• Tag results for finance ministry

ಕಾಂಗ್ರೆಸ್ ಪಕ್ಷದ ಪ್ರಚಾರ ನಿರ್ವಹಣಾ ಸಂಸ್ಥೆ ಸೇರಿದಂತೆ ಎರಡು ಕಂಪೆನಿಗಳ ಮೇಲೆ ಐಟಿ ದಾಳಿ: ರಾಜಕೀಯ ಎಂದು ಆರೋಪಿಸಿದ ಡಿ ಕೆ ಶಿವಕುಮಾರ್

ಐಟಿ ಸಿಟಿ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ತ್ಯಾಜ್ಯ ಮತ್ತು ಡಿಜಿಟಲ್ ಮಾರ್ಕೆಟಿಂಗ್ ನ ಹಲವು ಕಂಪೆನಿಗಳ ಮೇಲೆ ಕಳೆದ ವಾರ ಆದಾಯ ತೆರಿಗೆ ಇಲಾಖೆ ಶೋಧ ಕಾರ್ಯ ನಡೆಸಿ ದಾಖಲೆರಹಿತ ಸುಮಾರು 7 ಕೋಟಿ ರೂಪಾಯಿ ಹೂಡಿಕೆಯನ್ನು ಪತ್ತೆ ಹಚ್ಚಿದ್ದಲ್ಲದೆ ಸುಮಾರು 70 ಕೋಟಿ ರೂಪಾಯಿಗಳ ಬೋಗಸ್ ವೆಚ್ಚಗಳನ್ನು ಸಹ ಪತ್ತೆಹಚ್ಚಿತ್ತು.

published on : 18th October 2021

ತ್ವರಿತಗತಿಯ ಚೇತರಿಕೆಯ ಹಾದಿಯಲ್ಲಿ ದೇಶದ ಆರ್ಥಿಕತೆ: ಹಣಕಾಸು ಸಚಿವಾಲಯದ ವರದಿ

: ಹಣಕಾಸು ಸಚಿವಾಲಯದ ಮಾಸಿಕ ಆರ್ಥಿಕ ಪರಾಮರ್ಶೆ ಪ್ರಕಾರ, ಕೋವಿಡ್-19 ಸಾಂಕ್ರಾಮಿಕದಿಂದ ನಷ್ಟದಲ್ಲಿದ್ದ ದೇಶದ ಆರ್ಥಿಕತೆಯೂ ಕ್ಷಿಪ್ರ ಲಸಿಕೆ ಅಭಿಯಾನ ಹಾಗೂ ಸುಧಾರಣಾ ಕಾರ್ಯತಂತ್ರದಿಂದ ತ್ವರಿತಗತಿಯ ಚೇತರಿಕೆಯ ಹಾದಿಯಲ್ಲಿದೆ.

published on : 11th October 2021

ಕರ್ನಾಟಕ ಸೇರಿ 17 ರಾಜ್ಯಗಳಿಗೆ 9,871 ಕೋಟಿ ರೂ. ಅನುದಾನ ಬಿಡುಗಡೆ: ಕೇಂದ್ರ ಹಣಕಾಸು ಸಚಿವಾಲಯ

ಕರ್ನಾಟಕ ಸೇರಿದಂತೆ 17 ರಾಜ್ಯಗಳಿಗೆ 9,871 ಕೋಟಿ ರೂ.ಗಳ ನಂತರದ ವಿತರಣಾ ಆದಾಯ ಕೊರತೆಯ(ಪಿಡಿಆರ್‌ಡಿ) ಅನುದಾನದ ಆರನೇ ಮಾಸಿಕ ಕಂತನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

published on : 9th September 2021

ಐ-ಟಿ ಪೋರ್ಟಲ್ ನಲ್ಲಿ ತಾಂತ್ರಿಕ ದೋಷ: ಇನ್ಫೋಸಿಸ್ ಸಿಇಒ ಸಲೀಲ್ ಪರೇಖ್ ಗೆ ಹಣಕಾಸು ಸಚಿವಾಲಯದಿಂದ ಸಮನ್ಸ್ 

