• Tag results for Women

ಚತ್ತೀಸ್ ಗಢ: ಸುಣ್ಣದ ಗಣಿ ಕುಸಿದು 7 ಸಾವು

ಚತ್ತೀಸ್ ಗಢದಲ್ಲಿ ಸುಣ್ಣದ ಗಣಿ ಕುಸಿದು 7 ಮಂದಿ ಸಾವನ್ನಪ್ಪಿದ್ದಾರೆ. ಬಸ್ತಾರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಸಾವನ್ನಪ್ಪಿದವರ ಪೈಕಿ 6 ಮಂದಿ ಮಹಿಳೆಯರಾಗಿದ್ದಾರೆ.

published on : 3rd December 2022

ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ ವಿರುದ್ಧ ದಾಂಧಲೆ ಆರೋಪ; ಯಾವುದೇ ದೂರು ದಾಖಲಾಗಿಲ್ಲ ಎಂದ ಪೊಲೀಸರು

ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ ವಿರುದ್ಧ ದಾಂಧಲೆ ಆರೋಪ ಕೇಳಿಬಂದಿದೆ. ಸೊಲ್ಲಾಪುರ ರಸ್ತೆಯಲ್ಲಿರುವ ಉಮದಿ ಸೂಪರ್ ಮಾರ್ಕೆಟ್​ ಮಾಲೀಕ‌ ಮಲ್ಲಿಕಾರ್ಜುನ ಹಾಗೂ‌ ಕೆಲಸಗಾರರ ಮೇಲೆ ರಾಜೇಶ್ವರಿ ಗಾಯಕ್ವಾಡ್ ಹಲ್ಲೆ ಮಾಡಿರುವ ಆರೋಪ ಇದಾಗಿದೆ.

published on : 1st December 2022

ಉತ್ತರಾಖಂಡ ವಿಧಾನಸಭೆಯಲ್ಲಿ ಮತಾಂತರ ನಿಷೇಧ, ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರ

ಪೂರಕ ಬಜೆಟ್ ಅಧಿವೇಶನದ ಎರಡನೇ ದಿನವಾದ ಗುರುವಾರ ಉತ್ತರಾಖಂಡ ವಿಧಾನಸಭೆಯಲ್ಲಿ ಎರಡು ಪ್ರಮುಖ ಮಸೂದೆಗಳನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ.

published on : 1st December 2022

ವೈವಾಹಿಕ ವಿವಾದ ಪ್ರಕರಣಗಳಿಗಾಗಿ ಸುಪ್ರೀಂ ಕೋರ್ಟ್ ನಿಂದ ಮಹಿಳಾ ಪೀಠ ರಚನೆ

ವೈವಾಹಿಕ ವಿವಾದ, ಜಾಮೀನು ವಿಚಾರ ಸೇರಿದಂತೆ ಮತ್ತಿತರ ಅರ್ಜಿಗಳ ವಿಚಾರಣೆಗಾಗಿ ಕರ್ನಾಟಕದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ. ವಿ. ನಾಗರತ್ನ ಸೇರಿದಂತೆ ಎಲ್ಲಾ ಮಹಿಳೆಯರನ್ನೊಳಗೊಂಡ ಪೀಠವೊಂದನ್ನು ಮುಖ್ಯ ನ್ಯಾಯಮೂರ್ತಿ ಡಿ. ವೈ.ಚಂದ್ರಚೂಡ್ ಇಂದು ರಚಿಸಿದ್ದಾರೆ.

published on : 1st December 2022

ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಕಾಲೇಜು ಪ್ರಾರಂಭಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟನೆ

ವಕ್ಫ್ ಮಂಡಳಿಯಿಂದ ರಾಜ್ಯದಲ್ಲಿ ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಕಾಲೇಜು ಸ್ಥಾಪನೆಗೆ ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ಮತ್ತು ಸಮಾಜದ ವಿವಿಧ ವರ್ಗಗಳಿಂದ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತವಾಗುತ್ತಿದ್ದಂತೆ ಸರ್ಕಾರ ನಿರ್ಧಾರದಿಂದ ಹಿಂದೆ ಸರಿಯುತ್ತದೆಯೇ ಎಂಬ ಅನುಮಾನ ದಟ್ಟವಾಗಿದೆ.

published on : 1st December 2022

ಮುಸ್ಲಿಂ ಮಹಿಳಾ ಕಾಲೇಜು ಸ್ಥಾಪಿಸಬೇಕೆಂಬ ಮನವಿಗೆ ಸಚಿವೆ ಶಶಿಕಲಾ ಜೊಲ್ಲೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ: ವಕ್ಫ್ ಬೋರ್ಡ್ ಅಧ್ಯಕ್ಷ ಶಾ ಸಅದಿ

