• Tag results for Uttar Pradesh

ಜನ್ಮಾಷ್ಠಮಿ ಸಂಭ್ರಮದ ನಡುವೆಯೇ ಶಾಕ್, ಅರ್ಚಕ ಸೇರಿದಂತೆ 22 ಮಂದಿಗೆ ಕೊರೋನಾ, ವೃಂದಾವನ ಇಸ್ಕಾನ್ ಟೆಂಪಲ್ ಸೀಲ್ ಡೌನ್!

ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದೇ ಉತ್ತರ ಪ್ರದೇಶದ ವೃಂದಾವನ ಇಸ್ಕಾನ್ ದೇಗುಲ ಆಘಾತಕ್ಕೊಳಗಾಗಿದ್ದು, ದೇಗುಲದ ಅರ್ಚಕ ಸೇರಿದಂತೆ 22 ಮಂದಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಪರಿಣಾಮ ಇಡೀ ದೇಗುಲವನ್ನು ಸೀಲ್ ಡೌನ್ ಮಾಡಲಾಗಿದೆ.

published on : 11th August 2020

ಉತ್ತರ ಪ್ರದೇಶ: ಬಿಜೆಪಿ ನಾಯಕನ ಹತ್ಯೆ, ತನಿಖೆಗೆ ಸಿಎಂ ಯೋಗಿ ಆದಿತ್ಯನಾಥ್ ಆದೇಶ

ತಮ್ಮ ಮನೆಯ ಸಮೀಪ ತೋಟದಲ್ಲಿ ಬೆಳಗಿನ ಹೊತ್ತು ವಾಕಿಂಗ್ ಮಾಡುತ್ತಿದ್ದ ಬಿಜೆಪಿ ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಾಘ್ ಪತ್ ಜಿಲ್ಲೆಯ ಗ್ರಾಮದಲ್ಲಿ ನಡೆದಿದೆ.

published on : 11th August 2020

ಸಚಿವೆ ಕಮಲ ರಾಣಿ ವರುಣ್ ನಿಧನ: ಸಿಎಂ ಯೋಗಿ ಆದಿತ್ಯನಾಥ್ ಅಯೋಧ್ಯೆ ಭೇಟಿ ರದ್ದು

ಸಚಿವೆ ಕಮಲ ರಾಣಿ ವರುಣ್ ನಿಧನ ಹೊಂದಿರುವ ಹಿನ್ನೆಲೆಯಲ್ಲಿ ಭಾನುವಾರ ಅಯೋಧ್ಯೆಗೆ ಭೇಟಿ ನೀಡಬೇಕಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತಮ್ಮ ಕಾರ್ಯಕ್ರಮವನ್ನು ರದ್ದುಪಡಿಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

published on : 2nd August 2020

ಯುವಕನ ಪ್ಯಾಂಟಿನೊಳಗೆ ಹಾವು ತೂರಿ ಇಡೀ ರಾತ್ರಿ ಜಾಗರಣೆ!

ಗಾಢ ನಿದ್ರೆಯಲ್ಲಿದ್ದ ಯುವಕನ ಪ್ಯಾಂಟಿನೊಳಗೆ ತೂರಿದ ಹಾವು ಆತನಿಗೆ ನರಕ ದರ್ಶನ ಮಾಡಿಸಿದ್ದು, ಏಳು ಗಂಟೆಗಳ ಕಾಲ ಹಾವು ಪ್ಯಾಂಟಿನೊಳಗಿದ್ದ ಕಾರಣ ರಾತ್ರಿ ಪೂರ್ತಿ ಸ್ವಲ್ಪವೂ ಕದಲದೆ ನಿಲ್ಲುವಂತಾಗಿದ್ದು, ಕೊನೆಗೆ ಬೆಳಕರಿದ ನಂತರ ಹಾವು ಹಿಡಿಯುವ ವ್ಯಕ್ತಿ ಬಂದು ಚಾಕಚಕ್ಯತೆಯಿಂದ ಅದನ್ನು ಹೊರಗೆಳೆದ ನಂತರ ಪ್ರಮಾದ ತಪ್ಪಿದೆ.

published on : 29th July 2020

ಅಯೋಧ್ಯೆಯಲ್ಲಿ ಕಾರ್ಯಕ್ರಮ ನಡೆಸಬೇಕಾದರೆ ಸುದ್ದಿ ವಾಹಿನಿಗಳು ಅನುಮತಿ ಪಡೆಯುವುದು ಕಡ್ಡಾಯ: ಜಿಲ್ಲಾಡಳಿತ

