• Tag results for White house

ಅಮೆರಿಕ ಅಧ್ಯಕ್ಷರ ಬೀಚ್ ಹೋಮ್ ಸಮೀಪ ನಿರ್ಬಂಧಿತ ಪ್ರದೇಶಕ್ಕೆ ಖಾಸಗಿ ವಿಮಾನ ಪ್ರವೇಶ: ಕೆಲಹೊತ್ತು ಜೊ ಬೈಡನ್ ಸ್ಥಳಾಂತರ

ಅಮೆರಿಕ ಅಧ್ಯಕ್ಷ ಜೊ ಬೈಡನ್ ಅವರ ಡೆಲವೇರ್ ವಿರಾಮದ ಮನೆಯ ಸಮೀಪ ನಿನ್ನೆ ಶನಿವಾರ ಸಣ್ಣ ಖಾಸಗಿ ವಿಮಾನವು ನಿರ್ಬಂಧಿತ ವಾಯುಪ್ರದೇಶವನ್ನು ತಪ್ಪಾಗಿ ಪ್ರವೇಶಿಸಿದ್ದರಿಂದ ಅಮೆರಿಕ ಅಧ್ಯಕ್ಷರು ಮತ್ತು ಮೊದಲ ಮಹಿಳೆ ಎಂದು ಕರೆಯಲ್ಪಡುವ ಅವರ ಪತ್ನಿಯನ್ನು ಕೆಲ ಕಾಲ ಸ್ಥಳಾಂತರಿಸಿದ ಘಟನೆ ನಡೆಯಿತು. 

published on : 5th June 2022

73ನೇ ಗಣರಾಜ್ಯೋತ್ಸವ: ಶುಭಾಶಯ ಕೋರಿದ ಅಮೆರಿಕಾದ ಶ್ವೇತಭವನ

ಭಾರತದಲ್ಲಿಂದು 73ನೇ ಗಣರಾಜ್ಯೋತ್ಸವ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಮೆರಿಕಾ ಭಾರತದ ನಾಗರಿಕರಿಗೆ ಶುಭಾಶಯ ಕೋರಿದೆ. 

published on : 26th January 2022

ಶ್ವೇತಭವನ: ಸೇನಾ ಕಚೇರಿ ನಿರ್ದೇಶಕ, ಭಾರತೀಯ ಮೂಲದ ಮಜು ವರ್ಗೀಸ್ ಉನ್ನತ ಹುದ್ದೆಗೆ ರಾಜಿನಾಮೆ

ಸೇನಾ ಕಚೇರಿ ನಿರ್ದೇಶಕ ಹುದ್ದೆ ತಮಗೆ ಸಂದ ಜೀವಮಾನದ ಗೌರವ ಎಂದು ಅವರು ಹೇಳಿದ್ದಾರೆ. 

published on : 23rd January 2022

ಶ್ವೇತಭವನ ದಾಳಿ ಪ್ರಕರಣ ಆರೋಪಿಗೆ 5 ವರ್ಷ ಜೈಲು ಶಿಕ್ಷೆ; ನ್ಯಾಯಾಲಯದಲ್ಲಿ ಕಣ್ಣೀರಿಟ್ಟ ಆರೋಪಿ: ಕರಗದ ನ್ಯಾಯಾಧೀಶ

ಅಮೆರಿಕದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ತಲೆತಗ್ಗಿಸುವಂತೆ ಮಾಡಿದ ಈ ಘಟನೆಯಿಂದ ಆರೋಪಿಗಳು ಕಣ್ಣೀರಿಟ್ಟು ಪಾರಾಗಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. 

published on : 2nd January 2022

ಟ್ರಂಪ್ ಬೆಂಬಲಿಗರ ಕುಖ್ಯಾತ ಕ್ಯಾಪಿಟಲ್ ದಾಳಿಗೆ ಫೇಸ್ ಬುಕ್ ಕುಮ್ಮಕ್ಕು ಕಾರಣ: ಮಾಜಿ ಮ್ಯಾನೇಜರ್ ಆರೋಪ

ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್  ಹೇಗೆ ಪ್ರಪಂಚದ ವಿನಾಶಕಾರಿ ಶಕ್ತಿಯಾಗಿ ಬೆಳೆಯುತ್ತಿದೆ ಎನ್ನುವುದನ್ನು ಹೊರಗೆಡವಿದ್ದಾರೆ. 

