• Tag results for Ukrainian

ಸೂಕ್ತ ದಾಖಲೆಗಳಿಲ್ಲದೆ ಅಸ್ಸಾಂಗೆ ಪ್ರವೇಶ: ಇಬ್ಬರು ಉಕ್ರೇನಿಯನ್ ಪ್ರಜೆಗಳ ಬಂಧನ!

ಸೂಕ್ತ ದಾಖಲೆಗಳಿಲ್ಲದೆ ಪ್ರಯಾಣಿಸುತ್ತಿದ್ದ ಇಬ್ಬರು ಉಕ್ರೇನಿಯನ್ ಪ್ರಜೆಗಳನ್ನು ಅಸ್ಸಾಂನ ಕರೀಮ್‌ಗಂಜ್ ಜಿಲ್ಲೆಯ ಬದರ್‌ಪುರದಲ್ಲಿ ಸರ್ಕಾರಿ ರೈಲ್ವೆ ಪೊಲೀಸರು(ಜಿಆರ್‌ಪಿ) ಬಂಧಿಸಿದ್ದಾರೆ.

published on : 22nd April 2022

ಮಾರಿಯುಪೋಲ್‌ನಲ್ಲಿ 1,000ಕ್ಕೂ ಹೆಚ್ಚು ಉಕ್ರೇನ್ ಸೈನಿಕರು ಶರಣಾಗಿದ್ದಾರೆ: ರಷ್ಯಾ ರಕ್ಷಣಾ ಸಚಿವಾಲಯ

ಒಂದು ತಿಂಗಳಿನಿಂದ ಮಾಸ್ಕೋ ಪಡೆಗಳು ಮುತ್ತಿಗೆ ಹಾಕಿದ ಪೂರ್ವ ಉಕ್ರೇನ್‌ನ ಆಯಕಟ್ಟಿನ ಬಂದರು ನಗರಿ ಮಾರಿಯುಪೋಲ್‌ನಲ್ಲಿ ಸಾವಿರಕ್ಕೂ ಹೆಚ್ಚು ಉಕ್ರೇನಿಯನ್ ಸೈನಿಕರು ಬುಧವಾರ ಶರಣಾಗಿದ್ದಾರೆ...

published on : 13th April 2022

ಜೀವಂತವಾಗಿ ಮನೆಗೆ ಹಿಂತಿರುಗಿ: ರಷ್ಯನ್ ಸೈನಿಕರಿಗೆ ಎಚ್ಚರಿಕೆ ನೀಡಿದ ಉಕ್ರೇನಿಯನ್ ಸೈನಿಕರು

ಒಂದು ತಿಂಗಳ ಹಿಂದೆ ಪ್ರಾರಂಭವಾದ ರಷ್ಯಾದ ಮಿಲಿಟರಿ ಆಕ್ರಮಣದ ವಿರುದ್ಧ ಹೋರಾಡುತ್ತಿರುವ ಉಕ್ರೇನಿಯನ್ ಸೈನಿಕರು ಜೀವಂತವಾಗಿರುವಾಗಲೇ ಮನೆಗೆ ಹೋಗುವಂತೆ ರಷ್ಯಾದ ಸೈನಿಕರಿಗೆ ಎಚ್ಚರಿಕೆ ನೀಡಿದ್ದಾರೆ.

published on : 25th March 2022

ರಷ್ಯಾ ಪಡೆಗಳ ವಿರುದ್ಧ ತಿರುಗಿಬಿದ್ದ ಉಕ್ರೇನ್ ಸೇನೆ; ಯುದ್ಧಭೂಮಿಯ ಆವೇಗದಲ್ಲಿ ಬದಲಾವಣೆ ಗೋಚರ: ಪೆಂಟಗನ್

ರಷ್ಯಾದಿಂದ ತೀವ್ರವಾಗಿ ದಾಳಿಗೆ ಒಳಗಾಗುತ್ತಿರುವ ಉಕ್ರೇನ್ ಯುದ್ಧಭೂಮಿಯಲ್ಲಿನ ಆವೇಗವನ್ನು ಬದಲಾಯಿಸತೊಡಗಿದ್ದು ಆಕ್ರಮಣಕಾರರಿಂದ ಕೆಲವು ಪ್ರದೇಶಗಳನ್ನು ವಾಪಸ್ ಪಡೆಯುವುದಕ್ಕೆ ಮುಂದಾಗಿದೆ ಎಂದು ಪೆಂಟಗನ್ ವಕ್ತಾರರೊಬ್ಬರು ಮಾಹಿತಿ ನೀಡಿದ್ದಾರೆ.

