• Tag results for Youth

ಮೈಸೂರು: ಬೈಕ್ ಕೊಡಿಸದ್ದಕ್ಕೆ ನಾಲೆಗೆ ಹಾರಿ ಯುವಕನ ಆತ್ಮಹತ್ಯೆ

ಮನೆಯವರು ಬೈಕ್ ಕೊಡಿಸದಿದ್ದಕ್ಕೆ ಕುಪಿತಗೊಂಡ ಯುವಕನೊಬ್ಬ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್.ಎಸ್. ಬಳಿಯ ವರುಣಾ ನಾಲೆ ಬಳಿ ನಡೆದಿದೆ.

published on : 12th October 2019

ಕಲಬುರಗಿ: ಇಬ್ಬರು ಯುವಕರು ನೀರು ಪಾಲು

ದೇವಿಯ ಘಟಸ್ಥಾಪನೆ ವಿಸರ್ಜನೆಗೆ ತೆರಳಿದ್ದ ಯುವಕರಿಬ್ಬರು ನೀರು ಪಾಲಾಗಿರುವ ಹೃದಯ ವಿದ್ರಾವಕ ಘಟನೆ ಕಲಬುರಗಿಯ ಕೊಳ್ಳೂರು ಗ್ರಾಮದಲ್ಲಿ ಬುಧವಾರ ನಡೆದಿದೆ.

published on : 9th October 2019

ಯುವದಸರಾದಲ್ಲಿ ಪ್ರೇಮ ನಿವೇದನೆ: ರ್ಯಾಪರ್ ಚಂದನ್ ಶೆಟ್ಟಿ, ನಿವೇದಿತಾ ವಿರುದ್ಧ ದೂರು ದಾಖಲು

ಯುವದಸಾರಾ ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಖ್ಯಾತಿಯ ಬೇಬಿ ಡಾಲ್ ನಿವೇದಿತಾಗೆ ಪ್ರೇಮ ನಿವೇದನೆ ಮಾಡಿದ್ದ ರ್ಯಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ವಿರುದ್ಧ ಮೈಸೂರು ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

published on : 5th October 2019

ಲಾಟರಿಯಲ್ಲಿ ಸುಳ್ಯದ ಯುವಕನಿಗೆ ಒಲಿದ 23 ಕೋಟಿ ರೂ  

ಸುಳ್ಯದ ಯುವಕನಿಗೆ ಆನ್ ಲೈನ್ ಲಾಟರಿಯಲ್ಲಿ ಅದೃಷ್ಟ ಖುಲಾಯಿಸಿದ್ದು, 23 ಕೋಟಿ ರೂ. ಒಲಿದು ಬಂದಿದೆ.

published on : 4th October 2019

ಕ್ಷಮಿಸು ಅಮ್ಮ, ನನಗೆ ಯಾವುದೇ ಹುಡುಗಿಯೊಂದಿಗೆ ಸಂಬಂಧವಿಲ್ಲ: ಆತ್ಮಹತ್ಯೆಗೆ ಶರಣಾದ ಯುವಕ

ಪ್ರೀತಿಗೆ ವಿರೋಧಿಸುತ್ತಾರೆ ಅಂತ ಹೆತ್ತ ಪೋಷಕರನ್ನೇ ಹತ್ಯೆ ಮಾಡುವ ಸಮಾಜದಲ್ಲಿ 19 ವರ್ಷದ ಯುವಕ ಅಮ್ಮ ನನ್ನನ್ನು ಕ್ಷಮಿಸು. ನನಗೆ ಯಾವುದೇ ಹುಡುಗಿಯೊಂದಿಗೆ ಸಂಬಂಧವಿಲ್ಲ ಅಂತ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

published on : 30th September 2019

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಎರಡು ಯುವಕರ ಗುಂಪುಗಳ ಮಾರಾಮಾರಿ

ದಸರಾ ಆಚರಣೆ ಉದ್ಘಾಟನೆಗೊಂಡ ಮೊದಲ ದಿನವೇ ಯುವಕರ ಎರಡು ಗುಂಪುಗಳು ಪರಸ್ಪರ ಹೊಡೆದಾಡಿಕೊಂಡು ದಸರಾ ಆಚರಣೆಗೆ ಒಂದು ಕಪ್ಪು ಚುಕ್ಕೆ ಇಟ್ಟಿದ್ದಾರೆ. 