ಮುಸ್ಲಿಂ ಮಹಿಳೆಯರಿಗೆ ಪ್ರತ್ಯೇಕ ಕಾಲೇಜು ಸ್ಥಾಪನೆ ಬಗ್ಗೆ ಬಿಜೆಪಿ ಸರ್ಕಾರ ನಿರ್ಧರಿಸಿದ್ದು ಮುಂದಿನ ತಿಂಗಳು ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದ ಕೂಡಲೇ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯುತ್ತಿದೆಯೇ ಎಂಬ ಸಂದೇಹ ವ್ಯಕ್ತವಾಗುತ್ತಿದೆ. 

published on : 1st December 2022

ವಕ್ಫ್ ಬೋರ್ಡ್ ನಿಂದ 10 ಮುಸ್ಲಿಂ ಮಹಿಳಾ ಕಾಲೇಜು ಸ್ಥಾಪನೆ ಪ್ರಸ್ತಾವಕ್ಕೆ ಸರ್ಕಾರ ಅಸ್ತು; ಮುಂದಿನ ತಿಂಗಳು ಸಿಎಂ ಶಂಕುಸ್ಥಾಪನೆ ನಿರೀಕ್ಷೆ

ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜು ತರಗತಿಯೊಳಗೆ ಹಿಜಾಬ್ ಧರಿಸುವುದಕ್ಕೆ ನಿಷೇಧ ಹೇರಿರುವ ಸಂಬಂಧ ವಿವಾದ ಇರುವ ಮಧ್ಯೆ ಮುಸ್ಲಿಂ ಮಹಿಳೆಯರಿಗೆ 10 ಪ್ರತ್ಯೇಕ ಕಾಲೇಜು ಆರಂಭವಾಗುತ್ತಿದೆ ಎಂದು ಹೇಳಲಾಗುತ್ತಿದೆ. 

published on : 30th November 2022

ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆಗೆ ಬಾಬಾ ರಾಮ್‌ದೇವ್ ಕ್ಷಮೆಯಾಚನೆ

ಮಹಿಳೆಯರ ಉಡುಪಿನ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಯೋಗ ಗುರು ಬಾಬಾ ರಾಮ್‌ದೇವ್ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ ಎಂದು ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಕಂಕರ್ ಅವರು ಹೇಳಿದ್ದಾರೆ.

published on : 29th November 2022

ದೆಹಲಿಯಲ್ಲಿ ಮತ್ತೊಂದು ಬೀಭತ್ಸ ಕೃತ್ಯ: ವ್ಯಕ್ತಿಯನ್ನು ತುಂಡರಿಸಿ ಫ್ರಿಡ್ಜ್ ನಲ್ಲಿಟ್ಟ ಮಹಿಳೆ, ಆಕೆಯ ಮಗ ಬಂಧನ

ದೆಹಲಿಯಲ್ಲಿ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದಂತೆ ಮತ್ತೊಂದು ಬೀಭತ್ಸ ಕೃತ್ಯ ನಡೆದಿದೆ. ವ್ಯಕ್ತಿಯೊಬ್ಬನನ್ನು ತುಂಡು ತಂಡಾಗಿ ಕತ್ತರಿಸಿ ನಂತರ ಅವುಗಳನ್ನು ಫ್ರಿಡ್ಜ್ ನಲ್ಲಿಟ್ಟಿದ್ದ ಮಹಿಳೆ ಹಾಗೂ ಆಕೆಯ ಮಗನನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.

published on : 28th November 2022

'ಅಮೃತಾ ಫಡ್ನವೀಸ್ ಬಾಬಾ ರಾಮ್ ದೇವ್ ಕಪಾಳಕ್ಕೆ ಹೊಡೆದು ಎದ್ದು ಹೋಗಬೇಕಾಗಿತ್ತು, ಅದು ಬಿಟ್ಟು ನಗುತ್ತಾ ಕೂತಿದ್ದೇಕೆ'!

ಖ್ಯಾತ ಯೋಗ ಗುರು ರಾಮ್‌ದೇವ್ ಅವರು ಮಹಿಳೆಯರ ವೇಷಭೂಷಣದ ಬಗ್ಗೆ ತಮ್ಮ ದೃಷ್ಟಿಕೋನದಿಂದ ಕಟುವಾದ ಅಶ್ಲೀಲ ರೀತಿಯ ಹೇಳಿಕೆ ನೀಡಿದ ನಂತರ ಎಲ್ಲೆಡೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಸಮಾಜದ ಎಲ್ಲಾ ವಲಯದಳಿಂದ ಕ್ರೂರವಾದ ಟೀಕೆಗಳು ಕೇಳಿಬರುತ್ತಿವೆ. 