published on : 22nd March 2022

ಹೋಳಿ ಉಡುಗೊರೆಯಿಂದ ತೀವ್ರ ಆಘಾತ: ಭಾರತದ ಕೆಲ ಮಾಧ್ಯಮಗಳ ವಿರುದ್ಧ ಹರಿಹಾಯ್ದ ಉಕ್ರೇನ್ ರಾಯಭಾರಿ

ರಷ್ಯಾ ಕ್ರೈಮಿಯಾ ಸ್ವಾಧೀನಪಡಿಸಿಕೊಂಡ ಎಂಟನೇ ವರ್ಷದ ಸ್ಮರಣಾರ್ಥ ಅರ್ಟಿಕಲ್ ಪ್ರಕಟಿಸಿದ ಕೆಲ ಭಾರತೀಯ ಮಾಧ್ಯಮಗಳ ವಿರುದ್ಧ ಭಾರತದಲ್ಲಿನ ಉಕ್ರೇನ್ ರಾಯಭಾರಿ ಹರಿಹಾಯ್ದಿದ್ದಾರೆ.

published on : 19th March 2022

ರಷ್ಯಾದ ರಾಕೆಟ್ ದಾಳಿ: ಉಕ್ರೇನ್ ನಟಿ ಒಕ್ಸಾನಾ ಶ್ವೆಟ್ಸ್ ನಿಧನ

ಉಕ್ರೇನ್ ರಾಜಧಾನಿ ಕೀವ್ ನ ವಸತಿ ಕಟ್ಟಡ ಮೇಲೆ ರಷ್ಯಾದ ರಾಕೆಟ್ ದಾಳಿಯಲ್ಲಿ ಉಕ್ರೇನ್ ನಟಿ ಒಕ್ಸಾನಾ ಶ್ವೆಟ್ಸ್ ಹತ್ಯೆಗೀಡಾಗಿದ್ದಾರೆ.

published on : 18th March 2022

ಉಕ್ರೇನ್ ವೈದ್ಯಕೀಯ ವಿಶ್ವವಿದ್ಯಾಲಯಗಳಿಂದ ಆನ್‌ಲೈನ್ ತರಗತಿ ಪ್ರಾರಂಭ: ಭಾರತೀಯ ವಿದ್ಯಾರ್ಥಿಗಳು ನಿರಾಳ

ಯುದ್ಧ ಪೀಡಿತ ಉಕ್ರೇನ್ ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ನಂತರ ಅತಂತ್ರ ಭವಿಷ್ಯದ ಭಯದಲ್ಲಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ಹಲವಾರು ಉಕ್ರೇನಿಯನ್ ವೈದ್ಯಕೀಯ ವಿಶ್ವವಿದ್ಯಾಲಯಗಳು ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಿದ್ದು ಕೊಂಚ ನಿರಾಳ ತಂದಿದೆ.

published on : 15th March 2022

ಉಕ್ರೇನ್ ನಿರಾಶ್ರಿತರಿಗೆ ಆಶ್ರಯ ನೀಡುವ ಕುಟುಂಬಕ್ಕೆ ತಿಂಗಳ ಭತ್ಯೆ: ಬ್ರಿಟನ್ ಸರ್ಕಾರದ ಹೊಸ ಆಫರ್

ಯುದ್ಧದಿಂದಾಗಿ ದೇಶ ತೊರೆದಿರುವ ಉಕ್ರೇನ್ ನಿರಾಶ್ರಿತರಿಗೆ ಆಶ್ರಯ ನೀಡುವ ಕುಟುಂಬಕ್ಕೆ ತಿಂಗಳ ಭತ್ಯೆ ನೀಡಲು ಬ್ರಿಟನ್ ಸರ್ಕಾರ ನಿರ್ಧರಿಸಿದೆ.