ಹೊಸ ಇ-ಫೈಲಿಂಗ್ ಪೋರ್ಟಲ್ ಪ್ರಾರಂಭವಾಗಿ ಎರಡೂವರೆ ತಿಂಗಳು ಕಳೆದ ನಂತರವೂ ವೆಬ್ ಸೈಟ್ ನ ಕಾರ್ಯನಿರ್ವಹಣೆಯಲ್ಲಿ ತಾಂತ್ರಿಕ ದೋಷಗಳು ಮುಂದುವರೆದಿರುವುದರಿಂದ ಸರ್ಕಾರಕ್ಕೆ ದೊಡ್ಡ ಮುಜುಗರವನ್ನುಂಟು ಮಾಡುತ್ತಿದೆ.

published on : 22nd August 2021

ಉದ್ದೇಶಿತ ಪರಿಹಾರ ಪ್ಯಾಕೇಜ್, ತ್ವರಿತ ವ್ಯಾಕ್ಸಿನೇಷನ್ ಕಾರಣದಿಂದ ಆರ್ಥಿಕತೆಯು ಚೇತರಿಕೆಯಲ್ಲಿದೆ: ವಿತ್ತ ಸಚಿವಾಲಯ

ಕೊರೋನಾ ಸಾಂಕ್ರಾಮಿಕ ರೋಗದ ಎರಡನೇ ಅಲೆ  ಪರಿಣಾಮದಿಂದ ಆರ್ಥಿಕತೆಯು ಪುನರುಜ್ಜೀವನದ ಲಕ್ಷಣಗಳನ್ನು ತೋರಿಸಲಾರಂಭಿಸಿದೆ ಎಂದು ಹಣಕಾಸು ಸಚಿವಾಲಯ ಶುಕ್ರವಾರ ತಿಳಿಸಿದೆ. 

published on : 9th July 2021

ಫ್ರೆಂಚ್ ಕೋರ್ಟ್ ನಿಂದ ಯಾವುದೇ ಮಾಹಿತಿ ಬಂದಿಲ್ಲ: ಫ್ರಾನ್ಸ್ ನಲ್ಲಿ ಭಾರತದ ಆಸ್ತಿ ಮುಟ್ಟುಗೋಲು ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ

ಪ್ಯಾರಿಸ್ ನಲ್ಲಿ ಸುಮಾರು 20 ಭಾರತ ಸರ್ಕಾರದ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಫ್ರೆಂಚ್ ನ್ಯಾಯಾಲಯ ನೀಡಿರುವ ಆದೇಶದ ಕುರಿತು ತಮಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸ್ಪಷ್ಟನೆ ನೀಡಿದೆ.

published on : 8th July 2021

ಜಿಎಸ್‌ಟಿ ತೆರಿಗೆ ದರವನ್ನು ಕಡಿಮೆ ಮಾಡಿದೆ; 4 ವರ್ಷದಲ್ಲಿ 66 ಕೋಟಿಗೂ ಹೆಚ್ಚು ರಿಟರ್ನ್ಸ್ ಸಲ್ಲಿಕೆಯಾಗಿದೆ: ಹಣಕಾಸು ಸಚಿವಾಲಯ

ಸರಕು ಮತ್ತು ಸೇವಾ ತೆರಿಗೆ ಆಡಳಿತವು ನಾಲ್ಕು ವರ್ಷಗಳನ್ನು ಪೂರ್ಣಗೊಳಿಸುವುದರೊಂದಿಗೆ, ಹಣಕಾಸು ಸಚಿವಾಲಯ ಬುಧವಾರ ಜಿಎಸ್‌ಟಿ 66 ಕೋಟಿಗೂ ಹೆಚ್ಚು ಜಿಎಸ್‌ಟಿ ರಿಟರ್ನ್ಸ್ ಸಲ್ಲಿಕೆಗೆ ಮತ್ತು ಕಡಿಮೆ ತೆರಿಗೆ ದರಗಳಅನುಸರಣೆಯನ್ನು ಹೆಚ್ಚಿಸಲು ಸಹಾಯವಾಗಿದೆ ಎಂದು ಹೇಳಿದೆ.

published on : 30th June 2021

ಕೋವಿಡ್ ಬಾಧಿತ ವಲಯಗಳಿಗೆ 8 ಅಂಶಗಳ ನೆರವು; ಸಾರ್ವಜನಿಕ ಆರೋಗ್ಯ ವಲಯಕ್ಕೆ 23 ಸಾವಿರ ಕೋಟಿ ರೂ.: ನಿರ್ಮಲಾ ಸೀತಾರಾಮನ್

ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ವಾಣಿಜ್ಯ ವಿಭಾಗದ ಬಹುತೇಕ ವಲಯಗಳು ಸಂಕಷ್ಟಕ್ಕೆ ಸಿಲುಕಿದ್ದು, ಇದೀಗ ಕೇಂದ್ರ ಸರ್ಕಾರ ಕೋವಿಡ್ ಬಾಧಿತ ವಲಯಗಳಿಗೆ ಪರಿಹಾರ ಘೋಷಣೆ ಮಾಡಿದೆ.

published on : 28th June 2021

ಸ್ವಿಸ್ ಬ್ಯಾಂಕ್ ಗಳಲ್ಲಿ ಭಾರತೀಯರ ಹೂಡಿಕೆ ಬಗ್ಗೆ ವಿವರ ಕೊಡಿ: ಸ್ವಿಡ್ಜರ್ಲೆಂಡ್ ಅಧಿಕಾರಿಗಳಲ್ಲಿ ಮಾಹಿತಿ ಕೇಳಿದ ಹಣಕಾಸು ಸಚಿವಾಲಯ

2019ರಿಂದ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯ ಗ್ರಾಹಕರು ಹೂಡಿಕೆ ಮಾಡಿರುವ ಹಣ ಕಡಿಮೆಯಾಗಿದ್ದರೂ ಕೂಡ 2020ರಲ್ಲಿ ವ್ಯಕ್ತಿಗಳು ಮತ್ತು ಘಟಕಗಳು ಹೂಡಿಕೆ ಮಾಡಿರುವ ಹಣದಲ್ಲಿ ಬದಲಾವಣೆಗಳಿಗೆ ಸಂಭವನೀಯ ಕಾರಣಗಳ ಮತ್ತು ವಿವರಗಳನ್ನು ಸ್ವಿಸ್ ಬ್ಯಾಂಕ್ ಅಧಿಕಾರಿಗಳಿಂದ ಕೇಂದ್ರ ಹಣಕಾಸು ಸಚಿವಾಲಯ ಕೇಳಿದೆ.

published on : 19th June 2021

ಲಸಿಕೆ ವೆಚ್ಚದ ಬಜೆಟ್'' ನಿಧಿ ಬಳಕೆ ಮಾಡುವುದಕ್ಕೆ ತಡೆಯಾಗುವುದಿಲ್ಲ: ಹಣಕಾಸು ಸಚಿವಾಲಯ

ಲಸಿಕೆಗಾಗಿ ಕೇಂದ್ರ ಬಜೆಟ್-2022 ರಲ್ಲಿ 35,000 ಕೋಟಿ ರೂಪಾಯಿ ಖರ್ಚು ಮಾಡುತ್ತಿರುವುದು ಕೇಂದ್ರ ಸರ್ಕಾರವನ್ನು ಕೋವಿಡ್-19 ಲಸಿಕೆ ಖರೀದಿಸುವ ಅನುದಾನದ ಬಳಕೆಗೆ ಯಾವುದೇ ರೀತಿಯಲ್ಲೂ ತಡೆಯೊಡ್ಡುವುದಿಲ್ಲ ಎಂದು ಹಣಕಾಸು ಸಚಿವಾಲಯ ಹೇಳಿದೆ. 

published on : 10th May 2021

ರಾಜ್ಯ ವಿಪತ್ತು ನಿರ್ವಹಣಾ ನಿಧಿ: ರಾಜ್ಯ ಸರ್ಕಾರಗಳಿಗೆ ಕೇಂದ್ರದಿಂದ 8,873.6 ಕೋಟಿ ರೂ. ಮೊದಲ ಕಂತು ಬಿಡುಗಡೆ!

