• Tag results for Vaccine

ಕೋವಿಡ್ ಲಸಿಕೆಗಾಗಿ ಕೋವಿನ್ ಪೋರ್ಟಲ್ ನಲ್ಲಿ ನೋಂದಣಿಯಾದ ಬಳಿಕ ಲಸಿಕಾ ಕೇಂದ್ರಕ್ಕೆ ಬನ್ನಿ: ವೈದ್ಯರ ಮನವಿ

ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕ ತಡೆಗಾಗಿ ಸರ್ಕಾರ ಆರಂಭಿಸಿರುವ ಕೋವಿಡ್ ಲಸಿಕೆ ಪಡೆಯಲು ಮೊದಲು ಕೋವಿನ್ ಪೋರ್ಟಲ್ ನಲ್ಲಿ ನೋಂದಣಿಯಾಗಿ ಬಳಿಕ ನಿಮ್ಮ ಸ್ಲಾಟ್ ನ ಸಮಯಕ್ಕೆ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಿರಿ ಎಂದು ವೈದ್ಯರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

published on : 5th March 2021

ಕಂಪನಿಯ ಸಿಬ್ಬಂದಿ ಮತ್ತು ಕುಟುಂಬದವರ ಕೋವಿಡ್ ಲಸಿಕಾ ವೆಚ್ಚವನ್ನು ರಿಲಯನ್ಸ್ ಭರಿಸಲಿದೆ: ನೀತಾ ಅಂಬಾನಿ

ತನ್ನ ಕಂಪನಿಯ ಎಲ್ಲಾ ಸಿಬ್ಬಂದಿವರ್ಗ ಮತ್ತವರ ಕುಟುಂಬದವರ ಕೋವಿಡ್ ಲಸಿಕೆ ವೆಚ್ಚವನ್ನು ರಿಲಾಯನ್ಸ್ ತುಂಬಲಿದೆ ಎಂದು ನೀತಾ ಅಂಬಾನಿ ಹೇಳಿದ್ದಾರೆ.

published on : 5th March 2021

ಕೋವಿಡ್ ಲಸಿಕೆ ಉಚಿತವಾಗಿ ವಿತರಣೆಯಾಗಲಿ: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಪತ್ರ

ಕೋವಿಡ್ ಲಸಿಕೆಯನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಣೆ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರಬರೆದಿದ್ದಾರೆ.

published on : 5th March 2021

ವಿದೇಶಗಳಿಗೆ ರಫ್ತು ಮಾಡುವುದಕ್ಕೂ ಮೊದಲು ನಮ್ಮ ದೇಶದ ನಾಗರೀಕರಿಗೆ ಲಸಿಕೆ ನೀಡಿ: ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್

ವಿದೇಶಗಳಿಗೆ ರಫ್ತು ಮಾಡುವುದಕ್ಕೂ ಮುನ್ನ ನಮ್ಮ ದೇಶದ ನಾಗರೀಕರಿಗೆ ಮೊದಲು ಕೊರೋನಾ ಲಸಿಕೆ ನೀಡಿ ಎಂದು ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಚಾಟಿ ಬೀಸಿದೆ.

published on : 5th March 2021

ಕೋವಿಡ್ ಲಸಿಕೆ ಪಡೆಯಲು ಸಕಾರಾತ್ಮಕ ಸ್ಪಂದನೆ; ಮಾರ್ಚ್ ಅಂತ್ಯದವರೆಗೂ ಸ್ಲಾಟ್ ಗಳು ಫಿಕ್ಸ್!

ಬಿಬಿಎಂಪಿ ವ್ಯಾಪ್ತಿಯಲ್ಲಿ 60 ವರ್ಷ ಮೇಲಿನವರು, ಬೇರೆ ಕಾಯಿಲೆ ಹೊಂದಿರುವ 45ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಮುಂದುವರೆದಿದೆ. ಕೋವಿಡ್ ಲಸಿಕೆ ಪಡೆಯಲು ಜನರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ.

published on : 4th March 2021

ದಿನದ ಯಾವ ವೇಳೆಯಲ್ಲಾದರೂ ಕೋವಿಡ್ ಲಸಿಕೆ ಪಡೆಯಲು ನಾಗರಿಕರಿಗೆ ಅವಕಾಶ: ಸಮಯ ಮಿತಿ ತೆಗೆದುಹಾಕಿದ ಸರ್ಕಾರ 