published on : 30th September 2019

ಬೆಂಗಳೂರು: ರೈಲ್ವೆ ಹಳಿ ಮೇಲೆ ಟಿಕ್‌ ಟಾಕ್‌ ವಿಡಿಯೋ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಇಬ್ಬರು ಯುವಕರು

ಟಿಕ್ ಟಾಕ್ ವಿಡಿಯೋ ಹುಚ್ಚಿನಿಂದಾಗಿ ದೇಶ-ವಿದೇಶಗಳಲ್ಲಿ ಹಲವರು ಪ್ರಾಣ ಕಳೆದುಕೊಂಡಿದ್ದು, ಶುಕ್ರವಾರ ಬೆಂಗಳೂರಿನಲ್ಲೂ ಇಬ್ಬರು ಯುವಕರ ರೈಲ್ವೆ ಹಳಿ ಮೇಲೆ ಟಿಕ್ ಟಾಕ್ ವಿಡಿಯೋ ಮಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.

published on : 28th September 2019

ಯುವಕರಿಗೆ ಕೌಶಲ್ಯ ತರಬೇತಿ ಅತ್ಯಗತ್ಯ: ವೆಂಕಯ್ಯ ನಾಯ್ಡು

ದೇಶಾದ್ಯಂತ ಗ್ರಾಮೀಣ ಪ್ರದೇಶದ ಯುವಕರಿಗೆ ಕೌಶಲ್ಯ ತರಬೇತಿ ನೀಡುವ ಮೂಲಕ ಅವರಿಗೆ ಅವಕಾಶಗಳನ್ನು ಕಲ್ಪಿಸುವಂತಾಗಬೇಕು ಎಂದು ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ. 

published on : 26th September 2019

ಲಾಡ್ಜ್ ನಲ್ಲಿ ಯುವಕ ಆತ್ಮಹತ್ಯೆ

ನಗರದ ಬಾಗಲಗುಂಟೆಯ ಕಿರ್ಲೋಸ್ಕರ್ ಲೇಔಟ್ ನ ಲಾಡ್ಜ್ ವೊಂದರಲ್ಲಿ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.21 ವರ್ಷದ ಕಾರ್ತಿಕ್  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಯುವಕ. 

published on : 25th September 2019

ಕಾರವಾರ: ಮಗನ ಮೃತದೇಹವನ್ನು ಕುವೈತ್ ನಿಂದ ತರಿಸಲು ಸರ್ಕಾರದ ಮೊರೆ ಹೋದ ತಾಯಿ!

ಇತ್ತೀಚೆಗೆ ಕುವೈತ್ ನಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಗನ ಮೃತದೇಹವನ್ನು ಮನೆಗೆ ತರಲು ಸರ್ಕಾರದ ಮೊರೆ ಹೋದ ಅಸಹಾಯಕ ತಾಯಿಯ ಕಥೆಯಿದು.  

published on : 17th September 2019

ಪ್ರಾಮಾಣಿಕ ಗಂಡ ಮತ್ತು ಪ್ರೇಮಿಯಾಗಿರಿ: ಹಿಂದೂ ಯುವತಿ ಮದುವೆಯಾದ ಮುಸ್ಲಿಂ ಯುವಕನಿಗೆ 'ಸುಪ್ರೀಂ' ಸಲಹೆ 