published on : 14th March 2022

ರಷ್ಯಾ ನಡೆಸುತ್ತಿರುವ ಯುದ್ಧದಲ್ಲಿ ಈವರೆಗೆ​ 1,300​​ ಉಕ್ರೇನ್ ಸೈನಿಕರ ಬಲಿದಾನ: ಉಕ್ರೇನ್​ ಅಧ್ಯಕ್ಷ ಝೆಲೆನ್​​ಸ್ಕಿ

ರಷ್ಯಾ ನಡೆಸಿರುವ ಯುದ್ಧದದಲ್ಲಿ ಈ ವರೆಗೆ ಸುಮಾರು 1,300 ಉಕ್ರೇನಿಯನ್ ಸೈನಿಕರು ಹೋರಾಟದಲ್ಲಿ ಬಲಿಯಾಗಿದ್ದಾರೆಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.

published on : 13th March 2022

ಯುದ್ಧ ಭೂಮಿಯಲ್ಲಿ ಒಂಟಿಯಾಗಿ ಸಾವಿರ ಕಿ.ಮೀ ಪ್ರಯಾಣಿಸಿದ 11 ವರ್ಷದ ಬಾಲಕ; ರಿಯಲ್ ಹೀರೋ ಎಂದು ಉಕ್ರೇನ್ ಸಚಿವರ ಕಮೆಂಟ್!

ಉಕ್ರೇನ್ ನ ಝಪೊರಿಜಿಯಾ ಪ್ರದೇಶದ 11 ವರ್ಷದ ಬಾಲಕ ಯುದ್ಧ ಭೂಮಿಯಲ್ಲಿ ಏಕಾಂಗಿಯಾಗಿ ಸಾವಿರ ಕಿಲೋ ಮೀಟರ್ ಪ್ರಯಾಣಿಸಿದ್ದಾನೆ. ಈ ಹುಡುಗನನ್ನು ಉಕ್ರೇನ್ ವಿದೇಶಾಂಗ ಸಚಿವರು '' ದಿ ಬಿಗ್ಗೆಸ್ಟ್ ಹೀರೋ ಆಫ್ ಲಾಸ್ಟ್ ನೈಟ್ '' ಎಂದು ಬಣ್ಣಿಸಿದ್ದಾರೆ.

published on : 7th March 2022

ಯುದ್ಧಭೂಮಿಯಲ್ಲಿ ಉಕ್ರೇನ್ ತಕ್ಕ ಪ್ರತ್ಯುತ್ತರ: ರಷ್ಯಾದ 280 ಟ್ಯಾಂಕ್ ಗಳು ನಾಶ!

ಉಕ್ರೇನ್ ನಲ್ಲಿನ ಯುದ್ಧ ಭೂಮಿಯಲ್ಲಿ ರಷ್ಯಾ ಆಕ್ರಮಣ ಪಡೆಗೆ ಉಕ್ರೇನ್ ಸೈನಿಕರು ತಕ್ಕ ಪ್ರತ್ಯುತ್ತರ ನೀಡುತ್ತಿದ್ದಾರೆ. ಅಮೆರಿಕ ಪೂರೈಸಿರುವ  ಟ್ಯಾಂಕ್ ನಿರೋಧಕ ಕ್ಷಿಪಣಿಯಿಂದ ರಷ್ಯಾದ ನೂರಾರು ಟ್ಯಾಂಕ್ ಗಳು ಮತ್ತು ಸಶಸ್ತ್ರ ವಾಹನಗಳನ್ನು ನಾಶಪಡಿಸಿರುವುದಾಗಿ ಪೂರ್ವ ಯುರೋಪಿನ್ ರಾಷ್ಟ್ರದಲ್ಲಿನ ಪರಿಸ್ಥಿತಿಯನ್ನು ಅಮೆರಿಕದ ಪತ್ರಕರ್ತರೊಬ್ಬರು ವಿವರಿಸಿದ್ದಾರೆ. 