ಕೋವಿಡ್-19 ಲಸಿಕೆ ಪಡೆಯಲು ಇದ್ದ ಸಮಯ ಮಿತಿಯನ್ನು ತೆಗೆದುಹಾಕಿರುವ ಕೇಂದ್ರ ಸರ್ಕಾರ ಜನರಿಗೆ ಅನುಕೂಲವಾಗಲು ದಿನದ ಯಾವ ಸಮಯದಲ್ಲಾದರೂ ಲಸಿಕೆ ಪಡೆಯಬಹುದು ಎಂದು ಹೇಳಿದೆ.

published on : 3rd March 2021

ಮನೆಯಲ್ಲಿಯೇ ಲಸಿಕೆ ಪಡೆದ ಸಚಿವ ಬಿ.ಸಿ.ಪಾಟೀಲ್: ವಿವರಣೆ ಕೋರಿದ ಕೇಂದ್ರ ಸರ್ಕಾರ

ಕೃಷಿ ಸಚಿವ ಬಿಸಿ ಪಾಟೀಲ್ ಆಸ್ಪತ್ರೆಗೆ ತೆರಳದೆ ಮನೆಯಲ್ಲಿ ಕೊರೋನಾ ಲಸಿಕೆ ಪಡೆದ ಸಂಬಂಧ ವರದಿ ನೀಡುವಂತೆ ಕೇಂದ್ರ ಸರ್ಕಾರ ಸೂಚಿಸಿದೆ.

published on : 3rd March 2021

ಸೋಮವಾರದಿಂದ ಕೋವಿನ್ ಪೋರ್ಟಲ್ ನಲ್ಲಿ 50 ಲಕ್ಷ ಜನರ ನೋಂದಣಿ: 2.08 ಲಕ್ಷ ಫಲಾನುಭವಿಗಳು- ಕೇಂದ್ರ ಸರ್ಕಾರ

 ಸೋಮವಾರ ಬೆಳಗ್ಗೆಯಿಂದಲೂ ಸುಮಾರು 50 ಲಕ್ಷ ಜನರು ಕೋವಿನ್ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದೆ.

published on : 2nd March 2021

ಬಿಹಾರದಲ್ಲಿ ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ಎಲ್ಲೆಡೆ ಕೊರೋನಾ ಲಸಿಕೆ ಉಚಿತ: ಸಿಎಂ ನಿತೀಶ್ ಕುಮಾರ್

ಬಿಹಾರದ ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳೂ ಸೇರಿದಂತೆ ಎಲ್ಲೆಡೆ ಕೊರೋನಾ ಲಸಿಕೆ ಉಚಿತವಾಗಿ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಹೇಳಿದ್ದಾರೆ.

published on : 2nd March 2021

ಸ್ಥಳದಲ್ಲೇ ಲಸಿಕೆ ನೋಂದಣಿಗೆ ಶೀಘ್ರದಲ್ಲೇ ಅವಕಾಶ: ಆರೋಗ್ಯ ಇಲಾಖೆ ಆಯುಕ್ತ ತ್ರಿಲೋಕ್ ಚಂದ್ರ

ಮಾ.1ರಿಂದ 60 ವರ್ಷ ಮೇಲ್ಪಟ್ಟನಾಗರಿಕರು ಹಾಗೂ ಒಂದಕ್ಕಿಂತ ಹೆಚ್ಚು ಕಾಯಿಲೆಗಳಿಗೆ ತುತ್ತಾದ 45 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆಯನ್ನು ನೀಡುವ ಅಭಿಯಾನ ಆರಂಭವಾಗಿದ್ದು, ಲಸಿಕೆ ಫಲಾನುಭವಿಗಳಿಗೆ ಶೀಘ್ರದಲ್ಲೇ ಲಸಿಕಾ ಕೇಂದ್ರದ ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳುವ...