ಅಂತರ ಧರ್ಮ ನಂಬಿಕೆ ಮತ್ತು ಅಂತರ್ಜಾತಿ ವಿವಾಹದ ಬರವಾಗಿ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಇಂತಹ ಸಂಬಂಧಗಳಿಂದ ಸಮಾಜವಾದ ಬೆಳೆಯುತ್ತದೆ. ಹಿಂದೂ ಯುವತಿಯನ್ನು ಮದುವೆಯಾದ ಮುಸ್ಲಿಂ ಯುವಕ ನಿಷ್ಠಾವಂತ ಪತಿ ಮತ್ತು ಉತ್ತಮ ಪ್ರಿಯತಮನಾಗಿರಬೇಕು ಎಂದು ಸಲಹೆ ನೀಡಿದೆ.  

published on : 12th September 2019

ಬಳ್ಳಾರಿ: ಸೆಲ್ಫಿ ಹುಚ್ಚಿಗೆ ಇಬ್ಬರು ಯುವಕರು ನೀರು ಪಾಲು

ತೆಪ್ಪದಲ್ಲಿ ಸಾಗುವಾಗ ಸೆಲ್ಫೀ ತೆಗೆದುಕೊಳ್ಳಲು ಹೋದ ಇಬ್ಬರು ಯುವಕರು ತೆಪ್ಪ ಮುಳುಗಿ ಮೃತಪಟ್ಟಿರುವ ಘಟನೆ ಹೊಸಪೇಟೆ ತಾಲ್ಲೂಕಿನ ಡಣಾಯಕನ ಕೆರೆ ಗ್ರಾಮದಲ್ಲಿ ಸಂಭವಿಸಿದೆ.

published on : 10th September 2019

ಕಲಬುರಗಿ: ಯುವಕನ ಬಾಯಿಗೆ ಗುಂಡಿಕ್ಕಿ ಸಿನಿಮೀಯ ಶೈಲಿಯಲ್ಲಿ ಹತ್ಯೆ

ಸಿನಿಮೀಯ ಶೈಲಿಯಲ್ಲಿ ಯುವಕನ ಬಾಯಿಗೆ ಪಿಸ್ತೂಲ್ ಇಟ್ಟು ಗುಂಡು ಹಾರಿಸಿ, ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಅಫಜಲಪುರ ತಾಲೂಕಿನ ಕರ್ಜಗಿ ಗ್ರ‍ಾಮದಲ್ಲಿ ಸೋಮವಾರ ಮಧ್ಯೆರಾತ್ರಿ ನಡೆದಿದೆ.

published on : 10th September 2019

ಸ್ನೇಹಿತನನ್ನು ಕಾಪಾಡಲು ಹೋಗಿ ಅಮೆರಿಕಾದಲ್ಲಿ ಸಾವನ್ನಪ್ಪಿದ ಸಿಂಧನೂರು ವಿದ್ಯಾರ್ಥಿ

ನೀರಿಗೆ ಬಿದ್ದ ತನ್ನ ಸ್ನೇಹಿತನನ್ನು ರಕ್ಷಣೆ ಮಾಡಲು ಹೋಗಿ ಸಿಂಧನೂರು ಮೂಲದ ಯುವಕನೊಬ್ಬ ಅಮೆರಿಕಾದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. 

published on : 5th September 2019

ಬೆಂಗಳೂರು: ರಿಯಾಲಿಟಿ ಶೋ ನಲ್ಲಿ ಸಿಗದ ಅವಕಾಶ; ನೊಂದ ಯುವಕ ಆತ್ಮಹತ್ಯೆ  

ಖಾಸಗಿ ಚಾನೆಲ್ ನಡೆಸುವ ರಿಯಾಲಿಟಿ ಶೋನಲ್ಲಿ ಅವಕಾಶ ಸಿಗದ ಹಿನ್ನೆಲೆಯಲ್ಲಿ ನೊಂದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೊಸಕೋಟೆ ಹೊರವಲಯದಲ್ಲಿ ನಡೆದಿದೆ.

published on : 31st August 2019
1 2 3 4 5 6 >