2021-22ನೇ ಆರ್ಥಿಕ ಸಾಲಿನ ರಾಜ್ಯ ವಿಪತ್ತು ನಿರ್ವಹಣಾ ನಿಧಿ(ಎಸ್ ಡಿಆರ್ ಎಫ್)ನ ಕೇಂದ್ರ ಸರ್ಕಾರದ ಪಾಲಿನ ಮೊದಲ ಕಂತು 8 ಸಾವಿರದ 873.6 ಕೋಟಿ ರೂಪಾಯಿಗಳನ್ನು ಎಲ್ಲಾ ರಾಜ್ಯಗಳಿಗೆ ಕೇಂದ್ರ ಹಣಕಾಸು ಸಚಿವಾಲಯ ಶನಿವಾರ ಬಿಡುಗಡೆ ಮಾಡಿದೆ.

published on : 1st May 2021

ಆಭರಣ ಖರೀದಿಗೆ ಹೊಸ ಕೆವೈಸಿ ಮಾನದಂಡಗಳಿಲ್ಲ: ವಿತ್ತ ಸಚಿವಾಲಯ ಸ್ಪಷ್ಟನೆ

ಚಿನ್ನ, ಬೆಳ್ಳಿ ಅಥವಾ ಅಮೂಲ್ಯ ರತ್ನಗಳು ಮತ್ತು ಇತರೆ ಆಭರಣ ಹರಳುಗಳನಗದು ಖರೀದಿಗೆ ಯಾವುದೇ ಹೊಸ ಕೆವೈಸಿ ಪ್ರಕಟಿಸುವುದು ಕಡ್ಡಾಯವಾಗಿಲ್ಲ, ಹೆಚ್ಚಿನ ಮೌಲ್ಯದ ನಗದು ವಹಿವಾಟುಗಳಿಗೆ ಮಾತ್ರ ಆದಾಯ ತೆರಿಗೆ ಪ್ಯಾನ್ ಅಥವಾ ಬಯೋಮೆಟ್ರಿಕ್ ಐಡಿ ಆಧಾರ್‌ನಂತಹ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿರುತ್ತದೆ ಎಂದು ಹಣಕಾಸು ಸಚಿವಾಲಯ ಮೂಲಗಳು ತಿಳಿಸಿವೆ.

published on : 11th January 2021

ಕೇಂದ್ರ ಬಜೆಟ್ 2021: ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಗದ ರಹಿತ ಬಜೆಟ್ ಮಂಡನೆ!

ಕೇಂದ್ರ ಬಜೆಟ್ 2021 ಮಂಡನೆಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇದ್ದು, ಇದೇ ಮೊದಲ ಬಾರಿಗೆ ಕಾಗದ ರಹಿತ ಬಜೆಟ್ ಮಂಡನೆಯಾಗಲಿದೆ. 

published on : 11th January 2021

ಜಿಎಸ್‍ಟಿ ಇತಿಹಾಸದಲ್ಲೇ ದಾಖಲೆ ತೆರಿಗೆ ಸಂಗ್ರಹ, ಸತತ 3ನೇ ಬಾರಿಗೆ ಲಕ್ಷ ಕೋಟಿ ರೂ. ದಾಟಿದೆ!

ಜಿಎಸ್ ಟಿ ತೆರಿಗೆ ಸಂಗ್ರಹ ಆರಂಭಗೊಂಡಾಗಿನಿಂದ ಇದೇ ಮೊದಲ ಬಾರಿಗೆ ದಾಖಲೆಯ ತೆರಿಗೆ ಸಂಗ್ರಹವಾಗಿದೆ.

published on : 1st January 2021

ಜಿಎಸ್ಟಿ ಪರಿಹಾರ ಪ್ರಕ್ರಿಯೆ: ಕೇಂದ್ರ ಹಣಕಾಸು ಸಚಿವಾಲಯದ ಪ್ರಸ್ತಾವನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಒಪ್ಪಿಗೆ

ಜಿಎಸ್ಟಿ ಪರಿಹಾರಕ್ಕೆ ಸಂಬಂಧಿಸಿದಂತೆ ಹಣಕಾಸು ಸಚಿವಾಲಯ ಸಲ್ಲಿಸಿದ್ದ ಪ್ರಸ್ತಾವನೆಯ ಸಾಧಕ-ಬಾಧಕಗಳನ್ನು ಅಳೆದುತೂಗಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಭವಿಷ್ಯದಲ್ಲಿ ತೆರಿಗೆ ಸಂಗ್ರಹದಿಂದ ಸಾಲ ಮರುಪಾವತಿ ಮತ್ತು ಬಡ್ಡಿದರ ಪಾವತಿಗೆ ಸಂಬಂಧಿಸಿದಂತೆ ಅಧಿಕಾರವನ್ನು ನೀಡಿದ್ದಾರೆ.

published on : 17th October 2020
1 2 > 

ರಾಶಿ ಭವಿಷ್ಯ