• Tag results for Veer Savarkar

ಒಡಕಿನ ಬಗ್ಗೆ ಎಚ್ಚರಿಸಿದ ಸಂಜಯ್ ರಾವುತ್, ಮಹಾ ವಿಕಾಸ್ ಅಘಾಡಿಯಲ್ಲಿ ಎಲ್ಲವೂ ಚೆನ್ನಾಗಿದೆ ಎಂದ ಕಾಂಗ್ರೆಸ್

ವೀರ ಸಾವರ್ಕರ್ ಅವರ ದೇಶಪ್ರೇಮವನ್ನು ಪ್ರಶ್ನಿಸುವುದು ಮಹಾರಾಷ್ಟ್ರದಲ್ಲಿ ತಮ್ಮ ಮಹಾ ವಿಕಾಸ್ ಅಘಾಡಿ (ಎಂವಿಎ) ವೈತ್ರಿಯನ್ನು ಒಡೆಯಲು ಕಾರಣವಾಗಬಹುದು ಎಂದು ಶಿವಸೇನೆಯ ಉದ್ಧವ್ ಠಾಕ್ರೆ ಬಣವು ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳ ನಂತರ, ತಮ್ಮ ಮೈತ್ರಿಯು ಗಟ್ಟಿಯಾಗಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಬೆಂಕಿಯನ್ನು ನಂದಿಸಲು ಪ್ರಯತ್ನಿಸಿತು.

published on : 19th November 2022

ನೆಹರೂ ಬ್ರಿಟೀಷರಿಗೆ ಬರೆದ ಕ್ಷಮಾಪಣಾ ಪತ್ರದ ಬಗ್ಗೆ ರಾಹುಲ್ ಗಾಂಧಿ ಮೌನವೇಕೆ? ಬಿಜೆಪಿ

ವಿನಾಯಕ ದಾಮೋದರ್ ಸಾವರ್ಕರ್  ಬ್ರಿಟೀಷರಿಗೆ ಕ್ಷಮಾದಾನ ಅರ್ಜಿ ಬರೆದಿದ್ದರು ಎಂಬ ರಾಹುಲ್ ಗಾಂಧಿ ಆರೋಪದ ವಿರುದ್ಧ ಬಿಜೆಪಿ ಟೀಕಾ ಪ್ರಹಾರ ನಡೆಸಿದ್ದು, ನೆಹರೂ ಬ್ರಿಟೀಷರಿಗೆ ಬರೆದ ಕ್ಷಮಾಪಣಾ ಪತ್ರದ ಬಗ್ಗೆ ರಾಹುಲ್ ಮೌನವೇಕೆ ಎಂದು ಪ್ರಶ್ನಿಸಿದೆ.

published on : 18th November 2022

'ನನ್ನ ಜನ ಹೊಟ್ಟೆಗೆ ಹಿಟ್ಟಿಲ್ಲದೆ ಸಾಯುತ್ತಿದ್ದಾರೆ, ಬದುಕು ಕಟ್ಟಲು ನೋಡಿ: ಸಾತ್ಯಕಿ ಯಾರು? ಸಾವರ್ಕರ್ ಮೊಮ್ಮಗನ ಕಟ್ಟಿಕೊಂಡು ಏನಾಗಬೇಕು?'

ಸಾವರ್ಕರ್ ಮೊಮ್ಮಗನ ಕಟ್ಟಿಕೊಂಡು ನನಗೆ ಏನಾಗಬೇಕು. ನನ್ನ ಜನ ಹೊಟ್ಟೆಗೆ ಹಿಟ್ಟಿಲ್ಲದೆ ಸಾಯುತ್ತಿದ್ದಾರೆ. ಸಾತ್ಯಕಿ ಯಾರು, ಯಾರು ಆ ಮನುಷ್ಯ? ಅವರಿಗೆ ಏನು ಗೊತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

published on : 23rd October 2022

ಸಾವರ್ಕರ್ ವಿರೋಧಿಸುವವರು ಮೊದಲು ಬಸವಣ್ಣನವರ ವಚನಗಳನ್ನು ಓದಿಕೊಳ್ಳಲಿ: 'ಸಾವರ್ಕರ್ ರಥಯಾತ್ರೆ' ಬಿ ಎಸ್ ಯಡಿಯೂರಪ್ಪ ಚಾಲನೆ

