- Tag results for opposition alliance
![]() | ವಿಪಕ್ಷಗಳ ಮೈತ್ರಿ INDIA ಬಲದಿಂದ ಸರ್ಕಾರ ಆತಂಕಕ್ಕೆ ಒಳಗಾಗಿದೆ: ಮಲ್ಲಿಕಾರ್ಜುನ ಖರ್ಗೆಪ್ರತಿಪಕ್ಷಗಳ ಮೈತ್ರಿಕೂಟದ ಬಲವು ಸರ್ಕಾರವನ್ನು ನಿರುತ್ಸಾಹಗೊಳಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಹೇಳಿದ್ದಾರೆ. ಕೇಂದ್ರ ಸರ್ಕಾರದ ಅಡಿ ಬರುವ ಸಂಸ್ಥೆಗಳ ಹೆಚ್ಚು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಯಿರುವುದರಿಂದ INDIA ಮೈತ್ರಿಕೂಟಗಳು ದ್ವೇಷದ ರಾಜಕೀಯವನ್ನು ಎದುರಿಸಲು ಸನ್ನದ್ಧವಾಗಿರಬೇಕು ಎಂದು ಹೇಳಿದ್ದಾರೆ. |
![]() | ವಿಪಕ್ಷಗಳ ಮೈತ್ರಿಕೂಟದ 3ನೇ ಸಭೆ: ಇಂಡಿಯಾ ಮೈತ್ರಿಕೂಟದಿಂದ ದೂರ ಉಳಿದ ಶಿರೋಮಣಿ ಅಕಾಲಿದಳ, ಬಿಎಸ್ಪಿಇಂದಿನಿಂದ ವಾಣಿಜ್ಯ ನಗರಿಯಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ 28 ರಾಜಕೀಯ ಪಕ್ಷಗಳ 63 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಬುಧವಾರ ಹೇಳಿದ್ದಾರೆ. ಕಳೆದ ಬಾರಿ ಸಭೆ ಸೇರಿದಾಗ 26 ಪಕ್ಷಗಳು ಭಾಗವಹಿಸಿದ್ದವು. |
![]() | 'ಇಂಡಿಯಾ' ಮೈತ್ರಿಕೂಟದ 3ನೇ ಸಭೆ; 2024ರ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಕುರಿತು ನಿರ್ಧಾರ ಸದ್ಯಕ್ಕಿಲ್ಲ!ಗುರುವಾರ ಇಲ್ಲಿ ಆರಂಭವಾಗಲಿರುವ ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟದ ಸಭೆಯು ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆಯ ವಿವಾದಿತ ವಿಚಾರದ ಕುರಿತು ನಿರ್ಧಾರವನ್ನು ಆಯಾ ರಾಜ್ಯಗಳ ನಾಯಕರಿಗೆ ಬಿಟ್ಟುಕೊಡಲಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಕೋರಿಕೆ ಮೇರೆಗೆ ಈ ವಿಚಾರವನ್ನು ಸಭೆಯ ಕಾರ್ಯಸೂಚಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. |
![]() | ಸದ್ಯಕ್ಕೆ I.N.D.I.A ಮೈತ್ರಿಕೂಟದೊಂದಿಗೆ ಮೈತ್ರಿ ಇಲ್ಲ: ಪ್ರಕಾಶ್ ಅಂಬೇಡ್ಕರ್ಸದ್ಯದ ಮಟ್ಟಿಗೆ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ I.N.D.I.A ಮೈತ್ರಿಕೂಟ ಸೇರುವ ಯಾವುದೇ ಯೋಚನೆ ಇಲ್ಲ ಎಂದು ‘ವಂಚಿತ ಬಹುಜನ ಅಘಾಡಿ’ ಪಕ್ಷದ ಸ್ಥಾಪಕ ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ. |
