• Tag results for govt hospital

ದೆಹಲಿ ಸರ್ಕಾರಿ ಆಸ್ಪತ್ರೆಯಲ್ಲಿ ಮಲಯಾಳಂ ಮಾತನಾಡದಂತೆ ದಾದಿಯರಿಗೆ ಸೂಚನೆ!

ಆಸ್ಪತ್ರೆಯಲ್ಲಿ ದಾದಿಯರು ಬಳಸುತ್ತಿರುವ ಮಲಯಾಳಂ ಭಾಷೆ ಹಲವರಲ್ಲಿ ಇರಿಸು-ಮುನಿಸು ಮೂಡಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕರ್ತವ್ಯ ನಿರತ ಕೇರಳ ಮೂಲದ ದಾದಿಯರು ಇನ್ನು ಮುಂದೆ ಆಸ್ಪತ್ರೆಯಲ್ಲಿ ಮಲಯಾಳಂ ಭಾಷೆ ಬಳಸುವಂತಿಲ್ಲ ಎಂದು ರಾಷ್ಟ್ರ ರಾಜಧಾನಿ ನವದೆಹಲಿಯ ಸರ್ಕಾರಿ ಆಸ್ಪತ್ರೆ ಸೂಚನೆ ನೀಡಿದೆ. 

published on : 6th June 2021

ಬೆಂಗಳೂರಿನ ಪ್ರತಿ ವಿಧಾನಸಭೆ ಕ್ಷೇತ್ರಗಳಿಗೂ ಶೀಘ್ರದಲ್ಲೇ ಒಂದು ಸರ್ಕಾರಿ ಆಸ್ಪತ್ರೆ!

ಕೋವಿಡ್ ಸಮಯದಲ್ಲಿ ಹಾಸಿಗೆ ಮತ್ತು ಐಸಿಯುಗಳ ಅಲಭ್ಯತೆ ಮೂಲಕ ನಗರದಲ್ಲಿನ ಆರೋಗ್ಯ ಮೂಲಸೌಕರ್ಯಗಳ ಕೊರತೆ ಜಗಜ್ಜಾಹೀರಾಗಿದ್ದು ಇದೀಗ ಸಚಿವರು ಸೇರಿದಂತೆ ಬೆಂಗಳೂರಿನ ಶಾಸಕರು ತಮ್ಮ ಕ್ಷೇತ್ರದಲ್ಲಿ ಒಂದು ಅಥವಾ ಎರಡು ಸರ್ಕಾರಿ ಆಸ್ಪತ್ರೆಗಳಿಗಾಗಿ ಪ್ರಸ್ತಾಪಿಸುತ್ತಿದ್ದಾರೆ.

published on : 3rd June 2021

ಆಂಧ್ರ ಪ್ರದೇಶದಲ್ಲೂ ಮರುಕಳಿಸಿದ ಆಕ್ಸಿಜನ್ ಕೊರತೆ ದುರಂತ; ಹಿಂದೂಪುರ ಆಸ್ಪತ್ರೆಯಲ್ಲಿ 8 ರೋಗಿಗಳ ಸಾವು

ಕರ್ನಾಟಕದ ಚಾಮರಾಜನಗರದಲ್ಲಿ ಸಂಭವಿಸಿದ ಆಕ್ಸಿಜನ್ ಕೊರತೆ ದುರಂತ ಹಸಿರಾಗಿರುವಂತೆಯೇ ಇತ್ತ ಆಂಧ್ರ ಪ್ರದೇಶದಲ್ಲೂ ಇಂತಹುದೇ ಘಟನೆ ಮರುಕಳಿಸಿದ್ದು, ಆಕ್ಸಿಜನ್ ಕೊರತೆಯಿಂದಾಗಿ 8 ಮಂದಿ ರೋಗಿಗಳು ಸಾವನ್ನಪ್ಪಿದ್ದಾರೆ.

published on : 4th May 2021

ಕೋವಿಡ್ ರೋಗಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಚಿಕಿತ್ಸೆ ನೀಡಿ: ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ಸಾಕಷ್ಟು ಜನರಿಗೆ ಖಾಸಗಿ ಆಸ್ಪತ್ರೆಗಳ ವೆಚ್ಚವನ್ನು ಭರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಖಾಸಗಿ ಆಸ್ಪತ್ರೆಗಳಲ್ಲೂ ಉಚಿತ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಸರ್ಕಾರ ನೀಡಬೇಕೆಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಶನಿವಾರ ಆಗ್ರಹಿಸಿದ್ದಾರೆ. 

published on : 17th April 2021