ಸ್ವಾತಂತ್ರ್ಯ ಹೋರಾಟಗಾರ, ಹಿಂದೂ ಸಮಾಜದ ನಾಯಕ ವೀರ ಸಾವರ್ಕರ್ ಅವರ ಜೀವನಗಾಥೆಯನ್ನು ಬಿಂಬಿಸುವ 'ಸಾವರ್ಕರ್ ರಥಯಾತ್ರೆ'ಗೆ ಬಿಜೆಪಿ ಇಂದು ಮಂಗಳವಾರ ಮೈಸೂರಿನಲ್ಲಿ ಚಾಲನೆ ನೀಡಿದ್ದು ಇಂದಿನಿಂದ 8 ದಿನಗಳ ಕಾಲ ರಥಯಾತ್ರೆ ಮುಂದುವರಿಯಲಿದೆ.

published on : 23rd August 2022

ವಿಜಯಪುರ ಕಾಂಗ್ರೆಸ್ ಕಚೇರಿ ಗೋಡೆಗೆ ವೀರ ಸಾವರ್ಕರ್ ಫೋಟೋ: ಆರೋಪಿ ಬಸವರಾಜ ಹೂಗಾರ ಬಂಧಿಸುವಂತೆ ಆಗ್ರಹ

ರಾಜ್ಯದಲ್ಲಿ ವೀರ ಸಾವರ್ಕರ್​ ಭಾವಚಿತ್ರ ಅಂಟಿಸುವ ವಿವಾದ ಕಾಡ್ಗಿಚ್ಚಿನಂತೆ ವಿವಿಧ ಜಿಲ್ಲೆಗಳಿಗೆ ಹಬ್ಬುತ್ತಿದೆ. ನಿನ್ನೆ ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋಗಳನ್ನು ಹಿಂದೂಪರ ಸಂಘಟನೆ ಸದಸ್ಯರೊಬ್ಬರು ಅಂಟಿಸಿದ್ದಾರೆ.

published on : 22nd August 2022

'ಗಾಂಧಿಯನ್ನೇ ಕೊಂದವರು ಇನ್ನು ನನ್ನನ್ನು ಬಿಡುತ್ತಾರೆಯೇ, ಕ್ಷಮೆ ಕೇಳಿದ್ದ ಸಾವರ್ಕರ್ ರನ್ನು ಪೂಜಿಸುತ್ತಾರೆ': ಸಿದ್ದರಾಮಯ್ಯ ವ್ಯಂಗ್ಯ

ದೇಶದ ಪಿತಾಮಹ ಮಹಾತ್ಮಾ ಗಾಂಧೀಜಿಯನ್ನೇ ಕೊಂದವರು ನನ್ನನ್ನು ಬಿಡುತ್ತಾರಾ ಎಂದು ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

published on : 19th August 2022

ತುಮಕೂರಿನಲ್ಲಿ ವೀರ ಸಾವರ್ಕರ್ ಫ್ಲೆಕ್ಸ್ ವಿವಾದ: ಪೋಸ್ಟರ್ ಹರಿದುಹಾಕಿದ ಕಿಡಿಗೇಡಿಗಳು, ಸಂಘಟನೆಗಳ ಆಕ್ರೋಶ

ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಫ್ಲೆಕ್ಸ್ ವಿಚಾರದಲ್ಲಿ ಗಲಾಟೆ ನಡೆದು ಇಬ್ಬರಿಗೆ ಚಾಕು ಇರಿತವಾಗಿ ಅಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿರುವಾಗಲೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ತುಮಕೂರು  ನಗರದಲ್ಲಿ ಹಾಕಲಾಗಿದ್ದ ವೀರ ಸಾವರ್ಕರ್‌ ಭಾವಚಿತ್ರ ಇರುವ ಫ್ಲೆಕ್ಸ್‌ನ್ನು ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ ನಡೆದಿದೆ. 

