• Tag results for election results

ಅಲ್ಪಸಂಖ್ಯಾತರ ಓಲೈಕೆ ಮಾಡಿದ್ದವರಿಗೆ ತೀವ್ರ ಮುಖಭಂಗ: ಸಿಟಿ ರವಿ

ಅಲ್ಪಸಂಖ್ಯಾತರ ಓಲೈಕೆ ಮಾಡಿ, ಹಿಂದೂ ವಿರೋಧಿಗಳಿದ್ದವರಿಗೆ ಈಗ ಮುಖಭಂಗವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ. 

published on : 11th March 2022

'ನಮ್ಮಪ್ಪನಾಣೆಗೂ ಯಡಿಯೂರಪ್ಪ- ಕುಮಾರಸ್ವಾಮಿ ಸಿಎಂ ಆಗಲ್ಲ ಎಂದರು, ಇಬ್ಬರೂ ಆಗಿಬಿಟ್ಟರು: ಸಿದ್ದರಾಮಯ್ಯಗೆ ಸಿಎಂ  ಬೊಮ್ಮಾಯಿ ಮಾತಿನೇಟು

ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಅಫೆಕ್ಟ್ ರಾಜ್ಯ ರಾಜಕೀಯದ ಮೇಲೆ ಜೋರಾಗಿಯೇ ಬೀರಿದಂತೆ ಕಾಣುತ್ತಿದೆ. ಮುಂದಿನ ವರ್ಷ ಏಪ್ರಿಲ್ ನಲ್ಲಿ ಚುನಾವಣೆ ಎದುರಿಸುತ್ತಿರುವ ಕರ್ನಾಟಕ ರಾಜ್ಯದಲ್ಲಿ ರಾಜಕೀಯ ಲೆಕ್ಕಾಚಾರಗಳು, ರಾಜಕೀಯ ನಾಯಕರ ವಾಗ್ದಾಣಗಳು ಜೋರಾಗಿವೇ ಇವೆ.

published on : 11th March 2022

ಚುನಾವಣಾ ಸೋಲಿನಿಂದ ಅಸಮಾಧಾನಗೊಂಡ ಕಾಂಗ್ರೆಸ್‌ನ ಜಿ-23 ನಾಯಕರಿಂದ ಮುಂದಿನ 48 ಗಂಟೆಗಳಲ್ಲಿ ಸಭೆ

ಮಣಿಪುರ, ಪಂಜಾಬ್, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಗೋವಾ ವಿಧಾನಸಭೆ ಚುನಾವಣೆ ಫಲಿತಾಂಶದಿಂದ ತೀವ್ರ ಅಸಮಾಧಾನಗೊಂಡಿರುವ ಕಾಂಗ್ರೆಸ್‌ನ 23 ನಾಯಕರ ಗುಂಪು(ಜಿ-23) ಮುಂದಿನ....

published on : 10th March 2022

ಕನಿಷ್ಠ 4 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ, ಮುಂದಿನ ತಿಂಗಳು ರಾಜ್ಯಕ್ಕೆ ಮೋದಿ: ಸಿಎಂ ಬೊಮ್ಮಾಯಿ

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಈ ಪೈಕಿ ಉತ್ತರ ಪ್ರದೇಶ ಸೇರಿದಂತೆ ನಾಲ್ಕು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ...

published on : 10th March 2022

ಒಂದೇ ಚುನಾವಣೆಯಲ್ಲಿ 4 ದಾಖಲೆ ಬರೆದ ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶದಲ್ಲಿ ಹಾಲಿ ಸಿಎಂ ಯೋಗಿ ಆದಿತ್ಯನಾಥ್ ಭರ್ಜರಿ ಗೆಲುವು ಸಾಧಿಸಿದ್ದು ಬಿಜೆಪಿ ಮತ್ತೆ ಅಧಿಕಾರಕ್ಕೇರುವುದು ಸ್ಪಷ್ಟವಾಗಿದೆ. ಈ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಬರೊಬ್ಬರಿ 4 ದಾಖಲೆಗಳನ್ನು ನಿರ್ಮಿಸಿದ್ದಾರೆ. 

published on : 10th March 2022

ಬಿಜೆಪಿ ಜಂಬ ಪಡೋ ಅಗತ್ಯ ಇಲ್ಲ, ಪಂಜಾಬ್ ನಲ್ಲಿ ನಮ್ಮ ತಪ್ಪಿನಿಂದ ಅಧಿಕಾರ ಕಳೆದುಕೊಂಡಿದ್ದೇವೆ: ಸಿದ್ದರಾಮಯ್ಯ

