• Tag results for Vaccination

ನಿಧಾನಗತಿಯಲ್ಲಿ ಕೋವಿಡ್ ಲಸಿಕೆ ವಿತರಣೆ: ತ್ವರಿತಗೊಳಿಸಲು ಅಭಿಯಾನ ನಡೆಸುವಂತೆ ಕೇಂದ್ರ ಸೂಚನೆ

ಕೆಲವು ರಾಜ್ಯಗಳಲ್ಲಿ ಕೋವಿಡ್ -19 ಲಸಿಕೆ ನೀಡಿಕೆ ಪ್ರಮಾಣ ಕುಸಿತದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸರ್ಕಾರವು ಶುಕ್ರವಾರ ತ್ವರಿತಗತಿಯಲ್ಲಿ ಲಸಿಕೆ ವಿತರಣೆ ಮಾಡಲು ಅಭಿಯಾನ ನಡೆಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.

published on : 20th May 2022

ಭಾರತದ ಶೇ.60 ರಷ್ಟು ಯುವಜನತೆಗೆ ಪೂರ್ಣ ಪ್ರಮಾಣದ ಲಸಿಕೆ 

ಕೋವಿಡ್-19 ಲಸಿಕೆಯ ಎರಡೂ ಡೋಸ್ ಗಳನ್ನು ಭಾರತದ ಶೇ.60 ರಷ್ಟು ಯುವಕರಿಗೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ ತಿಳಿಸಿದ್ದಾರೆ. 

published on : 20th May 2022

ಸಿಂಗಾಪುರ: ಕೋವಿಡ್ ಲಸಿಕೆ ವಿಚಾರವಾಗಿ ಸುಳ್ಳು ದಾಖಲೆ, ಭಾರತ ಮೂಲದ ಇಬ್ಬರಿಗೆ ಜೈಲು!!

ಬಾರ್‌ಗೆ ಪ್ರವೇಶಿಸಲು ಕೋವಿಡ್ ಲಸಿಕೆ ಸ್ಥಿತಿಗತಿಯ ಬಗ್ಗೆ ಸುಳ್ಳು ಹೇಳಿದ ಪ್ರಕರಣದಲ್ಲಿ ಇಬ್ಬರು ಭಾರತೀಯ ಮೂಲದ ಪುರುಷರನ್ನು ಸಿಂಗಾಪುರ ನ್ಯಾಯಾಲಯವು ಐದು ದಿನಗಳ ಜೈಲಿಗೆ ಕಳುಹಿಸಿದೆ.

published on : 28th April 2022

ಜಮ್ಮು-ಕಾಶ್ಮೀರ: ಸೇನೆ ದತ್ತು ಪಡೆದ ಕುಗ್ರಾಮದಲ್ಲಿ ಕೋವಿಡ್-19 ಲಸಿಕೆ ನೀಡಿಕೆಯಲ್ಲಿ ಶೇ. 100 ರಷ್ಟು ಸಾಧನೆ!

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಚಿಂಗಮ್ ಗ್ರಾಮ  ಶೇಕಡಾ 100 ರಷ್ಟು ಕೋವಿಡ್ ಲಸಿಕೆ ನೀಡಿದ ಮೊದಲ ಕುಗ್ರಾಮವಾಗಿದೆ ಎಂದು ಸೇನೆ ಶನಿವಾರ ತಿಳಿಸಿದೆ.

published on : 16th April 2022

ಬೆಲೆ ವ್ಯತ್ಯಾಸ ಸರಿದೂಗಿಸಲು ಖಾಸಗಿ ಲಸಿಕಾ ಕೇಂದ್ರಗಳಿಗೆ ಸೆರಮ್ ಇನ್ಸ್ಟಿಟ್ಯೂಟ್ ನಿಂದ ಉಚಿತ ಕೋವಿಶೀಲ್ಡ್ ವಯಲ್ 

ಖಾಸಗಿ ಆಸ್ಪತ್ರೆಗಳಿಗೆ ಕೋವಿಶೀಲ್ಡ್ ನ ಮುನ್ನೆಚ್ಚರಿಕಾ ಡೋಸ್ ಲಸಿಕೆಯ ದರವನ್ನು 225 ರೂಪಾಯಿಗಳಿಗೆ ಇಳಿಕೆ ಮಾಡಿದ ಬೆನ್ನಲ್ಲೇ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್ಐಐ)  ಬೆಲೆ ವ್ಯತ್ಯಾಸಕ್ಕೆ ಪರಿಹಾರ ನೀಡುವುದಾಗಿ ಹೇಳಿದೆ.

