• Tag results for railway station

ಕೆಎಸ್ಆರ್ ರೈಲ್ವೇ ನಿಲ್ದಾಣದಲ್ಲಿ ಲಗೇಜ್ ಸೋಂಕು ನಿವಾರಕ ಯಂತ್ರ

ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಈ ಸಮಯದಲ್ಲಿ ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜುಗಳನ್ನು ಸೋಂಕು ಮುಕ್ತಗೊಳಿಸುವ ಯುವಿ ಬ್ಯಾಗೇಜ್ ಬಾತ್ ಯಂತ್ರವನ್ನು ಅಳವಡಿಸಲಾಗಿದೆ. 

published on : 4th August 2020

ಮೃತ ತಾಯಿಯನ್ನು ಎಬ್ಬಿಸಲು ಮಗುವಿನ ಯತ್ನ: ಬಿಹಾರದ ರೈಲ್ವೆ ನಿಲ್ದಾಣದಲ್ಲಿ ಹೃದಯ ವಿದ್ರಾವಕ ಘಟನೆ 

ಮೃತ ತಾಯಿಯನ್ನು ಎಬ್ಬಿಸಲು ಮಗು ಯತ್ನಿಸುತ್ತಿರುವ ಹೃದಯ ವಿದ್ರಾವಕ ಘಟನೆ ಬಿಹಾರದ ಮುಜಾಫರ್ ಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. 

published on : 27th May 2020

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಹೈಡ್ರಾಮಾ, ಕಡ್ಡಾಯ ಕ್ವಾರಂಟೈನ್‌ ವಿರೋಧಿಸಿ ಪ್ರಯಾಣಿಕರ ಪ್ರತಿಭಟನೆ

ದೆಹಲಿಯಿಂದ ಗುರುವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರು ಕಡ್ಡಾಯ ಕ್ವಾರಂಟೈನ್ ವಿರೋಧಿಸಿ ರೈಲು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿದರು.

published on : 14th May 2020

ಕೆಎಸ್ ಆರ್ ರೈಲು ನಿಲ್ದಾಣವನ್ನು ಸ್ವಚ್ಛವಾಗಿಡಲು 15 ಕಿ.ಮೀ ದೂರ ನಡೆದು ಕೆಲಸಕ್ಕೆ ಹೋಗುವ ಹೌಸ್ ಕೀಪಿಂಗ್ ಸಿಬ್ಬಂದಿ!

ಲಾಕ್ ಡೌನ್ ಜಾರಿಯಲ್ಲಿರುವುದರಿಂದ ಸಾರ್ವಜನಿಕ ಸಾರಿಗೆ ಇಲ್ಲದೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣವನ್ನು ಸ್ವಚ್ಛವಾಗಿಡಲು  36 ವರ್ಷದ ಹೌಸ್ ಕೀಪಿಂಗ್ ಸಿಬ್ಬಂದಿಯೊಬ್ಬರು  ಪ್ರತಿದಿನ 15 ಕಿಲೋ ಮೀಟರ್ ದೂರ ನಡೆಯುವಂತಾಗಿದೆ.

published on : 28th April 2020

ತುಮಕೂರು ರೈಲ್ವೆ ನಿಲ್ದಾಣದಲ್ಲಿ ಕಾಟಾಚಾರಕ್ಕೆ ಕೊರೋನಾ ಪರೀಕ್ಷೆ: ಕರ್ತವ್ಯ ನಿರ್ಲಕ್ಷ್ಯ ತೋರಿದ ಅಧಿಕಾರಿ ಅಮಾನತು 

ತುಮಕೂರಿನ ರೈಲು ನಿಲ್ದಾಣದಲ್ಲಿ ಆರೋಗ್ಯ ಇಲಾಖೆ ಅಧಿಕಾರಿ ಕಾಟಾಚಾರಕ್ಕೆ ಕೊರೋನಾ ಪರೀಕ್ಷೆ ನಡೆಸುತ್ತಿದ್ದಾರೆ ಎಂಬ ವರದಿ ಬಂದ ತಕ್ಷಣ ಆರೋಗ್ಯ ಸಚಿವರು ಎಚ್ಚೆತ್ತುಕೊಂಡಿದ್ದಾರೆ.