ರಾಮ ಮಂದಿರ ಶಿಲಾನ್ಯಾಸ ಆಗಸ್ಟ್ 5 ರಂದು ನಡೆಯಲಿದ್ದು ಅಯೋಧ್ಯೆಯಲ್ಲಿ ಕಾರ್ಯಕ್ರಮಗಳನ್ನು ನಡೆಸಬೇಕಾದರೆ ಸುದ್ದಿ ವಾಹಿನಿಗಳು ಅನುಮತಿ ಪಡೆಯಬೇಕು ಎಂದು ಅಯೋಧ್ಯೆ ಜಿಲ್ಲಾಡಳಿತ ತಿಳಿಸಿದೆ.

published on : 28th July 2020

ರಾಮ ಮಂದಿರ ಶಿಲಾನ್ಯಾಸ: ಆಹ್ವಾನಿತರ ಪಟ್ಟಿಯಲ್ಲಿ ಅಂಬಾನಿ, ಅದಾನಿ; 'ಮಹಾ' ಸಿಎಂ ಉದ್ಧವ್ ಹೆಸರಿಲ್ಲ!

ರಾಮಮಂದಿರ ಶಿಲಾನ್ಯಾಸ ಸಂಘಟನಾ ಸಮಿತಿ ಆಹ್ವಾನಿತರ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಪಟ್ಟಿಯಲ್ಲಿ ಶಿವಸೇನೆ ಮುಖಂಡರ ಹೆಸರುಗಳನ್ನು ಸೇರಿಸಿಲ್ಲ.

published on : 27th July 2020

ಮಾಸ್ಕ್ ಧರಿಸದ್ದಕ್ಕೆ ಮೇಕೆಯ ಬಂಧನ!

ಮಾಸ್ಕ್ ಧರಿಸದೇ ರಸ್ತೆಯಲ್ಲಿ ಅಡ್ಡಾಡುತ್ತಿದ್ದ ಮೇಕೆಯನ್ನು ಕಾನ್ಪುರ ಪೊಲೀಸರು ಬಂಧಿಸಿರುವ ವಿಲಕ್ಷಣ ಘಟನೆ ನಡೆದಿದೆ. 

published on : 27th July 2020

ರಾಮಮಂದಿರ ನಿರ್ಮಾಣ ಶಿಲಾನ್ಯಾಸ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಶಿಲಾನ್ಯಾಸ(ಭೂಮಿ ಪೂಜೆ)ವನ್ನು ತಡೆಯುವಂತೆ ಕೋರಿ ಸಲ್ಲಿಸಿಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ಅಲಹಾಬಾದ್ ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

published on : 24th July 2020

ಉತ್ತರ ಪ್ರದೇಶ ಗೌರ್ನರ್ ಆನಂದಿ ಬೆನ್ ಪಟೇಲ್ ಗೆ ಮಧ್ಯಪ್ರದೇಶದ ಹೆಚ್ಚುವರಿ ಹೊಣೆಗಾರಿಕೆ

ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಅವರಿಗೆ ಮಧ್ಯಪ್ರದೇಶದ ಹೊಣೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. 

published on : 24th July 2020

ಪತ್ರಕರ್ತನ ಕೊಲೆ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಪ್ರಶ್ನೆ ಹುಟ್ಟುಹಾಕಿದೆ: ದೆಹಲಿ ಸಿಎಂ ಕೇಜ್ರೀವಾಲ್‌

ಪತ್ರಕರ್ತ ವಿಕ್ರಂ ಜೋಶಿ ಅವರ ಹತ್ಯೆಗೆ ಖೇದ ವ್ಯಕ್ತಪಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್‌, ಕೊಲೆಗಾರರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಬುಧವಾರ ಆಗ್ರಹಿಸಿದ್ದಾರೆ.

published on : 22nd July 2020

ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸಕ್ಕೆ ಮುಹೂರ್ತ ನಿಗದಿ, 300 ಕೋಟಿ ವೆಚ್ಚದಲ್ಲಿ ಭವ್ಯ ಮಂದಿರ ನಿರ್ಮಾಣ!