published on : 4th October 2021

ಶ್ವೇತಭವನದಲ್ಲಿ ಪ್ರಧಾನಿ ಮೋದಿ: ಭಾರತ-ಅಮೆರಿಕ ನಡುವಣ ಸ್ನೇಹ ಇನ್ನಷ್ಟು ಗಟ್ಟಿಯಾಗಲಿದೆ ಎಂದ ಬೈಡನ್

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಶ್ವೇತಭವನದಲ್ಲಿ  ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಈ ವೇಳೆ ಇಬ್ಬರೂ ನಾಯಕರು ಭಾರತ-ಅಮೆರಿಕ ನಡುವಣ ಸ್ನೇಹ ಇನ್ನಷ್ಟು ಗಟ್ಟಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

published on : 24th September 2021

ಇದೇ 24ರಂದು ಶ್ವೇತ ಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌- ಪ್ರಧಾನಿ ಮೋದಿ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರು ಈ ತಿಂಗಳ 24 ರಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರನ್ನು ಭೇಟಿ ಮಾಡಲಿದ್ದಾರೆ.

published on : 20th September 2021

ಕೋವಿಡ್ ಲಸಿಕೆ ಅಡ್ಡ ಪರಿಣಾಮ ಕುರಿತು ವಿವಾದಾತ್ಮಕ ಟ್ವೀಟ್: ರ‍್ಯಾಪರ್ ನಿಕಿ ಮಿನಾಜ್ ಶ್ವೇತಭವನಕ್ಕೆ ಆಹ್ವಾನ

ಕೋವಿಡ್-19 ಲಸಿಕೆ ಸುರಕ್ಷತೆ ಬಗ್ಗೆ ಪ್ರಶ್ನಿಸಿದ್ದ ಗ್ರ್ಯಾಮಿ ನಾಮನಿರ್ದೇಶನದ ರ‍್ಯಾಪರ್ ನಿಕಿ ಮಿನಾಜ್ ಅವರನ್ನು ಶ್ವೇತ ಭವನಕ್ಕೆ ಕರೆಯಲಾಗಿದೆ.

published on : 16th September 2021

ತಾಲಿಬಾನ್ ಆಡಳಿತವನ್ನು ಮಾನ್ಯ ಮಾಡುವುದಕ್ಕೆ ಆತುರವೇನು ಇಲ್ಲ: ಅಮೇರಿಕ

ಅಫ್ಘಾನಿಸ್ತಾವನ್ನು ವಶಪಡಿಸಿಕೊಂಡಿರುವ ತಾಲೀಬಾನ್ ಆಡಳಿತವನ್ನು ಮಾನ್ಯ ಮಾಡುವುದಕ್ಕೆ ತನಗೆ ಹಾಗೂ ತಾನು ಮಾತುಕತೆ ನಡೆಸಿರುವ ರಾಷ್ಟ್ರಗಳಿಗೆ ಆತುರವೇನು ಇಲ್ಲ ಎಂದು ಅಮೆರಿಕ ಹೇಳಿದೆ. 

published on : 2nd September 2021

ಜಾಗತಿಕ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಭಾರತ ಅಮೆರಿಕದ ಪರಮಾಪ್ತ ರಾಷ್ಟ್ರ: ವೈಟ್ ಹೌಸ್

ಜಾಗತಿಕ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಭಾರತ ಅಮೆರಿಕದ ಪರಮಾಪ್ತ ರಾಷ್ಟ್ರವಾಗಿದ್ದು, ಆರ್ಥಿಕ, ಕಾರ್ಯತಂತ್ರ ಮತ್ತು ಭದ್ರತೆಯಂತಹ ವ್ಯಾಪಕವಾದ ವಿಷಯಗಳ ಬಗ್ಗೆ ಅಮೆರಿಕವು ಭಾರತದೊಂದಿಗೆ ಕೆಲಸ ಮಾಡುತ್ತಿದೆ ಎಂದು ವೈಟ್ ಹೌಸ್ ಹೇಳಿದೆ.