![]() | ವಿಪಕ್ಷಗಳ ಮೈತ್ರಿಕೂಟಕ್ಕೆ INDIA ಹೆಸರು; ನಿರ್ಬಂಧ ಕೋರಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ, ಅರ್ಜಿ ವಜಾವಿರೋಧ ಪಕ್ಷಗಳ ಮಿತ್ರಕೂಟಕ್ಕೆ ಇಂಡಿಯಾ ಎಂಬ ಹೆಸರು ನೀಡಿರುವ ಕುರಿತಂತೆ ನಿರ್ಬಂಧ ಕೋರಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ ವ್ಯಕ್ತಪಡಿಸಿದ್ದು, ಅರ್ಜಿಯನ್ನು ವಜಾಗೊಳಿಸಿದೆ. |
![]() | ವಿರೋಧ ಪಕ್ಷಗಳ 'INDIA' ಒಕ್ಕೂಟಕ್ಕೆ ಹೊಸ ನಾಮಕರಣ ಮಾಡಿದ ಪ್ರಧಾನಿ ಮೋದಿ: ಹೆಸರು ಏನು ಗೊತ್ತೇ?ಇತ್ತೀಚೆಗೆ ವಿಪಕ್ಷಗಳ ಮೈತ್ರಿಕೂಟ ತಮ್ಮನ್ನು ಇಂಡಿಯಾ ಎಂದು ಕರೆದುಕೊಳ್ಳುವುದರ ಸಂಬಂಧ ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಬಿಹಾರದ ಮಿತ್ರಪಕ್ಷಗಳನ್ನುಗುರುವಾರ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷದ ಮೈತ್ರಿಯನ್ನು ನಿಭಾಯಿಸಲು ಹೊಸ ತಂತ್ರದ ಕುರಿತು ಸಲಹೆ ನೀಡಿದ್ದಾರೆ. |
![]() | ಮಣಿಪುರಕ್ಕೆ ಭೇಟಿ ನೀಡಲು ವಿರೋಧ ಪಕ್ಷಗಳ INDIA ಒಕ್ಕೂಟದ ಸಂಸದರು ಮುಂದುಮೇ 3ರಿಂದ ಜನಾಂಗೀಯ ಹಿಂಸಾಚಾರದಿಂದ ನಲುಗುತ್ತಿರುವ ಈಶಾನ್ಯ ರಾಜ್ಯದ ಪರಿಸ್ಥಿತಿಯ ಪರಿಶೀಲನೆ ನಡೆಸಲು ವಿರೋಧ ಪಕ್ಷಗಳ ಮೈತ್ರಿಕೂಟ INDIAದ ಭಾಗವಾದ ಸಂಸದರು ಜುಲೈ 29 ಮತ್ತು 30 ರಂದು ಮಣಿಪುರಕ್ಕೆ ಭೇಟಿ ನೀಡಲಿದ್ದಾರೆ. |
![]() | ಜನರನ್ನು ಹಾದಿ ತಪ್ಪಿಸುವ ಉದ್ದೇಶದಿಂದಲೇ 'INDIA' ಹೆಸರಿಟ್ಟುಕೊಂಡಿದ್ದಾರೆ: ವಿಪಕ್ಷಗಳ ಮೈತ್ರಿಕೂಟದ ವಿರುದ್ಧ ಬಿಜೆಪಿ ವಾಗ್ದಾಳಿಜನರನ್ನು ಹಾದಿ ತಪ್ಪಿಸುವ ಉದ್ದೇಶದಿಂದಲೇ 'INDIA' ಹೆಸರಿಟ್ಟುಕೊಂಡಿದ್ದಾರೆ ಎಂದು ವಿಪಕ್ಷಗಳ ಮೈತ್ರಿಕೂಟದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. |
![]() | ಲೂಟಿ ಮಾಡಿ ಓಡಿಹೋಗಿರುವ ನೀರವ್ ಮೋದಿ, ಲಲಿತ್ ಮೋದಿ ಹೆಸರಿನಲ್ಲಿಯೂ ನಿಮ್ಮ ಹೆಸರಿನ ಮೋದಿ ಇದೆಯಲ್ಲಾ?ಪ್ರಧಾನಿ ನರೇಂದ್ರ ಮೋದಿ ಅವರೇ, ಇಂಡಿಯಾ ಎಂಬ ಸುಂದರ, ಸುಮಧುರ ಮತ್ತು ಪವಿತ್ರ ಹೆಸರಿನ ಬಗ್ಗೆ ನಿಮಗೆ ಯಾಕೆ ಇಷ್ಟೊಂದು ದ್ವೇಷ? ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. |
![]() | ಈಸ್ಟ್ ಇಂಡಿಯಾ ಕಂಪನಿಯ ಹೊಸ ಆವೃತ್ತಿಯೇ ವಿಪಕ್ಷಗಳ 'INDIA': ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆರಾಷ್ಟ್ರಮಟ್ಟದಲ್ಲಿ 'INDIA' ಎಂಬ ವಿರೋಧ ಪಕ್ಷಗಳ ಹೊಸ ಒಕ್ಕೂಟ ರಚನೆಯು ಈಸ್ಟ್ ಇಂಡಿಯಾ ಕಂಪನಿಯ ಹೊಸ ಆವೃತ್ತಿಯಾಗಿದೆ ಎಂದು ಬಿಜೆಪಿ ನಾಯಕಿ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. |