published on : 21st March 2020

ಉತ್ತರಾಖಂಡ್: ರೈಲು ನಿಲ್ದಾಣಗಳ ಸೂಚನಾ ಫಲಕಗಳಲ್ಲಿ ಉರ್ದು ಬದಲು ಇನ್ನು ಮುಂದೆ  ಸಂಸ್ಕೃತ! 

ಉತ್ತರಾಖಂಡ್ ನ ರೈಲು ನಿಲ್ದಾಣಗಳಲ್ಲಿನ ಸೂಚನಾ ಫಲಕಗಳಲ್ಲಿ ಉರ್ದು ಭಾಷೆಯ ಬದಲು ಸಂಸ್ಕೃತ ಭಾಷೆಯನ್ನು ಬಳಕೆ ಮಾಡಲು ರೈಲ್ವೆ ಇಲಾಖೆ ನಿರ್ಧರಿಸಿದೆ. 

published on : 20th January 2020

ಬೆಂಗಳೂರು: ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ 6 ಎಸ್ಕಲೇಟರ್ ಸೇವೆ ಆರಂಭ

ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್ಆರ್) ರೈಲ್ವೆ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿರುವ 6 ಎಸ್ಕಲೇಟರ್ ಗಳನ್ನು ಬುಧವಾರ ಸೇವೆಗೆ ಸಮರ್ಪಿಸಲಾಯಿತು. 

published on : 2nd January 2020

ಪಶ್ಚಿಮ ಬಂಗಾಳ: ರೈಲ್ವೆ ನಿಲ್ದಾಣದ ಹಾನಿ ಪರಿಶೀಲಿಸಲು ತೆರಳಿದ್ದ ಇಬ್ಬರು ಬಿಜೆಪಿ ಸಂಸದರ ಬಂಧನ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಧ್ವಂಸಗೊಳಿಸಲಾಗಿದ್ದ ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಲು ತೆರಳುತ್ತಿದ್ದ ಇಬ್ಬರು ಬಿಜೆಪಿ ಸಂಸದರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

published on : 18th December 2019

ಇನ್ಮುಂದೆ ರೈಲ್ವೆ ನಿಲ್ದಾಣದಿಂದ ನೇರ ಬಿಎಂಟಿಸಿ ಬಸ್

ಲಗೇಜ್ ಎತ್ತಿಕೊಂಡು ರೈಲ್ವೆ ನಿಲ್ದಾಣದಿಂದ ಬಸ್ ನಿಲ್ದಾಣಕ್ಕೆ ಬರುವ ತೊಂದರೆ ಇನ್ಮುಂದೆ ತಪ್ಪಲಿದೆ. ಇನ್ನು ಮುಂದೆ ರೈಲು ನಿಲ್ದಾಣದ ಅಂಚಿನವರೆಗೂ ಬಸ್‌ ಸಂಚರಿಸಲಿದೆ.

published on : 16th December 2019

ಹೈದ್ರಾಬಾದ್ : ಕಾಚಿಗೂಡು ನಿಲ್ದಾಣದಲ್ಲಿ ಎರಡು ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ, ರಕ್ಷಣಾ ಕಾರ್ಯ ಪ್ರಗತಿಯಲ್ಲಿ

ಕಾಚಿಗೂಡು ರೈಲು ನಿಲ್ದಾಣದಲ್ಲಿ ಎರಡು ರೈಲುಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

published on : 11th November 2019

ಪ್ರಯಾಣಿಕರ ಗಮನಕ್ಕೆ: ವಾರಾಣಸಿ ರೈಲು ನಿಲ್ದಾಣದಲ್ಲಿ ಇನ್ನು ಮುಂದೆ ದಕ್ಷಿಣ ಭಾರತೀಯ ಭಾಷೆಗಳಲ್ಲಿ ಪ್ರಕಟಣೆ! 

ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಇನ್ನು ಮುಂದಿನ ದಿನಗಳಲ್ಲಿ ದಕ್ಷಿಣ ಭಾರತೀಯ ಭಾಷೆಗಳಲ್ಲೂ ಪ್ರಕಟಣೆಗಳು ಲಭ್ಯವಾಗಲಿವೆ. 

published on : 7th November 2019

ಭಯಾನಕ ವಿಡಿಯೋ: ಪವಾಡ ಸದೃಶ್ಯ ರೀತಿಯಲ್ಲಿ ಸಾವಿನ ದವಡೆಯಿಂದ ಪ್ರಯಾಣಿಕ ಬಚಾವ್!

ಜನದಟ್ಟಣೆಯಿಂದ ಕೂಡಿದ  ಕೊಲಿಜಿಯಂ ನಿಲ್ದಾಣದಲ್ಲಿ ರೈಲು ಬರುವ ಕೆಲ ಸೆಕೆಂಡ್ ಮುಂಚಿತವಾಗಿ ಹಳಿ ಮೇಲೆ ಬೀಳುತ್ತಿದ್ದ ಪ್ರಯಾಣಿಕರೊಬ್ಬರೊಬ್ಬರನ್ನು ಅಲ್ಲಿನ ಭದ್ರತಾ ಸಿಬ್ಬಂದಿ ಪವಾಡ ಸದೃಶ್ಯ ರೀತಿಯಲ್ಲಿ ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. 

published on : 5th November 2019

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಸ್ಫೋಟ: ಇಬ್ಬರು ಅಧಿಕಾರಿಗಳು ಅಮಾನತು

ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ಅಧಿಕಾರಿಗಳನ್ನು ಕರ್ತವ್ಯ ಲೋಪದ ಕಾರಣ ಅಮಾನತುಗೊಳಿಸಲಾಗಿದೆ ಎಂದು ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ ಅಂಗಡಿ ತಿಳಿಸಿದ್ದಾರೆ.

published on : 26th October 2019

ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಅನುಮಾನಾಸ್ಪದ ಸ್ಫೋಟ, ಓರ್ವನಿಗೆ ಗಾಯ

ಹುಬ್ಬಳ್ಳಿ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರ್ಮ್ ನಲ್ಲಿ ಅನುಮಾನಾಸ್ಪದ ಸ್ಫೋಟವೊಂದು ಸಂಭವಿಸಿದ್ದು ಜನರು ಭಯಭೀತರಾಗಿದ್ದಾರೆ. ಪ್ಲಾಟ್‌ಫಾರ್ಮ್ ಸಂಖ್ಯೆ 1 ರಲ್ಲಿ ಸೋಮವಾರ ಮಧ್ಯಾಹ್ನ ಈ ಸ್ಪೋಟ ಸಂಭವಿಸಿದೆ, ಸ್ಪೋಟದಲ್ಲಿ  ಸ್ಟೇಷನ್ ಮಾಸ್ಟರ್ಸ್ ಕಚೇರಿಯ ಗಾಜಿನ ಬಾಗಿಲು ಒಡೆದಿದ್ದಲ್ಲದೆ ಓರ್ವನ ಸ್ಥಿತಿ ಗಂಭೀರವಾಗಿದೆ.

published on : 21st October 2019

ಮೂತ್ರ ವಿಸರ್ಜನೆಗೂ ಬಿಡದ ಕಾಮುಕರು, ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

ಮಧ್ಯ ಪ್ರದೇಶದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದ್ದು, ಬಹಿರ್ದೆಸೆಗೆ ತೆರಳಿದ್ದ ಮಹಿಳೆಯನ್ನು ಎಳೆದೊಯ್ದು ಕಾಮುಕರು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಗೈದಿದ್ದಾರೆ.

published on : 15th October 2019
1 2 >