published on : 26th June 2021

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹಿರಿಯ ಸಲಹೆಗಾರರಾಗಿ ಭಾರತೀಯ ಮೂಲದ ನೀರಾ ತಂಡನ್‌ ನೇಮಕ

ಭಾರತೀಯ ಮೂಲದ ನೀರಾ ತಂಡನ್‌ ಅವರು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರ ಹಿರಿಯ ಸಲಹೆಗಾರರಾಗಿ ನೇಮಕವಾಗಿದ್ದಾರೆ.

published on : 15th May 2021

ಹವಾಮಾನ ಬದಲಾವಣೆ ಶೃಂಗಸಭೆ, ಪ್ರಧಾನಿ ಮೋದಿಗೆ ಅಮೆರಿಕ ಅಧ್ಯಕ್ಷರ ಆಹ್ವಾನ, ಪಟ್ಟಿಯಲ್ಲಿಲ್ಲ ಇಮ್ರಾನ್ ಖಾನ್ ಹೆಸರು! 

ಏಪ್ರಿಲ್ 22 ಮತ್ತು 23ರಂದು ವರ್ಚುವಲ್ ಆಗಿ ನಡೆಯುವ ಹವಾಮಾನ ಬದಲಾವಣೆ ಶೃಂಗಸಭೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ 40 ನಾಯಕರನ್ನು ಅಮೆರಿಕ ಅಧ್ಯಕ್ಷ ಜೊ ಬೈಡನ್ ಸ್ವಾಗತಿಸಿದ್ದಾರೆ.

published on : 28th March 2021

ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೆಸರು ಬಳಸಿಕೊಳ್ಳುವಂತಿಲ್ಲ: ಶ್ವೇತ ಭವನ 

ಯಾವುದೇ ವಾಣಿಜ್ಯ ಚಟುವಟಿಕೆಗಳಿಗೆ ಸಂಬಂಧಪಟ್ಟಂತೆ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಹೆಸರನ್ನು ಬಳಸಬಾರದು, ಇದು ಶ್ವೇತಭವನದ ನಿಯಮವಾಗಿದೆ ಎಂದು ಕಮಲಾ ಹ್ಯಾರಿಸ್ ಅವರ ವಕ್ತಾರೆ ತಿಳಿಸಿದ್ದಾರೆ.

published on : 18th February 2021

ಟ್ರಂಪ್ ಬಗ್ಗೆ ಮಾತನಾಡಿ ಹೆಚ್ಚು ಸಮಯ ವ್ಯಯಿಸುವುದಿಲ್ಲ: ಶ್ವೇತ ಭವನ 

ಅಮೆರಿಕದ ನಿಕಟಪೂರ್ವ ಡೊನಾಲ್ಡ್ ಟ್ರಂಪ್ ಅಧಿಕಾರದ ಅವಧಿಯ ನಂತರವೂ ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. 

published on : 2nd February 2021

ಶ್ವೇತ ಭವನದಲ್ಲಿ ಕೇಳುತ್ತಿದೆ ನಾಯಿ ಬೊಗಳುವ ಸದ್ದು: ಮಾಲೀಕ ಜೊ ಬೈಡನ್ ಜೊತೆಗೆ ಎರಡು ಸಾಕು ನಾಯಿಗಳ ಆಗಮನ!

ಅಮೆರಿಕದ ಅಧಿಕಾರದ ಶಕ್ತಿ ಕೇಂದ್ರ ಶ್ವೇತಭವನದಲ್ಲಿ ನಾಯಿಗಳ ಬೊಗಳುವಿಕೆಯ ಸಪ್ಪಳ ಕೇಳುತ್ತಿದೆ. ನೂತನ ಅಧ್ಯಕ್ಷ ಜೊ ಬೈಡನ್ ಶ್ವಾನಪ್ರಿಯರು. ಹೀಗಾಗಿ ಶ್ವೇತಭವನಕ್ಕೆ ತಮ್ಮ ಮುದ್ದಿನ ಸಾಕು ನಾಯಿಗಳಾದ ಚ್ಯಾಂಪ್ ಮತ್ತು ಮೇಜರ್ ನನ್ನು ಕರೆತಂದು ಸಾಕುತ್ತಿದ್ದಾರೆ.

published on : 26th January 2021
1 2 > 

ರಾಶಿ ಭವಿಷ್ಯ