published on : 18th August 2022

'ಮುಸ್ಲಿಮರ ಏರಿಯಾ' ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ: ಕೆರಳಿ ಕೆಂಡವಾದ ಬಿಜೆಪಿ ನಾಯಕರು

ವೀರ ಸಾವರ್ಕರ್ ಪೋಸ್ಟರ್ ವಿವಾದ ರಾಜಕೀಯ ನಾಯಕರ ಕೆಸರೆರಚಾಟಕ್ಕೆ ವೇದಿಕೆಯಾಗಿದೆ. ಮುಸ್ಲಿಂ ಏರಿಯಾದಲ್ಲಿ ವೀರ ಸಾವರ್ಕರ್ ಪೋಸ್ಟರ್ ನ್ನು ಹಾಕುವ ಕೆಲಸ ಏಕೆ ಬೇಕಿತ್ತು ಎಂದು ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ದರಾಮಯ್ಯ ನಿನ್ನೆ ಪ್ರಶ್ನಿಸಿದ್ದರು.

published on : 17th August 2022

ಉಡುಪಿಯಲ್ಲೂ ವೀರ ಸಾವರ್ಕರ್ ಪೋಸ್ಟರ್ ವಿವಾದ: ಬ್ರಹ್ಮಗಿರಿ ಸರ್ಕಲ್ ನಲ್ಲಿ ಕಟೌಟ್ ವಿಷಯಕ್ಕೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಕಿತ್ತಾಟ

ಅತ್ತ ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಹಾಕಿದ್ದ ಹಿಂದೂ ಸಮಾಜದ ಮುಖಂಡ ವೀರ ಸಾವರ್ಕರ್ ಮತ್ತು ಮೈಸೂರು ಹುಲಿ ಟಿಪ್ಪು ಸುಲ್ತಾನ್ ಪೋಸ್ಟರ್ ಸಂಬಂಧ ವಿವಾದವೆದ್ದು ಗಲಭೆ ಉಂಟಾಗಿ ಚಾಕು ಇರಿತ ಘಟನೆ ನಡೆದು ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿರುವಾಗ ಇತ್ತ ಇತ್ತ ಉಡುಪಿಯಲ್ಲಿಯೂ ವೀರ ಸಾವರ್ಕರ್ ಪೋಸ್ಟರ್ ವಿವಾದ ಉಂಟಾಗಿದೆ.

published on : 17th August 2022

ಟಿಪ್ಪು-ಸಾವರ್ಕರ್ ಪೋಸ್ಟರ್ ವಿವಾದ: ಶಿವಮೊಗ್ಗದಲ್ಲಿ ಜನಜೀವನ ಸಹಜ ಸ್ಥಿತಿಯತ್ತ; ಪೊಲೀಸ್ ಭದ್ರತೆ ಹೆಚ್ಚಳ

ಮಲೆನಾಡು ಶಿವಮೊಗ್ಗದಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಹಿಂದೂ ಮಹಾಸಭಾ ನಾಯಕ ವೀರ ಸಾವರ್ಕರ್- ಮೈಸೂರು ಹುಲಿ ಟಿಪ್ಪು ಸುಲ್ತಾನ್ ಫ್ಲೆಕ್ಸ್ ಹಾಕುವ ವಿಚಾರದಲ್ಲಿ ಹಿಂದೂ-ಮುಸ್ಲಿಂ ಕೋಮುಗಳ ಮಧ್ಯೆ ಗಲಾಟೆ ಎದ್ದು ಅದು ಚಾಕು ಇರಿತದ ಹಿಂಸಾಚಾರಕ್ಕೆ ತಿರುಗಿ ಶಿವಮೊಗ್ಗದ ಪರಿಸ್ಥಿತಿ ಮತ್ತೊಮ್ಮೆ ನಿಗಿನಿಗಿ ಕೆಂಡದಂತಾಗಿದೆ. 