published on : 10th April 2022

ರಾಜ್ಯದಲ್ಲಿ ಖಾಸಗಿ ಲಸಿಕಾ ಕೇಂದ್ರಗಳಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್: ಡಾ. ಕೆ.ಸುಧಾಕರ್

ಕೋವಿಡ್ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ವೇಗ ನೀಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ 18 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್ ನೀಡುತ್ತಿರುವುದಾಗಿ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

published on : 9th April 2022

ಬೂಸ್ಟರ್ ಡೋಸ್ ಈ ಹಿಂದಿನ ಕೋವಿಡ್ ಲಸಿಕಾ ಬ್ರಾಂಡ್ ನದ್ದೇ ಆಗಿರಬೇಕು, ಖಾಸಗಿ ಕೇಂದ್ರಗಳು ಸೇವಾ ಶುಲ್ಕವಾಗಿ 150 ರೂ. ವರೆಗೆ ವಿಧಿಸಬಹುದು!

ಕೇಂದ್ರ ಸರ್ಕಾರ ಈಗಾಗಲೇ ಕೋವಿಡ್-19 ಸೋಂಕಿನ ವಿರುದ್ಧ ಎರಡು ಡೋಸ್ ಗಳ ಲಸಿಕೆ ನೀಡಿದೆ. ಇದೀಗ ಬೂಸ್ಟರ್ ಡೋಸ್ ಕೂಡ ಕೋವಿಡ್-19 ಲಸಿಕೆಯ ರೀತಿಯೇ ಇರಲಿದ್ದು ಖಾಸಗಿ ಲಸಿಕಾ ಕೇಂದ್ರಗಳು ಪ್ರತಿ ಡೋಸ್ ಗೆ ಸೇವಾ ಶುಲ್ಕವಾಗಿ ಗರಿಷ್ಠ 150 ರೂಪಾಯಿವರೆಗೆ ತೆಗೆದುಕೊಳ್ಳಬಹುದು.

published on : 9th April 2022

ಏಪ್ರಿಲ್ 1 ರಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ 12-14 ವರ್ಷದ ಮಕ್ಕಳಿಗೆ ಕೋವಿಡ್-19 ಲಸಿಕೆ

2010 ಮಾರ್ಚ್ 28 ರೊಳಗೆ ಜನಿಸಿರುವ ಮಕ್ಕಳು ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ. ರಾಜ್ಯ ಸರ್ಕಾರವು ಮಾರ್ಚ್ 16 ರಿಂದ ಲಸಿಕಾ ಅಭಿಯಾನ ಆರಂಭಿಸಿದ್ದು 20 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಿದೆ

published on : 30th March 2022

ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ಬಳಿಕ ಪ್ರತಿಕಾಯಗಳಲ್ಲಿ ಏರಿಕೆ; ರಾಜ್ಯಸಭೆಯಲ್ಲಿ ಐಸಿಎಂಆರ್ ಅಧ್ಯಯನ ಉಲ್ಲೇಖ

ಕೋವ್ಯಾಕ್ಸಿನ್ ಬೂಸ್ಟರ್ ಡೋಸ್ ಲಸಿಕೆಯ ಬಳಿಕ ಪ್ರತಿಕಾಯಗಳಲ್ಲಿ ಏರಿಕೆ ಕಂಡುಬಂದಿದೆ ಎಂದು ಐಸಿಎಂಆರ್ ಅಧ್ಯಯನ ವರದಿಯನ್ನು ಉಲ್ಲೇಖಿಸಿ ಆರೋಗ್ಯ ಖಾತೆ ರಾಜ್ಯ ಸಚಿವರು ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ. 

published on : 29th March 2022

ಕೋವಿಡ್ ಲಸಿಕೆಯಿಂದ ಅಸ್ವಸ್ಥಗೊಂಡ ನಾಲ್ವರು ಬಾಲಕಿಯರು; ಸದ್ಯ ಆರೋಗ್ಯ ಸ್ಥಿರ!