ಸದ್ಯ ನಮ್ಮ ತಪ್ಪಿನಿಂದ ಪಂಜಾಬ್ ನಲ್ಲಿ ಅಧಿಕಾರ ಕಳೆದುಕೊಂಡಿದ್ದೇವೆ ಆದರೆ ಪಂಜಾಬ್ ನಲ್ಲೇನು ಬಿಜೆಪಿ ಅಧಿಕಾರಕ್ಕೆ ಬಂದಿಲ್ಲ. ಬಂದಿರುವುದು ಆಮ್ ಆದ್ಮಿ  ಪಕ್ಷ. ನಾವು ಈ ಚುನಾವಣೆಗಳಿಂದ ಬಹಳ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ...

published on : 10th March 2022

ಒಂದು ಕಾಲದಲ್ಲಿ ಉತ್ತರ ಪ್ರದೇಶವನ್ನು ಆಳಿದ್ದ ಬಿಎಸ್ ಪಿಗೆ ಇಂದು ಅಸ್ತಿತ್ವದ ಕೊರತೆ: ಕೇವಲ 3 ಕ್ಷೇತ್ರಗಳಲ್ಲಿ ಮುನ್ನಡೆ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಬಹುಜನ ಸಮಾಜವಾದಿ ಪಕ್ಷ ಅಚ್ಚರಿ ಮೂಡಿಸಲಿದೆ ಎಂದು ನಾಯಕಿ ಮಾಯಾವತಿ ಅವರು ಚುನಾವಣಾ ಪೂರ್ವ ಹೇಳಿಕೆ ನೀಡಿದ್ದರೂ, ರಾಜ್ಯದಲ್ಲಿನ 403 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪಕ್ಷವು ಕೇವಲ ಮೂರು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

published on : 10th March 2022

'ಈ ಕ್ರಾಂತಿಗೆ' ಪಂಜಾಬ್ ಜನತೆಗೆ ಅಭಿನಂದನೆಗಳು: ಆಪ್ ಗೆಲುವಿನ ಸಂಭ್ರಮವನ್ನು ಬಣ್ಣಿಸಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ದೇಶದಲ್ಲಿ ಪೊರಕೆ ಗುರುತಿನ ಆಪ್ ಪಕ್ಷ ಭಾರೀ ಸುದ್ದಿ ಮಾಡುತ್ತಿದೆ. ಅದಕ್ಕೆ ಕಾರಣ ಪಂಜಾಬ್ ನಲ್ಲಿ ಇಂದು ನಿರ್ಮಿಸಿದ ಇತಿಹಾಸ. ಕಾಂಗ್ರೆಸ್ ನ ನಾಯಕರಿಗೆಲ್ಲಾ ಸೋಲಿನ ರುಚಿ ತೋರಿಸಿ ಆಪ್ ಸರ್ಕಾರ ರಚಿಸುವತ್ತ ಹೆಜ್ಜೆ ಇಡುತ್ತಿದೆ. 

published on : 10th March 2022

ಗೋವಾ ಚುನಾವಣೆ: ಬಿಜೆಪಿ ನಾಯಕರಿಂದ ರಾಜ್ಯಪಾಲರ ಭೇಟಿ, ಸರ್ಕಾರ ರಚನೆಗೆ ಹಕ್ಕು ಮಂಡನೆ ಸಾಧ್ಯತೆ

ಗೋವಾ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ಅಧಿಕಾರದ ಗದ್ದುಗೆಯತ್ತ ದಾಪುಗಾಲಿರಿಸಿರುವ ಬಿಜೆಪಿ ಮೈತ್ರಿಕೂಟ ಇಂದು ರಾಜ್ಯಪಾಲರನ್ನು ಭೇಟಿ ಮಾಡುವ ಸಾಧ್ಯತೆ ಇದೆ.

published on : 10th March 2022

ಪಂಚರಾಜ್ಯ ಚುನಾವಣೆ: ಬಿಜೆಪಿ, ಆಪ್ ಕಮಾಲ್, ಏರಿಕೆ ಕಂಡ ಷೇರುಮಾರುಕಟ್ಟೆ!!

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು, ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಮೈತ್ರಿಕೂಟ ಅಧಿಕಾರ ರಚನೆಯತ್ತ ಸಾಗಿರುವಂತೆಯೇ ಇತ್ತ ಭಾರತೀಯ ಷೇರುಮಾರುಕಟ್ಟೆ ಕೂಡ ಏರಿಕೆ ದಾಖಲಿಸಿದೆ.

published on : 10th March 2022

ಗೋವಾ ಚುನಾವಣೆ: ಗೆಲ್ಲುವ ವಿಶ್ವಾಸದಲ್ಲಿ ಮತಎಣಿಕೆಗೂ ಮುನ್ನವೇ ರಾಜ್ಯಪಾಲರ ಸಮಯ ಕೇಳಿ ತೀವ್ರ ಮುಜುಗರಕ್ಕೀಡಾದ ಕಾಂಗ್ರೆಸ್!!