published on : 27th November 2022

ಒಂದೇ ದಿನದೊಳಗೆ ಮಹಿಳಾ ಆಯೋಗದ ದೂರುಗಳ ತನಿಖೆಗೆ ಸಿಎಂ ಬೊಮ್ಮಾಯಿ ಸೂಚನೆ

ಮಹಿಳಾ ಆಯೋಗದಿಂದ ಸ್ವೀಕಾರವಾದ ದೂರುಗಳನ್ನು 7 ರಿಂದ 8 ಗಂಟೆಯೊಳಗೆ ತನಿಖೆ ಪ್ರಾರಂಭಿಸಬೇಕೆಂದು ಆಯೋಗದ ಮಹಾನಿರ್ದೇಶಕರಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

published on : 25th November 2022

ಉಡುಪಿ: ರೋಸ್ ಸಮಾರಂಭಕ್ಕೆ ಆಗಮಿಸಿದ್ದ ಯುವತಿ ಮದುವೆ ಮನೆಯಲ್ಲಿ ಕುಸಿದು ಬಿದ್ದು ಹಠಾತ್ ಸಾವು!

ಮದುವೆಗೆ  ಇನ್ನೇನು ಒಂದು ದಿನ ಇರುವ ಮುನ್ನ ಮಾಡಲಾಗುತ್ತಿದ್ದ ರೋಸ್‌ ಕಾರ್ಯಕ್ರಮಕ್ಕೆ ಆಗಮಿಸಿದ್ದ ಯುವತಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ  ಬ್ರಹ್ಮಾವರದ ಹಾವಂಜೆಯಲ್ಲಿ ನಡೆದಿದೆ.

published on : 25th November 2022

ಜಾಮಾ ಮಸೀದಿಯಲ್ಲಿ ಮಹಿಳೆಯರಿಗೆ ಪ್ರವೇಶ ನಿರ್ಬಂಧ ಆದೇಶ ರದ್ದು, ವಿವಾದಾತ್ಮಾಕ ನಾಮಫಲಕ ತೆರವು

ರಾಷ್ಟ್ರ ರಾಜಧಾನಿ ಜಾಮಾ ಮಸೀದಿಯಲ್ಲಿ ಮಹಿಳೆಯರ ಪ್ರವೇಶ ನಿರ್ಬಂಧಿಸುವ ಆದೇಶವನ್ನು ರದ್ದುಪಡಿಸಲಾಗಿದೆ.  ದೆಹಲಿ ಲೆಫ್ಟಿನೆಂಟ್ ಜನರಲ್ ಕೆ ಸಕ್ಸೇನಾ ಅವರೊಂದಿಗೆ ಮಾತನಾಡಿದ ನಂತರ ಈ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

published on : 25th November 2022

ಪತಿ ಅಥವಾ ಕುಟುಂಬದೊಂದಿಗೆ ಬರುವ ಮಹಿಳೆಯರ ಪ್ರವೇಶವನ್ನು ನಿಷೇಧಿಸಿಲ್ಲ: ಜಾಮಾ ಮಸೀದಿ ಪಿಆರ್ ಒ

ರಾಷ್ಟ್ರ ರಾಜಧಾನಿ ದೆಹಲಿಯ ಜಾಮಾ ಮಸೀದಿಗೆ ಗುಂಪಾಗಿ ಅಥವಾ ಒಂಟಿಯಾಗಿ ಬರುವ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದೆ. ಆದರೆ, ಕುಟುಂಬದೊಂದಿಗೆ ಬರುವ  ಹೆಣ್ಣು ಮಕ್ಕಳು, ಮಹಿಳೆಯರಿಗೆ ಯಾವುದೇ ನಿಷೇಧವಿಲ್ಲ ಎಂದು ಮಸೀದಿಯ ಪಿಆರ್ ಒ ಸಬಿ ಉಲ್ಲಾಖಾನ್ ತಿಳಿಸಿದ್ದಾರೆ.

published on : 24th November 2022

ಐತಿಹಾಸಿಕ ಜಾಮಾ ಮಸೀದಿಯ 'ಮಹಿಳಾ ವಿರೋಧಿ' ನಡೆ: ಮಹಿಳೆಯರಿಗೆ ಪ್ರವೇಶ ನಿಷೇಧ!

ಐತಿಹಾಸಿಕ ಜಾಮಾ ಮಸೀದಿಗೆ ಒಂಟಿಯಾಗಿ ಹುಡುಗಿಯರು ಮತ್ತು ಮಹಿಳೆಯರು ಬರುವುದನ್ನು ನಿಷೇಧಿಸಲಾಗಿದೆ ಎಂದು ಮಸೀದಿಯ ಹೊರಗೆ ಅಂಟಿಸಲಾಗಿದ್ದು ಇದು ವಿವಾದಕ್ಕೆ ಕಾರಣವಾಗಿದೆ.

published on : 24th November 2022
1 2 3 4 5 6 > 

ರಾಶಿ ಭವಿಷ್ಯ