![]() | ನಾಳೆ ವಿಪಕ್ಷಗಳ ಮೈತ್ರಿಕೂಟದ ಮೊದಲ ಸಭೆ; ಸಂಸತ್ತಿನ ಮುಂಗಾರು ಅಧಿವೇಶನದ ಕಾರ್ಯತಂತ್ರ ಕುರಿತು ಚರ್ಚೆಸಂಸತ್ತಿನ ಮುಂಗಾರು ಅಧಿವೇಶನಕ್ಕಾಗಿ ಜಂಟಿ ಕಾರ್ಯತಂತ್ರವನ್ನು ರೂಪಿಸಲು ವಿರೋಧ ಪಕ್ಷಗಳ ಮೈತ್ರಿಕೂಟವಾದ INDIAದ ಮೊದಲ ಸಭೆ ಗುರುವಾರ ನಡೆಯಲಿದೆ. ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಕಚೇರಿಯಲ್ಲಿ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. |
![]() | ಕರ್ನಾಟಕ ಚುನಾವಣೆ ಗೆಲುವು ವಿಪಕ್ಷಗಳ ಮೈತ್ರಿ ರಚನೆಯಲ್ಲಿ ಕಾಂಗ್ರೆಸ್ ಗೆ ಒಂದು 'ಗೇಮ್ ಚೇಂಜರ್': ಹೇಗೆ? ಇಲ್ಲಿದೆ ವಿಶ್ಲೇಷಣೆಈ ಬಾರಿ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅದ್ವಿತೀಯ ಗೆಲುವು ಸಾಧಿಸಿರುವುದು ಈಗ ಇತಿಹಾಸ. ಇದು ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ಕಾಂಗ್ರೆಸ್ ಗೆ ಗೇಮ್ ಚೇಂಜರ್ ಆಗಲಿದೆಯೇ ಎಂಬ ಮಾತುಗಳು, ಚರ್ಚೆಗಳು ನಡೆಯುತ್ತಿವೆ. ಅದಕ್ಕೆ ಕಾರಣ ಬೆಂಗಳೂರಿನಲ್ಲಿ ನಡೆದ ಎರಡು ದಿನಗಳ ವಿರೋಧ ಪಕ್ಷಗಳ ಸಭೆ. |
![]() | ವಿರೋಧ ಪಕ್ಷಗಳ ಮೈತ್ರಿಕೂಟಕ್ಕೆ ಟ್ಯಾಗ್ ಲೈನ್ 'ಜೀತೇಗಾ ಭಾರತ್'2024ರ ಲೋಕಸಭೆ ಚುನಾವಣೆಗೆ ಮುನ್ನಿಡಿಯಾಗಿ ರಾಷ್ಟ್ರ ಮಟ್ಟದಲ್ಲಿ ವಿರೋಧ ಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ 'ಇಂಡಿಯಾ' ಹೆಸರನ್ನು ಘೋಷಿಸಿದ ಒಂದು ದಿನದ ನಂತರ, "ಜೀತೇಗ ಭಾರತ" ಎಂಬ ಅಡಿಬರಹವನ್ನು ಶೀರ್ಷಿಕೆಗೆ ನೀಡಿದ್ದಾರೆ. |
![]() | ಪ್ರತಿಪಕ್ಷಗಳ ಒಕ್ಕೂಟಕ್ಕೆ INDIA ಹೆಸರು ಸಲಹೆ ನೀಡಿದ್ಯಾರು?: ಯಾರು ಯಾವೆಲ್ಲಾ ಹೆಸರು ಸೂಚಿಸಿದ್ದರು?... ಇಲ್ಲಿದೆ ವಿವರಈ ವರೆಗೂ ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದ ತೃಣಮೂಲ ಕಾಂಗ್ರೆಸ್, INDIA ಹೆಸರನ್ನು ಸೂಚಿಸಿದ ಕಾಂಗ್ರೆಸ್ ನ್ನು ಅಥವಾ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಬೆಂಬಲಿಸಿ, ಹೆಸರಿಗೆ ಅನುಮೋದನೆ ನೀಡಿದೆ! |
![]() | ಪಕ್ಷಾಂತರ ನಿಷೇಧ ಕಾಯ್ದೆ ಜಾರಿ, ಪ್ರತಿಪಕ್ಷಗಳ ಮೈತ್ರಿ, ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ: ಕಾಂಗ್ರೆಸ್ ನಿರ್ಣಯಸಾಮೂಹಿಕ ಪಕ್ಷಾಂತರ ತಡೆಯಲು ಮತ್ತು ಶಾಸಕರ ಖರೀದಿಗೆ ಕಡಿವಾಣ ಹಾಕಲು ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವುದಾಗಿ ಮತ್ತು ಪ್ರತಿಪಕ್ಷಗಳ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸರ್ವಸದಸ್ಯರ... |