- Tag results for Woman
![]() | ಕಣ್ಣೂರು: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ; ಗರ್ಭಿಣಿ ಮಹಿಳೆ, ಪತಿ ಸಜೀವ ದಹನಕಣ್ಣೂರು ಜಿಲ್ಲಾಸ್ಪತ್ರೆ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕಾರಿನಲ್ಲಿದ್ದ ಗರ್ಭಿಣಿ ಮಹಿಳೆ ಮತ್ತು ಆಕೆಯ ಪತಿ ಸಜೀವ ದಹನವಾಗಿರುವ ದಾರುಣ ಘಟನೆ ಗುರುವಾರ ನಡೆದಿದೆ. |
![]() | ಮಹಾರಾಷ್ಟ್ರ: ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಮಹಿಳೆ ವಿರುದ್ಧ ಪ್ರಕರಣಮಹಾರಾಷ್ಟ್ರದ ಥಾಣೆ ಜಿಲ್ಲೆಯ 16 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ 32 ವರ್ಷದ ಮಹಿಳೆ ವಿರುದ್ಧ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. |
![]() | ಬಿಹಾರ: ಅತ್ಯಾಚಾರ ಯತ್ನದ ನಂತರ ವೇಗವಾಗಿ ಚಲಿಸುತ್ತಿದ್ದ ಬಸ್ನಿಂದ ಜಿಗಿದ ಶಿಕ್ಷಕಿ, ಸಂತ್ರಸ್ತೆಯ ಸ್ಥಿತಿ ಗಂಭೀರಬಿಹಾರದ ಪುರ್ನಿಯಾ ಜಿಲ್ಲೆಯಲ್ಲಿ ಐವರು ಅತ್ಯಾಚಾರಕ್ಕೆ ಯತ್ನಿಸಿದ ನಂತರ ವೇಗವಾಗಿ ಚಲಿಸುತ್ತಿದ್ದ ಬಸ್ನಿಂದ ಜಿಗಿದ ನಂತರ ಸಿಲ್ಲಿಗುರಿಯ 35 ವರ್ಷದ ಶಿಕ್ಷಕಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. |
![]() | ಕ್ಷುಲ್ಲಕ ಗಲಾಟೆ: ಕಾರು ತಡೆಯಲು ಯತ್ನಿಸಿ ಬಾನೆಟ್ ಹತ್ತಿದ ವ್ಯಕ್ತಿಯ ಎಳೆದೊಯ್ದ ಚಾಲಕಿವೃದ್ಧನನ್ನು ರಸ್ತೆಯಲ್ಲಿ ಎಳೆದೊಯ್ದಿದ್ದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದ್ದು, ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆ ವೇಳೆ ಕಾರು ತಡೆಯಲು ಯತ್ನಿಸಿ ಬಾನೆಟ್ ಮೇಲೆ ಬಿದ್ದ ವ್ಯಕ್ತಿಯನ್ನು ಕಾರಿನ ಚಾಲಕಿ ಎಳೆದೊಯ್ದಿದ್ದಾರೆ. |
![]() | ಬಾಗಲಕೋಟೆ: ಇಬ್ಬರು ಪುತ್ರಿಯರ ಜತೆ ನದಿಗೆ ಹಾರಿ ತಾಯಿ ಆತ್ಮಹತ್ಯೆಮಹಿಳೆಯೊಬ್ಬರು ವಯಸ್ಸಿಗೆ ಬಂದ ತನ್ನ ಇಬ್ಬರು ಹೆಣ್ಣುಮಕ್ಕಳ ಜೊತೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮಂಗಳವಾರ ಬಾಗಲಕೋಟೆ ಜಿಲ್ಲೆಯ ಮಲಪ್ರಭಾ ಸೇತುವೆ ಬಳಿ ನಡೆದಿದೆ. |
![]() | ವಿಚ್ಛೇದನದ ಬಗ್ಗೆ ದಾವೂದ್ ಸುಳ್ಳು ಹೇಳಿದ್ದು, ಪಾಕ್ ಮಹಿಳೆಯೊಂದಿಗೆ 2ನೇ ಮದುವೆಯಾಗಿದ್ದಾರೆ: ಎನ್ಐಎಗೆ ಸೋದರಳಿಯ ಮಾಹಿತಿಪರಾರಿಯಾಗಿರುವ ಭೂಗತ ಪಾತಕಿ ಪಾಕಿಸ್ತಾನದ ಪಠಾಣ್ ಮಹಿಳೆಯೊಂದಿಗೆ 2ನೇ ವಿವಾಹವಾಗಿದ್ದಾನೆಂದು ದಾವೂದ್ನ ಸಹೋದರಿ ಹಸೀನಾ ಪಾರ್ಕರ್ ಪುತ್ರ ಹಾಗೂ ದಾವೂದ್ ಸೋದರಳಿಯ ಅಲಿಶಾ ಪಾರ್ಕರ್ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳ ಬಳಿ ಹೇಳಿಕೊಂಡಿದ್ದಾನೆಂದು ತಿಳಿದುಬಂದಿದೆ. |
![]() | ಚಂಡೀಗಢ: ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದ ಯುವತಿಗೆ ಕಾರು ಡಿಕ್ಕಿ, ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆರಸ್ತೆ ಬದಿಯಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದ ಯುವತಿಗೆ ವೇಗವಾಗಿ ಬಂದ ಎಸ್ಯುವಿ ಕಾರು ಡಿಕ್ಕಿ ಹೊಡೆರುವ ಘಟನೆ ಚಂಡೀಗಢದಲ್ಲಿ ನಡೆದಿರುವುದಾಗಿ ಪೊಲೀಸರು ಸೋಮವಾರ ತಿಳಿಸಿದ್ದಾರೆ. |