published on : 17th August 2022

ಶಿವಮೊಗ್ಗದಲ್ಲಿ ಸಾವರ್ಕರ್-ಟಿಪ್ಪು ಫ್ಲೆಕ್ಸ್ ವಿವಾದ: ಯುವಕನ ಮೇಲೆ ಚಾಕು ಇರಿದ ಪ್ರಮುಖ ಆರೋಪಿ ಮೊಹಮ್ಮದ್ ಜಬಿ ಬಂಧನ

ವೀರ ಸಾವರ್ಕರ್ ಫೋಟೋ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿದ ಪ್ರಕರಣ ಸಂಬಂಧ ಈಗಾಗಲೇ ಇಬ್ಬರನ್ನು ಬಂಧಿಸಿದ್ದ ಪೊಲೀಸರು, ಇದೀಗ ಪ್ರಕರಣದ ಪ್ರಮುಖ ಆರೋಪಿಯನ್ನು ಗುಂಡು ಹಾರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 

published on : 16th August 2022

ಶಿವಮೊಗ್ಗ ಗಲಭೆ ಘಟನೆಯಲ್ಲಿ 4 ಆರೋಪಿಗಳ ಗುರುತು, ಇಬ್ಬರ ಬಂಧನ, ಶಾಲೆ-ಕಾಲೇಜುಗಳಿಗೆ ರಜೆ: ಎಡಿಜಿಪಿ ಅಲೋಕ್ ಕುಮಾರ್

ಬೆಂಗಳೂರಿನಲ್ಲಿ ಟಿಪ್ಪು ಸುಲ್ತಾನ್ ಫ್ಲೆಕ್ಸ್ ನ್ನು ಹರಿದು ತೋರಿದ ವರ್ತನೆಗೆ ಪ್ರತಿಯಾಗಿ ಎಂಬಂತೆ ನಿನ್ನೆ 75ನೇ ಸ್ವಾತಂತ್ರ್ಯೋತ್ಸವದಂದು ಶಿವಮೊಗ್ಗದ ಅಮೀರ್ ಅಹ್ಮದ್ ವೃತ್ತದಲ್ಲಿ ವೀರ್ ಸಾವರ್ಕರ್(Veer Savarkar) ಮತ್ತು ಟಿಪ್ಪು ಸುಲ್ತಾನ್(Tipu Sultan) ಫ್ಲೆಕ್ಸ್ ವಿಚಾರವಾಗಿ ಭಾರೀ ಗಲಾಟೆ ನಡೆದು ಸದ್ಯ ಬಿಗುವಿನ ವಾತಾವರಣವಿದೆ. 

published on : 16th August 2022

ಶಿವಮೊಗ್ಗ: ಸಾವರ್ಕರ್ ಫ್ಲೆಕ್ಸ್ ಕಿತ್ತೆಸೆದ ಕಿಡಿಗೇಡಿಗಳು; ಮತ್ತೊಂದೆಡೆ ಇಬ್ಬರಿಗೆ ಚೂರಿ ಇರಿತ; ಸೆಕ್ಷನ್ 144 ಜಾರಿ!

75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದಂದೆ ಶಿವಮೊಗ್ಗದಲ್ಲಿ ಟಿಪ್ಪು ಸುಲ್ತಾನ್ ಸಂಘಟನೆ ಕಾರ್ಯಕರ್ತರು ಅಮೀರ್ ಅಹ್ಮದ್ ವೃತ್ತದಲ್ಲಿ ಅವಳಡಿಸಿದ್ದ ವೀರ್ ಸಾವರ್ಕರ್ ಫ್ಲೆಕ್ಸ್ ತೆರವಿಗೆ ಮುಂದಾಗಿದ್ದು ಈ ವೇಳೆ ಕಾರ್ಯಕರ್ತರ ಮೇಲೆ ಪೊಲೀಸರ್ ಲಾಠಿಚಾರ್ಜ್ ಮಾಡಿದ್ದಾರೆ.

published on : 15th August 2022

ರಾಶಿ ಭವಿಷ್ಯ