12ರಿಂದ 14 ವರ್ಷ ವಯಸ್ಸಿನ ನಾಲ್ವರು ಹುಡುಗಿಯರು ಕೋವಿಡ್-19 ವಿರುದ್ಧ ಲಸಿಕೆ ಹಾಕಿಸಿಕೊಂಡ ನಂತರ ಅಸ್ವಸ್ಥರಾದ ಘಟನೆ ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ ಎಂದು ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

published on : 25th March 2022

12 ರಿಂದ 14 ವರ್ಷದೊಳಗಿನ ಅರ್ಹ ಮಕ್ಕಳ ಲಸಿಕಾಕರಣಕ್ಕೆ ಚಾಲನೆ; 20 ಲಕ್ಷ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವ ಗುರಿ: ಸುಧಾಕರ್

ಕೋವಿಡ್ ಸಂಪೂರ್ಣವಾಗಿ ಹೋಗಿಲ್ಲ. ಆದರೆ ಲಸಿಕಾಕರಣದಿಂದ ನಿಯಂತ್ರಣ ಮಾಡಲಾಗಿದೆ. ಕೊರೊನಾ ನಿಯಂತ್ರಣದಲ್ಲಿ ಸಾಗಬೇಕಾದ ಹಾದಿ ಇನ್ನೂ ದೂರವಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

published on : 16th March 2022

12-14 ವರ್ಷದ ಮಕ್ಕಳಿಗೆ ಕೋವಿಡ್-19 ಲಸಿಕೆ; ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ 

ಮಾ.16 ರಿಂದ ಪ್ರಾರಂಭವಾಗಲಿರುವ 12-14 ವರ್ಷದ ಮಕ್ಕಳಿಗೆ ಕೋವಿಡ್-19 ಲಸಿಕೆ ಅಭಿಯಾನಕ್ಕಾಗಿ ಕೇಂದ್ರ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. 

published on : 15th March 2022

ಮಾರ್ಚ್ 16 ರಿಂದ 12-14 ವರ್ಷದ ಮಕ್ಕಳಿಗೆ ಕೋವಿಡ್-19 ಲಸಿಕೆ ಅಭಿಯಾನ ಪ್ರಾರಂಭ

ಕೇಂದ್ರ ಸರ್ಕಾರ ಈ ವಾರದಿಂದ 12-14 ವರ್ಷದ ಮಕ್ಕಳಿಗೆ ಕೋವಿಡ್-19 ಲಸಿಕೆ ನೀಡುವ ಅಭಿಯಾನ ಪ್ರಾರಂಭಿಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ ಹೇಳಿದ್ದಾರೆ. 

published on : 14th March 2022

5 ರಿಂದ 15 ವರ್ಷದವರಿಗೆ ಕೋವಿಡ್ ಲಸಿಕೆ ಬಗ್ಗೆ ತಜ್ಞರ ಶಿಫಾರಸಿನ ಮೇಲೆ ನಿರ್ಧಾರ: ಕೇಂದ್ರ ಸಚಿವ ಮಾಂಡವಿಯಾ

ಕೇಂದ್ರ ಸರ್ಕಾರ 5 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಕೋವಿಡ್-19 ಲಸಿಕೆಯ ನೀಡುವ ಬಗ್ಗೆ ತಜ್ಞರ ತಂಡದ ಶಿಫಾರಸು ಸ್ವೀಕರಿಸಿದ ತಕ್ಷಣ ಲಸಿಕೆ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ...

published on : 12th February 2022

ಕೋವಿಡ್ ಲಸಿಕೆಗೆ ಆಧಾರ್ ಕಡ್ಡಾಯವಲ್ಲ, ಗುರುತು ಪತ್ರ ರಹಿತವಾಗಿ 87 ಲಕ್ಷ ಜನರಿಗೆ ಲಸಿಕೆ: ಸುಪ್ರೀಂ ಕೋರ್ಟ್ ಗೆ ಕೇಂದ್ರ ಮಾಹಿತಿ

ಕೋವಿಡ್-19 ಲಸಿಕೆಗಾಗಿ CO-WIN ಪೋರ್ಟಲ್‌ನಲ್ಲಿ ಆಧಾರ್ ಕಾರ್ಡ್ ವಿವರಗಳನ್ನು ಸಲ್ಲಿಸುವುದು ಕಡ್ಡಾಯ ಪೂರ್ವ ಷರತ್ತಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

published on : 7th February 2022
1 2 3 4 5 6 > 

ರಾಶಿ ಭವಿಷ್ಯ