ಅಯೋಧ್ಯೆಯಲ್ಲಿ ರಾಮಮಂದಿರ ಶಿಲಾನ್ಯಾಸಕ್ಕೆ ಮುಹೂರ್ತ ನಿಗದಿಯಾಗಿದೆ. ಆಗಸ್ಟ್ ಮೊದಲ ವಾರದ ಮೂರು ಅಥವಾ ಐದನೇ ತಾರೀಖಿನಂದು ಮುಹೂರ್ತ ನಿಗಿಯಾಗಿದ್ದು ಅಂದೆ ನಿರ್ಮಾಣ ಕಾರ್ಯ ಸಹ ಆರಂಭಗೊಳ್ಳಲಿದೆ. 

published on : 19th July 2020

ಉತ್ತರ ಪ್ರದೇಶದಲ್ಲಿ ಶನಿವಾರ, ಭಾನುವಾರ ಸಂಪೂರ್ಣ ಲಾಕ್ ಡೌನ್ ಘೋಷಿಸಿದ ಯೋಗಿ ಸರ್ಕಾರ

ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಸರ್ಕಾರ ರಾಜ್ಯಾದ್ಯಂತ ವಾರಾಂತ್ಯದಲ್ಲಿ ಶನಿವಾರ ಹಾಗೂ ಭಾನುವಾರ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಿದೆ.

published on : 12th July 2020

ಅಪಘಾತವನ್ನೇ ಲಾಭವಾಗಿ ಬಳಸಿಕೊಂಡ ವಿಕಾಸ್ ದುಬೆ ಮತ್ತೆ ಗನ್ ಹಿಡಿದ, ಹಾಗಾಗಿ ಎನ್ಕೌಂಟರ್ ಮಾಡಲಾಯಿತು: ಪೊಲೀಸರ ಸ್ಪಷ್ಟನೆ

ಕಾರು ಅಪಘಾತವನ್ನೇ ತನ್ನ ಲಾಭವಾಗಿ ಬಳಸಿಕೊಳ್ಳಲು ಮುಂದಾಗಿದ್ದ ಕುಖ್ಯಾತ ರೌಡಿ ವಿಕಾಸ್ ದುಬೆ ಮತ್ತೆ ಪೊಲೀಸರ ವಿರುದ್ಧ ಗನ್ ಹಿಡಿದಿದ್ದ. ಹೀಗಾಗಿ ಆತ್ಮರಕ್ಷಣೆಗಾಗಿ ನಾವು ಎನ್'ಕೌಂಟರ್ ಮಾಡಿದೆವು ಎಂದು ಪೊಲೀಸರು ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ.

published on : 10th July 2020

ಶುಕ್ರವಾರ ರಾತ್ರಿಯಿಂದ ಎರಡು ದಿನ ಉತ್ತರ ಪ್ರದೇಶದಲ್ಲಿ ಲಾಕ್ ಡೌನ್ ಜಾರಿಗೆ

ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆಯವರೆಗೂ ಉತ್ತರ ಪ್ರದೇಶದಲ್ಲಿ ಲಾಕ್ ಡೌನ್ ಜಾರಿ ಮಾಡಿ ಸರ್ಕಾರ ಆದೇಶಿಸಿದೆ.ವೈದ್ಯಕೀಯ ಮತ್ತು ಅಗತ್ಯ ಸೇವೆಗಳನ್ನು ಪೂರೈಸುವ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. 

published on : 10th July 2020

ಉತ್ತರ ಪ್ರದೇಶ: ಕ್ಯಾಂಡಲ್ ಕಾರ್ಖಾನೆಯಲ್ಲಿ ಸ್ಫೋಟ; 7 ಮಂದಿ ಸಾವು, 4 ಗಾಯ

ಉತ್ತರ ಪ್ರದೇಶದ ಗಾಜಿಯಾಬಾದ್ ಜಿಲ್ಲೆಯ ಮೋದಿ ನಗರದ ಬಖ್ರಾವಾ ಗ್ರಾಮದಲ್ಲಿನ ಕ್ಯಾಂಡಲ್ ಕಾರ್ಖಾನೆಯಲ್ಲಿ ಭಾನುವಾರ ಸಂಭವಿಸಿದ ಬೆಂಕಿ ಆಕಸ್ಮಕವಾಗಿ ಕನಿಷ್ಠ 7 ಜನರು ಸಾವನ್ನಪ್ಪಿದ್ದಾರೆ.

published on : 5th July 2020
1 2 3 4 5 6 >