ಗೋವಾ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟಣೆ ಚಾಲ್ತಿಯಲ್ಲಿದ್ದು, ಅತ್ತ ಗೋವಾ ಕಾಂಗ್ರೆಸ್ ನಾಯಕರ ದಂಡು ಮತಎಣಿಕೆಗೂ ಮುನ್ನವೇ ಚುನಾವಣೆ ಗೆಲ್ಲುವ ಅತಿಯಾದ ಆತ್ಮ ವಿಶ್ವಾಸದಿಂದ ರಾಜ್ಯಪಾಲರ ಬಳಿ ಭೇಟಿಗೆ ಸಮಯ ಕೇಳಿ ಇದೀಗ ವ್ಯಾಪಕ ಮುಜುಗರಕ್ಕೀಡಾಗಿದೆ.

published on : 10th March 2022

ಗೋರಖ್ ಪುರ ನಗರದಲ್ಲಿ ಯೋಗಿ ಆದಿತ್ಯನಾಥ್ ಮುನ್ನಡೆ, ಉತ್ತರಾಖಂಡ್ ಸಿಎಂ ಪುಷ್ಕರ್ ಸಿಂಗ್ ಧಾಮಿ ಹಿನ್ನೆಡೆ 

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಇತ್ತೀಚಿನ ವರದಿಗಳ ಪ್ರಕಾರ ಬಿಜೆಪಿ 268 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಸ್ಪಷ್ಟ ಬಹುಮತ ಪಡೆಯುವ ಲಕ್ಷಣಗಳು ಗೋಚರಿಸುತ್ತಿವೆ.  

published on : 10th March 2022

'ಕೈ' ಗುಡಿಸಿ ಹಾಕಿದ 'ಪೊರಕೆ': ಅಧಿಕಾರದತ್ತ ಆಪ್, ಸಿಎಂ ಅಭ್ಯರ್ಥಿ ಭಗವಂತ್ ಮಾನ್ ನಿವಾಸದ ಎದುರು ಸಂಭ್ರಮಾಚರಣೆ

ಆಮ್ ಆದ್ಮಿ ಪಕ್ಷ ದೆಹಲಿಯಾಚೆಗೆ ತನ್ನ ಅಸ್ತಿತ್ವವನ್ನು ವಿಸ್ತರಿಸಿಕೊಳ್ಳುತ್ತಿದೆ. ಪಂಜಾಬ್ ರಾಜ್ಯದಲ್ಲಿ 'ಕೈ'ಯನ್ನು 'ಪೊರಕೆ'ಯಿಂದ ಗುಡಿಸಿ ಅಧಿಕಾರದ ಗದ್ದುಗೆ ಹಿಡಿಯುವುದು ಬಹುತೇಕ ಖಚಿತವಾಗಿದೆ. ಪಂಜಾಬ್ ನಲ್ಲಿ ಸರ್ಕಾರ ರಚಿಸಲು ಇರುವ ಮ್ಯಾಜಿಕ್ ನಂಬರ್ 59ನ್ನು ಆಪ್ ದಾಟಿದೆ. 88 ಕ್ಷೇತ್ರಗಳಲ್ಲಿ ಆಪ್ ಮುನ್ನಡೆಯಲ್ಲಿದೆ.

published on : 10th March 2022

ಪರೀಕ್ಷೆ ಇನ್ನೂ ಮುಗಿದಿಲ್ಲ, ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು: ಅಖಿಲೇಶ್ ಯಾದವ್

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು ಈಗಿನ ಟ್ರೆಂಡ್ ಪ್ರಕಾರ ಬಿಜೆಪಿ ಭಾರೀ ಮುನ್ನಡೆ ಕಾಯ್ದುಕೊಂಡಿದ್ದು ಎರಡನೇ ಬಾರಿಗೆ ಅಧಿಕಾರ ಹಿಡಿಯುವುದು ಬಹುತೇಕ ನಿಚ್ಛಳವಾಗಿದೆ. 

published on : 10th March 2022

ಪಂಚರಾಜ್ಯಗಳ ಚುನಾವಣೆ ಫಲಿತಾಂಶ: ಉ.ಪದಲ್ಲಿ ಬಿಜೆಪಿ, ಪಂಜಾಬ್ ನಲ್ಲಿ ಆಪ್ ಮುನ್ನಡೆ, ಗೋವಾ-ಉತ್ತರಾಖಂಡಗಳಲ್ಲಿ ಕಾಂಗ್ರೆಸ್-ಬಿಜೆಪಿ ನೇರ ಹಣಾಹಣಿ

ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ನೇತೃತ್ವದ ಮೈತ್ರಿಕೂಟಕ್ಕಿಂತ ಬಿಜೆಪಿ ಮುಂದಿದೆ. R ಈ ಮೂಲಕ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಮತ್ತೊಂದು ಅತಿದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಅಧಿಕಾರ ಹಿಡಿಯುವತ್ತ ದಾಪುಗಾಲು ಇಡುತ್ತಿದೆ.

published on : 10th March 2022
1 2 > 

ರಾಶಿ ಭವಿಷ್ಯ