![]() | ಕೊಡಗು: ಮಚ್ಚಿನಿಂದ ಕೊಚ್ಚಿ ಯುವತಿಯ ಬರ್ಬರ ಹತ್ಯೆವಿರಾಜಪೇಟೆ ತಾಲ್ಲೂಕಿನ ನಾಂಗಲದಲ್ಲಿ ಯುವತಿಯೋರ್ವಳನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. |
![]() | ಥಾಣೆ: ಮಹಿಳೆಗೆ 22 ಲಕ್ಷ ರೂ. ವಂಚಿಸಿದ ಫೇಸ್ ಬುಕ್ ಫ್ರೆಂಡ್!ಥಾಣೆ ನಗರದ 36 ವರ್ಷದ ಮಹಿಳೆಯೊಬ್ಬರಿಗೆ ಫೇಸ್ಬುಕ್ನಲ್ಲಿ ಫ್ರೆಂಡ್ ಆಗಿದ್ದ ವ್ಯಕ್ತಿಯೊಬ್ಬ ಬರೋಬ್ಬರಿ 22.67 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. |
![]() | ಬಲ್ಲಿಯಾ: ಬೀದಿ ನಾಯಿ ಬೊಗಳಿದ್ದಕ್ಕೆ ಎರಡು ಕುಟುಂಬಗಳ ನಡುವೆ ಘರ್ಷಣೆ; ಮಹಿಳೆ ಸಾವು, ಐವರಿಗೆ ಗಾಯಬೀದಿನಾಯಿ ಬೊಗಳಿದ್ದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ನಡೆದ ಘರ್ಷಣೆಯಿಂದಾಗಿ 50 ವರ್ಷದ ಮಹಿಳೆ ಸಾವಿಗೀಡಾಗಿದ್ದು, ಅವರ ಕುಟುಂಬದ ಐವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. |
![]() | ಜಾತ್ರೆಯಲ್ಲಿ ಕೊಂಡ ಹಾಯುವಾಗ ಬಿದ್ದು, ಮಹಿಳೆಗೆ ಗಂಭೀರ ಗಾಯಜಾತ್ರೆಯಲ್ಲಿ ಕೊಂಡ ಹಾಯುವಾಗ ಬಿದ್ದು, ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ನಡೆದಿದೆ. ದೊಡ್ಡ ಬೆಳವಂಗಲ ಅಜ್ಜನಕಟ್ಟೆ ರೇಣುಕಾ ಯಲ್ಲಮ್ಮ ದೇವಿಯ ಜಾತ್ರೆಯಲ್ಲಿ ಈ ಘಟನೆ ನಡೆದಿದೆ. |
![]() | ಗಂಡ ಎಂಜಿನಿಯರ್, ಮಗಳು ಡಾಕ್ಟರ್; ಪೊಲೀಸ್ ಅಧಿಕಾರಿ ಸೋಗಿನಲ್ಲಿ ಬೋಂಡಾ, ದಿನಸಿ ಸುಲಿಗೆ ಮಾಡುತ್ತಿದ್ದ ಮಹಿಳೆ ಬಂಧನಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡ ಮಹಿಳೆಯೊಬ್ಬರು ಸ್ಥಳೀಯ ಮಾರಾಟಗಾರರಿಂದ ಬೋಂಡಾ ಮತ್ತು ಬಜ್ಜಿ ಸೇರಿದಂತೆ ದಿನಸಿ ಪದಾರ್ಥಗಳನ್ನು ಸುಲಿಗೆ ಮಾಡಿದ್ದಕ್ಕಾಗಿ ಬ್ಯಾಟರಾಯನಪುರದ ಪೊಲೀಸರು ಬಂಧಿಸಿದ್ದಾರೆ. |
![]() | ಧಾರವಾಡ: ಬೀದಿ ನಾಯಿಗಳ ಮಾರಕ ದಾಳಿಯಿಂದಾಗಿ ನಿರ್ಗತಿಕ ಮಹಿಳೆ ಸಾವುಆಘಾತಕಾರಿ ಘಟನೆಯೊಂದರಲ್ಲಿ ಧಾರವಾಡ ಜಿಲ್ಲೆಯಲ್ಲಿ ಮಂಗಳವಾರ ವೃದ್ಧ ನಿರ್ಗತಿಕ ಮಹಿಳೆ ಮೇಲೆ ದಾಳಿ ನಡೆಸಿದ ಬೀದಿನಾಯಿಗಳ ಹಿಂಡು ಕೊಂದು ಹಾಕಿವೆ. ಮಹಿಳೆಯ ಗುರುತು ಇನ್ನೂ ಪತ್ತೆಯಾಗಿಲ್ಲ. |
![]() | ಉತ್ತರಪ್ರದೇಶದಲ್ಲಿ ದಟ್ಟ ಮಂಜು: ರೈಲಿಗೆ ಸಿಲುಕಿದ ಮಹಿಳೆಯ ಎರಡೂ ಕಾಲುಗಳು ಕಟ್!ದಟ್ಟ ಮಂಜಿನ ಕಾರಣ ರೈಲ್ವೆ ಹಳಿ ದಾಟುವಾಗ ಮಹಿಳೆಯೊಬ್ಬರು ರೈಲಿಗೆ ಸಿಲುಕಿ ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. |
![]() | ಕಂಜಾವಾಲ ಆರೋಪಿಗೆ ಕಾರಿನಡಿ ಮಹಿಳೆ ಸಿಲುಕಿದ್ದು ತಿಳಿದಿತ್ತು!ಹೊಸ ವರ್ಷದ ದಿನದಂದು ದೆಹಲಿಯಲ್ಲಿ ನಡೆದಿದ್ದ ಭೀಕರ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯೊಂದು ಬಹಿರಂಗವಾಗಿದೆ. |