಡಲು ಕೊರಿಯಾ ಒಂದು ಮಾರ್ಗವನ್ನು ಕಂಡುಕೊಳ್ಳುತ್ತದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

published on : 26th February 2023

ಉಕ್ರೇನ್ ಸಂಘರ್ಷ ಉಲ್ಬಣಿಸಲು ಪಾಶ್ಚಿಮಾತ್ಯ ರಾಷ್ಟ್ರಗಳೇ ನೇರ ಹೊಣೆ: ರಷ್ಯಾ ಅಧ್ಯಕ್ಷ ಫುಟಿನ್

ರಷ್ಯಾದೊಂದಿಗೆ ಸಂಘರ್ಷಕ್ಕೆ ಉಕ್ರೇನ್ ನ್ನು ಪಾಶ್ಚಿಮಾತ್ಯ ರಾಷ್ಟ್ರಗಳು ಬಳಸಿಕೊಳ್ಳುತ್ತಿವೆ ಎಂದು ಮಂಗಳವಾರ ಆರೋಪಿಸಿರುವ ಅಧ್ಯಕ್ಷ ವ್ಲಾಡಿಮಿರ್ ಫುಟಿನ್, ದೇಶದ್ರೋಹಿಗಳಿಗೆ ಶಿಕ್ಷೆಯಾಗಬೇಕು ಮತ್ತು ಪಾಶ್ಚಿಮಾತ್ಯ ನಿರ್ಬಂಧಗಳನ್ನು ಮಾಸ್ಕೋ ಯಶಸ್ವಿಯಾಗಿ ತಡೆದುಕೊಂಡಿದೆ ಎಂದು ಘೋಷಿಸಿದ್ದಾರೆ.

published on : 22nd February 2023

'ಕದನ ವಿರಾಮ'ವಿದ್ದರೂ ಸಾಂಪ್ರದಾಯಿಕ ಕ್ರಿಸ್‌ಮಸ್‌ ದಿನದಂದು ಉಕ್ರೇನ್‌ ಮೇಲೆ ರಷ್ಯಾ ದಾಳಿ, ಇಬ್ಬರು ಸಾವು

ಉಕ್ರೇನ್‌ನಲ್ಲಿ ಸಾಂಪ್ರದಾಯಿಕ ಕ್ರಿಸ್‌ಮಸ್‌ ಆಚರಣೆ ನಡೆಯುವ ಹಿನ್ನೆಲೆಯಲ್ಲಿ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಕದನ ವಿರಾಮ ಘೋಷಿಸಿದ್ದರು ಕೂಡ ಇಬ್ಬರು ಉಕ್ರೇನಿಯನ್ನರು ಸಾವಿಗೀಡಾಗಿದ್ದಾರೆ ಮತ್ತು ಒಂಬತ್ತು ಮಂದಿ ಗಾಯಗೊಂಡಿದ್ದಾರೆ ಎಂದು ಕೀವ್ ಆಡಳಿತ ಭಾನುವಾರ ತಿಳಿಸಿದೆ.

published on : 9th January 2023

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9