published on : 4th March 2022

ಪರಮಾಣು ಸ್ಥಾವರದ ಮೇಲೆ ರಷ್ಯಾ ದಾಳಿ: ಮೂವರು ಉಕ್ರೇನಿಯನ್ ಸೈನಿಕರು ಸಾವು, ಇಬ್ಬರಿಗೆ ಗಾಯ

ಉಕ್ರೇನ್‌ನಲ್ಲಿರುವ ಯೂರೊಪ್‌ನ ಅತಿದೊಡ್ಡ ಪರಮಾಣು ಸ್ಥಾವರದ ಮೇಲೆ ರಷ್ಯಾ ಶುಕ್ರವಾರ ಭೀಕರ ಶೆಲ್ ದಾಳಿ ನಡೆಸಿದ್ದು, ದಾಳಿಯಲ್ಲಿ ಮೂವರು ಉಕ್ರೇನಿಯನ್ ಸೈನಿಕರು ಸಾವನ್ನಪ್ಪಿದ್ದಾರೆ....

published on : 4th March 2022

ರಷ್ಯಾ ಆಕ್ರಮಣಕ್ಕೆ ಉಕ್ರೇನಿಯನ್ನರು ಹೆದರುವುದಿಲ್ಲ, ಶರಣಾಗುವುದಿಲ್ಲ: ಅಧ್ಯಕ್ಷ ಝೆಲೆನ್ಸ್ಕಿ ಘೋಷಣೆ

ರಷ್ಯಾದ ಆಕ್ರಮಣವು ಎಂಟನೇ ದಿನಕ್ಕೆ ಕಾಲಿಟ್ಟಿದ್ದು, 2,000ಕ್ಕೂ ಹೆಚ್ಚು ಉಕ್ರೇನಿಯನ್ ನಾಗರಿಕರು ಸಾವನ್ನಪ್ಪಿರಬಹುದು ಎಂಬ ವರದಿಗಳ ನಡುವೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಉಕ್ರೇನಿಯನ್ನರು ಹೆದರುವುದಿಲ್ಲ...

published on : 3rd March 2022

ರಷ್ಯಾದಿಂದ ಭೀಕರ ದಾಳಿ: ನಾಗರೀಕರ ಜೀವ ಉಳಿಸಲು ಖೇರ್ಸನ್ ನಲ್ಲಿ ರಷ್ಯಾಗೆ ಉಕ್ರೇನ್ ಸೇನೆ ಶರಣು!

ಭೀಕರ ದಾಳಿ ಹಿನ್ನೆಲೆಯಲ್ಲಿ ನಾಗರೀಕರ ಜೀವ ಉಳಿಸಲು ಖೇರ್ಸನ್ ನಲ್ಲಿ ಉಕ್ರೇನ್ ಸೇನೆ ರಷ್ಯಾಗೆ ಶರಣಾಗತಿಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

published on : 3rd March 2022

ಉಕ್ರೇನ್ ವಸತಿ ಕಟ್ಟಡಗಳ ಮೇಲೆ ಎಕ್ಸ್ ಗುರುತಿನ ಚಿಹ್ನೆ: ಕೂಡಲೇ ಆ ಕಟ್ಟಡಗಳ ತೊರೆಯುವಂತೆ ಜನತೆಗೆ ಅಧಿಕಾರಿಗಳ ಸೂಚನೆ

ಉಕ್ರೇನ್‌ನೊಂದಿಗೆ ರಷ್ಯಾ ನಡೆಸುತ್ತಿರುವ ಕ್ರೂರ ವರ್ತನೆಗೆ ಟೀಕೆಗಳು ಪ್ರಪಂಚದಾದ್ಯಂತ ಕೇಳಿಬರುತ್ತಿವೆ. ಉಕ್ರೇನ್ ವಿರುದ್ದ ರಷ್ಯಾ ನಡೆದುಕೊಳ್ಳುತ್ತಿರುವ ರೀತಿಗೆ ರಷ್ಯಾದ ಜನರೇ ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಉಕ್ರೇನ್ ಸೈನ್ಯವನ್ನು ಗುರಿಯಾಗಿಸಿ ರಷ್ಯಾ ಪಡೆಗಳು ದಾಳಿ ನಡೆಸಲು ಮುಂದಾಗಿದ್ದರು...

published on : 2nd March 2022
1 2 > 

ರಾಶಿ ಭವಿಷ್ಯ