published on : 2nd March 2021

ಕೃಷಿ ಸಚಿವರ ದರ್ಬಾರ್: ಮನೆಗೆ ತರಿಸಿಕೊಂಡು ಕೊರೋನಾ ಲಸಿಕೆ ಹಾಕಿಸಿಕೊಂಡ ಬಿ.ಸಿ. ಪಾಟೀಲ್

ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಹಾವೇರಿ ಜಿಲ್ಲೆಯ ಹಿರೇಕೆರೂರಿನ ತಮ್ಮ ಮನೆಯಲ್ಲಿ ಸರ್ಕಾರಿ ವೈದ್ಯರಿಂದ ಕೊರೊನಾ ಲಸಿಕೆ ಪಡೆದಿದ್ದಾರೆ.  ಪಾಟೀಲ್ ಪತ್ನಿ ಕೂಡ ಮನೆಯಲ್ಲಿಯೇ ಲಸಿಕೆ ಪಡೆದುಕೊಂಡಿದ್ದಾರೆ

published on : 2nd March 2021

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಇಂದು ಕೋವಿಡ್ ಲಸಿಕೆ: ಆಯ್ಕೆ ಇಲ್ಲ ಎಂದ ಆರೋಗ್ಯ ಸಚಿವಾಲಯ

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಇಂದು ಕೋವಿಡ್ ಲಸಿಕೆ ವಿತರಣೆ ಮಾಡಲಾಗುತ್ತಿದ್ದು, ಲಸಿಕೆ ಪಡೆಯುವ ನ್ಯಾಯಮೂರ್ತಿಗಳಿಗೆ ಲಸಿಕೆಗಳ ನಡುವೆ ಆಯ್ಕೆಗೆ ಅವಕಾಶ ಇಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

published on : 2nd March 2021

ಲಸಿಕೆ ವಿತರಣೆ ವೇಳೆ ಕೋವಿನ್ ಆ್ಯಪ್ ನಲ್ಲಿ ತಾಂತ್ರಿಕ ದೋಷ: ಕೆಲಕಾಲ ಗೊಂದಲ ಸೃಷ್ಟಿ

ರಾಜ್ಯದಾದ್ಯಂತ ಮೂರನೇ ಹಂತದ ಕೊರೋನಾ ಲಸಿಕೆ ಅಭಿಯಾನ ಸೋಮವಾರ ಆರಂಭಗೊಂಡಿದ್ದು, ಲಸಿಕೆ ವಿತರಣೆ ವೇಳೆ ಕೋವಿನ್ ಆ್ಯಪ್ ನಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

published on : 2nd March 2021

ರಾಂಚಿ: 68 ಕಿ.ಮೀ ಬೈಕ್ ಚಲಾಯಿಸಿ ಕೋವಿಡ್ -19 ಲಸಿಕೆ ಪಡೆದ 80 ವರ್ಷದ ವೃದ್ಧ!

ಇಂದಿನಿಂದ ದೇಶಾದ್ಯಂತ ಆರಂಭವಾದ ಎರಡನೇ ಹಂತದ ಕೋವಿಡ್ ಲಸಿಕೆ ವಿತರಣೆಯ ಕಾರ್ಯಕ್ರಮದ ಮೊದಲ ದಿನದಂದು 68 ವರ್ಷದ ವ್ಯಕ್ತಿಯೋರ್ವರು 68 ಕಿ.ಮೀ. ಬೈಕ್ ಚಲಾಯಿಸಿಕೊಂಡು ಹೋಗಿ ಲಸಿಕೆ ಪಡೆದುಕೊಡಿದ್ದಾರೆ.

published on : 1st March 2021

ಭಾರತದ ಕೋವಿಡ್ ಲಸಿಕೆ ತಯಾರಕ ಸಂಸ್ಥೆಗಳನ್ನು ಟಾರ್ಗೆಟ್ ಮಾಡಿದ ಚೀನಾ ಹ್ಯಾಕರ್ ಗಳು!

ದೇಶದಲ್ಲಿನ ಎರಡು ಕೋವಿಡ್-19 ಲಸಿಕೆ ತಯಾರಕ ಸಂಸ್ಥೆಗಳ ಮಾಹಿತಿ ತಂತ್ರಜ್ಞಾನ ತಂತ್ರಜ್ಞಾನ ವ್ಯವಸ್ಥೆಯನ್ನು ಹಾಳು  ಮಾಡಲು  ಚೀನಾದ ಸರ್ಕಾರಿ ಬೆಂಬಲಿತ ಹ್ಯಾಕರ್ ಗಳ ತಂಡ ಯತ್ನಿಸಿದೆ ಎಂದು ಸೈಬರ್ ಗುಪ್ತಚರ ಸಂಸ್ಥೆ ಸೈಫರ್ಮಾ ತಿಳಿಸಿದೆ.

published on : 1st March 2021
1 2 3 4 5 6 >